ಟ್ವಿಟರ್ ಖಾತೆ ತೆರೆದ ದೇವೇಗೌಡರು, ಫಾಲೋ ಮಾಡುತ್ತಿರೋದು ಯಾರನ್ನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Aug 2018, 5:53 PM IST
HD Devegowda start new twitter account
Highlights

ಕರ್ನಾಟಕ ಮುಖ್ಯಮಂತ್ರಿ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ವೈಯಕ್ತಿಕ ಖಾತೆಗಳನ್ನು  ಮಾತ್ರ ಫಾಲೋ ಮಾಡುತ್ತಿದ್ದಾರೆ.

ಬೆಂಗಳೂರು[ಆ.30]: ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಟ್ವಿಟರ್ ಲೋಕಕ್ಕೆ ಕಾಲಿಟ್ಟಿದ್ದಾರೆ.

ಆಗಸ್ಟ್ 22 ರಂದು ತಮ್ಮ ಅಧಿಕೃತ ಖಾತೆ ತೆರೆದಿರುವ ದೇವೇಗೌಡರು ಇಲ್ಲಿಯವರೆಗೂ 7 ಟ್ವೀಟ್'ಗಳನ್ನು ಮಾಡಿದ್ದಾರೆ.  ಕರ್ನಾಟಕ ಮುಖ್ಯಮಂತ್ರಿ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ವೈಯಕ್ತಿಕ ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಗೌಡರನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸೇರಿ 322 ಮಂದಿ ಫಾಲೋ ಮಾಡುತ್ತಿದ್ದಾರೆ.

ಈ ಮೊದಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದವು. ಆದರೆ ಕಳೆದ ವರ್ಷದಿಂದ ಜಾತ್ಯಾತೀತ ಜನತಾ ದಳ ಕೂಡ ಸೋಷಿಯಲ್ ಮೀಡಿಯಾ'ಗಳಲ್ಲಿ ಪಕ್ಷದ ಕಾರ್ಯಚಟುವಟಿಕೆಗಳನ್ನು ತೋರ್ಪಡಿಸಿಕೊಳ್ಳುತ್ತಿದೆ.  

loader