Asianet Suvarna News Asianet Suvarna News

ವಾಟ್ಸಾಪ್‌ ಬದಲು ಕೇಂದ್ರದಿಂದಲೇ ಹೊಸ ಆ್ಯಪ್‌!

ಕಾನೂನು ಸಮರದಲ್ಲಿ ಸಿಲುಕಿರುವ ವಾಟ್ಸಾಪ್‌ಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಆ ಆ್ಯಪ್‌ ರೀತಿಯಲ್ಲಿ ತನ್ನದೇ ಆದ ಎರಡು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದೆ

News App Like Whatsapp From Central Govt  snr
Author
Bengaluru, First Published Feb 19, 2021, 10:29 AM IST

ನವದೆಹಲಿ (ಫೆ.19): ಬಳಕೆದಾರರ ಖಾಸಗಿತನವನ್ನು ಉಲ್ಲಂಘಿಸುತ್ತಿದೆ ಎಂಬ ಕಾರಣಕ್ಕೆ ಕಾನೂನು ಸಮರದಲ್ಲಿ ಸಿಲುಕಿರುವ ವಾಟ್ಸಾಪ್‌ಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಆ ಆ್ಯಪ್‌ ರೀತಿಯಲ್ಲಿ ತನ್ನದೇ ಆದ ಎರಡು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿದುಬಂದಿದೆ.

ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ‘ಸಂವಾದ’ ಹಾಗೂ ‘ಸಂದೇಶ’ ಎಂಬ ಎರಡು ಆ್ಯಪ್‌ಗಳನ್ನು ಸಿದ್ಧಪಡಿಸಿದೆ. ಇವು ವಾಟ್ಸಾಪ್‌ ರೀತಿಯಲ್ಲೇ ಕೆಲಸ ಮಾಡುತ್ತವೆ. ಇವುಗಳ ಬೀಟಾ ಅವತರಣಿಕೆಯನ್ನು ಸದ್ಯ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆ ಮಾಡಿ ಪರೀಕ್ಷಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಈ ಆ್ಯಪ್‌ಗಳನ್ನು ಸರ್ಕಾರವೇ ಅಭಿವೃದ್ಧಿಪಡಿಸಿದೆ. ಜೊತೆಗೆ, ಸರ್ಕಾರಿ ನೌಕರರ ನಡುವೆ ಸಂದೇಶ ವಿನಿಮಯಕ್ಕಾಗಿ ವಾಟ್ಸಾಪ್‌ ರೀತಿ ಕೆಲಸ ಮಾಡುವ ‘ಜಿಮ್ಸ್‌’ - ಗವರ್ನಮೆಂಟ್‌ ಇನ್‌ಸ್ಟಂಟ್‌ ಮೆಸೇಜಿಂಗ್‌ ಸವೀರ್‍ಸ್‌ ಎಂಬ ಇನ್ನೊಂದು ಆ್ಯಪ್‌ ಕೂಡ ಅಭಿವೃದ್ಧಿಪಡಿಸಿದೆ. ‘ಬಹಳ ಕಾಲದಿಂದ ನಮ್ಮದೇ ಆದ ಸ್ವತಂತ್ರ ಮೆಸೇಜಿಂಗ್‌ ಸೇವೆಯೊಂದು ಇರಬೇಕೆಂದು ಚಿಂತನೆಯಿತ್ತು. ವಾಸ್ತವವಾಗಿ ಈಗಿನ ವಾಟ್ಸಾಪ್‌ ವಿವಾದ ಶುರುವಾಗುವುದಕ್ಕೂ ಮೊದಲೇ ಈ ಆ್ಯಪ್‌ಗಳ ತಯಾರಿ ಆರಂಭವಾಗಿತ್ತು’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದಲ್ಲಿ ಐ-ಪ್ಯಾಡ್‌ ಉತ್ಪಾದನೆ : ಟೆಲಿಕಾಂ ಹಬ್‌ಗೆ ಆ್ಯಪಲ್‌ ಸಾಥ್

ಏನು ಲಾಭ?:  ಸರ್ಕಾರದ ಆ್ಯಪ್‌ಗಳಿಂದ ಇರುವ ಲಾಭವೆಂದರೆ ಬಳಕೆದಾರರು ತಮ್ಮ ಮಾಹಿತಿಯ ಸುರಕ್ಷತೆಯ ಬಗ್ಗೆ ಚಿಂತೆ ಮಾಡಬೇಕಿಲ್ಲ. ಏಕೆಂದರೆ ಸರ್ಕಾರ ಯಾವತ್ತೂ ಹಣಕ್ಕಾಗಿ ಈ ಆ್ಯಪ್‌ಗಳಲ್ಲಿ ಸಂಗ್ರಹವಾದ ಗ್ರಾಹಕರ ಮಾಹಿತಿಯನ್ನು ದೊಡ್ಡ ದೊಡ್ಡ ಕಂಪನಿಗಳಿಗೆ ಮಾರಾಟ ಮಾಡುವುದಿಲ್ಲ. ಆದರೆ, ಈ ಆ್ಯಪ್‌ಗಳು ಜನರ ಬಳಕೆಗೆ ಎಷ್ಟುಅನುಕೂಲಕರವಾಗಿರುತ್ತವೆ ಎಂಬುದು ಇವು ಬಿಡುಗಡೆಯಾದ ನಂತರವಷ್ಟೇ ತಿಳಿಯಬೇಕು. ಬೀಟಾ ವರ್ಷನ್‌ ಪರೀಕ್ಷೆ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ಇವುಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂದೇಶ ಮತ್ತು ಸಂವಾದ ಎರಡೂ ಆ್ಯಪ್‌ಗಳನ್ನು ಸರ್ಕಾರ ಜನಸಾಮಾನ್ಯರ ಬಳಕೆಗೆ ಬಿಡುಗಡೆ ಮಾಡುತ್ತದೆಯೋ ಅಥವಾ ಒಂದು ಆ್ಯಪ್‌ ಅನ್ನು ಸರ್ಕಾರಿ ನೌಕರರ ಆಂತರಿಕ ಬಳಕೆಗಾಗಿ ಇರಿಸಿಕೊಳ್ಳುತ್ತದೆಯೋ ಎಂಬುದು ಸ್ಪಷ್ಟವಿಲ್ಲ. ಸಂದೇಶ ಆ್ಯಪ್‌ ಈಗಾಗಲೇ ಆ್ಯಪಲ್‌ ಸ್ಟೋರ್‌ನಲ್ಲಿ ಲಭ್ಯವಿದೆ. ಅದರಲ್ಲಿ ನೀಲಿ ಮತ್ತು ಬಿಳಿಯ ಇಂಟರ್‌ಫೇಸ್‌ ಇದ್ದು, ಅಶೋಕ ಚಕ್ರದ ಲೋಗೋ ಕೂಡ ಇದೆ. ಆದರೆ, ಆಯ್ದ ಸರ್ಕಾರಿ ನೌಕರರಿಗಷ್ಟೇ ಸದ್ಯ ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಿದೆ.

Follow Us:
Download App:
  • android
  • ios