Asianet Suvarna News Asianet Suvarna News

ಕಟ್ ಕಾಪಿ ಪೇಸ್ಟ್ ಕಂಡು ಹಿಡಿದ ಕಂಪ್ಯೂಟರ್ ವಿಜ್ಞಾನಿ ಲ್ಯಾರಿ ಟೆಸ್ಲರ್ ಇನ್ನಿಲ್ಲ

  • ಕಟ್, ಕಾಪಿ, ಪೇಸ್ಟ್ ತಂತ್ರಜ್ಞಾನ ಕಂಡು ಹಿಡಿದಿದ್ದ ಕಂಪ್ಯೂಟರ್ ವಿಜ್ಞಾನಿ ಲ್ಯಾರಿ ಟೆಸ್ಲರ್
  • ಟೈಪಿಂಗ್‌ನಲ್ಲಿ, ಫೈಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಬಳಕೆಯಾಗುವ ಕಟ್, ಕಾಪಿ & ಪೇಸ್ಟ್ ತಂತ್ರ
  • 74ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಅಪ್ರತಿಮ ಕಂಪ್ಯೂಟರ್ ವಿಜ್ಞಾನಿ 
Computer Scientist Larry Tesler 74 of Cut Copy Paste Fame Dies
Author
Bengaluru, First Published Feb 21, 2020, 12:25 PM IST

ನ್ಯೂಯಾರ್ಕ್ (ಫೆ.21): ಕಂಪ್ಯೂಟರ್ ಒಂದು ವಿಸ್ಮಯಲೋಕ. ಕಂಪ್ಯೂಟರ್‌ ಯುಗದ ಆರಂಭಿಕ ಹಂತದಲ್ಲಿ ನಡೆದ ಸಂಶೋಧನೆಗಳು ಈಗಲೂ ಮೂಲಭೂತ ಆಧಾರಸ್ತಂಭಗಳಾಗಿದ್ದು, ವ್ಯಾಪಕವಾಗಿ ಬಳಕೆಯಲ್ಲಿವೆ.

ಅವುಗಳ ಪೈಕಿ 'ಕಟ್, ಕಾಪಿ, ಪೇಸ್ಟ್' ಎಂಬ ಸೌಲಭ್ಯವೂ ಒಂದು. ಕಂಪ್ಯೂಟರ್‌ ಬಳಸುವವರಿಗೆ ಅದರ ಮಹತ್ವ ಚೆನ್ನಾಗಿ ಗೊತ್ತಿದೆ. ಈ ತಂತ್ರಗಾರಿಕೆಯನ್ನು ಕಂಡುಹಿಡಿದ ಕಂಪ್ಯೂಟರ್ ವಿಜ್ಞಾನಿ ಲ್ಯಾರಿ ಟೆಸ್ಲರ್ (74) ಗುರುವಾರ ನ್ಯೂಯಾರ್ಕ್‌ನಲ್ಲಿ ನಿಧನರಾಗಿದ್ದಾರೆ.

ಇದನ್ನೂ ಓದಿ | Appleನ ಬಜೆಟ್ ಫೋನ್‌ ಬಿಡುಗಡೆಗೆ ಡೇಟ್ ಫಿಕ್ಸ್? ಅಂದಾಜು ಬೆಲೆ ಮತ್ತು ಫೀಚರ್ಸ್...

ಸ್ಟ್ಯಾನ್‌ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್‌ ವಿಜ್ಞಾನದಲ್ಲಿ ಪದವಿ ಪಡೆದ ಲ್ಯಾರಿ 1973ರಲ್ಲಿ ಜೆರಾಕ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಆ ಅವಧಿಯಲ್ಲಿ ಕಟ್, ಕಾಪಿ, ಪೇಸ್ಟ್ ಎಂಬ ತಂತ್ರವನ್ನು ಕಂಡುಹಿಡಿದಿದ್ದರು. 

1983ರಲ್ಲಿ Apple ಕಂಪನಿಯು ಈ ತಂತ್ರಗಾರಿಕೆಯನ್ನುಸಾಫ್ಟ್‌ವೇರ್‌ಗಳಲ್ಲಿ ಅಳವಡಿಸುವ ಮೂಲಕ ಅದನ್ನು ಇನ್ನಷ್ಟು ವ್ಯಾಪಕಗೊಳಿಸಿತು.

ಇದನ್ನೂ ಓದಿ | ವಾಟ್ಸಪ್‌ನಲ್ಲಿ 3 ಹಿಡನ್ ಫೀಚರ್: ನೋಡಿ ನೀವೂ ಹೇಳ್ತೀರಾ ಏನ್ ಸೂಪರ್ ಗುರೂ!

ಆ ಬಳಿಕ ಟೈಪಿಂಗ್‌ನಲ್ಲಿ ಈ ಸೌಲಭ್ಯ ಬಹಳ ಸಹಕಾರಿಯಾಯಿತು. ಟೈಪಿಂಗ್‌ನಲ್ಲಿ ತಪ್ಪುಗಳು ಸಂಭವಿಸಿದಾಗ, ಅದನ್ನು ಸರಿಪಡಿಸುವುದು ಸುಲಭವಾಯಿತು. ಒಂದೇ ಪದ/ ವಾಕ್ಯ/ ಪ್ಯಾರಾಗಳನ್ನು ಹಲವಾರು ಕಡೆ ಬಳಸುವಾಗ ಪದೇ ಪದೇ ಟೈಪ್‌ ಮಾಡುವ ಪ್ರಮೇವೂ ತಪ್ಪಿತು.

ಸರ್ ಲ್ಯಾರಿ ಟೆಸ್ಲರ್, ಇದೋ ನಿಮಗೊಂದು ಕಂಪ್ಯೂಟರ್‌ ಬಳಕೆದಾರರ ಕಡೆಯಿಂದ ನಮ್ಮ ನಮನ...
 

Follow Us:
Download App:
  • android
  • ios