ಸ್ಥಗಿತಗೊಳ್ಳುತ್ತಾ ಭಾರತದ ಟಾಟಾ ನ್ಯಾನೋ ಸಣ್ಣ ಕಾರು?

Is it end of the road for Tata's Nano?
Highlights

ಭಾರತದ ಅತೀ ಕಡಿಮೆ ಬೆಲೆಯ ಹಾಗೂ ಸಣ್ಣ ಕಾರು ಅನ್ನೋ ಘೋಷಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿ ಟಾಟಾ ನ್ಯಾನೋ ಆರಂಭದಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ 10ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ನ್ಯಾನೋ ನಿರ್ಮಾಣ ಸ್ಥಗಿತಗೊಳಿಸೋ ನಿರ್ಧಾರದಲ್ಲಿದೆ. ಅಷ್ಟಕ್ಕೂ ನ್ಯಾನೋ ಕಾರು ಇನ್ಮುಂದೆ ರೋಡಿಗಳಿಯೋದಿಲ್ವಾ? ಇಲ್ಲಿದೆ ಉತ್ತರ.

ಬೆಂಗಳೂರು(ಜು.05): ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸಣ್ಣ ಕಾರಿನ ಮೂಲಕ ಭಾರಿ ಸದ್ದು ಮಾಡಿದ್ದ ಟಾಟಾ ನ್ಯಾನೋ ಕಾರು ಅವಸಾನದ ಅಂಚಿನಲ್ಲಿದೆ. ಜೂನ್ ತಿಂಗಳಲ್ಲಿ ಕೇವಲ 1 ಕಾರನ್ನ ಟಾಟಾ ಮೋಟಾರ್ ನಿರ್ಮಾಣ ಮಾಡಿದೆ. ಇನ್ನು 3 ಕಾರುಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.

2019ರಲ್ಲಿ ಟಾಟಾ ನ್ಯಾನೋ ಕಾರು ಸಂಪೂರ್ಣವಾಗಿ ಸ್ಥಗಿತಗೊಳ್ಳೋ ಸಾಧ್ಯತೆ ಹೆಚ್ಚಿದೆ. 2008ರ ದೆಹಲಿ ಅಟೋ ಶೋನಲ್ಲಿ ಟಾಟಾ ನ್ಯಾನೋ ಕಾರು ಮೊತ್ತ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಇಷ್ಟೇ ಅಲ್ಲ, ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ, ಕಡಿಮೆ ಬೆಲೆಯ ಕಾರು ಎಂದು ಘೋಷಿಸಿದ್ದರು. 

1 ಲಕ್ಷ ಬೆಲೆಯ ಟಾಟಾ ನ್ಯಾನೋ ಕಾರು ಮಾರುಕಟ್ಟೆ ಪ್ರವೇಶಿಸೋ ವೇಳೆ 1.5 ಲಕ್ಷ ದಾಟಿತ್ತು. ಇದೀಗ 4 ಲಕ್ಷ ರೂಪಾಯಿಗೆ ತಲುಪಿದೆ. ಸದ್ಯಾ ಟಾಟಾ ಮೋಟಾರು ಕಾರು ನಿರ್ಮಾಣ ಸ್ಥಗಿತಗೊಳಿಸೋ ನಿರ್ಧಾರಕ್ಕೆ ಬಂದಿಲ್ಲ. ಆದರೆ ಕಾರು ಮಾರುಕಟ್ಟೆಯಲ್ಲಿ ಗ್ರಾಹಕರನ್ನ ಸೆಳೆಯುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಟಾಟಾ ಸಂಸ್ಥೆಗೆ ಬಂದೊದಗಿದೆ.
 

loader