ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಆಫರ್-ಪ್ರತಿ ದಿನ 2.2 ಜಿಬಿ ಡಾಟ ಫ್ರೀ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Sep 2018, 6:46 PM IST
BSNL Bumper offer Free 2.2GB daily data for 60 days
Highlights

ಸಾಲು ಸಾಲು ಹಬ್ಬಗಳಿಗೆ ಅನುಗುಣವಾಗಿ ಗ್ರಾಹಕರಿಗೆ ಹಲವು ಆಫರ್ ನೀಡಲಾಗಿದೆ. ಬಿಎಸ್ಎನ್ಎಲ್ ಇದೀಗ ಉಚಿತ ಡಾಟಾ ಆಫರ್ ನೀಡಿದೆ. ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 16 ರಿಂದ 60 ದಿನಗಳ ವರೆಗೆ ಬಿಎಸ್ಎನ್ಎಲ್ ಈ ಭರ್ಜರಿ ಆಫರ್ ನೀಡಿದೆ.

ನವದೆಹಲಿ(ಸೆ.14): ಭಾರತದಲ್ಲೀಗ ಸಾಲು ಸಾಲು ಹಬ್ಬಗಳು. ಇದಕ್ಕೆ ತಕ್ಕಂತೆ ಇದೀಗ ಹಲವು ಕಂಪೆನಿಗಳು ಭರ್ಜರಿ ಆಫರ್ ನೀಡುತ್ತಿದೆ. ಇದೀಗ ಬಿಎಸ್ಎನ್ಎಲ್ ಕೂಡ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಪ್ರತಿ ದಿನ 2.2ಜಿಬಿ ಡಾಟಾ ಫ್ರೀ ಭರ್ಜರಿ ಆಫರ್ ನೀಡಿದೆ.

ಹೊಸ ಆಫರ್ ಪ್ಲಾನ್ ಸೆಪ್ಟೆಂಬರ್ 16 ರಿಂದ ಜಾರಿಗೆ ಬರಲಿದೆ. ಬಿಎಸ್ಎನ್ಎಲ್ ಗ್ರಾಹಕರಿಗೆ 60 ದಿನಗಳ ಕಾಲ 2.2ಜಿಬಿ ಡಾಟಾ ಫ್ರೀ ಸಿಗಲಿದೆ. ಬಿಎಸ್ಎನ್ಎಲ್ ಅನ್ ಲಿಮಿಟೆಡ್ ಪ್ಲಾನ್‌ಗಳಾದ 186,429,485,666 ಹಾಗೂ 999 ರೂಪಾಯಿ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಈ ಉಚಿತ ಡಾಟಾ ಆಫರ್ ಅನ್ವಯವಾಗಲಿದೆ.

ಅನ್ ಲಿಮಿಟೆಡ್ ಪ್ಲಾನ್ ರಿಚಾರ್ಜ್ ಮಾಡದ ಗ್ರಾಹಕರು ಎಸ್‌ಟಿವಿ 187, 333, 349, 444 ಹಾಗೂ 448 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡರೆ 2.2ಜಿಬಿ ಉಚಿತ ಡಾಟಾ ಸಿಗಲಿದೆ.

ಈಗಾಗಲೇ ಮಾನ್ಸೂನ್ ಆಫರ್ ಅವಧಿಯನ್ನ ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ. ಜೂನ್ ತಿಂಗಳಲ್ಲಿ ಈ ಆಫರ್ ಜಾರಿಗೆ ತರಲಾಗಿತ್ತು. ಈ ಆಫರ್ ಪ್ರಕಾರ ಗ್ರಾಹಕರಿಗೆ ಪ್ರತಿ ದಿನ 2 ಜಿಬಿ ಉಚಿತ ಡಾಟ ನೀಡಿದೆ.

loader