ನವದೆಹಲಿ(ಅ.09): ನೂತನ ಕಾರುಗಳ ಸುರಕ್ಷತೆಯನ್ನ ಪರೀಕ್ಷಿಸೋ ಯುನೈಟೆಡ್ ಕಿಂಗ್‌ಡಮ್(ಯುಕೆ) ಮೂಲದ ಗ್ಲೋಬಲ್ NCAP, ಮಾರುತಿ ಸುಜುಕಿ ಸ್ಪಿಫ್ಟ್ ಕಾರಿನ ಸೇಫ್ಟಿ ಫಲಿತಾಂಶ ಪ್ರಕಟಿಸಿದೆ. ಗರಿಷ್ಠ ಮಾರಾಟವಾಗುತ್ತಿರುವ ಸ್ವಿಫ್ಟ್ ಕಾರಿನ ಸುರಕ್ಷತೆ  ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದೆ.

ಕಾರುಗಳ ಸುರಕ್ಷತೆಯನ್ನ ಆಧರಿಸಿ ಕಾರಿಗೆ ಸ್ಟಾರ್ ನೀಡಲಾಗುತ್ತೆ. ಗರಿಷ್ಠ 5 ಸ್ಟಾರ್ ಪಡೆದ ಕಾರು ಅತ್ಯಂತ ಸುರಕ್ಷತೆಯುಳ್ಳ ಕಾರು ಎಂದು ಪರಿಗಣಿಸಲಾಗುತ್ತೆ. ಆದರೆ ಮಾರುತಿ ಸುಜುಕಿ ಸ್ಪಿಫ್ಟ್ ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಕೇವಲ 2 ಸ್ಟಾರ್ ಪಡೆದುಕೊಂಡಿದೆ.

ಸ್ಪಿಫ್ಟ್ ಕಾರಿನಲ್ಲಿ ವಯಸ್ಕರ ಹಾಗೂ ಮಕ್ಕಳ ಸುರಕ್ಷತೆಯಲ್ಲಿ ತಲಾ 2 ಸ್ಟಾರ್ ಪಡೆದುಕೊಂಡಿದೆ. ನೂತನ ಸ್ವಿಫ್ಟ್ ಕಾರಿನ ಬೇಸ್ ವೇರಿಯೆಂಟ್‌ಗಳಲ್ಲಿ 2 ಏರ್‌ಬ್ಯಾಗ್ ಸೌಲಭ್ಯವಿದೆ. ಆದರೂ ಕೇವಲ 2 ಸ್ಟಾರ್ ಪಡೆದುಕೊಂಡಿದೆ.

ಕಾರು ಸುರಕ್ಷತೆಗೆ ಭಾರತ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇಷ್ಟೇ ಅಲ್ಲ ಎಲ್ಲಾ ನೂತನ ಕಾರುಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವುದು ಖಡ್ಡಾಯವಾಗಿದೆ. ಇಷ್ಟಾದರು ಮಾರುತಿ ಸ್ವಿಫ್ಟ್ ಗ್ರಾಹಕರಿಗೆ ಸುರಕ್ಷತೆ ನೀಡುವಲ್ಲಿ ವಿಫಲವಾಗಿದೆ.

ಯುರೋಪ್ ಹಾಗೂ ಜಪಾನ್‌ಗಳಲ್ಲಿ ಮಾರಾಟಾವಾಗೋ ಸ್ಪಿಫ್ಟ್ ಕಾರು ಗರಿಷ್ಠ ಸುರಕ್ಷತೆ ಹೊಂದಿದೆ. ಆದರೆ ಭಾರತದಲ್ಲಿ ಮಾರಾಟವಾಗೋ ಸ್ಪಿಫ್ಟ್ ಕಾರು ಸುರಕ್ಷತೆಯಲ್ಲಿ ಹಿನ್ನಡೆ ಅನುಭವಿಸಿದೆ.