ಹೀರೋ ಎಕ್ಸ್ಟ್ರೀಮ್ 200 ಸಿಸಿ ಬೈಕ್ ಬುಕ್ಕಿಂಗ್ ಆರಂಭ-ಬೆಲೆ ಎಷ್ಟು?

Hero Xtreme 200R Priced at Rs 88,000; Bookings Open
Highlights

ಭಾರತದ ಜನಪ್ರೀಯ ಹಾಗೂ ಬೈಕ್ ಪ್ರೀಯರ ನೆಚ್ಚಿನ ಹೀರೋ ಮೋಟಾರ್ ಕಾರ್ಪ್ ಅವರ ನೂತನ ಎಕ್ಸ್ಟ್ರೀಮ್ 200 ಆರ್ ಬೈಕ್ ಬುಕ್ಕಿಂಗ್ ಆರಂಭಗೊಂಡಿದೆ. ಇದರ ವಿಶೇಷತೆ ಏನು? ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು(ಜು.08): ಹೀರೋ ಮೋಟಾರ್ ಕಾರ್ಪ್ ಸಂಸ್ಥೆಯ ನೂತನ ಹೀರೋ ಎಕ್ಸ್ಟ್ರೀಮ್ 200 ಬೈಕ್ ಬುಕ್ಕಿಂಗ್ ಆರಂಭಗೊಂಡಿದೆ. ಭಾರತದ ಜನಪ್ರೀಯ ಮೋಟಾರ್ ಬೈಕ್ ಹೀರೋ ಇದೀಗ ಭಾರತೀಯ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ.

200 ಸಿಸಿ ಇಂಜಿನ್ ಹೊಂದಿರೋ ಈ ಬೈಕ್ ಸದ್ಯ ಭಾರತದಲ್ಲಿರೋ ಇತರ 200 ಸಿಸಿ ಬೈಕ್‌ಗಳಿಗೆ ಭಾರಿ ಪೈಪೋಟಿ ನೀಡೋ ಸಾಧ್ಯತೆ ಇದೆ. ನೂತನ ಹೀರೋ ಎಕ್ಸ್ಟ್ರೀಮ್ ಬೈಕ್ ಬೆಲೆ 88,000(ಎಕ್ಸ್ ಶೋರೂಂ). 

ಸ್ಪೋರ್ಟ್ಸ್ ಲುಕ್, ಎಲ್ಇಡಿ  ಲ್ಯಾಂಪ್ಸ್, ಎಲ್ಇಡಿ ಟೈಲೈಟ್ಸ್, ಅನಲಾಗ್ ಡಿಜಿಟಲ್ ಹಾಗೂ ಸಿಂಗಲ್ ಚಾನೆಲ್ ಎಬಿಎಸ್ ನೂತನ ಹೀರೋ ಎಕ್ಸ್ಟ್ರೀಮ್ 200 ಆರ್ ಬೈಕ್‌ನ ವಿಶೇಷತೆ.

ಹೀರೋ ಎಕ್ಸ್ಟ್ರೀಮ್ 200 ಆರ್ ಬೈಕ್ 5 ಕಲರ್‌ಗಳಲ್ಲಿ ಲಭ್ಯವಿದೆ. 5 ಗೇರ್ ಹೊಂದಿರೋ ಈ ಬೈಕ್, 18  ಬಿಹೆಚ್‌ಪಿ ಪವರ್ ಹೊಂದಿದೆ. 8,000 ಆರ್‌ಪಿ ಹಾಗೂ 17.1 ಎನ್‌ಎಮ್ ಪೀಕ್ ಟಾರ್ಕ್ಯೂ ಹೊಂದಿದೆ.

loader