ಹೈದರಾಬಾದ್(ಆ. 24) ಸಂಸದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಮುಖ ಬಿಲ್ ಮಂಡನೆಗೆ ಮುಂದಾಗಿದ್ದಾರೆ. ಫೇಸ್ ರೆಕೊಗ್ನೆಶನ್ ಮತ್ತು ಬಯೋಮೆಟ್ರಿಕ್ ಟೆಕ್ನಾಲಜಿ ನಿಷೇಧ ಮಾಡುವ ಖಾಸಗಿ ಬಿಲ್ ಮಂಡನೆ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ತಂತ್ರಜ್ಞಾನದ ಹೆಸರಿನಲ್ಲಿ ನಿಮ್ಮ ಖಾಸಗಿತನಕ್ಕೆ ಧಕ್ಕೆ ಬರುತ್ತಿದೆ. ಫೇಸ್ ರೆಕೊಗ್ನೇಶನ್ ಟೆಕ್ನಾಲಜಿ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.  ಅಲ್ಲದೇ ಈ ತಂತ್ರಜ್ಞಾನ ಕಪ್ಪು ಬಣ್ಣದ ಜನರು, ಮಹಿಳೆಯರು, ವಿಕಲಾಂಗರು ಮತ್ತು ಯುವಕರನ್ನು ಗುರುತಿಸಲು ಹಲವು ಕಡೆ ವಿಫಲವಾದ ಉದಾಹರಣೆ ಇದೆ. ಡೇಟಾಬೇಸ್ ಆಧಾರಲ್ಲಿ ಇದರ ಯಶಸ್ಸು ನಿರ್ಧರಿತವಾಗುತ್ತಿದ್ದು ನಿಷೇಧ ಮಾಡುವುದು ಉತ್ತಮ ಎಂದಿದ್ದಾರೆ.

'ಓವೈಸಿ ಸಹ ಜೈ ಶ್ರೀರಾಮ್ ಹೇಳುವ ಕಾಲ ಬರುತ್ತದೆ'

ಎಸ್‌ಸಿ-ಎಸ್‌ ಟಿ ಸಮುದಾಯ ಮತ್ತು ಮುಸ್ಲಿಮರ ವಿರುದ್ಧವಾಗಿ ಇದರ ಡೇಟಾ ಬೇಸ್ ಸಿದ್ಧ ಮಾಡಲಾಗಿದೆ.  ಯಾವುದೋ ಒಂದು ಪ್ರಕರಣದಲ್ಲಿ ಬಂಧಿತರಾದ ಮುಸ್ಲಿಮರು ಮತ್ತು ಎಸ್ ಸಿ ಎಸ್‌ಟಿ ಗಳನ್ನು ಈ ಡೇಟಾ ಬೇಸ್ ಕೆಟ್ಟದಾಗಿ ಚಿತ್ರಿಸುತ್ತ ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳುತ್ತದೆ ಎಂಬ ಆರೋಪ ಮಾಡಿದ್ದಾರೆ.

ಖಾಸಗಿತನಕ್ಕೆ ಈ ತಂತ್ರಜ್ಞಾನ ಧಕ್ಕೆ ತರುತ್ತಿದೆ. ಗೌಪ್ಯತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಬಲವಾದ ಮತ್ತು ಕಠಿಣವಾದ ದತ್ತಾಂಶ ಸಂರಕ್ಷಣಾ ಕಾನೂನು ಅಗತ್ಯವಿದೆ. ಕೇಂದ್ರ ಸರ್ಕಾರ ಅದರ ಬಗ್ಗೆ ಗಮನ ಹರಿಸಬೇಕಿದೆ. ಹಾಗಾಗಿ ಸಂಸತ್ತಿನಲ್ಲಿ ಖಾಸಗಿ ಮಸೂದೆ ಮಂಡನೆ ಮಾಡಲಿದ್ದೇನೆ ಎಂದು ಹೇಳಿದ್ದಾರೆ.