Asianet Suvarna News Asianet Suvarna News

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್- ಮೊಬೈಲ್‌ಗಳಿಗೆ ಭರ್ಜರಿ ರಿಯಾಯ್ತಿ!

ಹಬ್ಬಗಳ ಪ್ರಯುಕ್ತ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಆಫರ್ ನೀಡಿದೆ. ಅಕ್ಟೋಬರ್ 10 ರಿಂದ 14 ವರೆಗೆ ಈ ಆಫರ್ ಚಾಲ್ತಿಯಲ್ಲಿರಲಿದೆ. ವಿಶೇಷ ಅಂದರೆ ಬಿಗ್ ಬಿಲಿಯನ್ ಡೇ ಮೊಬೈಲ್ ಖರೀದಿಸೋ ಗ್ರಾಹಕರಿಗೆ ಭರ್ಜರಿ ರಿಯಾಯ್ತಿ ನೀಡಲಾಗಿದೆ.
 

Flipkart announced big billion days sale offers huge Discounts for mobiles
Author
Bengaluru, First Published Oct 7, 2018, 6:17 PM IST
  • Facebook
  • Twitter
  • Whatsapp

ಬೆಂಗಳೂರು(ಅ.07): ಸಾಲು ಸಾಲು ಹಬ್ಬಗಳ ಪ್ರಯುಕ್ತ ಫ್ಲಿಪ್‌ಕಾರ್ಟ್ ಆನ್‌ಲೈನ್ ಶಾಪಿಂಗ್ ಇದೀಗ ಬಿಗ್ ಬಿಲಿಯನ್ ಡೇ ಸೇಲ್ ಆಫರ್ ನೀಡಿದೆ. ಈ ಆಫರ್ ದಿನ ಖರೀದಿಸುವ ಗ್ರಾಹಕರಿಗೆ ಭರ್ಜರಿ ರಿಯಾಯ್ತಿ ನೀಡಲಾಗಿದೆ.

ಅಕ್ಟೋಬರ್ 10 ರ ಮಧ್ಯರಾತ್ರಿಯಿಂದ 14 ವರೆಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ನೀಡಿದೆ. ಹೀಗಾಗಿ ಗ್ರಾಹಕರು ಅತೀ ಕಡಿಮೆ ಬೆಲೆಗೆ ಮೊಬೈಲ್ ಫೋನ್ ಖರೀದಿಸಬಹುದಾಗಿದೆ. ಮೊಬಲ್ ಖರೀದಿ ಮೇಲೆ  ಶೇಕಡಾ 62 ರಷ್ಟು ಆಫರ್ ನೀಡಿದೆ. 

ಸ್ಯಾಮ್ಸಂಗ್, ಕ್ಸಿಯೋಮಿ, ಒಪ್ಪೋ, ಹಾನರ್, ರಿಯಲ್‌ಮಿ, ಇನ್‌ಫಿನಿಕ್ಸ್ ಸೇರಿದಂತೆ ಹಲವು ಬ್ರ್ಯಾಂಡ್ ಮೊಬೈಲ್‌ಗಳ ಮೇಲೆ ಭರ್ಜರಿ ರಿಯಾಯ್ತಿ ಘೋಷಿಸಲಾಗಿದೆ.  45,990 ರೂಪಾಯಿ ಸ್ಯಾಮ್ಸಂಗ್ ಗೆಲೆಕ್ಸಿ ಜಿ8 ಆಫರ್ ಮೂಲಕ 20,000 ರೂಪಾಯಿಗೆ ಸಿಗಲಿದೆ.

 8,990 ರೂಪಾಯಿ ರಿಯಲ್‌ಮಿ ಸಿ1 ಸ್ಮಾರ್ಟ್‌ಫೋನ್ ಬಿಗ್ ಬಿಲಿಯನ್ ಡೇ  ಸೇಲ್ ಮೂಲಕ 6,999 ರೂಪಾಯಿಗೆ ಸಿಗಲಿದೆ. 6,999 ರೂಪಾಯಿ ಇನ್‌ಫಿನಿಕ್ಸ್ ಮೊಬೈಲ್ ಇದೀಗ 4,999 ರೂಪಾಯಿಗೆ ದೊರೆಯಲಿದೆ. 7,990 ರೂಪಾಯಿಗಳ ಪನಾಸೋನಿಕ್ ಸ್ಮಾರ್ಟ್‌ಫೋನ್ ಕೇವಲ 2,999 ರೂಪಾಯಿಗೆ ಸಿಗಲಿದೆ.

8,999 ರೂಪಾಯಿ ಮೌಲ್ಯದ ಹಾನರ್ ಮೊಬೈಲ್ ಇದೀಗ ಬಿಗ್ ಬಿಲಿಯನ್ ಡೇ ಸೇಲ್ ಆಫರ್‌ನಲ್ಲಿ 6,499 ರೂಪಾಯಿಗೆ ಸಿಗಲಿದೆ. 10,990 ರೂಪಾಯಿ ಒಪ್ಪೋ ಮೊಬೈಲ್ ಇದೀಗ 6,990 ರೂಪಾಯಿಗೆ ಲಭ್ಯವಿದೆ.

ಇಷ್ಟೇ ಅಲ್ಲ ಇನ್ನು ಹಲವು ಮೊಬೈಲ್ ಮೇಲೆ ರಿಯಾಯ್ತಿ ನೀಡಲಾಗಿದೆ. ಫ್ಲಿಪ್‌ಕಾರ್ಟ್‌ಗೆ ಪೈಪೋಟಿ ನೀಡಲು ಅಮೇಜಾನ್ ಕೂಡ ಬಿಗ್ ಬಿಲಿಯನ್ ಸೇಲ್ ಆಫರ್ ನೀಡಿದೆ. ಅಮೇಜಾನ್ ಅಕ್ಟೋಬರ್ 10 ರಿಂದ 15ರ ವರೆಗೆ ಆಫರ್ ನೀಡಿದೆ.
 

Follow Us:
Download App:
  • android
  • ios