Asianet Suvarna News Asianet Suvarna News

50 ದಿನ ಡಿಜಿಟಲ್‌ ಸಾಧನ ಬಳಸುವಂತಿಲ್ಲ : ಡಿಜಿಟಲ್ ಉಪವಾಸ ಸ್ಪರ್ಧೆ

  • ಡಿಜಿಟಲ್‌ ಉಪಕರಣಗಳು ಮಾನವನ ಬದುಕಿನ ಅವಿಭಾಜ್ಯ ಅಂಗಗಳಂತಾಗಿವೆ
  • ಡಿಜಿಟಲ್‌ ಸಾಧನಗಳಿಂದ ಯುವಕರನ್ನು ದೂರವಿರಿಸಲು ಸ್ಪರ್ಧೆ
Digital Fasting challenge by a Jain organisation snr
Author
Bengaluru, First Published Sep 3, 2021, 9:11 AM IST

ಅಹಮದಾಬಾದ್‌ (ಸೆ.03):  ಡಿಜಿಟಲ್‌ ಉಪಕರಣಗಳು ಮಾನವನ ಬದುಕಿನ ಅವಿಭಾಜ್ಯ ಅಂಗಗಳಂತಾಗಿವೆ. ಈ ಡಿಜಿಟಲ್‌ ಸಾಧನಗಳಿಂದ ಯುವಕರನ್ನು ದೂರವಿರಿಸಿ ಜೈನ ಧರ್ಮದ ಮೂಲ ತತ್ವಗಳನ್ನು ಆಧುನಿಕ ಸಮಾಜದಲ್ಲೂ ಪ್ರಚುರ ಪಡಿಸಲು ಜೈನ ಸಂಘಟನೆ ‘ಡಿಜಿಟಲ್‌ ಉಪವಾಸ’ ಎನ್ನುವ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಪರ್ಧೆಯಲ್ಲಿ ಅಗ್ರ 10 ಸ್ಥಾನಗಳನ್ನು ಪಡೆಯುವ ಯುವಕರಿಗೆ ಜಾರ್ಖಂಡ್‌ನ ‘ಸಮ್ಮೆದ್‌ ಶಿಕಾರ್ಜಿ ಮಂದಿರ’ಕ್ಕೆ ಪ್ರವಾಸ ಏರ್ಪಡಿಸುವುದಾಗಿ ಸಂಸ್ಥೆ ಹೇಳಿದೆ.

ಐಫೋನ್‌ನಲ್ಲಿ ಸ್ಯಾಟಲೈಟ್ ಕರೆ ಸೌಲಭ್ಯ: ನೆಟ್‌ವರ್ಕ್‌ ಬೇಕೆಂದಿಲ್ಲ!

ಕೆಲಸ, ಆನ್‌ಲೈನ್‌ ತರಗತಿ, ಖಾಸಗಿ ಸಂಪರ್ಕ ಮುಂತಾದ ಹಲವು ಕಾರಣಗಳಿಗೆ ಡಿಜಿಟಲ್‌ ಪರದೆಗೆ ಅಂಟಿಕೊಳ್ಳುವುದು ಅನಿವಾರ್ಯವಾಗಿದೆ. ಇದು ಮನುಷ್ಯದ ಜೀವನದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಡಿಜಿಟಲ್‌ ಸಾಧನಗಳಿಂದ ದೂರ ಇರುವಂತೆ ಹಾಗೂ ಜೈನ ಧರ್ಮದ ಮೂಲಾಂಶಗಳನ್ನು ಅನುಸರಿಸುವಂತೆ ಯುವಕರನ್ನು ಅಣಿಗೊಳಿಸಲು ಜೈನ್‌ ಸಂಸ್ಥೆ ಈ ಕಾರ್ಯಕ್ರಮ ಏರ್ಪಡಿಸಿದೆ.

ಏನಿದು ಡಿಜಿಟಲ್‌ ಉಪವಾಸ ಸ್ಪರ್ಧೆ?

ಜೈನ್‌ ಸಂಸ್ಥೆ 50 ದಿನಗಳ ಕಾಲ ಡಿಜಿಟಲ್‌ ಸಾಧನಗಳನ್ನು ಬಳಸದೇ ಜೀವನ ನಡೆಸುವ ಸ್ಪರ್ಧೆಯನ್ನು ಜೈನ ಸಮುದಾಯದ ಯುವಕರಿಗೆ ಏರ್ಪಡಿಸಿದೆ. ‘ಮೊಬೈಲ್‌ ಒಂದು ಉತ್ತಮ ಸೇವಕ ಆದರೆ ಕೆಟ್ಟಮಾಲಿಕ’ ಎಂಬ ಶೀರ್ಷಿಕೆಯೊಡನೆ ಈ ಸ್ಫರ್ಧೆ ಆಯೋಜಿಸಲಾಗಿದೆ. ಪ್ರತಿದಿನ 12 ಗಂಟೆಗಳ ಕಾಲ ಯಾವುದೇ ಡಿಜಿಟಲ್‌ ಸಾಧನ ಬಳಸದಿದ್ದರೆ ಅವರಿಗೆ 12 ಅಂಕಗಳು ದೊರೆಯುತ್ತದೆ. ಅತಿ ಹೆಚ್ಚು ಅಂಕಗಳನ್ನು ಪಡೆದವರನು ವಿಜೇತರನ್ನಾಗಿ ಘೋಷಿಸಲಾಗುತ್ತದೆ. ಇದಕ್ಕಾಗಿ ಆನ್ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸ್ಪರ್ಧೆ ಜುಲೈ 23ರಂದು ಆರಂಭಗೊಂಡಿದ್ದು ಸೆಪ್ಟೆಂಬರ್‌ 10ರಂದು ಫಲಿತಾಂಶ ಘೋಷಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಡಿಜಿಟಲ್‌ ಸಾಧನಗಳೊಂದಿಗಿನ ಒಡನಾಟವನ್ನು ಕಡಿಮೆ ಮಾಡಿ ಕುಟುಂಬದೊಡನೆ ಕಾಲ ಕಳೆಯುವಂತೆ ಮಾಡಲು ಈ ಕಾರ್ಯಕ್ರಮ ರೂಪಿಸಲಾಗಿದೆ.

Follow Us:
Download App:
  • android
  • ios