Asianet Suvarna News Asianet Suvarna News

ಭಾರತದ ನವೋದ್ಯಮಕ್ಕೆ ಗೂಗಲ್ ಭರ್ಜರಿ ಪ್ಲ್ಯಾನ್!

ತಂತ್ರಜ್ಞಾನ ಬೆಳೆದಂತೆ ಭಾರತದಲ್ಲಿ ಸ್ಟಾರ್ಟಪ್ ಸಂಸ್ಕೃತಿಯೂ ಬೆಳೆಯುತ್ತಾ ಬಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿರುವ ಅಪರಿಮಿತ ಅವಕಾಶಗಳನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ, ಹಾಗೂ ಅದರಲ್ಲಿ ತೊಡಗಿಕೊಂಡಿರುವ ನವೋದ್ಯಮಿಗಳಿಗೆ ಪೂರಕವಾದ ವಾತಾವರಣ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರವೂ ವಿಶೇಷ ಯೋಜನೆಗಳನ್ನು ಆರಂಭಿಸಿದೆ. 

Google Launchpad to Propel 1K Startups in India
Author
Bengaluru, First Published Dec 19, 2018, 6:26 PM IST

ಬೆಂಗಳೂರು: ಭಾರತದ ಸ್ಟಾರ್ಟಪ್ ಉದ್ಯಮಿಗಳಿಗೆ ನೆರವಾಗುವ ಹಾಗೂ ಪೂರಕವಾದ ವಾತವರಣ ಕಲ್ಪಿಸುವ ಉದ್ದೇಶದಿಂದ ಸಾಫ್ಟ್‌ವೇರ್ ದೈತ್ಯ ಗೂಗಲ್ ತನ್ನ ಮಹಾತ್ವಾಕಾಂಕ್ಷೆ ಕಾರ್ಯಕ್ರಮವನ್ನು ವಿಸ್ತರಿಸಲು ಮುಂದಾಗಿದೆ.

ಗೂಗಲ್ ಈ ಹಿಂದೆ ಆರಂಭಿಸಿದ್ದ Launchpad Accelerator ಎಂಬ ಸ್ಟಾರ್ಟಪ್ ಮೆಂಟರ್‌ಶಿಪ್ ಕಾರ್ಯಕ್ರಮವನ್ನು ಇದೀಗ 1000 ಸ್ಟಾರ್ಟಪ್‌ಗಳಿಗೆ ವಿಸ್ತರಿಸಲಿದೆ. ಆ ನಿಟ್ಟಿನಲ್ಲಿ ಸಹಭಾಗಿ ಇಂಕ್ಯುಬೇಟರ್ ಮತ್ತು ಎಕ್ಸಲರೇಟರ್‌ಗಳ ಬಗ್ಗೆ ಗೂಗಲ್ ಮಾಹಿತಿ ಕಲೆ ಹಾಕುತ್ತಿದೆ.

ಈ ಮಹಾತ್ವಾಕಾಂಕ್ಷೆ ಯೊಜನೆಯ ರೂಪುರೇಷೆಗಳನ್ನು ಮುಂದಿಟ್ಟುಕೊಂಡು ನಾವು ಹಲವಾರು ಎಕ್ಸಲರೇಟರ್ ಹಾಗೂ ಇಂಕ್ಯೂಬೇಟರ್‌ಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ, ಎಂದು ಗೂಗಲ್‌ನ Launchpad Accelerator ಕಾರ್ಯಕ್ರಮದ ಮುಖ್ಯಸ್ಥ ಪೌಲ್ ರವೀಂದ್ರನಾಥ್ ತಿಳಿಸಿದ್ದಾರೆ. 

ಇದನ್ನೂ ಓದಿ: 13ರ ಭಾರತೀಯ ಬಾಲಕ ದುಬೈನಲ್ಲಿ ಸಾಫ್ಟ್‌ವೇರ್‌ ಕಂಪನಿಯ ಮಾಲೀಕ!

ಮಶೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟಿಲಿಜೆನ್ಸ್ ಬಳಸಿ ಸ್ಥಳೀಯ ಅವಶ್ಯಕತೆಗಳಿಗೆ ತಂತ್ರಜ್ಞಾನ ನೆರವು ಹಾಗೂ ಸಮಸ್ಯೆಗಳಿಗೆ ಪರಿಹಾರವೊದಗಿಸಲು ಕೆಲಸಮಾಡುತ್ತಿರುವ ಸ್ಟಾರ್ಟಪ್‌ಗಳಿಗೆ ಮಾರ್ಗದರ್ಶನ ಮಾಡುವ ದಿಶೆಯಲ್ಲಿ ಗೂಗಲ್ 2018ರಲ್ಲಿ Launchpad Accelerator ಎಂಬ ಕಾರ್ಯಕ್ರಮವನ್ನು ಆರಂಭಿಸಿತ್ತು. 

ಮೊದಲ ಹಂತದಲ್ಲಿ, ಮೂರು ತಿಂಗಳ ಅವಧಿಯಲ್ಲಿ, ಸಾವಿರಾರು ಸ್ಟಾರ್ಟಪ್ ಅರ್ಜಿಗಳ ಪೈಕಿ ಗೂಗಲ್ 10 ಸ್ಟಾರ್ಟಪ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿತ್ತು. ಬಳಿಕ, 2 ವಾರಗಳಲ್ಲಿ, ಅವುಗಳಿಗೆ ಬೇಕಾದ ಮಾರ್ಗದರ್ಶನ, ಗೂಗಲ್ ಸಂಪರ್ಕಜಾಲ, ತಜ್ಞರ ಸಲಹೆ ಮತ್ತು ತಂತ್ರಜ್ಞಾನ ತರಬೇತಿಯನ್ನು ನೀಡಲಾಗಿತ್ತು.

ಗೂಗಲ್‌ಗೆ ಭಾರತದಲ್ಲಿ ಈವರೆಗೆ ತನ್ನ ಅವಶ್ಯಕತೆಗಳಿಗೆ ಸ್ಪಂದಿಸುವ ಸಹಭಾಗಿ ಸಂಸ್ಥೆಗಳು ಸಿಕ್ಕಿಲ್ಲವಾದರೂ, ಜಾಗತಿಕ ಮಟ್ಟದಲ್ಲಿ ಸುಮಾರು 10 ಕಂಪನಿಗಳು ಕೈಜೋಡಿಸಿವೆ. 

ಇದನ್ನೂ ಓದಿ: ವಾಟ್ಸಪ್ ಗ್ರೂಪ್ ಇನ್ನು ಸುಲಭವಲ್ಲ? ಬರಲಿದೆ ಹೊಸ ನಿಯಮ!

ಏನಿದು ಇಂಕ್ಯುಬೇಟರ್ಸ್ & ಎಕ್ಸಲರೇಟರ್ಸ್?

ಸ್ಟಾರ್ಟಪ್‌ಗಳಿಗೆ ಬೇಕಾದ ಮೂಲಭೂತ ಸೌಕರ್ಯ, ಫಂಡಿಂಗ್ ಮುಂತಾದ ಸಾಮಾನ್ಯ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಇಂಕ್ಯುಬೇಟರ್ಸ್ ಕೆಲಸ ಮಾಡುತ್ತವೆ. ಹಾಗೆಯೇ, ಆ ಸ್ಟಾರ್ಟಪ್‌ಗಳಿಗೆ ಬೇಕಾದ ಸೂಕ್ತ ಮಾರ್ಗದರ್ಶನ ಮತ್ತು ಅವಶ್ಯಕ ತರಬೇತಿಯನ್ನು ಒದಗಿಸುವ ವ್ಯವಸ್ಥೆಗೆ ಎಕ್ಸಲರೇಟರ್ಸ್ ಎನ್ನಲಾಗುತ್ತದೆ.   

Nascom ಪ್ರಕಾರ 2018 ರಲ್ಲಿ ಸುಮಾರು 1200 ತಂತ್ರಜ್ಞಾನಾಧಾರಿತ ಸ್ಟಾರ್ಟಪ್‌ಗಳು ಭಾರತದಲ್ಲಿ ಆರಂಭವಾಗಿದೆ. ಕಳೆದ ವರ್ಷ ಇದರ ಪ್ರಮಾಣ 1000ರಷ್ಟಿತ್ತು.  ಭಾರತದಲ್ಲಿ ಸುಮಾರು 7700 ಸ್ಟಾರ್ಟಪ್‌ಗಳು ಕಾರ್ಯಾಚರಿಸುತ್ತಿದ್ದು, ಭಾರತ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. 

Follow Us:
Download App:
  • android
  • ios