ಪ್ರವೀಣ್ ಹತ್ಯೆ ಖಂಡಿಸಿ ಬಿಜೆಪಿಗೆ 200ಕ್ಕೂ ಅಧಿಕ ಪದಾಧಿಕಾರಿಗಳ ಗುಡ್‌ಬೈ
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ನೆಟ್ಟಾರಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಾಗೂ ಬಿಜೆಪಿ ಕಾರ್ಯಕರ್ತರು, ಹಿಂದುಗಳಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿ ಬಿಜೆಪಿ ವಿವಿಧ ಮೋರ್ಚಾಗಳ ರಾಜೀನಾಮೆ ಪರ್ವ ರಾಜ್ಯಾದ್ಯಂತ ಮುಂದುವರಿದಿದೆ.
ಬೆಂಗಳೂರು (ಜು.29): ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ನೆಟ್ಟಾರಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಾಗೂ ಬಿಜೆಪಿ ಕಾರ್ಯಕರ್ತರು, ಹಿಂದುಗಳಿಗೆ ರಕ್ಷಣೆ ಇಲ್ಲ ಎಂದು ಆರೋಪಿಸಿ ಬಿಜೆಪಿ ವಿವಿಧ ಮೋರ್ಚಾಗಳ ರಾಜೀನಾಮೆ ಪರ್ವ ರಾಜ್ಯಾದ್ಯಂತ ಮುಂದುವರಿದಿದೆ. ಗುರುವಾರ ತುಮಕೂರು, ಬಳ್ಳಾರಿ, ಗದಗ, ಕೊಪ್ಪಳ, ಚಿತ್ರದುರ್ಗ, ಚಾಮರಾಜನಗರ, ಉತ್ತರಕನ್ನಡ, ಚಿಕ್ಕಮಗಳೂರು ಸೇರಿ 15ಕ್ಕೂ ಹೆಚ್ಚು ಜಿಲ್ಲೆಯ ನೂರಾರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ನಗರ, ಗ್ರಾಮೀಣ ಯುವಮೋರ್ಚಾದ 40ಕ್ಕೂ ಹೆಚ್ಚು ಪದಾಧಿಕಾರಿಗಳು, ಕೊಪ್ಪಳ ಜಿಲ್ಲೆ ಕುಷ್ಟಗಿ ಬಿಜೆಪಿ ಯುವ ಮೋರ್ಚಾದ ಎಲ್ಲ 22 ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ನಾಲ್ವರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರೆ, 50ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಹತ್ಯೆಯಾದ ಪ್ರವೀಣ್ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ, BJPಯಿಂದ 25 ಲಕ್ಷ ರೂ ನೆರವು
ಸಿಎಂ ಸ್ವಕ್ಷೇತ್ರ ಶಿಗ್ಗಾಂವಿ ಸೇರಿ ಹಾವೇರಿ, ಹಾನಗಲ್, ರಾಣಿಬೆನ್ನೂರು ತಾಲೂಕುಗಳ ಯುವ ಮೋರ್ಚಾದ ಸುಮಾರು 10ಕ್ಕೂ ಹೆಚ್ಚು ಪದಾಧಿಕಾರಿಗಳು ರಾಜೀನಾಮೆ ನೀಡಿ, ರಾಜೀನಾಮೆ ಪತ್ರ ಪಕ್ಷದ ವಾಟ್ಸಾಪ್ ಗ್ರೂಪ್, ಫೇಸ್‌ಬುಕ್ ಪೇಜ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಬಳ್ಳಾರಿ, ವಿಜಯನಗರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಕೋಲಾರ ಜಿಲ್ಲೆಗಳಲ್ಲೂ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರದ 15ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಬೆಳಗಾವಿ ಮಹಾನಗರ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ವಕ್ಕುಂದ ಯಕ್ಷಗಾನ ಸಾಕು, ಈಗಲಾದರೂ ವೀರಭದ್ರನಾಗಿ ಎಂದು ಟ್ವೀಟ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ವಿರುದ್ಧ ಕಿಡಿಕಾರಿದ್ದಾರೆ. ಅರಭಾವಿ ಮಂಡಲ ಸಾಮಾಜಿಕ ಜಾಲತಾಣ ಸದಸ್ಯ ಸ್ಥಾನಕ್ಕೆ ಅವಿನಾಶ್ ಹಿರೇಮಠ್ ರಾಜೀನಾಮೆ ನೀಡಿದ್ದು, ‘ನಮ್ಮವು ಕುಟುಂಬ ಇವೆ ಬೊಮ್ಮಾಯಿ ಸರ್’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೈಸೂರಿನ ಬಿಜೆಪಿ ಎನ್.ಆರ್. ಕ್ಷೇತ್ರ ಯುವ ಮೋರ್ಚಾದ ಐವರು ಪದಾಧಿಕಾರಿಗಳು ಕೂಡ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಹಿಂದೆ ನಡೆದ ಹತ್ಯೆಗಳಿಗೆ ಯಾವ ರೀತಿಯ ನ್ಯಾಯ ಸಿಕ್ಕಿದೆ ಎಂಬುದು ನಮ್ಮ ಕಣ್ಣ ಮುಂದೆ ಇದೆ.
Praveen Nettaru murder; ಮುಸ್ಲಿಂ ಗೂಂಡಾಗಳಿಂದ ಈ ಹತ್ಯೆ, ಈಶ್ವರಪ್ಪ ಆರೋಪ
ಕಠಿಣ ಕ್ರಮ ಎಂಬುದು ಭರವಸೆಯಾಗಿಯೇ ಉಳಿದಿರುವುದರಿಂದ ನಾವು ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಬಾಗಲಕೋಟೆ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಾಸಕ ಸಿದ್ದು ಸವದಿ ಪುತ್ರ ವಿದ್ಯಾಧರ ಸವದಿ ಸೇರಿ, ಮೂವರು ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ಕೊಪ್ಪಳ ಯುವಮೋರ್ಚಾ ತಾಲೂಕ ಪ್ರಧಾನಕಾರ್ಯದರ್ಶಿ ಶೇಖರ್ ಎಸ್ ಪಾಟೀಲ್, ತುಮಕೂರಲ್ಲಿ ಸಾಮಾಜಿಕ ಜಾಲತಾಣ ಪ್ರಕೋಷ್ಟಶಕುಂತಲ ನಟರಾಜ್ ರಾಜೀನಾಮೆ ನೀಡಿದ್ದರೆ, ನಗರ ಯುವ ಮೋರ್ಚಾ ಅಧ್ಯಕ್ಷ ನಾಗೇಂದ್ರ, ಹಾಸನದಲ್ಲಿ ಅರಸೀಕೆರೆ ನಗರ ಬಿಜೆಪಿ ಮಂಡಲದ ಅಧ್ಯಕ್ಷ ಸೇರಿ ನಾಲ್ವರು ರಾಜೀನಾಮೆಗೆ ನಿರ್ಧರಿಸಿದ್ದಾರೆ.