Asianet Suvarna News Asianet Suvarna News

ನಿಮ್ಮ ಮೊಬೈಲ್, ಕಂಪ್ಯೂಟರ್ ನಲ್ಲಿ ಈ 22 ಪಾಸ್'ವರ್ಡ್'ಗಳಿದ್ದರೆ ಎಚ್ಚರ

ಸಾಮಾನ್ಯವಾಗಿ ಕ್ಲಿಷ್ಟಕರ ಪಾಸ್ ವರ್ಡ್ ಗಳನ್ನು ನೀಡಿದರೆ ಮರೆತು ಹೋಗುವ ಸಾಧ್ಯತೆಯಿರುವ ಕಾರಣ ಬಹುತೇಕರು ತಮ್ಮ ಹೆಸರುಗಳನ್ನೇ  ಪಾಸ್ ವರ್ಡ್ ಗಳನ್ನಾಗಿ ಇಟ್ಟುಕೊಂಡಿರುತ್ತಾರೆ. ತಂತ್ರಜ್ಞರು ಹೇಳುವಂತೆ ವಿಶ್ವದಾದ್ಯಂತ ಈ 22 ಹೆಸರುಗಳು ಸಾಮಾನ್ಯವಾಗಿ ಬಳಕೆಯಲ್ಲಿರುವ ಪಾಸ್ ವರ್ಡ್ ಗಳು ಇವನ್ನು ಸುಲಭವಾಗಿ ಹ್ಯಾಕ್ ಮಾಡಬಹುದಂತೆ.

22 names that are 'dangerous' to use as passwords in 2018
Author
Bengaluru, First Published Oct 6, 2018, 5:48 PM IST

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಗಳಲ್ಲಿ  ಪಾಸ್ ವರ್ಡ್ ಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ. ಎಂತಹ ಕ್ಲಿಷ್ಟಕರವಾದ ಪಾಸ್ ವರ್ಡ್ ಗಳನ್ನು ನೀಡಿದರೂ ಹ್ಯಾಕರ್ಸ್'ಗಳು ಸುಲಭವಾಗಿ ನಿಮ್ಮ ಮಾಹಿತಿಗಳನ್ನು ಹ್ಯಾಕ್ ಮಾಡುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಕಳವಿನ ಬಗ್ಗೆ ಯಾರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.

ಆದರೆ ಬ್ಯಾಂಕ್ ನ ಮಾಹಿತಿ, ಪತ್ರ ವ್ಯವಹಾರಗಳ ದಾಖಲೆಗಳಿರುವ ಪಾಸ್ ವರ್ಡ್ ಹ್ಯಾಕ್ ಆದರೆ ತೊಂದರೆ ಅನುಭವಿಸಬೇಕಾಗುತ್ತದೆ. ಸಾಮಾನ್ಯವಾಗಿ ಕ್ಲಿಷ್ಟಕರ ಪಾಸ್ ವರ್ಡ್ ಗಳನ್ನು ನೀಡಿದರೆ ಮರೆತು ಹೋಗುವ ಸಾಧ್ಯತೆಯಿರುವ ಕಾರಣ ಬಹುತೇಕರು ತಮ್ಮ ಹೆಸರುಗಳನ್ನೇ  ಪಾಸ್ ವರ್ಡ್ ಗಳನ್ನಾಗಿ ಇಟ್ಟುಕೊಂಡಿರುತ್ತಾರೆ. ತಂತ್ರಜ್ಞರು ಹೇಳುವಂತೆ ವಿಶ್ವದಾದ್ಯಂತ ಈ 22 ಹೆಸರುಗಳು ಸಾಮಾನ್ಯವಾಗಿ ಬಳಕೆಯಲ್ಲಿರುವ ಪಾಸ್ ವರ್ಡ್ ಗಳು ಇವನ್ನು ಸುಲಭವಾಗಿ ಹ್ಯಾಕ್ ಮಾಡಬಹುದಂತೆ.

ಬ್ಯಾಂಕ್, ಸಾಮಾಜಿಕ ಮಾಧ್ಯಮಗಳ ಸಂಸ್ಥೆಗಳ ದೃಢಪಡಿಸುವಂತೆ ತಮ್ಮ ಮಾಹಿತಿ ದಾಖಲೆಗಳನ್ನು ರಕ್ಷಿಸಿಕೊಳ್ಳಲು ಪಾಸ್'ವರ್ಡ್ ಗಳನ್ನು  ಆಗಾಗ ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಹ್ಯಾಕ್ ಆಗುವುದು ಖಚಿತ.

ಹ್ಯಾಕ್ ಆಗುವ 22 ಸಾಮಾನ್ಯ ಹೆಸರಿನ ಪಾಸ್ ವರ್ಡ್'ಗಳು

Martin

Charlie

William

Maggie

Robert

George

Jessica

Daniel

Jennifer

Michelle

Jordon

Harley

Matthey

Andrew

Andrea

Joshua

Maverick

Nicole

Merlin

Chelsea

Amanda

Ashley
 

ಮೇಲಿನ ಪಾಸ್'ವರ್ಡ್ ಗಳು ಅಷ್ಟೆ ಅಲ್ಲದೆ ಸಾಮಾನ್ಯ ಬಳಕೆಯಲ್ಲಿರುವ ಭಾರತೀಯ ಹೆಸರುಗಳನ್ನು ಕೂಡ ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯಿದೆ. ಆಗಿದ್ದಾಂಗೆ ಪಾಸ್'ವರ್ಡ್'ಗಳನ್ನು ಬದಲಿಸುತ್ತಿದ್ದರೆ ಕ್ಷೇಮ.

Follow Us:
Download App:
  • android
  • ios