ಭಾರತದ ಮೊತ್ತ ಮೊದಲ ರಿವರ್ಸ್ ಗೇರ್ ಬೈಕ್ ಮಾರುಕಟ್ಟೆ ಪ್ರವೇಶ!ಬೆಲೆ ಎಷ್ಟು?

Indias First ever Reverse gear bike delivery begins
Highlights

ಭಾರತದ ಜನಪ್ರೀಯ ಬೈಕ್‌ಗಳಲ್ಲಿ ಹೊಂಡಾ ಅಗ್ರ ಸ್ಥಾನ ಪಡೆದುಕೊಂಡಿದೆ. ಇದೀಗ ಹೊಂಡಾ ಭಾರತದ ಮೊತ್ತ ಮೊದಲ ರಿವರ್ಸ್ ಗೇರ್ ಬೈಕ್ ಬಿಡುಗಡೆ ಮಾಡಿದೆ. ಇದರ ಬೆಲೆ ಎಷ್ಟು? ವಿಶೇಷತೆ ಏನು? ಇಲ್ಲಿದೆ ವಿವರ

ಬೆಂಗಳೂರು(ಜು.09):  ಭಾರತದ ಬೈಕ್ ಮಾರುಕಟ್ಟೆಯಲ್ಲಿ ಹೊಂಡಾ ಸಂಸ್ಥೆ ಗರಿಷ್ಠ ಗ್ರಾಹಕರನ್ನ ಹೊಂದಿದೆ. ಗ್ರಾಹಕರ ಬೇಡಿಗೆಕೆ ತಕ್ಕಂತೆ ಆಧುನಿಕ ತಂತ್ರಜ್ಞಾನ ಹಾಗೂ ನೂತನ ವಿನ್ಯಾಸದಲ್ಲಿ ಹೊಂಡಾ ಬೈಕ್‌ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿ ಯಶಸ್ಸು ಕಾಣುತ್ತಿದೆ.

ಹೊಂಡಾ ಸಂಸ್ಥೆ ಇದೀಗ ನೂತನವಾಗಿ ಬಿಡುಗಡೆ ಮಾಡಿರುವ ಹೊಂಡಾ ಗೋಲ್ಡ್ ವಿಂಗ್ ಬೈಕ್, ಭಾರತದ ಮೊತ್ತ ಮೊದಲ ರಿವರ್ಸ್ ಗೇರ್ ಹೊಂದಿರೋ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 

ನೂತನ ಹೊಂಡಾ ಗೋಲ್ಡ್ ವಿಂಗ್ ಬೈಕ್ ಬೆಲೆ 26.85 ಲಕ್ಷ ರೂಪಾಯಿ(ಎಕ್ಸ್ ಶೋರೂಂ). ವಿಶೇಷ ಅಂದರೆ ಈ ಬೈಕ್ 6 ಸಿಲಿಂಡರ್ ಹಾಗೂ 1833 ಸಿಸಿ ಇಂಜಿನ್ ಹೊಂದಿದೆ.

93 ಬಿಹೆಚ್‌ಪಿ ಪವರ್ ಹಾಗೂ 170 ಎನ್‌ಎಮ್ ಟಾರ್ಕ್ಯೂ ಹೊಂದಿರೋ ನೂತನ ಹೊಂಡಾ ಗೋಲ್ಡ್ ವಿಂಗ್, 7 ಸ್ವೀಡ್ ಡ್ಯುಯೆಲ್ ಕ್ಲಚ್ ಟ್ರಾನ್ಸ್‌ಮಿಶನ್ ಹೊಂದಿದೆ.  ಹೀಗಾಗಿ ಗೇರ್ ಶಿಫ್ಟ್‌ಗಾಗಿ ಆಧುನಿಕ ಬಟನ್ ವ್ಯವಸ್ಥೆ ಅಳವಡಿಸಲಾಗಿದೆ.

ಆಪಲ್ ಫೋನ್ ಇಂಟಿಗ್ರೇಶನ್ ಹೊಂದಿರೋ ಭಾರತದ ಮೊತ್ತ ಮೊದಲ ಬೈಕ್ ಈ ಹೊಂಡಾ ಗೋಲ್ಡ್ ವಿಂಗ್. 7 ಇಂಚು ಟಚ್ ಸ್ಕ್ರೀನ್, ಹಾಗೂ ಸ್ಮಾರ್ಟ್ ಆಡಿಯೋ ಸಿಸ್ಟಮ್ ಹೊಂದಿದೆ. ಇದೀಗ ಭಾರತದ ಮಾರುಕಟ್ಟೆ ಪ್ರವೇಶಿಸಿರುವ ಹೊಂಡಾ ಗೋಲ್ಡ್ ವಿಂಗ್ ಮೋಡಿ ಮಾಡಲು ರೆಡಿಯಾಗಿದೆ.

loader