ಬೆಂಗಳೂರು(ಅ.08): ಫ್ಲಿಪ್ ಕಾರ್ಟ್ ಆನ್‌ಲೈನ್ ಶಾಪಿಂಗ್ ಅಕ್ಟೋಬರ್ 10 ರಿಂದ 14ರ ವರೆಗೆ ಬಿಗ್ ಬಿಲಿಯನ್ ಡೇಸ್ ಸೇಲ್ ಆಫರ್ ಘೋಷಿಸಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೀಗ ಬಿಗ್ ಬಿಲಿಯನ್ ಡೇಸ್ ಆಫರ್‌ನಿಂದ ಫ್ಲಿಪ್ ಕಾರ್ಟ್‌ನಲ್ಲಿ 30,000 ಉದ್ಯೋಗ ಸೃಷ್ಟಿಯಾಗಿದೆ.

ಬಿಗ್ ಬಿಲಿಯನ್ ಡೇಸ್ ಸೇಲ್ ಆಫರ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 30,000 ಉದ್ಯೋಗ ಸೃಷ್ಟಿಯಾಗಿದೆ. ಫ್ಲಿಪ್‌ಕಾರ್ಟ್ ಸೇಲ್ಸ್ ವಿಭಾಗ, ಕಸ್ಟಮರ್ ವಿಭಾಗ, ಡಾಟಾ ಆಪರೇಟ್ ವಿಭಾಗ ಸೇರಿದಂತೆ ಹಲವು ವಿಭಾಗದಲ್ಲಿ ಉದ್ಯೋಗ ಅವಕಾಶಗಳಿವೆ. 

ದಸರಾ ಹಾಗೂ ದೀಪಾವಳಿ ಹಬ್ಬದಲ್ಲಿ ಫ್ಲಿಪ್‌ಕಾರ್ಟ್ ಗರಿಷ್ಠ ವಹಿವಾಟು ನಡೆಸಿದೆ. ಹೀಗಾಗಿ ಭಾರಿಯೂ ಬಿಗ್ ಬಿಲಿಯನ್ ಡೇಸ್ ಸೇಲ್ ಮೂಲಕ ಕೋಟಿ ಕೋಟಿ ವಹಿವಾಟು ನಡೆಸಲು ಸಜ್ಜಾಗಿದೆ. ಇದೇ ವೇಳೆ ಸೃಷ್ಟಿಯಾಗಿರುವ ಉದ್ಯೋಗ ಸ್ಥಾನಗಳನ್ನ ಭರ್ತಿ ಮಾಡಲು ರೆಡಿಯಾಗಿದೆ.