ನವದೆಹಲಿ[ಮಾ.30]: ಆಂಧ್ರಪ್ರದೇಶದ ಶ್ರೀಹರಿಕೋಟಾದ ಇಸ್ರೋದ ಉಪಗ್ರಹ ಉಡಾವಣೆ ಕೇಂದ್ರದಲ್ಲಿ ರಾಕೆಟ್ ಉಡಾವಣೆಯನ್ನು ಇನ್ನು ಜನ ಸಾಮಾನ್ಯರೂ ಸಹ ಕಣ್ತುಂಬಿಕೊಳ್ಳಬಹುದು. ಇದರ ಅವಕಾಶ ಏ.1ರಂದೇ ಸಿಗಲಿದೆ. ಅಂದು ಬೆಳಗ್ಗೆ 9.30ಕ್ಕೆ ಪೋಲಾ ರ್ ಸ್ಯಾಟಲೈಟ್ ಉಡಾವಣೆಯಾಗಲಿದೆ.

ವೀಕ್ಷ ಣೆಗೆ ಇಸ್ರೋ ಸಕಲ ಸಿದ್ಧತೆ ಮಾಡಿದೆ. ಇದುವರೆಗೂ ಇಸ್ರೋ ಅಧಿಕಾರಿಗಳು ಮಾತ್ರವೇ ರಾಕೆಟ್ ಉಡಾವಣೆಯನ್ನು ವೀಕ್ಷಿಸಬಹುದಿತ್ತು. ಇದೀಗ ಸಾರ್ವಜನಿಕರಿಗೂ ಮುಕ್ತ ಗೊಳಿಸಲಾಗಿದೆ. ಇಂಥ ವ್ಯವಸ್ಥೆಯನ್ನು ನಾಸಾ ಸಂಸ್ಥೆ ಅಮೆರಿಕದ ಪ್ರಜೆಗಳಿಗೆ ಈಗಾಗಲೇ ಒದಗಿಸಿಕೊಟ್ಟಿದೆ.

ಉಡಾವಣೆ ವೀಕ್ಷಣೆಗಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸುಮಾರು 5000 ಪ್ರೇಕ್ಷಕರು ಸೇರ ಬಹುದಾದ ನೂತನ ಸ್ಟೇಡಿಯಂ ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ 10000 ಮಂದಿ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುತ್ತದೆ.

ಇಲ್ಲಿಗೆ ಭೇಟಿ ನೀಡ ಬಯಸುವವರು ಇಸ್ರೋ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಜತೆಗೆ ಸರ್ಕಾರ ನೀಡಿರುವ ಗುರುತಿನ ಚೀಟಿ ತರಬೇಕು ಎಂದು ಇಸ್ರೋ ವಕ್ಕತಾರ ವಿವೇಕ್ ಸಿಂಗ್ ತಿಳಿಸಿದ್ದಾರೆ.