ಅಗ್ಗದ ಸ್ಮಾರ್ಟ್‌ಪೋನ್‌ ಸಾಲಿಗೆ ಮತ್ತೊಂದು ಸೇರ್ಪಡೆ; ಇದು ‘ಹಾಟ್’ ಡೀಲ್!

ಕಣ್ಣಿಗೆ ಒತ್ತಡವಾಗದಂತೆ ಐಕೇರ್ | ಓದುವುದಕ್ಕಾಗಿ ವಿಶೇಷ ಮೋಡ್ | 13 ಮೆಗಾ ಪಿಕ್ಸೆಲ್ ನ ಸೆಲ್ಫೀ ಕ್ಯಾಮೆರಾ | ಇನ್ಫಿನಿಕ್ಸ್ ಹಾಟ್ 7 ಸ್ಮಾರ್ಟ್ ಪೋನ್ ಬಿಡುಗಡೆ

Infinix Launches Hot 7 Smartphone in India Features Price

ಶ್ರೀ ಸಾಮಾನ್ಯ ಬಯಸುವ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಇನ್‌ಫಿನಿಕ್ಸ್ ಕಂಪನಿಯು ಇನ್ನೊಂದು ಹೊಸ ಮೊಬೈಲನ್ನು ಮಾರುಕಟ್ಟೆಗೆ ಬಿಟ್ಟಿದೆ.   

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ 10 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಬಜೆಟ್ ಮೊಬೈಲ್ ಹಾಟ್ 7  ಇನ್‌ಫಿನಿಕ್ಸ್ ಕಂಪನಿಯ ಹೊಸ ಲಾಂಚ್. 

ಇದನ್ನೂ ಓದಿ | ಅಗ್ಗ, ಆದ್ರೂ ಫೀಚರ್ ಮಾತ್ರ ಸಖತ್! ಮೊಬೈಲ್ ಮಾರುಕಟ್ಟೆಗೆ S4

ಹಾಟ್ 7 ಸ್ಮಾರ್ಟ್‌ಫೋನ್ 13 ಮೆಗಾ ಪಿಕ್ಸೆಲ್‌ನ ಸೆಲ್ಫೀ ಕ್ಯಾಮೆರಾ ಹೊಂದಿದ್ದು, 6.19 ಇಂಚಿನ ಎಚ್‌ಡಿ ಡಿಸ್ಪ್ಲೇ ಇದಕ್ಕಿದೆ.

4GB RAM ಹಾಗೂ 64 GB ಮೆಮೊರಿ ಹೊಂದಿರುವ ಈ ಮೊಬೈಲ್ಸ್ ನ ಬ್ಯಾಟರಿ ಸಾಮರ್ಥ್ಯ 4000 mAh, ಕಣ್ಣಿಗೆ ಒತ್ತಡವಾಗದಂತೆ ಐಕೇರ್, ಓದುವುದಕ್ಕಾಗಿ ವಿಶೇಷ ಮೋಡ್ ಇದರ ಇನ್ನಿತರ ವಿಶೇಷತೆಗಳು.  

ಅಂದ ಹಾಗೇ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದ್ದು, ಇದರ ಬೆಲೆ 7999 ರೂಪಾಯಿಯಾಗಿದೆ. 
 

Latest Videos
Follow Us:
Download App:
  • android
  • ios