Asianet Suvarna News Asianet Suvarna News

ಅಂಬಾನಿಗೆ ಬಿಗ್ ಶಾಕ್ ನೀಡಿದ ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್ ನೀಡಿದ ತೀರ್ಪು ಅಂಬಾನಿಗೆ ಬಿಗ್ ಶಾಕ್ ನೀಡಿದೆ. ರಿಲಾಯನ್ಸ್ ಜಿಯೋ ಗ್ರಾಹಕರು ಸಿಮ್ ಖರೀದಿ ಮಾಡುವಾದ ಆಧಾರ್ ಸಂಖ್ಯೆಯನ್ನು ನೀಡಲೇಬೇಕಿದ್ದ ಕಡ್ಡಾಯವೇ ಇದಕ್ಕೆ ಕಾರಣವಾಗಿದೆ. 

Aadhaar Verdict Hurt Reliance Jio
Author
Bengaluru, First Published Sep 28, 2018, 4:04 PM IST

ನವದೆಹಲಿ : ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಉಂಟು ಮಾಡಿದ್ದ ಜಿಯೋಗೆ ಇದೀಗ ಆತಂಕವೊಂದು ಎದುರಾಗಿದೆ. 

ಸುಪ್ರೀಂಕೋರ್ಟ್ ಆಧಾರ್ ಗೆ ಸಂಬಂಧಿಸಿದಂತೆ ನೀಡಿದ ತೀರ್ಪೊಂದು ಜಿಯೋ ಮುಖ್ಯಸ್ಥರಿಗೆ ಹೊಡೆತ ನೀಡಿದೆ.

ಆಧಾರ್ ಸಂಖ್ಯೆಯನ್ನು ಈ ಹಿಂದೆ ಎಲ್ಲಾ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಈ ಹಿಂದೆ ಸೂಚನೆ ನೀಡಲಾಗಿತ್ತು. 

ಆದರೆ ಜಿಯೋ ವನ್ನು ಕೊಳ್ಳುವಾಗಲೇ ಆಧಾರ್ ಸಂಖ್ಯೆಯನ್ನು ನೀಡುವುದು ಅಗತ್ಯವಾಗಿತ್ತು. ಆದರೆ ಇದೀಗ ಖಾಸಗಿ ಸಂಸ್ಥೆಗಳಿಗೆ, ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ  ಸಿಮ್ ಗೆ  ಆಧಾರ್ ಜೋಡಣೆ ಮಾಡಿದವರು ಆಧಾರ್ ಸಂಖ್ಯೆಯನ್ನು ಡಿಲೀಟ್ ಮಾಡಿಸಬಹುದಾಗಿದೆ.

ಆದ್ದರಿಂದ ಜಿಯೋ ಕೊಳ್ಳುವಾಗಲೇ ಕಡ್ಡಾಯ ನಿಯಮದಂತೆ ಆಧಾರ್ ಸಂಖ್ಯೆಯನ್ನು ನೀಡದವರು ತಮ್ಮ ಆಧಾರ್ ಸಂಖ್ಯೆಯನ್ನೂ ಅಲ್ಲಿಂದ ಡಿಲೀಟ್ ಮಾಡಿಸಬಹುದಾಗಿದೆ. ಅಥವಾ ಇನ್ನುಮುಂದೆ ಆಧಾರ್ ನೀಡಬೇಕಾದ ಅಗತ್ಯವೂ ಎದುರಾಗುವುದಿಲ್ಲ.

ಒಂದು ವೇಳೆ ಈಗಾಗಲೇ ನೀಡಿದ ಸಂಖ್ಯೆಯನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿಸಿದಲ್ಲಿ, ಹೊಸ ದಾಖಲೆಗಳನ್ನು ನೀಡಿ ಮತ್ತೊಮ್ಮೆ  ಧೃಡೀಕರಣ ಮಾಡಬೇಕಾಗುತ್ತದೆ.  ಈ ಎಲ್ಲಾ ವಿಚಾರಗಳಿಂದ ಹೆಚ್ಚಿನ ಗ್ರಾಹಕರನ್ನು ಹೊಂದಿದ ರಿಲಾಯನ್ಸ್ ಜಿಯೋ, ವೊಡಾಫೋನ್, ಏರ್ಟೆಲ್ ಗಿಂತ ಹೆಚ್ಚಿನ ಹೊಡೆತ ಅನುಭವಿಸಬೇಕಾಗುತ್ತದೆ. 

Follow Us:
Download App:
  • android
  • ios