Asianet Suvarna News Asianet Suvarna News

ಇವು ನಿಮ್ಮ ಆರೋಗ್ಯಕ್ಕೆ ಡೇಂಜರಸ್ ಪೋನ್‌ಗಳಂತೆ! ಕೋರ್ಟ್‌ನಲ್ಲಿ ಕೇಸ್ ದಾಖಲು

ತಂತ್ರಜ್ಞಾನ, ವಿಶೇಷವಾಗಿ ಮೊಬೈಲ್‌ನಂಥ ಇಲೆಕ್ಟ್ರಾನಿಕ್ಸ್ ಉಪಕರಣಗಳ ಸೈಡ್ ಎಫೆಕ್ಟ್‌ಗಳ ಬಗ್ಗೆ ಹಿಂದಿನಿಂದಲೂ ಚರ್ಚೆಯಾಗುತ್ತಲೇ ಇದೆ. ಅದಕ್ಕೆ ಪುಷ್ಠಿ ನೀಡುವಂತೆ, 2 ಮೊಬೈಲ್ ಕಂಪನಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. 

Apple Samsung Mobile Companies Sued Over RF Emissions
Author
Bengaluru, First Published Aug 26, 2019, 6:42 PM IST

ಮೊಬೈಲ್ ದೈತ್ಯ ಕಂಪನಿಗಳಾದ ಸ್ಯಾಮ್ಸಂಗ್ ಮತ್ತು ಆ್ಯಪಲ್ ವಿರುದ್ಧ ಅಮೆರಿಕಾ ಕೋರ್ಟಿನಲ್ಲಿ ದಾವೆ ಹೂಡಲಾಗಿದೆ. 

ಈ ಕಂಪನಿಯ ಫೋನ್‌ಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿ ರೇಡಿಯೋ ತರಂಗಗಳನ್ನು(Radio Frequency) ಹೊರಸೂಸುತ್ತಿದ್ದು, ಅಪಾಯಕಾರಿಯಾಗಿವೆ ಎಂದು ದೂರುದಾರರು ಆರೋಪಿಸಿದ್ದಾರೆ.

ಆ್ಯಪಲ್ ಕಂಪನಿಯ iPhone 7 Plus, iPhone 8 ಮತ್ತು iPhone X, ಸ್ಯಾಮ್ಸಂಗ್ ಕಂಪನಿಯ Galaxy S8 ಮತ್ತು Galaxy Note 8 ಫೋನ್‌ಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ | ಹುಚ್ಚೆಬ್ಬಿಸಿದೆ 64MP ಕ್ಯಾಮೆರಾದ ಹೊಸ ಪೋನ್; ಒಂದೇ ದಿನದಲ್ಲಿ ಒಂದು ಮಿಲಿಯನ್ ಬುಕಿಂಗ್!

ಬೇರೆ ಬೇರೆ ಅಧ್ಯಯನ ವರದಿಗಳು ಕೂಡಾ ಈ ವಾದವನ್ನು ಪುಷ್ಠಿಕರಿಸಿದ್ದು, ಕಾನೂನುಬದ್ಧ ಲಿಮಿಟ್‌ಗಿಂತ ಹೆಚ್ಚು ರೇಡಿಯೋ ತರಂಗಗಳನ್ನು ಇವು ಹೊರಸೂಸುತ್ತಿವೆ ಎಂದು ಹೇಳಿವೆ.

ಇವುಗಳಿಂದಾಗಿ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳು ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಆದರೆ ಆ್ಯಪಲ್ ಕಂಪನಿಯು ಈ ಆರೋಪಗಳನ್ನು ನಿರಾಕರಿಸಿದ್ದು, ಫೋನ್‌ಗಳು ಸರ್ಕಾರದ ನಿಯಮಗಳಿಗೆ ಅನುಗುಣವಾಗಿದ್ದು, ಬಳಕೆಗೆ ಯೋಗ್ಯವಾಗಿವೆ ಎಂದಿದೆ. 

Follow Us:
Download App:
  • android
  • ios