Karnataka News Updates: ಈದ್ಗಾ ಮೈದಾನ ವಿವಾದ, ನಾಳೆ ಸಭೆ

Kannada News live updates news from various district of karnataka including crime politcs news

ಈದ್ಗಾ ಮೈದಾನ ವಿಚಾರ ಚಾಮರಾಜಪೇಟೆ ಠಾಣೆಯಲ್ಲಿ ನಡೆಯಲಿದೆ ಶಾಂತಿ ಸಭೆ ಶಾಂತಿ ಸಭೆಯಲ್ಲಿ ಬೇಡಿಕೆ ಇಡಲಿರುವ ಚಾಮರಾಜಪೇಟೆ ನಾಗರಿಕ ಒಕ್ಕೂಟ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶೋತ್ಸವ ‌ಆಚರಣೆಗೆ ಅವಕಾಶ ಕೊಡುವಂತೆ ಶಾಂತಿ ಸಭೆಯಲ್ಲಿ ಪೊಲೀಸರಿಗೆ ಮನವಿ ಮಾಡಲಿರುವ ಒಕ್ಕೂಟ. ಒಕ್ಕೂಟದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತೇವೆ. ರಾಜಕೀಯವಾಗಿ ಆಚರಣೆ ಬೇಡ. ನಾವೇ ಒಕ್ಕೂಟದಿ‌ಂದ ಆಚರಣೆ ಮಾಡುತ್ತೇವೆ. ಸಮಸ್ತ ಚಾಮರಾಜಪೇಟೆಯ ಜನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಕೆಲವರನ್ನು ಈದ್ಗಾ ಮೈದಾನಕ್ಕೆ ಕರೆಯಿಸಿ ಸ್ವಾತಂತ್ರ್ಯೋತ್ಸವ ವನ್ನು ವಿಭಿನ್ನವಾಗಿ ಆಚರಿಸುತ್ತೇವೆ. ಗಣೇಶ ಹಬ್ಬಕ್ಕೆ ಅವಕಾಶ ಕೊಡಬೇಕು. ಪೊಲೀಸ್ ಇಲಾಖೆ ಎಲ್ಲದ್ದಕ್ಕೂ ಕ್ಲಿಯರೆನ್ಸ್ ಕೊಡಬೇಕು. ಸಚಿವರ ಹೇಳಿಕೆ ಬೆನ್ನಲ್ಲೆ ಇಂದು ಶಾಂತಿ ಸಭೆಯಲ್ಲಿ ಇದನ್ನೇ ಪ್ರಸ್ತಾಪ ಮಾಡಲಿದೆ ಒಕ್ಕೂಟ. ಯಾವುದೇ ಗದ್ದಲ ಗಲಾಟೆ ಇಲ್ಲದಂತೆ ನಾವು ಗಣೇಶ ಹಬ್ಬ ಆಚರಿಸುತ್ತೇವೆ ಎಂಬ ಭರವಸೆ ನೀಡಿದೆ ಒಕ್ಕೂಟ.

4:19 PM IST

ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ,ಓರ್ವ ಬೈಕ್ ಸವಾರನಿಗೆ ಗಾಯ

ಕೋಲಾರ: ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ,ಓರ್ವ ಬೈಕ್ ಸವಾರನಿಗೆ ಗಾಯ. ಸಂಸದ ಮುನಿಸ್ವಾಮಿ ಚಲಿಸುತ್ತಿದ್ದ ಕಾರಿನ ಮುಂಭಾಗ ಘಟನೆ. ಬೈಕ್ ಸವಾರನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಸಂಸದ ಮುನಿಸ್ವಾಮಿ. ಕೋಲಾರದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದ ಅಫಘಾತ. ಅಫಘಾತದಲ್ಲಿ ಗಾಯಗೊಂಡದವರನ್ನು ಉಪಚರಿಸಿ ತಮ್ಮ ಕಾರಿನಲ್ಲೇ ಗಾಯಾಳುವನ್ನ ಕರೆದೊಯ್ದು ಆಸ್ಪತ್ರೆಗೆ ದಾಖಲು. ಕೋಲಾರದ ಜಿಲ್ಲಾಸ್ಪತ್ರೆಗೆ ಗಾಯಾಳನ್ನು ದಾಖಲಿಸಿದ ಸಂಸದರು.

