Asianet Suvarna News Asianet Suvarna News

ದೀಪಾವಳಿ ಹಬ್ಬಕ್ಕೆ ಬಂಪರ್ ಆಫರ್- BSNL 4ಜಿ ಸೇವೆ ಆರಂಭ!

BSNL ಇದೀಗ 4ಜಿ ಸೇವೆ ಆರಂಭಿಸುತ್ತಿದೆ. ಇದರ ಜೊತೆಗೆ ಹಲವು ಆಫರ್ ಕೂಡ ನೀಡುತ್ತಿದೆ. ದೀಪಾವಳಿ ಹಬ್ಬಕ್ಕೆ 4ಜಿ ಪರಿಚಯಿಸಲು ಮುಂದಾಗಿರೋ BSNL ಗ್ರಾಹಕರ ಬೇಡಿಕೆ ಪೂರೈಸಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಇಲ್ಲಿದೆ BSNL ಬಂಪರ್ ಆಫರ್ ವಿವರ.

BSNL 4G services to be launched in November
Author
Bengaluru, First Published Oct 2, 2018, 5:32 PM IST
  • Facebook
  • Twitter
  • Whatsapp

ತೆಲಂಗಾಣ(ಅ.02): ದೀಪಾವಳಿ ಹಬ್ಬಕ್ಕೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್(BSNL) ಗ್ರಾಹಕರಿಗೆ ಬಂಪ್ ಆಫರ್ ನೀಡಲು ರೆಡಿಯಾಗಿದೆ. 2ಜಿ ಹಾಗೂ 3ಜಿ ಸೇವೆಯಲ್ಲಿರುವ BSNL ಇದೇ ನವೆಂಬರ್‌ನಲ್ಲಿ 4 ಜಿ ಸೇವೆ ಆರಂಭಿಸಲಿದೆ. 

4 ಸೇವೆ ಜೊತೆಗೆ ಈಗಾಗಲೇ ಅಮೇಜಾನ್ ಪ್ರೈಮ್ ವೀಡಿಯೋ ಜೊತೆ ಒಪ್ಪಂದ ಮಾಡಿಕೊಂಡಿರುವ BSNL ಭಾರಿ ರಿಯಾಯಿತಿ ನೀಡಲು ಮುಂದಾಗಿದೆ. ಇಷ್ಟೇ ಅಲ್ಲ ಟಾರಿಫ್ ಹಾಗೂ ರಿಚಾರ್ಜ್ ಆಫರ್‌ಗಳನ್ನ ನೀಡಲು ನಿರ್ಧರಿಸಿದೆ.

 

 

BSNL ತನ್ನ 4 ಜಿ ಸೇವೆ ಆರಂಭಿಸುತ್ತಿರುವುದ ತೆಲಂಗಾಣದ 2 ಜಿಲ್ಲೆಗಳಲ್ಲಿ. ಪ್ರಾಯೋಗಿಕವಾಗಿ BSNL 4ಜಿ ಸೇವೆ ಆರಂಭಿಸಲಿದೆ. ಬಳಿಕ ಮಾರ್ಚ್ 2019ರ ವೇಳೆ ಎಲ್ಲಾ ರಾಜ್ಯಗಳಲ್ಲಿ 4ಜಿ ಸೇವೆ ಪರಿಚಯಿಸಲು ಮುಂದಾಗಿದೆ. ಹೀಗಾಗಿ ತೆಲೆಂಗಾಣದ 2 ಜಿಲ್ಲೆಗಳ ಗ್ರಾಹಕರು ಹೊರತುಪಡಿಸಿದರೆ ಇತರ BSNL ಗ್ರಾಹಕರು ಮಾರ್ಚ್ ವರೆಗೆ ಕಾಯಬೇಕು.


 

Follow Us:
Download App:
  • android
  • ios