ಆಗಸ್ಟ್‌ನಿಂದ ಭಾರತದಲ್ಲಿ ದುಬಾರಿಯಾಗಲಿದೆ ಹೊಂಡಾ ಕಾರು ಬೆಲೆ

Honda To Increase Prices Of Its Cars From August 2018
Highlights

ಹೊಂಡಾ ಕಾರು ಕೊಳ್ಳೋ ನಿರ್ಧಾರದಲ್ಲಿದ್ದರೆ, ಜುಲೈ 30 ರೊಳಗೆ ನೀವು ಖರೀಧಿ ಕಾರ್ಯ ಮುಗಿಸಿಕೊಳ್ಳಿ. ಯಾಕೆಂದರೆ ಆಗಸ್ಟ್ 1 ರಿಂದ ಹೊಂಡಾ ಕಾರಿನ ಬೆಲೆ ಹೆಚ್ಚಾಗಲಿದೆ. ಹಾಗಾದರೆ ಪರಿಷ್ಕರಿಸಿದ ದರ ಹೇಗಿದೆ? ಇಲ್ಲಿದೆ ವಿವರ.

ಬೆಂಗಳೂರು(ಜು.09): ಭಾರತದಲ್ಲಿ ಹೊಂಡಾ ಕಾರು ಗ್ರಾಹಕರ ಕೈಸುಡಲಿದೆ. ಆಗಸ್ಟ್ 1 ರಿಂದ ಭಾರತದ ಹೊಂಡಾ ಸಂಸ್ಥೆ ಎಲ್ಲಾ ಕಾರಿನ ಬೆಲೆ ಹೆಚ್ಚಾಗಲಿದೆ. ಕನಿಷ್ಠ 10,000 ದಿಂದ ಗರಿಷ್ಠ 35,000 ವರೆಗೂ ಬೆಲೆ ಹೆಚ್ಚಾಗಲಿದೆ ಎಂದು ಹೊಂಡಾ ಕಾರ್ ಇಂಡಿಯಾ ಲಿಮಿಟೆಡ್ ಉಪಾಧ್ಯಕ್ಷ ರಾಜೇಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.

ಹೊಸ ನೀತಿ ಪ್ರಕಾರ ಆಮದು ತೆರಿಗೆ ಹೆಚ್ಚಳವಾಗಿದೆ. ಹೀಗಾಗಿ ಕಾರಿನ ನಿರ್ಮಾಣದ ವೆಚ್ಚ ಕೂಡ ಹೆಚ್ಚಿದೆ. ಇದು ಹೊಂಡಾ ಕಾರಿನ ಬೆಲೆ ಮೇಲೇ ಪರಿಣಾಮ ಬೀರಲಿದೆ. ನೂತನ ದರ ಆಗಸ್ಟ್ 1 ರಿಂದ ಜಾರಿಯಾಗಲಿದೆ ಎಂದು ರಾಜೇಶ್ ಗೋಯಲ್ ಹೇಳಿದ್ದಾರೆ.

ಹೊಂಡಾ ಸಂಸ್ಥೆ ಭಾರತದ 3 ಹೊಸ ಕಾರು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಇದರಲ್ಲಿ ಹೊಂಡಾ ನ್ಯೂ ಜೆನ್ ಅಮೇಜ್ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಈ ನೂತನ ಕಾರಿನ ಬೆಲೆಯೂ ಹೆಚ್ಚಾಗಲಿದೆ. ಇನ್ನುಳಿದ 2 ಕಾರುಗಳೂ ಕೂಡ ಬೆಲೆ ಹೆಚ್ಚಳದಿಂದ ಭಾರತೀಯರ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಹರಸಾಹಸ ಮಾಡಬೇಕಿದೆ.

loader