Asianet Suvarna News Asianet Suvarna News

ಪತಿಯ ಮರ್ಯಾದ ಹತ್ಯೆ: ನೊಂದ ಪತ್ನಿ ನೇಣಿಗೆ ಶರಣು!

Dec 6, 2018, 1:40 PM IST

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಅಮಾನವೀಯ ಘಟನೆ ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ ಅಂತರ್ಜಾತಿ ಯುವಕ ಯುವತಿ ಇಬ್ಬರೂ 6 ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ ಈ ಮದುವೆಯನ್ನು ಒಪ್ಪಲು ತಯಾರಿಲ್ಲದ ಯುವಕನ ತಮ್ಮ, ಮರ್ಯಾದೆಗಾಗಿ ತನ್ನ ಅಣ್ಣನನ್ನೇ ಹತ್ಯೆಗೈದಿದ್ದಾನೆ. ಇತ್ತ ಪತಿಯ ಮರ್ಯಾದ ಹತ್ಯೆ ಕೊಲೆಯಿಂದ ಮನನೊಂದು ಪತ್ನಿ ಮೀನಾಕ್ಷಿ ಕೂಡಾ ನೇಣಿಗೆ ಶರಣಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನೇಣಿಗೆ ಶರಣಾಗಿರುವ ಮೀನಾಕ್ಷಿ ಡೆತ್ ನೋಟ್‌ನಲ್ಲಿ 'ದಯವಿಟ್ಟು ಅಂತರ್ಜಾತಿ ವಿವಾಹ ಯಾರು ಆಗಬೇಡಿ, ಮನೆಯವರನ್ನು ಒಪ್ಪಿಸಿ ಮದುವೆಯಾಗಿ' ಎಂದು ಬರೆದಿದ್ದಾರೆ. 

Video Top Stories