Asianet Suvarna News Asianet Suvarna News

LPG ಬೆಲೆ ಏರಿಕೆ ಬಿಸಿ: ದರ ಎಷ್ಟು?

ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್ 1.49 ರೂ. ಹೆಚ್ಚಳವಾಗಿದೆ. ಇಂದು ಮಧ್ಯರಾತ್ರಿಯಿಂದ ಹೊಸ ದರ ಜಾರಿಯಾಗಲಿದ್ದು, ಸಬ್ಸಿಡಿ ರಹಿತ ಸಿಲಿಂಡರ್‌ ಮೇಲೆ ರೂ. 30.50 ಏರಿಕೆ ಮಾಡಲಾಗಿದೆ. 

ಬೆಂಗಳೂರು(ಸೆ.1): ಸಬ್ಸಿಡಿಯಲ್ಲಿ ನೀಡುವ ಅಡುಗೆ ಅನಿಲ ದರ ಪ್ರತಿ ಸಿಲಿಂಡರ್ 1.49 ರೂ. ಹೆಚ್ಚಳವಾಗಿದೆ. ಇಂದು ಮಧ್ಯರಾತ್ರಿಯಿಂದ ಹೊಸ ದರ ಜಾರಿಯಾಗಲಿದ್ದು, ಸಬ್ಸಿಡಿ ರಹಿತ ಸಿಲಿಂಡರ್‌ ಮೇಲೆ ರೂ. 30.50 ಏರಿಕೆ ಮಾಡಲಾಗಿದೆ. 

ಸದ್ಯ ಪ್ರತಿ ಸಿಲಿಂಡರ್ ಬೆಲೆ ರೂ. 820 ಇದ್ದು, ಆಗಸ್ಟ್ ನಲ್ಲಿ ಇದರ ಬೆಲೆ ರೂ. 789.5 ಇತ್ತು. ಸೆಪ್ಟೆಂಬರ್‌ ತಿಂಗಳಲ್ಲಿ ಪ್ರತಿ ಸಿಲಿಂಡರ್ ಗೆ ರೂ. 320.49 ಸಬ್ಸಿಡಿ ನೀಡಲಾಗುತ್ತದೆ. ದೇಶದ ಪ್ರತಿ ಕುಟುಂಬ ವರ್ಷಕ್ಕೆ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಪಡೆಯಬಹುದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories