ಇದಕ್ಕಿದ್ದಂತೆ Facebook, WhatsApp ಹಾಗೂ ಇನ್‌ಸ್ಟಾಗ್ರಾಂ ಸೇವೆ ಸ್ಥಗಿತ, ಜನರ ಪರದಾಟ!

  • ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಹಾಗೂ ಇನ್‌ಸ್ಟಾಗ್ರಾಂ ಸೇವೆ ತಾತ್ಕಾಲಿಕ ಸ್ಥಗಿತ
  • ತಾಂತ್ರಿಕ ಕಾರಣದಿಂದ ಕಾರ್ಯನಿರ್ವಹಣೆಯಲ್ಲಿ ಅಡಚಣೆ
  • ಟ್ವಿಟರ್ ಮೂಲಕ ಬಳಕೆದಾರರ ಆಕ್ರೋಶ 
     
Facebook WhatsApp and Instagram services are down in major outage ckm

ನವದೆಹಲಿ(ಅ.4): ತಾಂತ್ರಿಕ ಕಾರಣದಿಂದ ಸಾಮಾಜಿಕ ಜಾಲಾತಾಣಗಳಾದ ಫೇಸ್‌ಬುಕ್(Facebook), ವ್ಯಾಟ್ಸ್ಆ್ಯಪ್(WhatsApp) ಹಾಗೂ  ಇನ್‌ಸ್ಟಾಗ್ರಾಂ(Instagram) ಸೇವೆ ತಾತ್ಕಾಲಿಕ ಸ್ಥಗಿತವಾಗಿದೆ. ಸೋಶಿಯಲ್ ಮೀಡಿಯಾ(Social Media) ಕ್ರಾಶ್‌ನಿಂದ ಜನರು ಪರದಾಡುತ್ತಿದ್ದಾರೆ. ಲಭ್ಯವಿರುವ ಟ್ವಿಟರ್ ವೇದಿಕೆಯಲ್ಲಿ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ. ವಿಶ್ವಾದ್ಯಂತ ಹಲವಾರು ಬಳಕೆದಾರರು ಫೇಸ್‌ಬುಕ್ ಒಡೆತನದ 3 ಆ್ಯಪ್ಲೇಕೇಶನ್ ಲೋಡಿಂಗ್ ಸಮಸ್ಯೆ ಎದುರಿಸುತ್ತಿರುವುದಾಗಿ ದೂರಿದ್ದಾರೆ.

IT ನಿಯಮದಡಿ 30 ಲಕ್ಷಕ್ಕೂ ಅಧಿಕ ಖಾತೆ ನಿಷೇಧಿಸಿದ ವಾಟ್ಸಾಪ್!

ತಾಂತ್ರಿಕ ಕಾರಣದಿಂದ ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಹಾಗೂ  ಇನ್‌ಸ್ಟಾಗ್ರಾಂ ತಾಣಗಳು ಕ್ರಾಶ್ ಆಗಿವೆ. ತಾಂತ್ರಿಕ ತಂಡ ಇದನ್ನು ಸರಿಸಡಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ದೋಷ ಸರಿಪಡಿಸುವು ನಿರೀಕ್ಷೆ ಇದೆ. ಅಕ್ಟೋಬರ್ 4ರ ಸಂಜೆ 5 ಗಂಟೆಯಿಂದ ಮೂರು ತಾಣಗಳು ಸೇವೆ ಸ್ಥಗಿತಗೊಂಡಿದೆ. ಫೇಸ್‌ಬುಕ್ ಒಡೆತನದಲ್ಲಿರುವ ವ್ಯಾಟ್ಸ್ಆ್ಯಪ್ ಹಾಗೂ ಇನ್‌ಸ್ಟಾಗ್ರಾಂ ಒಂದೇ ಸಮಯದಲ್ಲಿ ಕೆಲಸ ನಿಲ್ಲಿಸಿದೆ. 

WhatsApp ಮೂಲಕ ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಸಂದೇಶ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. Instagram ಫೀಡ್ ಅಪ್‌ಡೇಟ್ ಆಗುತ್ತಿಲ್ಲ. ಜೊತೆಗೆ ಫೋಟೋ ಸೇರಿದಂತೆ ಯಾವುದೇ ಚಟುವಟಿಕೆ ಸಾಧ್ಯವಾಗುತ್ತಿಲ್ಲ. ಇತ್ತ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಲೋಡಿಂಗ್ ಸಮಸ್ಯೆ ಎದುರಿಸುತ್ತಿದೆ.

ವಾಟ್ಸಾಪ್ ಚಾಟ್‌ನಲ್ಲಿ ಈಗ ₹ ಸಿಂಬಲ್: ಹಣ ಕಳಿಸೋದು ಸುಲಭ

ಮೂರು ಅಪ್ಲಿಕೇಶನ್‌ಗಳು - ಇವೆಲ್ಲವೂ ಫೇಸ್‌ಬುಕ್ ಒಡೆತನದಲ್ಲಿವೆ ಮತ್ತು ಹಂಚಿದ ಮೂಲಸೌಕರ್ಯದಲ್ಲಿ ಕಾರ್ಯನಿರ್ವಹಿಸುತ್ತವೆ - ಎಲ್ಲವೂ ಸಂಜೆ 5 ಗಂಟೆಯ ಮೊದಲು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದವು. ಫೇಸ್‌ಬುಕ್ ಕೆಲಸದ ಸ್ಥಳದಂತಹ ಒಂದೇ ಕುಟುಂಬದ ಅಪ್ಲಿಕೇಶನ್‌ಗಳ ಭಾಗವಾಗಿರುವ ಇತರ ಉತ್ಪನ್ನಗಳು ಸಹ ಕೆಲಸ ಮಾಡುವುದನ್ನು ನಿಲ್ಲಿಸಿವೆ.

ಸಾಮಾಜಿಕ ಜಾಲತಾಣ ಡೌನ್ ಆಗುತ್ತಿದ್ತಂತೆ ಮೆಮ್ಸ್ ಸೇರಿದಂತೆ ಹಲವು ವಿಡಂಬನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ

 

Latest Videos
Follow Us:
Download App:
  • android
  • ios