ಬಿಎಸ್ಸೆನ್ನೆಲ್‌ ಗುಡ್ ನ್ಯೂಸ್ : ಆರಂಭವಾಗುತ್ತಿದೆ ಹೊಸ ಸೇವೆ

BSNL unveils internet telephony service Wings
Highlights

ಬಿಎಸ್‌ಎನ್‌ಎಲ್‌ನ ಪೂರ್ಣ ಪ್ರಮಾಣದಲ್ಲಿ ಹೊಸ ರೀತಿಯ ವ್ಯವಸ್ಥೆಯೊಂದನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ. ಇಂಟರ್ನೆಟ್‌ ಟೆಲಿಫೋನ್‌ ವ್ಯವಸ್ಥೆ ‘ವಿಂಗ್ಸ್‌’ ಆ.1ರಿಂದ ಜಾರಿಯಾಗಲಿದೆ. 

ನವದೆಹಲಿ: ಬಿಎಸ್‌ಎನ್‌ಎಲ್‌ನ ಪೂರ್ಣ ಪ್ರಮಾಣದ ಇಂಟರ್ನೆಟ್‌ ಟೆಲಿಫೋನ್‌ ವ್ಯವಸ್ಥೆ ‘ವಿಂಗ್ಸ್‌’ ಆ.1ರಿಂದ ಜಾರಿಯಾಗಲಿದೆ. 

ಈ ವ್ಯವಸ್ಥೆ ಅಳವಡಿಸಿಕೊಂಡಲ್ಲಿ ಬ್ರಾಡ್‌ಬ್ಯಾಂಡ್‌, ವೈಫೈ, 3ಜಿ, 4ಜಿಯಂತಹ ಯಾವುದೇ ಇಂಟರ್ನೆಟ್‌ ಸಂಪರ್ಕವನ್ನು ಬಳಸಿಕೊಂಡು ಗ್ರಾಹಕರು ಭಾರತ ಮತ್ತು ವಿದೇಶದ ಯಾವುದೇ ಲ್ಯಾಂಡ್‌ಲೈನ್‌/ಮೊಬೈಲ್‌ಗೆ ಫೋನ್‌ ಮಾಡಬಹುದು.

ಈ ಸೇವೆಯನ್ನು ಬಳಸಿಕೊಳ್ಳಲು ಗ್ರಾಹಕರು ತಮ್ಮ ಲ್ಯಾಪ್‌ಟಾಪ್‌/ಸ್ಮಾರ್ಟ್‌ ಫೋನ್‌/ಟ್ಯಾಬ್ಲೆಟ್‌ನಂತಹ ಡಿವೈಸ್‌ಗಳಲ್ಲಿ ಸಾಫ್ಟ್‌ ಆ್ಯಪ್‌ ಅಳವಡಿಸಿಕೊಳ್ಳಬೇಕು. ಈ ಹೊಸ ಸೇವೆ ಪಡೆಯಲು 1,099 ರು. ನೋಂದಣಿ ಶುಲ್ಕ ಪಾವತಿಸಬೇಕು. ಮೊಬೈಲ್‌ ಕವರೇಜ್‌ ಉತ್ತಮವಾಗಿಲ್ಲದೇ ಇರುವ ಸ್ಥಳಗಳಲ್ಲಿ ಈ ವ್ಯವಸ್ಥೆ ಹೆಚ್ಚು ಲಾಭದಾಯಕವಾಗಿರಲಿದೆ.

loader