ನವದೆಹಲಿ(ಅ.09): ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳಿಂದ ಬೈಕ್ ಹಾಗೂ ಸ್ಕೂಟರ್‌ ಕೊಳ್ಳಲು ಸಕಾಲ. ಬೆಂಗಳೂರು ಸೇರಿದಂತ ದೇಶದ  ಪ್ರಮುಖ ನಗರಗಳ  ಹಲವು ಶೋ ರೂಂಗಳು  ಈಗಾಗಲೇ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಅಕ್ಟೋಬರ್ ತಿಂಗಳ ಡಿಸ್ಕೌಂಟ್ ಆಫರ್ ಕುರಿತ ಮಾಹಿತಿ ಇಲ್ಲಿದೆ.

ಹೊಂಡಾ:
ಸಿಲಿಕಾನ್ ಹೊಂಡಾ ಬೆಂಗಳೂರು ಹಾಗೂ ಝಾವೆರಿ ಹೊಂಡಾ ಮುಂಬೈ ಶೋ ರೂಂಗಳು ಹೊಂಡಾ ಎವಿಯೇಟರ್ ಹಾಗೂ ಆಕ್ಟೀವಾ 125 ಸ್ಕೂಟರ್‌ಗೆ 2,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.

ಹೀರೋ ಮೋಟಾರ್‌ಕಾರ್ಪ್:
ಬೆಂಗಳೂರು(ನಿಧಿ), ಮುಂಬೈ(ಫೋರ್ಟ್ ಪಾಯಿಂಟ್), ಕೋಲ್ಕತ್ತಾ(ಹೈ ಟೆಕ್) ಶೋ ರೂಂ ಹೀರೋ ಮೋಟಾರ್ ಕಾರ್ಪ್ ಬೈಕ್‌ಗಳಿಗೆ 3000  ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.

ಸುಜುಕಿ:
ಬೆಂಗಳೂರಿನ ನೈನ್ ಸ್ಟಾರ್ ಸುಜುಕಿ ಶೋ ರೂಂ ಸುಜುಕಿ ಜಿಕ್ಸರ್ ಬೈಕ್‌ಗೆ 9,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಇಂಟ್ರುಡರ್ ಬೈಕ್‌ಗೆ 14,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಮುಂಬೈ ಸುಜುಕಿ ಶೋ ರೂಂಗಳಲ್ಲಿ 8000 -10,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಬಜಾಜ್ :
ಬಜಾಜ್ ಆಟೋ ಕಂಪೆನಿ ತನ್ನ ಎಲ್ಲಾ ಬೈಕ್‌ಗಳಿಗೆ 5-5-5 ಸ್ಕೀಮ್ ಆಫರ್ ಘೋಷಿಸಿದೆ. ಈ ಆಫರ್ ಮೂಲಕ ಗ್ರಾಹಕರಿಗೆ 5 ವರ್ಷದ ಉಚಿತ ಡ್ಯಾಮೇಜ್ ಇನ್ಶುರೆನ್ಸ್, 5 ವರ್ಷ ಫ್ರೀ ಸರ್ವೀಸ್ ಹಾಗೂ 5 ವರ್ಷ ಫ್ರೀ ವಾರೆಂಟಿ ನೀಡಿದೆ. ಈ ಮೂಲಕ ಬಜಾಜ್ ಗ್ರಾಹಕರು 9,800 ರೂಪಾಯಿ ಉಳಿತಾಯ ಮಾಡಬಹುದಾಗಿದೆ.

ಯಮಹಾ:
ಚೆನ್ನೈನ ವಾಲ್ಟರ್ ಯಮಹಾ ಶೋ ರೂಂ ಯಮಹಾ ಬೈಕ್‌ಗಳ 2500 ರೂಪಾಯಿ ಮೌಲ್ಯದ ಆಕ್ಸೆಸರಿ ಕಿಟ್ ಡಿಸ್ಕೌಂಟ್ ನೀಡಿದೆ.