Asianet Suvarna News Asianet Suvarna News

ಫೇಸ್ಬುಕ್‌ಗೆ ಗುಡ್ ಬೈ ಹೇಳಿದ ಝುಕರ್ ಬರ್ಗ್ ಆಪ್ತ! ಮುಂದಿನ ನಡೆ ಇನ್ನೂ ಗುಪ್ತ

  • ಫೇಸ್ಬುಕ್ ಕಂಪನಿಯನ್ನು ಕಟ್ಟಿ ಬೆಳಸಿದ ಕೋರ್ ಗ್ರೂಪ್‌ನ ಸದಸ್ಯನ ರಾಜೀನಾಮೆ 
  • ಫೇಸ್ಬುಕ್‌ನ್ನು ಆರಂಭಿಸಿದ್ದ 15 ಮಂದಿಯ ತಂಡದಲ್ಲಿದ್ದ ಇಂಜಿನಿಯರ್ ಕ್ರಿಸ್ ಕಾಕ್ಸ್
Facebook Chief Product Officer Chris Cox  WhatsApp VP Chris Daniels quit
Author
Bengaluru, First Published Mar 15, 2019, 12:58 PM IST

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್ಬುಕ್ ಕಂಪನಿಗೆ ಬೆನ್ನೆಲುಬಾಗಿದ್ದ ಅಧಿಕಾರಿಗಳಿಬ್ಬರು ಗುಡ್ ಬೈ ಹೇಳಿದ್ದಾರೆ.   

ಫೇಸ್ಬುಕನ್ನು ಆರಂಭಿಸಿದ 15 ಮಂದಿಯ ತಂಡದಲ್ಲಿದ್ದ ಇಂಜಿನಿಯರ್, ಹಾಲಿ ಚೀಫ್ ಪ್ರಾಡಕ್ಟ್ ಆಫಿಸರ್ ಆಗಿರುವ ಕ್ರಿಸ್ ಕಾಕ್ಸ್ ಫೇಸ್ಬುಕ್ ಕಂಪನಿಗೆ ವಿದಾಯ ಹೇಳಿದ್ದಾರೆ. ಈ ವಿಚಾರವನ್ನು ಖುದ್ದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ತಿಳಿಸಿದ್ದಾರೆ.

ಫೇಸ್ಬುಕ್ ಒಡೆತನದ ವಾಟ್ಸಪ್ ಕಂಪನಿಗೂ ಮತ್ತೊಬ್ಬ ಪ್ರಮುಖ ಅಧಿಕಾರಿ ಕೂಡಾ ರಾಜೀನಾಮೆ ನೀಡಿದ್ದಾರೆ. ವಾಟ್ಸಪ್ ಕಂಪನಿಯ ಉಪಾಧ್ಯಕ್ಷರಾಗಿದ್ದ ಕ್ರಿಸ್ ಡೇನಿಯಲ್ಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.

ಇದನ್ನೂ ಓದಿ: ಫೇಸ್ಬುಕ್ ಕೈಕೊಟ್ರೆ ಏನ್ಮಾಡಬೇಕು? ಅಪ್ಡೇಟ್ ಆಗೋದು ಹೇಗೆ?

ಕಳೆದ 13 ವರ್ಷಗಳಿಂದ ಝುಕರ್ ಬರ್ಗ್ ಜೊತೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದ ಕ್ರಿಸ್ ಕಾಕ್ಸ್, ಫೇಸ್ಬುಕ್ ಆ್ಯಪ್ ಮತ್ತು ನ್ಯೂಸ್ ಫೀಡ್ ಸೇರಿದಂತೆ  ಹಲವಾರು ಪ್ರಮುಖ ಪ್ರಾಜೆಕ್ಟ್‌ಗಳನ್ನು ಸಮರ್ಥವಾಗಿ ಮುನ್ನಡೆಸಿದ್ದರು.

ಕ್ರಿಸ್ ದ್ವಯರ ವಿದಾಯದ ಬಗ್ಗೆ ಭಾವನಾತ್ಮಕ ಪತ್ರ ಬರೆದಿರುವ ಝುಕರ್ ಬರ್ಗ್, ನಾವು ಒಂದು ದಶಕಗಳಿಗಿಂತಲೂ ಹೆಚ್ಚು ಕಾಲ  ಜೊತೆ ಜೊತೆಯಾಗಿ ಕೆಲಸ ಮಾಡಿದ್ದೇವೆ. ಕ್ರಿಸ್ ಕಾಕ್ಸ್ ಪ್ರತಿಭಾವಂತ, ಅವರು ತಮ್ಮದೇ ಯೋಜನೆಯ ಮೇಲೆ ಹೊಸತನ್ನು ಮಾಡಲು ಹೊರಟಿದ್ದಾರೆ. ಅವರು ಕಂಪನಿಯನ್ನು ಬಿಟ್ಟಿರುವುದು ದುಖ:ದ ವಿಚಾರ, ಎಂದು ಬಣ್ಣಿಸಿದ್ದಾರೆ.

Follow Us:
Download App:
  • android
  • ios