Asianet Suvarna News Asianet Suvarna News

Xನಲ್ಲಿ ರಾಹುಲ್ ಗಾಂಧಿ ವಿರುದ್ಧ 'ರೇ**' ಆರೋಪ! ಕಾಂಗ್ರೆಸ್‌ನಿಂದ ದೂರು ದಾಖಲು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಹಚರರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ  ಟ್ವೀಟರ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಹೈಗ್ರೌಂಡ್ ಪೊಲೀಸ್  ಠಾಣೆಗೆ ದೂರು ನೀಡಿದೆ.

sexual assault accusation against congress leader Rahul gandhi on twitter X file a complaint rav
Author
First Published Aug 23, 2024, 4:18 PM IST | Last Updated Aug 23, 2024, 4:24 PM IST

ಬೆಂಗಳೂರು (ಆ.23): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಹಚರರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಿ  ಟ್ವೀಟರ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಹೈಗ್ರೌಂಡ್ ಪೊಲೀಸ್  ಠಾಣೆಗೆ ದೂರು ನೀಡಿದೆ.

'ಅಹಂ ಬ್ರಹ್ಮಾಸ್ಮಿ'  ಎಂಬಾತನಿಂದ ಪೋಸ್ಟ್. ತನ್ನ rudra 1008 ಟ್ವಿಟರ್ ಎಕ್ಸ್ ಖಾತೆಯಿಂದ  ಬರೆದುಕೊಂಡಿರುವ ವ್ಯಕ್ತಿ 2006 ರಲ್ಲಿ ಅಮೇತಿಯಲ್ಲಿ. ಅಮೇಥಿಯಲ್ಲಿ ರಾಹುಲ್ ಗಾಂಧಿ ಮತ್ತು ಅವರ ಆರು ಜನ ಗುಂಪು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ? ಮಹಿಳೆ ಮತ್ತು ಅವರ ಕುಟುಂಬ ನಿಗೂಢವಾಗಿ ನಾಪತ್ತೆಯಾಗಿದೆ ಹಿಂದಿನ ರಹಸ್ಯವೇನು ಎಂದು ಬರೆದುಕೊಂಡಿರುವ ವ್ಯಕ್ತಿ.

ಟ್ವೀಟರ್‌ನಲ್ಲಿ ವೈರಲ್ ಆಗಿರುವ ಹಿನ್ನೆಲೆ ಸುಳ್ಳು ಆರೋಪ, ತೇಜೋವಧೆ ಮಾಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್ ನಾಯಕ ರಮೇಶ್ ಬಾಬು ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡ ಹೈಗ್ರೌಂಡ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

'ಸಿದ್ದರಾಮಯ್ಯಗೆ ರಾಜೀನಾಮೆ ನೀಡೋಕೆ ಹೇಳ್ತೀರಾ..' ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪ್ರಶ್ನಿಸಿದ ಟಿಎಂಸಿ!

Latest Videos
Follow Us:
Download App:
  • android
  • ios