ಅಕ್ಟೋಬರ್‌ನಲ್ಲಿ ನೂತನ ಹ್ಯುಂಡೈ ಸ್ಯಾಂಟ್ರೋ ಭಾರತದಲ್ಲಿ ಬಿಡುಗಡೆ

All new Hyundai Santro to hit Indian roads by October: Report
Highlights

ಭಾರತೀರ ಮನಗೆದ್ದ ಹ್ಯುಂಡ್ರೈ ಸ್ಯಾಂಟ್ರೋ ಕಾರು ಮತ್ತೆ ರೋಡಿಗಳಿಯಲು ಸಜ್ಜಾಗಿದೆ. 20 ವರ್ಷಗಳ ಹಿಂದೆ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದ್ದ ಸ್ಯಾಂಟ್ರೋ, ಹೊಸ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹಾಗೂ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನ ತಲುಪಲಿದೆ. ನೂತನ ಸ್ಯಾಂಟ್ರೋ ಕುರಿತ ಇನ್ನಷ್ಟು ವಿವರ ಇಲ್ಲಿದೆ.

ಬೆಂಗಳೂರು(ಜು.10): ಭಾರತದಲ್ಲಿ ಹ್ಯುಂಡೈ ಸ್ಯಾಂಟ್ರೋ ಕಾರು ಬರೋಬ್ಬರಿ 2 ದಶಕಗಳ ಕಾಲ ಅಧಿಪತ್ಯ ಸಾಧಿಸಿತ್ತು. 1998ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಸ್ಯಾಂಟ್ರೋ ಕಾರು ಬಿಡುಗಡೆಯಾಗಿತ್ತು. ಇದೀಗ 20ನೇ ವರ್ಷದ ಸಂಭ್ರಮಾಚರಣೆಯಲ್ಲಿರು ಹ್ಯುಂಡೈ ಸ್ಯಾಂಟ್ರೋ ನೂತನ ಕಾರನ್ನ ಬಿಡುಗಡೆಗೊಳಿಸಲು ಸಜ್ಜಾಗಿದೆ.

ನೂತನ ಸ್ಯಾಂಟ್ರೋ ಕಾರು 1.0 ಲೀಟರ್, ಮೂರು ಸಿಲಿಂಡರ್ ಇಂಜಿನ್ ಹೊಂದಿದೆ. 95 ಎನ್‌ಎಮ್ ಟಾರ್ಕ್ಯೂನಲ್ಲಿ 66 ಪಿಎಸ್ ಪವರ್ ಹೊಂದಿದೆ. ವಿಶೇಷ ಅಂದರೆ ಅಟೋಮೆಟೆಡ್ ಮ್ಯಾನ್ಯುಯೆಲ್ ಟ್ರಾನ್ಸಮಿಶನ್ (ಎಎಮ್‌ಟಿ) ಹೊಂದಿದೆ.

ನೂತನ ಸ್ಯಾಂಟ್ರೋ ಬೆಲೆ 3.5 ಲಕ್ಷದಿಂದ 6 ಲಕ್ಷ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಮಾರುತಿ ಸೆಲೆರಿಯೋ, ಮಾರುತಿ ವ್ಯಾಗ್ನರ್ ಹಾಗೂ ಟಾಟಾ ಟಿಯಾಗೋ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ.

ನೂತನ ಕಾರಿನ ವಿನ್ಯಾಸ ಹಾಗೂ ಇತರ ಮಾಹಿತಿಗಳನ್ನ ಹ್ಯುಂಡೈ ಬಹಿರಂಗ ಪಡಿಸಿಲ್ಲ. ಆದರೆ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದ್ದ ಸ್ಯಾಂಟ್ರೋ ಮತ್ತೆ ಹೊಸ ವಿನ್ಯಾಸದಲ್ಲಿ ರೋಡಿಗಳಿಯುತ್ತಿರುವುದು ಕಾರು ಪ್ರೀಯರಲ್ಲಿ ಸಂತಸ ಮೂಡಿಸಿದೆ.

loader