Asianet Suvarna News Asianet Suvarna News

ಕುಕ್ಕೆ ಭೂ ದಾಖಲೆಗಳಲ್ಲಿ ದಿಢೀರ್ ಬದಲಾವಣೆ!

ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ಬಾರದೇ ದಿಢೀರ್ ಬದಲಾವಣೆ?! ದಕ್ಷಿಣ ಕನ್ನಡ ಡಿಸಿಗೆ ಸುಳ್ಯ ತಹಶಿಲ್ದಾರ್ ವಿರುದ್ಧ ದೂರು ನೀಡಿದ್ದ ದೇವಸ್ಥಾನ ಮಂಡಳಿ! ಸರ್ಕಾರ & ದೇವಸ್ಥಾನದ ಆಸ್ತಿಯಲ್ಲಿ ಮಠ ಮತ್ತು ಇತರೆ ಮೂರು ಹೆಸರು ಸೇರ್ಪಡೆ! 2017ರಲ್ಲಿ‌ ನರಸಿಂಹ ಮಠದ ಆಸ್ತಿ ವ್ಯಾಜ್ಯದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್! ಆಡಳಿತಕ್ಕೆ ಮಂಡಳಿಗೆ ಮಾಹಿತಿ ನೀಡದೇ ಆರ್ ಟಿಸಿ ದಾಖಲೆಯಲ್ಲಿ ಹೆಸರು ಬದಲು

ಮಂಗಳೂರು(ಡಿ.01): ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮತ್ತೊಂದು ವಿವಾದ ಎದ್ದಿದೆ. ಕುಕ್ಕೆ ದೇಗುಲದ ಆಸ್ತಿ ಹಕ್ಕಿಗೆ ಸಂಬಂಧಿಸಿ ಭೂ ದಾಖಲೆಗಳಲ್ಲಿ ದಿಢೀರ್ ಬದಲಾವಣೆಯಾಗಿದೆ. ಸರ್ವೇ ನಂ.82/1 ರಡಿ ಸರ್ಕಾರ ಮತ್ತು 1.33 ಎಕರೆ ಜಾಗ ಕುಕ್ಕೆ ದೇವಸ್ಥಾನದ ಹಕ್ಕಿನಲ್ಲಿದ್ದವು. ಜೊತೆಗೆ ಸುಬ್ಬರಾಯ ದೇವಸ್ಥಾನ, ನರಸಿಂಹ ಮಠ, ಉಮಾಮಹೇಶ್ವರಿ ಮತ್ತು ಕಾಳ ಹೆಸರು ಸೇರ್ಪಡೆ ಮಾಡಿ ಪಹಣಿ ನೀಡಲಾಗಿದೆ. ಆಡಳಿತಕ್ಕೆ ಮಂಡಳಿಗೆ ಮಾಹಿತಿ ನೀಡದೇ ಆರ್ಟಿಸಿ ದಾಖಲೆಯಲ್ಲಿ ಹೆಸರು ಬದಲಾವಣೆ ಮಾಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..