ಬೆಂಗಳೂರು (ಡಿ. 28): ಆ್ಯಪಲ್‌ ಕಂಪನಿಯ ಟಾಪ್‌ ಮಾಡೆಲ್‌ನ ಐಫೋನ್‌ಗಳನ್ನು ಶೀಘ್ರವೇ ಭಾರತದಲ್ಲಿ ಜೋಡಣೆ ಮಾಡಲು ನಿರ್ಧರಿಸಲಾಗಿದೆ.

ಈಗಾಗಲೇ ಬೆಂಗಳೂರು ಮತ್ತು ಚೆನ್ನೈನ ಶ್ರೀಪೆರಂಬದೂರಿನಲ್ಲಿರುವ ಘಟಕಗಳಲ್ಲಿ ಆರಂಭಿಕ ಮಾದರಿಯ ಫೋನ್‌ ನಿರ್ಮಾಣ ಮತ್ತು ಜೋಡಣೆ ಕಾರ್ಯ ನಡೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಹೈಎಂಡ್‌ ಮಾಡೆಲ್‌ಗಳನ್ನೂ ಭಾರತದಲ್ಲೇ ಜೋಡಣೆ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಹೊಸ ಯೋಜನೆಯಿಂದ ತಮಿಳುನಾಡಿನಲ್ಲಿ 25000 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ತೈವಾನ್‌ ಮೂಲದ ಫಾಕ್ಸ್‌ಕಾನ್‌ ಕಂಪನಿ ಆ್ಯಪಲ್‌ಗೆ ಮೊಬೈಲ್‌ ಸಿದ್ಧಪಡಿಸಿ ನೀಡುವ ಸೇವೆ ಒದಗಿಸುತ್ತಿದೆ.