Asianet Suvarna News Asianet Suvarna News

ಸರ್ಕಾರಿ ಭೂಮಿ ಕೊಡಿಸೋದಾಗಿ ನಂಬಿಸಿ ಕೋಟಿ ಕೋಟಿ ವಂಚನೆ

ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಾಗುವ ವಂಚನೆಗಳು ಒಂದೆರಡಲ್ಲ. ನಕಲಿ ಡಾಕ್ಯುಮೆಂಟ್ಸ್ ನೀಡುವುದು ಸೇರಿ ತಮಗೆ ಸಂಬಂಧವೇ ಇಲ್ಲದ ಭೂಮಿಯನ್ನೂ ಮಾರಿ ಹಣಪಡೆಯುವವರಿದ್ದಾರೆ. ಕೊಂಡುಕೊಂಡವರು ಮೋಸ ಹೋದರೆಂದೇ ಅರ್ಥ. ಶಾಲೆ ಕಟ್ಟೋಕೆ ಜಾಗ ಕೊಡಿಸ್ತೀವಿ ಎಂದು ಹೇಳಿ ಕೋಟಿ ಕೋಟಿ ಪಡೆದು ವಂಚಿಸಿರೋ ಘಟಬೆ ಬೆಂಗಳೂರಿನಲ್ಲಿ ನಡೆದಿದೆ.

man takes crores from woman assuring to provide land
Author
Bangalore, First Published Nov 2, 2019, 11:04 AM IST

ದಾವಣಗೆರೆ(ನ.02): ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಾಗುವ ವಂಚನೆಗಳು ಒಂದೆರಡಲ್ಲ. ನಕಲಿ ಡಾಕ್ಯುಮೆಂಟ್ಸ್ ನೀಡುವುದು ಸೇರಿ ತಮಗೆ ಸಂಬಂಧವೇ ಇಲ್ಲದ ಭೂಮಿಯನ್ನೂ ಮಾರಿ ಹಣಪಡೆಯುವವರಿದ್ದಾರೆ. ಕೊಂಡುಕೊಂಡವರು ಮೋಸ ಹೋದರೆಂದೇ ಅರ್ಥ. ಶಾಲೆ ಕಟ್ಟೋಕೆ ಜಾಗ ಕೊಡಿಸ್ತೀವಿ ಎಂದು ಹೇಳಿ ಕೋಟಿ ಕೋಟಿ ಪಡೆದು ವಂಚಿಸಿರೋ ಘಟಬೆ ಬೆಂಗಳೂರಿನಲ್ಲಿ ನಡೆದಿದೆ.

ಆಂಧ್ರಪ್ರದೇಶದ ನಲ್ಲೂರು, ಬೆಂಗಳೂರಿನ ನೆಲಮಂಗಲ ಹಾಗೂ ನಾಗರಭಾವಿಯಲ್ಲಿ ಶಾಲೆ ನಿರ್ಮಿಸಲು ಕಡಿಮೆ ಬೆಲೆಗೆ ಸರ್ಕಾರಿ ಜಾಗ ಕಡಿಮೆ ಬೆಲೆಗೆ ಕೊಡಿಸುವುದಾಗಿ ಬೆಂಗಳೂರು ಮೂಲದ ನಾಲ್ವರು ₹2.12 ಕೋಟಿ ರು. ಪಡೆದು ವಂಚಿಸಿರುವುದಾಗಿ ನಗರದ ವಿಶ್ವಚೇತನ ವಿದ್ಯಾಸಂಸ್ಥೆ ಅಧ್ಯಕ್ಷೆ ಡಾ.ವಿಜಯಲಕ್ಷ್ಮೀ ವೀರಮಾಚಿನೇನಿ ಪೊಲೀಸರಿಗೆ ದೂರು ನೀಡಿದ್ದಾರೆ.

ವೈದ್ಯ ದಂಪತಿ ವಿರುದ್ಧ ಮಾಜಿ ಶಾಸಕರ ಪತ್ನಿ ದೂರು..!

ಬೆಂಗಳೂರಿನ ವಿಜಯ ನಾಯ್ಡು, ದಿನೇಶ್, ದಿಲೀಪ್ ಹಾಗೂ ಸ್ಟ್ಯಾನ್ಲಿ ವಂಚಿಸಿರುವ ಆರೋಪಿಗಳು. ಬೆಂಗಳೂರಿನ ನೆಲಮಂಗಲ ಹಾಗೂ ಆಂಧ್ರಪ್ರದೇಶದ ನಲ್ಲೂರಿನಲ್ಲಿ ಸರ್ಕಾರಕ್ಕೆ ಸೇರಿದ ಖಾಲಿ ನಿವೇಶನಗಳನ್ನು ಶಾಲೆ ಕಟ್ಟಲು ಕಡಿಮೆ ಬೆಲೆಗೆ ಕೊಡಿಸುವುದಾಗಿ 2.12 ಕೋಟಿ ರು. ಪಡೆದ ನಾಲ್ವರೂ ಜಾಗವನ್ನೂ ಕೊಡಿಸದೆ, ಹಣವನ್ನೂ ಮರಳಿಸದೇ ತಮಗೆ ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಕೋಟ್ಯಂತರ ವಂಚನೆ: ಕಣ್ವ ಗ್ರೂಪ್ ಎಂಡಿ ಸೆರೆ.

Follow Us:
Download App:
  • android
  • ios