ಬೆಂಗಳೂರು (ಡಿ. 14) ಕೊರೋನಾ ನಡುವೆ ಇದ್ದಕ್ಕಿದಂತೆ ಇಡೀ ಆನ್ ಲೈನ್ ಪ್ರಪಂಚ ಸ್ತಬ್ಧವಾಗಿದೆ. ಅದಕ್ಕೆ ಕಾರಣ ಜಿಮೇಲ್ , ಯುಟ್ಯೂಬ್, ಗೂಗಲ್ ಡಾಕ್ಸ್ ಎಲ್ಲವೂ ಪ್ರಪಂಚದಾದ್ಯಂತ ಕ್ರಾಶ್ ಆಗಿದೆ.

ಮೊಬೈಲ್ ಆಪ್ ನಲ್ಲಿ ಯುಟ್ಯೂಬ್ ಸಹ ಕೆಲಸ ಮಾಡುತ್ತಿಲ್ಲ. ಈಗಾಗಲೇ ಅನೇಕರು ತಮ್ಮ ಅನುಭವ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅತಿ ಹೆಚ್ಚಿನ ಸರ್ಚ್ ಗೆ ಒಳಗಾದ ಸೆಲೆಬ್ರಿಟಿಗಳು

ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಗೂಗಲ್ ಹೇಳುತ್ತಿದೆ. ವರ್ಕ್ ಫ್ರಮ್ ಹೋಮ್ ಮತ್ತು ವಾರದ ಆರಂಭದ ದಿನವಾದ ಸೋಮವಾರವೇ ಗೂಗಲ್ ಕೈಕೊಟ್ಟಿದ್ದು ಹುಡುಕಾಟ  ನಡೆಸಲಾಗುತ್ತಿದೆ.  ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.