Asianet Suvarna News Asianet Suvarna News

ರೈತರ ದಿನವನ್ನ ವಿಭಿನ್ನವಾಗಿ ಆಚರಿಸಿದ ಸಚಿವ ಸುರೇಶ್ ಕುಮಾರ್

ರೈತ ದೇಶದ ಬೆನ್ನೆಲುಬು,  ಇಡೀ ದೇಶಕ್ಕೆ ಅನ್ನ ಕೊಡುವ ಮಹಾನ್ ಅನ್ನದಾತ. ಇಂದು [ಡಿ.23] ವಿಶ್ವ ರೈತ ದಿನಾಚರಣೆ ಹಿನ್ನೆಲೆ ಎಲ್ಲೆಡೆ ಅನ್ನದಾತರನ್ನು ನೆನೆಯಲಾಗುತ್ತಿದೆ. ಹಲವರು ಸಮಾಜಿಕ ಜಾಲತಾಣಗಳಲ್ಲಿ ರೈತರ ಫೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ಆಚರಿಸಿದ್ರೆ,  ಇತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರೈತರ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.  

Suresh Kumar Special Gesture on National Farmers Day Wins Farmers Heart
Author
Bengaluru, First Published Dec 23, 2019, 5:05 PM IST

ಧಾರವಾಡ, [ಡಿ.23]: ಪ್ರಾಥಮಿ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೋಗುತ್ತಿದ್ದ ದಾರಿ ಮಧ್ಯೆ ಕಣ್ಣಿಗೆ ಬಿದ್ದ ಅನ್ನದಾತನಿಗೆ ಜಮೀನಿನಲ್ಲೇ ಸನ್ಮಾನಿಸಿ ರೈತ ದಿನಾಚರಣೆ ಆಚರಿಸಿದ್ದಾರೆ.

ಧಾರವಾಡಕ್ಕೆ ಹೋಗುವ ಮಾರ್ಗ ಮಧ್ಯೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್  ಅವರು ಅನ್ನದಾತರೊಬ್ಬರನ್ನ ಭೇಟಿ ಮಾಡಿ ರೈತ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ಮಕ್ಕಳಿಗೆ ಊಟ ಬಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಸುರೇಶ್ ಕುಮಾರ್ ಅವರು ಕೆಲಸ  ನಿಮಿತ್ತ ಇಂದು [ಸೋಮವಾರ] ಧಾರವಾಡಕ್ಕೆ ತೆರಳುತ್ತಿದ್ದರು. ಹೋಗುವ ಮಾರ್ಗ ಮಧ್ಯೆ ನೆಲೋಗಲ್ ಗ್ರಾಮದ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ನೋಡಿ ಕಾರು ನಿಲ್ಲಿಸಿದ್ದಾರೆ. ಬಳಿಕ ಅವರ ಬಳಿ ಹೋಗಿ ಸನ್ಮಾನಿಸಿ ರೈತ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

ನೆಲೋಗಲ್ ಗ್ರಾಮದ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಚನ್ನಬಸವಣಗೌಡ ಹೊಂಬರಡಿಗೆ ನಮಸ್ಕರಿಸಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

 "ಧಾರವಾಡಕ್ಕೆ ನನ್ನ ಇಲಾಖೆಯ ಕಾರ್ಯಾಗಾರದ ನಿಮಿತ್ತ ಹೊರಟಿದ್ದೆ. ದಾರಿಯ ಪಕ್ಕದಲ್ಲಿ ಈ 'ಅನ್ನದಾತ' ಕಣ್ಣಿಗೆ ಬಿದ್ದರು. ನೆಲೋಗಲ್ ಗ್ರಾಮದ ರೈತ ಚನ್ನಬಸನಗೌಡ ಹೊಂಬರಡಿ ಅವರಿಗೆ 'ರೈತರ ದಿನ' ದಂದು ಗೌರವ ಸಲ್ಲಿಸಿ ಮುಂದಕ್ಕೆ ಹೊರಟೆ" ಎಂದು ಬರೆದುಕೊಂಡಿದ್ದಾರೆ. ಸಚಿವ ಸುರೇಶ್ ಕುಮಾರ್ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios