ರಿಗಾಲಿಯಾ ಎಂಬ ಗೋಡೆಗೆ ಜೋಡಿಸಬಲ್ಲ ಪವರ್ ಬ್ಯಾಕಪ್ ಸಿಸ್ಟಮ್ ಮಾರುಕಟ್ಟೆಯಲ್ಲಿ ಇದೀಗ ಲಭ್ಯವಿದೆ. ಲ್ಯುಮಿನಿಸ್ ಪವರ್ ಟೆಕ್ನಾಲಜೀಸ್‌ನ ಈ ಸಾಧನಕ್ಕೆ 10 ವರ್ಷಗಳ ವಾರೆಂಟಿ ಇದೆ.

ಇದನ್ನು ಸೋಲಾರ್ ಮೂಲಕವೂ ಚಾರ್ಜ್ ಮಾಡಬಹುದು. ಆಧುನಿಕ ಜೀವನಶೈಲಿಗೆ ತಕ್ಕಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿರುವ ಏಕೀಕೃತ ಲಿಥಿಯಂ ಅಯಾನ್ ಬ್ಯಾಟರಿ ತಂತ್ರಜ್ಞಾನ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.

ಜೊತೆಗೆ ನಿಯಮಿತ ಅವಧಿಯಲ್ಲಿ ನೀರು ತುಂಬಿಸುವುದನ್ನು ತಪ್ಪಿಸುತ್ತದೆ. ಇದೊಂದು ಸ್ಮಾರ್ಟ್ ಪವರ್ ಬ್ಯಾಂಕ್ ಸಿಸ್ಟಮ್ ಆಗಿದ್ದು, ದೀರ್ಘ ಬಾಳಿಕೆಯ ಬ್ಯಾಟರಿ ಹೊಂದಿರುವುದೂ ಇದರ ಪ್ಲಸ್ ಪಾಯಿಂಟ್‌ಗಳಲ್ಲೊಂದು. 

ವೈಫೈ ಆಧಾರಿತವಾಗಿ ಕಾರ್ಯನಿರ್ವಹಿಸುವ ಈ ಪವರ್ ಬ್ಯಾಕಪ್ ವೋಲ್ಟೇಜ್ ಏರಿಳಿತ ಹಾಗೂ ಶಾರ್ಟ್ ಸರ್ಕ್ಯೂಟ್‌ಗಳನ್ನು ತಪ್ಪಿಸುತ್ತದೆ. ಇದರಲ್ಲಿರುವ ಟಚ್ ಸ್ಕ್ರೀನ್ ಮೂಲಕ ಬ್ಯಾಕಪ್ ಸಮಯ, ಚಾರ್ಜಿಂಗ್ ಸಮಯ ಸೆಟ್ ಮಾಡಬಹುದು