ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ಮಹತ್ವದ ಮಾಹಿತಿ?
ರಾಜೀವ್ ಹತ್ಯೆ ಮಾಹಿತಿ ತಿಳಿಯಲು ಪ್ರಿಯಾಂಕಾ ನಿರಾಸಕ್ತಿ: ಹರಿಶ್ಚಂದ್ರಗೌಡ| ಆಗಿನ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರಿಗೆ ಟೆಲಿಗ್ರಾಂ ಮಾಡಿದ್ದೆ
ಬೆಂಗಳೂರು[ಜ.18]: ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ತಮ್ಮ ಬಳಿಯಿದೆ. ಈ ಬಗ್ಗೆ ಆಗಿನ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರಿಗೆ ಟೆಲಿಗ್ರಾಂ ಮಾಡಿದ್ದೆ ಎಂದು ಎಐಸಿಸಿ ಸದಸ್ಯ ಟಿ.ಡಿ.ಆರ್. ಹರಿಶ್ಚಂದ್ರಗೌಡ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ರಾಜೀವ್ ಹತ್ಯೆ ಕುರಿತು ತಮ್ಮ ಬಳಿ ಇರುವ ಮಾಹಿತಿಯನ್ನು ಅವರ ಪುತ್ರಿಯೂ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲು ಪ್ರಯತ್ನ ನಡೆಸಿದ್ದೆ. ಆದರೆ, ಅವರು ಈ ಬಗ್ಗೆ ಆಸಕ್ತಿ ತೋರಲಿಲ್ಲ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟು ದಂಡ ತೆತ್ತ ಬೈಕ್ ಚಾಲಕ
ರಾಜೀವ್ ಗಾಂಧಿಯವರ ಹತ್ಯೆಗೂ ಮುನ್ನವೇ ನನಗೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ರಾಷ್ಟ್ರಪತಿಗಳಾಗಿದ್ದ ಆರ್.ವೆಂಕಟರಾಮನ್ ಅವರಿಗೆ ಟೆಲಿಗ್ರಾಮ್ ಮೂಲಕ ತಿಳಿಸಿದ್ದೆ. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಭೇಟಿಗೆ ಅವಕಾಶ ನೀಡುವಂತೆ ಪ್ರಿಯಾಂಕಾ ಗಾಂಧಿಯವರ ಆಪ್ತಸಹಾಯಕರ ಮೂಲಕ ಸಂಪರ್ಕಿಸಿದ್ದೆ. ಆದರೆ, ಅವರು ಭೇಟಿಗೆ ಅವಕಾಶ ನೀಡಲಿಲ್ಲ. ತಮ್ಮ ತಂದೆ ಹತ್ಯೆಯ ಬಗ್ಗೆಯೇ ಮಾಹಿತಿ ಪಡೆಯಲು ಪ್ರಿಯಾಂಕಾ ಅವರಿಗೆ ಆಸಕ್ತಿ ಇಲ್ಲದಿರುವುದು ತಮಗೆ ಬೇಸರ ತಂದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಿಯಾಂಕಾ ಭೇಟಿಯಾಗಲು ಭದ್ರತೆ ಸೀಳಿದ ವ್ಯಕ್ತಿ: ಏನಾಗಲ್ಲ ಬಿಡಿ ಎಂದ ವಾದ್ರಾ!