3:33 PM IST

Chikkamagaluru: ನೀರಿನಲ್ಲಿ ಕಾರು ಸಮೇತ ಕೊಚ್ಚಿ ಹೋಗಿ ವ್ಯಕ್ತಿ ಸಾವು

ಚಿಕ್ಕಮಗಳೂರು: ನೀರಿನಲ್ಲಿ ಕಾರು ಸಮೇತ ಕೊಚ್ಚಿ ಹೋಗಿ ವ್ಯಕ್ತಿ ಸಾವು. ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಸಾತ್ಕೊಳಿ ಬಳಿ ಘಟನೆ. ಶೆಟ್ಟಿಕೊಪ್ಪ ನಿವಾಸಿ ಪ್ರಸನ್ನ (50) ಮೃತ ದುರ್ದೈವಿ. ನಿನ್ನೆ ರಾತ್ರಿ ಮನೆಗೆ ತೆರಳುವ ವೇಳೆ ನಡೆದಿರುವ ಅವಘಡ. ರಸ್ತೆ ಮೇಲೆ ನೀರು ಹರಿಯುತ್ತಿರುವುದನ್ನು ಗಮನಿಸದೇ ಕಾರು ಚಲಾಯಿಸಿದ ವ್ಯಕ್ತಿ.ನಿನ್ನೆಯಿಂದಲೂ ಪ್ರಸನ್ನರಿಗಾಗಿ ಹುಡುಕಾಟ ನಡೆಸುತ್ತಿದ್ದ ಕುಟುಂಬಸ್ಥರು.ಇಂದು ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಪತ್ತೆಯಾದ ಮೃತದೇಹ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗೆ ಇದು 3 ನೇ ಬಲಿ.

3:31 PM IST

ರಿಚ್ಮಂಡ್ ಸರ್ಕಲ್ ಬಳಿ ಅನುಮಾನಾಸ್ಪದ ವಸ್ತು ಪತ್ತೆ: ಬಿಗುವಿನ ವಾತಾವರಣ

ಬೆಂಗಳೂರಿನ ರಿಚ್ಮಂಡ್ ಸರ್ಕಲ್ (Richmond Circle) ಬಳಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಅನುಮಾನಾಸ್ಪದ ವಸ್ತು ಪತ್ತೆಯಾದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅನುಮಾನಾಸ್ಪದ ಬ್ಯಾಗ್ ಕಂಡು ಪೊಲೀಸರಿಗೆ ಅಪರಿಚಿತ ವ್ಯಕ್ತಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಹೋಗಿ ಪೊಲೀಸರು ಪರಿಶೀಲನೆ  ನಡೆಸಿದ್ದಾರೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2:40 PM IST

4 ಅಂತರ್ ರಾಜ್ಯ ಕಳ್ಳರನ್ನ ಬಂಧನ

ಚಿತ್ರದುರ್ಗ: ಚಿಕ್ಕಜಾಜೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. 4 ಮಂದಿ ಅಂತರ್ ರಾಜ್ಯ ಕಳ್ಳರನ್ನ ಬಂಧನ, 9.5 ಲಕ್ಷ ಚಿನ್ನಾಭರಣ ವಶ. ಪುರುಷೋತ್ತಮ್ ನಾಯ್ಕ್ (19), ಜೀವನ್, (19) ಸಚೀನ್ (22), ಪುನೀತ್ ನಾಯ್ಕ್ (22) ಬಂಧಿತರು. ಬಂಧಿತರು ದಾವಣಗೆರೆ ಜಿಲ್ಲೆಯ ನಾಗರಕಟ್ಟೆ ನಿವಾಸಿಗಳು. ಬಂಧಿತರಿಂದ 9.5 ಲಕ್ಷ ಮೌಲ್ಯದ 188 ಗ್ರಾಂ ಚಿನ್ನಾಭರಣ ವಶ. ಹೊಳಲ್ಕೆರೆ ಸಿಪಿಐ ರವೀಶ್ ಹಾಗೂ ಪಿಎಸ್ಐ ಬಾಹುಬಲಿ ನೇತೃತ್ವದಲ್ಲಿ ಕಾರ್ಯಾಚರಣೆ. ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

