ರಾಜ್ಯದ ರೈತರಿಗೆ ಸಿಹಿ ಸುದ್ದಿ: ಈ ತಿಂಗಳಾಂತ್ಯಕ್ಕೆ ಉತ್ತಮ ಮಳೆ?
ಮುಂಗಾರು ಕೈಕೊಟ್ಟಾಗ ಹಿಂಗಾರು ಕೈಹಿಡಿಯುತ್ತದೆ ಎಂದು ಭವಿಷ್ಯ, ಎಲ್‌ನಿನೋ ದುರ್ಬಲವಾಗಿದೆ, ಮಳೆ ಮಾರುತಗಳು ಪ್ರಬಲವಾಗುತ್ತಿವೆ: ಹವಾಮಾನ ತಜ್ಞರು
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಸೆ.17): ಮುಂಗಾರು ಮಳೆಯಿಂದ ತತ್ತರಿಸಿರುವ ರಾಜ್ಯದ ರೈತಾಪಿಗಳಿಗೆ ಶುಭ ಸುದ್ದಿ ನೀಡಿರುವ ಹವಾಮಾನ ಇಲಾಖೆ ತಜ್ಞರು, ಸೆಪ್ಟೆಂಬರ್ ಕೊನೆಯ ವಾರ ಹಾಗೂ ಹಿಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.
ರಾಜ್ಯ ಸೇರಿದಂತೆ ಭಾರತವು ಮುಂಗಾರು ಅವಧಿಯ ಮಳೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಆದರೆ, ಈ ಬಾರಿ ಮುಂಗಾರು ಕೈಕೊಟ್ಟಿರುವುದರಿಂದ ಹಿಂಗಾರು ಮಳೆ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಆ ನಿರೀಕ್ಷೆಯಂತೆ ಈ ಬಾರಿ ಹಿಂಗಾರು ಅವಧಿಯಲ್ಲಿ ವಾಡಿಕೆ ಮಳೆ ಅಥವಾ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್‌ನಿಂದ ಡಿಸೆಂಬರ್‌ನ ಹಿಂಗಾರು ಅವಧಿಯಲ್ಲಿ ಸಾಮಾನ್ಯವಾಗಿ 18.2 ಸೆಂ.ಮೀ ವಾಡಿಕೆ ಮಳೆಯಾಗುತ್ತದೆ.
ಇನ್ನು ಕಳೆದ 50 ವರ್ಷದಲ್ಲಿ ಮುಂಗಾರು ಮಳೆ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊರತೆ ಉಂಟಾದ ಸಂದರ್ಭದಲ್ಲಿ ಬಹುತೇಕವಾಗಿ ಹಿಂಗಾರು ಅವಧಿಯಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.
ತೀವ್ರ ಮಳೆ ಕೊರತೆ: ಕರ್ನಾಟಕದ 195 ತಾಲೂಕುಗಳಲ್ಲಿ ಬರ, ಘೋಷಣೆಗೆ ಶಿಫಾರಸು
1972ರಲ್ಲಿ ಮುಂಗಾರು ಅವಧಿಯಲ್ಲಿ ಶೇ.23ರಷ್ಟು ಮಳೆ ಕೊರತೆ ಉಂಟಾಗಿತ್ತು. ಹಿಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಿ ಶೇ.7ರಷ್ಟು ಮಾತ್ರ ಕೊರತೆ ಆಗಿತ್ತು. 1987ರಲ್ಲಿ ಶೇ.23ರಷ್ಟು ಮಳೆ ಕೊರತೆ ಉಂಟಾಗಿತ್ತು. ಹಿಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.59ರಷ್ಟು ಹೆಚ್ಚಿನ ಮಳೆಯಾಗಿತ್ತು. ಹೀಗೆ, 2001, 2002, 2015ರಲ್ಲಿ ಹಿಂಗಾರು ಮಳೆ ಕೈ ಹಿಡಿದಿತ್ತು ಎಂಬುದನ್ನು ಗಮನಿಸಬಹುದಾಗಿದೆ.
ಉತ್ತಮ ಹಿಂಗಾರಿಗೆ ತಜ್ಞರ ಹೇಳುವ ಕಾರಣಗಳಿವು:
ಪ್ರಸಕ್ತ ವರ್ಷವು ಎಲ್ ನಿನೋ ವರ್ಷವಾಗಿದೆ. ಆದರೆ, ಇದೀಗ ಎಲ್ ನಿನೋ ದುರ್ಬಲವಾಗುತ್ತಿದೆ. ಹೀಗಾಗಿ, ಮಳೆಯ ಮಾರುತಗಳು ಬಲವಾಗುತ್ತಿವೆ. ಜತೆಗೆ, ಇಂಡಿಯನ್ ಓಷನ್ ಡೈಪೋಲ್‌ನ ಲಕ್ಷಣಗಳು ಉತ್ತಮವಾಗಿ ಕಾಣುತ್ತಿವೆ. ಹೀಗಾಗಿ, ಹಿಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಪ್ರಸಾದ್ "ಕನ್ನಡಪ್ರಭ"ಕ್ಕೆ ತಿಳಿಸಿದ್ದಾರೆ.
