Asianet Suvarna News Asianet Suvarna News

ಬರಲಿದೆ ಹಾರುವ ಕೊಡೆ: ಹಿಡಿಬೇಕಿಲ್ಲ, ಮಡಚಬೇಕಿಲ್ಲ!

ಹಾರುವ ಕೊಡೆ ಆವಿಷ್ಕರಿಸಿದ ಜಪಾನ್ ಕಂಪನಿ

ಡ್ರೋಣ್ ಮಾದರಿಯ ಹಾರುವ ಕೊಡೆ

2020ರ ಹೊತ್ತಿಗೆ ಮಾರುಕಟ್ಟೆಗೆ ಲಗ್ಗೆ
 

'Flying Umbrella', Made In Japan, Doesn't Require Using Hands

ಟೊಕಿಯೋ(ಜು.8): ಮಾನವನ ಅಗತ್ಯಗಳಿಗೆ ತಕ್ಕಂತೆ ತಂತ್ರಜ್ಞಾನದ ಅಭಿವೃದ್ಧಿ ಜಪಾನಿಗರ ವೈಶಿಷ್ಟ್ಯ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ, ಎಲೆಕ್ಟ್ರಾನಿಕ ಉಪಕರಣಗಳು, ಗೃಹಬಳಕೆ ವಸ್ತುಗಳು, ಮೊಬೈಲ್ ಹೀಗೆ ಎಲ್ಲ ತಂತ್ರಜ್ಞಾನದಲ್ಲೂ ಜಪಾನ್ ಟೆಕ್ನಾಲಜಿ ಅಂದ್ರೆ ಜನ ಕಣ್ಣು ಮುಚ್ಚಿ ನಂಬುತ್ತಾರೆ.

ಇದೀಗ ಜಪಾನ್‌ನ ಕಂಪನಿಯೊಂದು ಡ್ರೋಣ್ ಮಾದರಿಯ ಕೊಡೆಯೊಂದನ್ನು ಆವಿಷ್ಕರಿಸಿದ್ದು, ಇದನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಿಲ್ಲ. ನೀವು ಎಲ್ಲಿಗೆ ಹೋದರೂ ಡ್ರೋಣ್ ಕ್ಯಾಮರಾ ಸಹಾಯದಿಂದ ಈ ಕೊಡೆ ನಿಮ್ಮನ್ನು ಹಿಂಬಾಲಿಸುತ್ತದೆ.

ಅಗತ್ಯಕ್ಕೆ ತಕ್ಕಂತೆ ಎತ್ತರ, ದೂರವನ್ನು ಬದಲಾಯಿಸಿಕೊಳ್ಳಬಲ್ಲ ಈ ಕೊಡೆಯನ್ನು ನೀವು ಕೈಯಲ್ಲಿ ಹಿಡಿಯಬೇಕಿಲ್ಲ. ಮಳೆ ಬಂದು ನಿಂತ ಮೇಲೆ ಅದನ್ನು ಒಣಗಿಸಲು ಇಡಬೇಕಿಲ್ಲ. ಮಡಚುವ ಗೊಡವೆ ಅಂತೂ ಇಲ್ಲವೇ ಇಲ್ಲ.

ಈ ಕುರಿತು ಮಾಹಿತಿ ನೀಡಿರುವ ಅಶಾಹಿ ಪವರ್ ಸರ್ವಿಸ್ ಕಂಪನಿ ಸಿಇಒ ಕೆಂಜಿ ಸುಜುಕಿ, ಕಳೆದ ಮೂರು ವರ್ಷಗಳಿಂದ ಹಾರುವ ಕೊಡೆಯ ಕುರಿತು ಸಂಶೋಧನೆ ನಡೆಸುತ್ತಿದ್ದು, 2020 ರ ಹೊತ್ತಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಅಂತರಾಷ್ಟ್ರೀಯ ಸಿವಿಲ್ ಏರೋನಾಟಿಕ್ಸ್ ಕಾನೂನಿನ ಪ್ರಕಾರ ಡ್ರೋಣ್ ಮನುಷ್ಯರು ಮತ್ತು ಯಾವುದೇ ಕಟ್ಟಡದಿಂದ ಕನಿಷ್ಠ ೩೦ ಮೀಟರ್ ಎತ್ತರದಲ್ಲಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡೇ ಈ ಹಾರುವ ಕೊಡೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಕಿಂಜಿ ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios