ಬೆಂಗಳೂರು: ರಾಜ್ಯವು ಚುನಾವಣೆಗೆ ಸಿದ್ಧವಾಗುತ್ತಿದ್ದಂತೆ, ಕೆಲವು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಿವಾಸಗಳ ಮೇಲೆ ಐಟಿ ಇಲಾಖೆಯು ದಾಳಿ ನಡೆಸಿದೆ.

ಐಟಿ ದಾಳಿಯು ಇನ್ನೂ ಮುಗಿದಿಲ್ಲ, ಆದರೆ ಸೋಶಿಯಲ್ ಮೀಡಿಯಾದಲ್ಲಿ, ಐಟಿ ಅಧಿಕಾರಿಗಳು ವಶಪಡಿಸಿರುವ ಹಣದ ರಾಶಿಯ ವಿಡಿಯೋಗಳು ಹರಿದಾಡಲಾರಂಭಿಸಿವೆ!  ಮುಖ್ಯಮಂತ್ರಿ ಕುಮಾರಸ್ವಾಮಿಯಾದಿ ಕಾಂಗ್ರೆಸ್ ಜೆಡಿಎಸ್ ಮುಖಂಡರ ಮನೆಯಲ್ಲಿ ಈ ರೀತಿ ಹಣ ಕೂಡಿಡಲಾಗಿದೆ ಎಂಬಿತ್ಯಾದಿ ಒಕ್ಕಣೆಗಳು ಬೇರೆ.! ಉದಾಹರಣೆಗೆ ಒಂದು ವಿಡಿಯೋ ಇಲ್ಲಿದೆ:

ಇದನ್ನೂ ಓದಿ: Whatsapp ಗ್ರೂಪ್ ಅಡ್ಮಿನ್ ಗಳೇ ಇತ್ತ ಗಮನಿಸಿ... ಸ್ವಲ್ಪ ಯಾಮಾರಿದ್ರೂ ದಂಡ, ಜೈಲು ಗ್ಯಾರಂಟಿ!

"

ಮೊದಲನೆಯದಾಗಿ, ದಾಳಿಯ ಪ್ರಕ್ರಿಯೆ ಮುಗಿಯುವವರೆಗೆ ಐಟಿ ಇಲಾಖೆಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ.

ಎರಡನೆಯದಾಗಿ, ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುವ ಎಲ್ಲಾ ವಿಷಯಗಳು ನಿಜವಲ್ಲ. ಯಾವುದೋ ಒಂದು ಫೋಟೋ/ದೃಶ್ಯವನ್ನು ದುರ್ಬಳಕೆ ಮಾಡಿ ತಮ್ಮ ಬೇಳೆ ಬೇಯಿಸುವುದು ಡಿಜಿಟಲ್ ದುಷ್ಕರ್ಮಿಗಳ ಕೊಳಕು ಚಾಳಿ. ಮೇಲಿನ ವಿಡಿಯೋ/ಫೋಟೋವಿನ ಸತ್ಯಾಸತ್ಯತೆಯನ್ನು ತಿಳಿಯಲು www.suvarnanews.com ಮುಂದಾದಾಗ ಸಿಕ್ಕ ಮಾಹಿತಿ ಬೇರೆ!

ರಷ್ಯಾದ ಮಾಸ್ಕೋದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಸೆನೆಟರ್ ರೋಫ್ ಅರಶುಕೋವ್ ಎಂಬವನನ್ನು ಜನವರಿಯಲ್ಲಿ ಬಂಧಿಸಲಾಗಿತ್ತು. ಆರೋಪಿಗೆ ಸೇರಿದ ಗೋದಾಮಿನಲ್ಲಿ ತನಿಖಾಧಿಕಾರಿಗಳಿಗೆ ಸಿಕ್ಕ ಹಣದ ರಾಶಿಯನ್ನು ಸುಡಲಾಗಿತ್ತು. ಫೆಬ್ರವರಿಯಲ್ಲೇ ಈ ಫೋಟೋ ಹಾಗೂ ವಿಡಿಯೋಗಳನ್ನು ಅಲ್ಲಿನ ಸುದ್ದಿಮಾಧ್ಯಮಗಳು ಪ್ರಕಟಿಸಿದ್ದವು.

ಇದನ್ನೂ ಓದಿ: ವಾಟ್ಸಪ್ ಫೀಚರ್‌ನಲ್ಲಿ ಮಹತ್ವದ ಬದಲಾವಣೆ; 2 ಹೊಸ ಸೌಲಭ್ಯಗಳು

ಈ ಹಿಂದೆ ತಮಿಳುನಾಡು ರಾಜಕಾರಣಿಯ ಮನೆಯಲ್ಲಿದ್ದ ಹಣದ ರಾಶಿ ಎಂದು ಈ ವಿಡಿಯೋ ಹರಿದಾಡಿತ್ತು. ಇನ್ನೊಂದು ವರದಿ ಪ್ರಕಾರ ಈ ವಿಡಿಯೋ ಹಿನ್ನೆಲೆ ಬೇರೆ ಇದೆ. ಇಲ್ಲಿ ನೋಡಿ.

ಈಗ ರಾಜ್ಯದಲ್ಲಿ ಹರಿದಾಡುತ್ತಿರುವ ‘ಐಟಿ ದಾಳಿಯಲ್ಲಿ ಸಿಕ್ಕ ಹಣದ ರಾಶಿ’ ಎಂಬ ಸುದ್ದಿ ಸುಳ್ಳು.  ವಿಶೇಷವಾಗಿ ಲೋಕಸಭಾ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ದುರುದ್ದೇಶದಿಂದ ವಿಡಿಯೋಗಳನ್ನು ತಪ್ಪಾಗಿ ಬಿಂಬಿಸುವುದು, ಎಡಿಟಿಂಗ್ ಕೈಚಳಕದಿಂದ ಸುಳ್ಳು ವಿಡಿಯೋಗಳನ್ನು ಸೃಷ್ಟಿಸುವುದು, ಇವೆಲ್ಲಾ ನಡೆಯುತ್ತದೆ. ಆದರೆ ಮುಗ್ಧ ಜನರು ಅದಕ್ಕೆ ಬಲಿಯಾಗುತ್ತಾರೆ,  ಆ ವಿಡಿಯೋಗಳನ್ನು ಸತ್ಯ ಎಂದು ನಂಬಿ ಫಾರ್ವರ್ಡ್ ಮಾಡುತ್ತಾರೆ. ಒಂದು ವೇಳೆ, ಅಂತಹ ವಿಡಿಯೋ ಮೂಲಕ ಅವಾಂತರ ಸೃಷ್ಟಿಯಾದರೆ, ಅಮಾಯಕರು ಪೊಲೀಸ್- ಕೋರ್ಟ್- ಕಛೇರಿ ಎಂದು ಅಲೆದಾಡುತ್ತಾರೆ.