ಬೆಂಗಳೂರು, (ಫೆ.20): ಅಮೂಲ್ಯ ಲಿಯೋನಾ  ಎನ್ನುವ ಯುವತಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಕಿಡಿಹೊತ್ತಿಸಿದ್ದಾಳೆ.

ಈ ದೇಶದ್ರೋಹಿ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾಳೆ ಅಂದ್ರೆ  ಫೆಬ್ರವರಿ 21ರಂದು ಕರ್ನಾಟಕದಾದ್ಯಂತ ಪ್ರತಿಟನೆಗೆ  ಕರೆ ನೀಡಿದೆ.

ಬೆಂಗಳೂರಿನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಅಮೂಲ್ಯ

ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಇಂದು (ಗುರುವಾರ) ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇಂತಹ ದೇಶ ದ್ರೋಹಿ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆಗೆ ಕರವೇ ಸಜ್ಜಾಗಿದೆ.

ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹಿಂದೂ-ಮುಸ್ಲಿಂ-ಸಿಖ್- ಈಸಾಯಿ ಫೆಡರೇಷನ್ ಬೆಂಗಳೂರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ.

ವಿಮಾನ ನಿಲ್ದಾಣದಲ್ಲಿ ದೇಶ ಭಕ್ತಿ ಪರ ಪಾಠ ಮಾಡಿದ್ದವಳೇ ಪಾಕ್ ಜಿಂದಾಬಾದ್ ಎಂದವಳು

ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ವೇದಿಕೆ ಆಗಮಿಸುತ್ತಿದ್ದಂತೆ ವೇದಿಕೆ ಮೇಲೆ ಆಸನರಾಗಿದ್ದ ಯುವ ಹೋರಾಟಗಾರ್ತಿ ಅಮೂಲ್ಯ ಲಿಯೋನ್ ಎಂಬಾಕೆ ಮೈಕ್ ಕೈಗೆತ್ತಿಕೊಂಡು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದಿದ್ದಾಳೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.