ಬೆಂಗಳೂರು(ಸೆ.22): ನಮ್ಮ ಫೋನ್‌ಗಳು ಹಲವಾರು ಕಾರಣಗಳಿಂದ ಕಲೆ ಮತ್ತು ಗೀರು ಗಳಾಗುತ್ತಿರುತ್ತವೆ. ಇದಕ್ಕಾಗಿ ಹೆಚ್ಚು ಶುಲ್ಕ ನೀಡಿ ಸರಿಪಡಿಸುವುದಕ್ಕಿಂತ ಕೆಲವೊಂದು ಸುಲಭ ವಿಧಾನಗಳ ಮೂಲಕ ಹೋಗಲಾಡಿಸಬಹುದು. 

ಹೌದು ಈ ಸ್ಕ್ರಾಚ್ ಹೋಗಲಾಡಿಸುವ ವಸ್ತುಗಳು ನಿಮ್ಮ ಮನೆ ಯಲ್ಲೇ ಇದ್ದು ಅವುಗಳನ್ನು ನೀವು ಯಾವಾಗ ಬೇಕಾದರೂ ಬಳಸಬಹುದಾಗಿದೆ. ಅದೂ ಕಡಿಮೆ ಬೆಲೆಯಲ್ಲಿ, ಹೆಚ್ಚು ಪ್ರಯೋಜನಕಾರಿಯಾದಂಥವು.  ಜೆಲ್ ಇಲ್ಲದ ಟೂಥ್‌ಪೇಸ್ಟ್, ಕಾರಿನ ಸ್ಕ್ರಾಚ್ ತೆಗೆಯುವಂತಹ ಟರ್ಟಲ್ ವ್ಯಾಕ್ಸ್, ಸ್ವಿರಿಲ್ ರಿಮೂವರ್ ಫೋನ್ ಸ್ಕ್ರಾಚ್ ನಿವಾರಿಸುತ್ತದೆ. ಕ್ರೀಮನ್ನು ಹಚ್ಚಿ ಒಣಗಿದ ಮೃದು ಬಟ್ಟೆಯಿಂದ ಒರೆಸಿ ತೆಗೆಯಿರಿ. 

ಬೇಕಿಂಗ್ ಸೋಡಾ, ಬೇಬಿ ಪೌಡರ್, ಕೂಡ ಬಳಸಬಹುದು. ಇದನ್ನು ನೀರಿನೊಂದಿಗೆ ದಪ್ಪ ಪೇಸ್ಟ್ ಮಾಡಿ ಮೃದುವಾದ ಬಟ್ಟೆಯಿಂದ ಹಚ್ಚಿ ಒಣಗಿದ ಮೇಲೆ ಹತ್ತಿ ಬಟ್ಟೆಯಿಂದ ಚೆನ್ನಾಗಿ ಒರೆಸಿ. ನಿಮ್ಮ ಫೋನ್ ಮೇಲಿನ ಸ್ಕ್ರಾಚ್, ಗೀರುಗಳು ಮಾಯವಾಗಲಿದೆ.