ನವದೆಹಲಿ(ಸೆ.27): ಭಾರತದ  ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಪ್ರತಿ ದಿನ ಹೊಸ ಹೊಸ ಮೊಬೈಲ್‌ಗಳು ಲಗ್ಗೆ ಇಡುತ್ತಿದೆ. ಇದೀಗ  ಸ್ಥಳೀಯ ಫೀಚರ್ ಫೋನ್ ತಯಾರಿಕೆಯ ಕಂಪನಿ ಜಿವಿ ಮೊಬೈಲ್ಸ್  ಫುಲ್ ವ್ಯೂ ಸ್ಮಾರ್ಟ್‍ಫೋನ್ ಸರಣಿ ಬಿಡುಗಡೆ ಮಾಡುವ ಮೂಲಕ ಸ್ಮಾರ್ಟ್‍ಫೋನ್ ವಲಯಕ್ಕೆ ಪ್ರವೇಶ ಪಡೆದಿದೆ. 

ಭಾರತದಾದ್ಯಂತ ಫೀಚರ್ ಫೋನ್ ವಲಯದಲ್ಲಿ ಪ್ರಭಾವಿ ಸ್ಥಾನ ಪಡೆದ ನಂತರ ಜಿವಿ ಮೊಬೈಲ್ಸ್ ಎಕ್ಸ್ ಟ್ರಿಮ್ ಸೀರೀಸ್ ಬಿಡುಗಡೆ ಮಾಡಿದ್ದು ಇದು ಫುಲ್ ವ್ಯೂ(18:9) ಡಿಸ್ಪ್ಲೇ, ಫಿಂಗರ್ ಫ್ರಿಂಟ್ ಸೆನ್ಸರ್ ಮತ್ತು ಡ್ಯುಯಲ್ ರಿಯರ್ ಕ್ಯಾಮರಾ ವಿಶೇಷತೆಗಳನ್ನು
ಹೊಂದಿದೆ. 

ಈ ಶ್ರೇಣಿಯ ಸ್ಮಾರ್ m ಫೋನ್‍ಗಳಲ್ಲಿ ಅಂತಹ ಹೈ-ಎಂಡ್ ಫೀಚರ್‌ಗಳನ್ನು ಹೊಂದಿರುವ ವಿಶಿಷ್ಟ ಫೋನ್ ಆಗಿದೆ. ಅಲ್ಲದೆ ಈ ಫೋನ್‍ಗಳು ಫೇಸ್ ಅನ್‍ಲಾಕ್ ಫೀಚರ್ ಕೂಡಾ ಹೊಂದಿವೆ.  ನೂತನ್ ಫೋನ್  ಬೆಲೆ 5000ರೂ.ನಿಂದ 7000ರೂಪಾಯಿ ವರೆಗಿದೆ. ಇಎಂಐಗಳಲ್ಲಿ ಖರೀದಿಸುವವರಿಗೆ  ಝೀರೋ  ಡೌನ್‍ಪೇಮೆಂಟ್‍ಗಳಲ್ಲೂ ಲಭ್ಯವಿದೆ

ಎಕ್ಸ್ ಟ್ರೀಮ್ ಕ್ಲಿನ್ ಎಕ್ಸ್‍ಟಿ 84 
ಫುಲ್ ವ್ಯೂ 18/9 ಡಿಸ್ಪ್ಲೇ ಮತ್ತು 5.3 ಸ್ಕ್ರೀನ್ ಗಾತ್ರ ಹೊಂದಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮರಾ ಹೊಂದಿದ್ದು 2500ಎಂಎಎಚ್ ಬ್ಯಾಟರಿ ಹೊಂದಿದೆ. ಬೆಲೆ 5299ರೂ.

ಎಕ್ಸ್ ಟ್ರೀಮ್ ವ್ಯೂ ಎಕ್ಸ್‍ಟಿ309 
ಎಕ್ಸ್‍ಟಿ 309 ಫುಲ್ ವ್ಯೂ ಐಪಿಎಸ್ ಡಿಸ್ಪ್ಲೇ 2.5ಡಿ ಗ್ಲಾಸ್ ಮತ್ತು 5.3  ಸ್ಕ್ರೀನ್
ಗಾತ್ರ ಹೊಂದಿದೆ. ಇದು ಸುಧಾರಿತ ಫಿಂಗರ್‍ಪ್ರಿಂಟ್ ಸೆನ್ಸರ್ ಹೊಂದಿದ್ದು ಸೆಕ್ಯುರಿಟಿ ಲಾಕ್, ಮ್ಯೂಸಿಕ್ ಕಂಟ್ರೋಲ್, ಆನ್ಸರಿಂಗ್ ಕಾಲ್, ಕಂಟ್ರೋಲಿಂಗ್ ಅಲಾರಾಂ, ಆ್ಯಪ್ ಲಾಕ್ ಇತ್ಯಾದಿ ಹೊಂದಿದ್ದು ಬೆಲೆ 5599ರೂ.

ಎಕ್ಸ್ ಟ್ರೀಮ್ ವ್ಯೂ ಪ್ರೊ 309+
ಎಕ್ಸ್‍ಟಿ 309+ ಅಪ್‍ಗ್ರೇಡ್ ಮಾಡಲಾದ ಎಕ್ಸ್‍ಟಿ309 ಆಗಿದ್ದು ದೊಡ್ಡ ಬ್ಯಾಟರಿ,
ಹೆಚ್ಚು ಮೆಮೊರಿ ಮತ್ತು ಉತ್ತಮ ಕ್ಯಾಮರಾ ಹೊಂದಿದೆ. ಈ ಫೋನ್ 2700ಎಂಎಎಚ್ ಬ್ಯಾಟರಿ ಹೊಂದಿದ್ದು 16ಜಿಬಿ ರೊಮ್ ಮತ್ತು 2ಜಿಬಿ ರ್ಯಾಮ್ ಹೊಂದಿದೆ. ಬೆಲೆ 6799ರೂ. ಹೊಂದಿದೆ.