Valentine's Dayಗೆ ಬಾಯ್ ಫ್ರೆಂಡ್ ಬೇಕಾ? ರೂ 389 ಪೇ ಮಾಡಿ.. ಬೆಂಗಳೂರು ನಗರದಲ್ಲಿ ವಿಚಿತ್ರ ಪೋಸ್ಟರ್ ಅಂಟಿಸಿ ಕಿಡಿಗೇಡಿತನ
ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 'ಬಾಡಿಗೆಗೆ ಬಾಯ್‌ಫ್ರೆಂಡ್' ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಕೇವಲ ರೂ 389ಕ್ಕೆ ಒಂದು ದಿನದ ಬಾಯ್‌ಫ್ರೆಂಡ್ ಸಿಗುತ್ತಾನೆ ಎಂದು ಬರೆದಿರುವ ಈ ಪೋಸ್ಟರ್‌ಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ.

ಬೆಂಗಳೂರು (ಫೆ.14): ವ್ಯಾಲೆಂಟೈನ್ಸ್ ಡೇ ಇದೊಂದು ವಿದೇಶಿ ಸಂಸ್ಕೃತಿ ಅಷ್ಟೇ ಅಲ್ಲ, ಭಾರತೀಯ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾದುದ್ದು ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಯುವ ಜನಾಂಗ ಪ್ರೇಮಿಗಳ ದಿನಾಚರಣೆ ನೆಪದಲ್ಲಿ ದಾರಿ ತಪ್ಪುತ್ತಿದೆ ಅನ್ನೋದಕ್ಕೆ ಬೆಂಗಳೂರಿನಲ್ಲಿ ವ್ಯಾಲೆಂಟೈನ್‌ಗೆ ಬಾಯ್ ಫ್ರೆಂಡ್ ಬೇಕಾ? ಎಂದು ಕಿಡಿಗೇಡಿಗಳು ಪೋಸ್ಟರ್ ಅಂಟಿಸಿರುವ ಘಟನೆ ತಾಜಾ ಉದಾಹರಣೆಯಾಗಿದೆ.
ಹೌದು. ಇಂದು ವ್ಯಾಲೆಂಟೇನ್ ಡೇ ಹಿನ್ನೆಲೆ ಕಿಡಿಗೇಡಿಗಳು ಇಂಥದ್ದೊಂದು ಪೋಸ್ಟರ್‌ಗಳನ್ನ ಎಲ್ಲೆಂದರಲ್ಲಿ ಅಂಟಿಸಿದ್ದಾರೆ.'ವ್ಯಾಲೆಂಟೈನ್ ಡೇಗೆ ಬಾಯ್‌ಫ್ರೆಂಡ್ ಇಲ್ವಾ? ಹಾಗಾದ್ರೆ ಒಂದು ದಿನದ ಬಾಡಿಗೆ ಬಾಯ್‌ಫ್ರೆಂಡ್‌ಗಾಗಿ ಪೇ ಮಾಡಿ ಎಂದು ಬರೆದಿರುವ ಪೋಸ್ಟರ್ ಹರಿಬಿಟ್ಟಿರುವ ಕಿಡಿಗೇಡಿಗಳು.
ಇದನ್ನೂ ಓದಿ: ಸ್ನಾನದ ಕೋಣೆಗೆ ನುಗ್ಗಿ, 'ನೀನಂದ್ರೆ ನಂಗಿಷ್ಟ' ಗೃಹಿಣಿಗೆ ಬಲವಂತವಾಗಿ ಕಿಸ್ ಕೊಟ್ಟು ಕಾಮುಕ ಪರಾರಿ!
ರೂ 389ಗೆ ಒಂದು ದಿನದ ಬಾಯ್‌ಫ್ರೆಂಡ್!
ಬೆಂಗಳೂರಿನ ಜಯನಗರ, ಬನಶಂಕರಿ ಭಾಗದಲ್ಲಿ ಎಲ್ಲೆಂದರಲ್ಲೇ ಗೋಡೆಗಳಿಗೆ ಹಚ್ಚಿರುವ ಕಿಡಿಗೇಡಿಗಳು, ವ್ಯಾಲೆಂಟೆನ್ಸ್ ಡೇಗೆ ಹುಡುಗ ಬೇಕಾದ್ರೆ ಕೇವಲ ರೂ 389/- ಕೊಟ್ರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಸಿಗಲಿದ್ದಾನೆ ಎಂಬ ಅರ್ಥದಲ್ಲಿ 'RENT A BOY FRIEND ONLY Rs. 389 SCAN ME' ಬರೆದಿರುವ ಪೋಸ್ಟರ್‌ಗಳು ಜಯನಗರದ 8th ಬ್ಲಾಕ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಕಂಡು ಬಂದಿವೆ.
ಇದನ್ನೂ ಓದಿ: Valentine's day: ಗಂಡನಿಗೆ 'ಪ್ರೀತಿಯ ಪರೋಟ' ಮಾಡಿಕೊಟ್ಟ ಹೆಂಡತಿ! 7 ಮಿಲಿಯನ್ ವೀಕ್ಷಣೆ
ಪೋಸ್ಟರ್ ಕಂಡು ಸಾರ್ವಜನಿಕರು ಆಕ್ರೋಶ:
ಇಂಥ ವಿಚಿತ್ರ ಪೋಸ್ಟರ್ ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಪೋಸ್ಟರ್ ಅಂಟಿಸುವ ಮೂಲಕ ದುಷ್ಟರು ನಗರದ ಸಂಸ್ಕೃತಿ ಹಾಳು ಮಾಡಲು ಹೊರಟಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಟ್ವಿಟರ್ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಆಗ್ರಹಿಸಿದ್ದಾರೆ.