Asianet Suvarna News Asianet Suvarna News

NRC ಜಾರಿ: ದಾಖಲೆ ಸಂಗ್ರಹಕ್ಕೆ ಮುಂದಾದ ರಾಜ್ಯ ವಕ್ಫ್ ಬೋರ್ಡ್!

ರಾಜ್ಯದಲ್ಲೂ ಶೀಘ್ರ NRC ಜಾರಿ ಹಿನ್ನೆಲೆ| ಅಲ್ಪಸಂಖ್ಯಾತ ಕುಟುಂಬದ ಪೌರತ್ವ ದಾಖಲಾತಿ ಸಂಗ್ರಹಕ್ಕೆ ಮುಂದಾದ ರಾಜ್ಯ ವಕ್ಫ್ ಬೋರ್ಡ್| ರಾಜ್ಯದ ಎಲ್ಲಾ ಮಸೀದಿ ಹಾಗೂ ಮದರಸಾಗಳಿಗೆ ವಕ್ಫ್ ಬೋರ್ಡ್ ಸೂಚನೆ| ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ| 2021ರ ಜನಗಣತಿಗೂ ಮೊದಲೇ ದಾಖಲೆ ಸಂಗ್ರಹಕ್ಕೆ ಮುಂದಾದ ರಾಜ್ಯ ವಕ್ಫ್ ಬೋರ್ಡ್|

Karnataka Waqf Board To Collect Data Before NRC
Author
Bengaluru, First Published Dec 14, 2019, 8:30 PM IST

ಬೆಂಗಳೂರು(ಡಿ.14): ದೇಶಾದ್ಯಂತ NRC ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ, ಮುಸ್ಲಿಂ ಕುಟುಂಬಗಳ ದಾಖಲೆಗಳನ್ನು ಸಂಗ್ರಹಿಸಲು ರಾಜ್ಯ ವಕ್ಫ್ ಬೋರ್ಡ್ ನಿರ್ಧರಿಸಿದೆ.

NRC ಜಾರಿಯಿಂದ ಪೌರತ್ವ ಸಾಬೀತುಪಡಿಸುವ ಅನಿವಾರ್ಯತೆ ಎದುರಾಗಲಿದ್ದು, ಈ ಸಂಕಷ್ಟದಿಂದ ಪಾರಾಗಲು ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಗಹಿಸುವಂತೆ ರಾಜ್ಯದ ಎಲ್ಲಾ ಮಸೀದಿ ಹಾಗೂ ಮದರಸಾಗಳಿಗೆ ವಕ್ಫ್ ಬೋರ್ಡ್ ಸೂಚನೆ ನೀಡಿದೆ.

ಭಾರತದಲ್ಲಿರುವ ಅಕ್ರಮ ವಲಸಿಗರನ್ನು ಹೊರಹಾಕಲು 2024 ಡೆಡ್‌ಲೈನ್; ಎನ್‌ಆರ್‌ಸಿ ಜಾರಿ ಹೇಗೆ?

2021ರಲ್ಲಿ ದೇಶದಲ್ಲಿ ಜನಗಣತಿ ನಡೆಯಲಿದ್ದು, ಅದಕ್ಕೂ ಮುನ್ನ ಮನೆಗಳ ಹಾಗೂ ಜನಸಂಖ್ಯೆಯ ಎಣಿಕೆ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಲಿವೆ.

ಈ ವೇಳೆ ಪೌರತ್ವ ದಾಖಲೆಗಳನ್ನು ಸಂಗ್ರಹಿಸಬೇಕಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳ ವಕ್ಫ್ ಅಧಿಕಾರಿಗಳು, ಮಸೀದಿಗಳ ಆಡಳಿತ ಸಮಿತಿಯ ಅಧ್ಯಕ್ಷರಿಗೆ ಮುಸ್ಲಿಂ ಕುಟುಂಬಗಳ ದಾಖಲೆಗಳನ್ನು ಸಂಗ್ರಹಿಸುವಂತೆ ವಕ್ಫ್ ಬೋರ್ಡ್ ಸೂಚಿಸಿದೆ.

2024ರೊಳಗೆ ಅಕ್ರಮ ವಿದೇಶಿ ವಲಸಿಗರನ್ನು ಹೊರಗಟ್ಟುತ್ತೇವೆ

ಮಸೀದಿಗಳ ವ್ಯಾಪ್ತಿಯಲ್ಲಿರುವ ಅಲ್ಪಸಂಖ್ಯಾತ ಕುಟುಂಬಗಳ ದಾಖಲಾತಿಗಳನ್ನು ಸಂಗ್ರಹಿಸುವ ಕುರಿತು ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ಮಾಡಲಾಗುವುದು ಎಂದು ವಕ್ಫ್ ಬೋರ್ಡ್ ಹೇಳಿದೆ.

ಶುಕ್ರವಾರದ ಪ್ರಾರ್ಥನೆ ವೇಳೆ ಹೆಚ್ಚು ಜನರು ಸೇರುವ ಹಿನ್ನೆಲೆಯಲ್ಲಿ, ಪೌರತ್ವ ದಾಖಲೆಗಳ ಮಹತ್ವದ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದು ವಕ್ಫ್ ಬೋರ್ಡ್ ಸ್ಪಷ್ಟಪಡಿಸಿದೆ.

ರಾಜ್ಯ ಅಕ್ರಮ ಬಾಂಗ್ಲನ್ನರ ಸಾಮ್ರಾಜ್ಯ!

Follow Us:
Download App:
  • android
  • ios