ಇದಲ್ಲದೆ, ಸೆಪ್ಟೆಂಬರ್ ಕೊನೆಯ ವಾರ ಅಂದರೆ, ಸೆ.21-22ರಿಂದ ಸುಮಾರು 10 ದಿನ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರಿಂದ ಮುಂಗಾರು ಅವಧಿಯಲ್ಲಿ ಉಂಟಾಗಿರುವ ಶೇ.25ರಷ್ಟು ಮಳೆ ಕೊರತೆ ಪ್ರಮಾಣ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ ಎಂಬ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆ ಬಾಡಿ ಬೆಂಡಾಗಿವೆ. ರೈತರು ಸಾಲದ ಸುಳಿಗೆ ಸಿಲುಕಿದ ಸಂಕಷ್ಟ ಒಂದು ಕಡೆಯಾದರೆ, ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಲಾಶಯಗಳಲ್ಲಿನ ನೀರಿನ ಕೊರತೆಯಿಂದ ನೆರೆಯ ರಾಜ್ಯಗಳೊಂದಿಗೆ ನೀರು ಹಂಚಿಕೆ ಸಂಘರ್ಷ ಸೃಷ್ಟಿಯಾಗುತ್ತಿದೆ. ಮಳೆ ಕೊರತೆಯಿಂದ ರಾಜ್ಯದ ಜಲ ವಿದ್ಯುತ್ ಉತ್ಪಾದನಾ ಘಟಕದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಹೀಗೆ ಸಾಲು ಸಾಲು ಸಮಸ್ಯೆಗಳು ಉದ್ಭವಿಸುತ್ತಿವೆ. ಈ ಎಲ್ಲ ಸಮಸ್ಯೆಗಳಿಗೆ ಮಳೆ ಒಂದೇ ಪರಿಹಾರವಾಗಿದ್ದು, ಹವಾಮಾನ ತಜ್ಞರು ಇದೀಗ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಶುಭ ಸುದ್ದಿ ನೀಡಿದ್ದಾರೆ.
ಮುಂಗಾರು ಹೊಡೆತ: ಕರ್ನಾಟಕದಲ್ಲಿ ಬಿತ್ತನೆ ಭಾರೀ ಕುಸಿತ
53 ವರ್ಷದಲ್ಲಿ 2ನೇ ಅತಿ ದೊಡ್ಡ ಮಳೆ ಕೊರತೆ
ಕರ್ನಾಟಕ ರಾಜ್ಯ ನಿಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳ ಪ್ರಕಾರ 1971ರಿಂದ 2023ರ ಅವಧಿಯಲ್ಲಿ 2002ರಲ್ಲಿ ಉಂಟಾಗದ ಶೇ.28ರಷ್ಟು ಮಳೆ ಕೊರತೆ ಉಂಟಾಗಿತ್ತು. ಆ ಬಳಿಕ ಈ ಬಾರಿಗೆ ಶೇ.25ರಷ್ಟು ಮುಂಗಾರು ಮಳೆ ಕೊರತೆ ಉಂಟಾಗಿದೆ. ಇದು ಕಳೆದ 53 ವರ್ಷದಲ್ಲಿ ರಾಜ್ಯ ಎದುರಿಸಿದ ಅತಿ ಹೆಚ್ಚಿನ ಪ್ರಮಾಣದ ಮಳೆ ಕೊರತೆಯಾಗಿದೆ.
ಮುಂಗಾರು ಕೈಕೊಟ್ಟಾಗ ಹಿಂಗಾರು ಕೈ ಹಿಡಿದ ವರ್ಷಗಳು
ಮುಂಗಾರು ಮಳೆ ಕೊರತೆ
ಹಿಂಗಾರು ಮಳೆ ಪ್ರಮಾಣ
197.
ಶೇ.23.
ಶೇ.7ರಷ್ಟು ಮಾತ್ರ ಕೊರತೆ
198.
ಶೇ.23.
ಶೇ.59ರಷ್ಟು ಹೆಚ್ಚಿನ ಮಳೆ
200.
ಶೇ.2.
ಶೇ.7ರಷ್ಟು ಮಾತ್ರ ಮಳೆ ಕೊರತೆ
200.
ಶೇ.28.
ಶೇ.5ರಷ್ಟು ಹೆಚ್ಚಿನ ಮಳೆ 201
ಶೇ.24.
ಶೇ.2ರಷ್ಟು ಮಾತ್ರ ಮಳೆ ಕೊರತೆ
ರಾಜ್ಯದ ವಾರ್ಷಿಕ ಮಳೆ ವಿವರ
ವಾಡಿಕೆ ಮಳೆ ಪ್ರಮಾಣ
ಪೂರ್ವ ಮುಂಗಾರ.
ಜನವರಿ-
11.6 ಸೆಂ..ಮೀ
ಮುಂಗಾರ.
ಜೂನ್-ಸೆಪ್ಟೆಂಬರ್.
85.2 ಸೆಂ.ಮೀ
ಹಿಂಗಾರ.
ಆಕ್ಟೋಬರ್- ಡಿಸೆಂಬರ್.
18.2 ಸೆಂ.ಮೀ