1:08 PM IST

Chikkodi: ಗೋಡೆ ಕುಸಿದು ನಾಲ್ವರಿಗೆ ಗಂಭೀರ ಗಾಯ

ಚಿಕ್ಕೋಡಿ: ಪೂಜೆ ಮಾಡುವಾಗ ಗೋಡೆ ಕುಸಿದು ನಾಲ್ವರಿಗೆ ಗಂಭೀರ ಗಾಯ. ನಿರಂತರ ಮಳೆಗೆ ನೆನೆದಿದ್ದ ಗೋಡೆ ಕುಸಿದು ಅವಘಡ. ಮೊಹರಂ ನಿಮಿತ್ಯ ಕುಂಡಲಿ ಪೂಜೆಯಲ್ಲಿ ತೊಡಗಿದ್ದ ಜನರು. ಈ ವೇಳೆ ಗೋಡೆ ಬಿದ್ದು ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಬೆಳಗಾವಿ ಜಿಲ್ಲೆಯ ರಾಯಭಾಗ ಸೌಂದತ್ತಿವಾಡಿ ಗ್ರಾಮದಲ್ಲಿ ನಡೆದ ಘಟನೆ. ಗ್ರಾಮದ ಮಂಗಲ ಹಿರೇಗೌಡ, ಶ್ರೀದೇವಿ ತಂಗಡೆ, ಸೇರಿ ನಾಲ್ವರಿಗೆ ಗಂಭೀರಗಳಾಗಿವೆ. ಕೂಡಲೇ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಅವಘಡಗಳು.

1:07 PM IST

ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರು ಮಂದಿ ಸೆರೆ

ಶೇಷಾದ್ರಿಪುರಂ ಪೊಲೀಸರ ಕಾರ್ಯಚರಣೆ. ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರು ಮಂದಿ ಆರೋಪಿಗಳ ಬಂಧನ. ನಬೀರ್ ಪಾಷ, ಸಲ್ಮಾನ್ ಪಾಷ, ನವಾಜ್ ಪಾಷ, ಸೈಯದ್, ನಯಾಜ್ ಬಂಧಿತ ಆರೋಪಿಗಳು. ಬೆಳಗಿನ ಜಾವ ಓಡಾಡುವವರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳು. ಬಂಧಿತರಿಂದ 80 ಸಾವಿರ ಬೆಲೆಬಾಳುವ 13 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

12:38 PM IST

ಮಾಲೀಕನ ಗಮನಕ್ಕೆ ಬಾರದಂತೆ ಜ್ಯುವೆಲರಿ ಶಾಪ್ ಕೊಳ್ಳೆ ಹೊಡೆಯುತಿದ್ದ ಗ್ಯಾಂಗ್ ಬಂಧನ

ಮಾಲೀಕನ ಗಮನಕ್ಕೆ ಬಾರದಂತೆ ಜ್ಯುವೆಲರಿ ಶಾಪ್ ಕೊಳ್ಳೆ ಹೊಡೆಯುತಿದ್ದ ಗ್ಯಾಂಗ್ ಬಂಧನ. ನಾಗರಾಜು, ರವಿ, ಮಹದೇವ್ ಬಂಧಿತರು. ಹಲಸೂರು ಗೇಟ್ ನ ಬಿಎಸ್ ಜ್ಯುವೆಲರ್ಸ್ ನಲ್ಲಿ ಕೆಲಸಕ್ಕಿದ್ದ ಆರೋಪಿಗಳು. ಮಾಲೀಕನ ಗಮನಕ್ಕೆ ಬಾರದ ರೀತಿ ಹಂತ ಹಂತವಾಗಿ ಬೆಳ್ಳಿ ಕದಿಯುತಿದ್ದ ಆರೋಪಿಗಳು. ಒಂದೂವರೆ ವರ್ಷದಲ್ಲಿ 41 ಕೆಜಿ ಬೆಳ್ಳಿ ಎಗರಿಸಿದ್ದ ಗ್ಯಾಂಗ್. ಜೊತೆಗೆ ಚಿನ್ನ ಹಾಗೂ ನಗದು ಸಹ ಕದಿಯುತಿದ್ದ ಆರೋಪಿಗಳು. ಒಮ್ಮೆ ಬಿಸ್ಕೆಟ್ ನಾಪತ್ತೆ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಕೃತ್ಯ ಬಯಲು. ಹಲಸೂರು ಗೇಟ್ ಪೊಲೀಸ್ ಠಾಣೆಗೆ ಮಾಲೀಕ ದೂರು. ದೂರು ಸಂಬಂಧ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ 7.5 ಲಕ್ಷ ರೂ. ಮೌಲ್ಯದ 41 ಕೆಜಿ ಬೆಳ್ಳಿ, 150 ಗ್ರಾಂ ಚಿನ್ನ, 4 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

12:20 PM IST

ಖಾದಿ ಬದಲು ಪಾಲಿಸ್ಟರ್ ಧ್ವಜ ಬಳಕೆ: ದೇಶಕ್ಕೆ ಮಾಡಿದ ಅವಮಾನ

ಮಂಗಳೂರಿನಲ್ಲಿ ವಿಪಕ್ಷ ನಾಯಕ ಯು.ಟಿ.ಖಾದರ್ ಹೇಳಿಕೆ, ಭಾರತದ ರಾಷ್ಟ್ರಧ್ವಜಕ್ಕೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಬಳಕೆ ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ. ರಾಷ್ಟ್ರಧ್ವಜ ಖಾಲಿ ಬಟ್ಟೆಯಲ್ಲ, ಖಾದಿ ಈ ದೇಶದ ತಾಯಿ ಬೇರು. ವಿದೇಶದಿಂದ ಪಾಲಿಸ್ಟರ್ ತಂದು ಗುಡ್ಡೆ ಹಾಕುವುದು ಸರಿಯಲ್ಲ. ಖಾದಿ ನೇಯುವ ಚರಕ ಖಾಲಿ ಚಿಹ್ನೆಯಲ್ಲ, ಅದು ರಾಜಾಡಳಿತ ಕಿತ್ತೆಸೆದ ಸಂಕೇತ. ಈ ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ಖಾದಿಗೆ ಪ್ರೋತ್ಸಾಹ ಕೂಡುವ ಪದ್ದತಿ ಇತ್ತು. ಖಾದಿ ತೊಡುವ ಸಂದೇಶವನ್ನ ಕೇಂದ್ರ ಸರ್ಕಾರ ಇಡೀ ವಿಶ್ವಕ್ಕೆ ಕೊಡಬೇಕಿತ್ತು. ಖಾದಿಯಲ್ಲಿ ಈ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸಂಕೇತವಿದೆ. ನಾವು ಮಾತಿನಲ್ಲಿ ಸ್ವದೇಶಿ, ಕೆಲಸದ ಅನುಷ್ಠಾನದಲ್ಲಿ ವಿದೇಶಿ ತಂತ್ರವಿದೆ. ಪಾಲಿಸ್ಟರ್ ವಿದೇಶದಿಂದ ಅಮದಿಗೆ ಅವಕಾಶ ಕೊಡಲಾಗಿದೆ, ಇದರಿಂದ ಚೀನಾಗೆ ಲಾಭ. ಇದು ದೊಡ್ಡ ವ್ಯಾಪಾರಿಗಳು ಮತ್ತು ಗಾರ್ಮೆಂಟ್ ಬ್ಯುಸಿನೆಸ್‌ಗೆ ಲಾಭ. ಸ್ಪಷ್ಟತೆ ಇಲ್ಲದ ಈ ನಿರ್ಧಾರ ಇಡೀ ದೇಶಕ್ಕೆ ಅವಮಾನ. ಕೇಂದ್ರ ಇದನ್ನ ಪುನರ್ ಪರಿಶೀಲಿಸಿ ಖಾದಿಗೆ ಮಹತ್ವ ಕೊಡಲಿ. ಸ್ವಾತಂತ್ರ್ಯದ 75ನೇ ವರ್ಷದ ಹೆಸರಲ್ಲಿ ಹರ್ ಘರ್ ತಿರಂಗ ತೀರ್ಮಾನ ಆಗಿದೆ. ಆದರೆ ಈ ಬಗ್ಗೆ ಸ್ಪಷ್ಟತೆಯ ಒಂದು ಗೈಡ್ ಲೈನ್ ಕೊಡಬೇಕಿದೆ. ಈಗ ಬಂದಿರೋ ಪ್ಲಾಗ್‌ಗಳಲ್ಲೂ ಹಲವಾರು ಸಮಸ್ಯೆ ಇದೆ. ಜೊತೆಗೆ ಹಲವು ರೇಟ್ ಗಳಲ್ಲಿ ಪ್ಲಾಗ್ ಮಾರಾಟ ಆಗ್ತಿದೆ. ಘೋಷಣೆ ಮತ್ತು ಪ್ರಚಾರದ ಮೊದಲು ಸಮರ್ಪಕ ಅನುಷ್ಠಾನ ಆಗಲಿ. ಇನ್ನೂ ಹಲವರಿಗೆ ಮನೆಯೇ ಇಲ್ಲ, ಬಾವುಟ ಹಾರಿಸೋದು ಎಲ್ಲಿ? ಹಾಗಾದ್ರೆ ಮನೆ ಇಲ್ಲದವರು ಇದನ್ನ ಆಚರಣೆ ಮಾಡೋದು ಬೇಡವಾ? ಎಂದು ಪ್ರಶ್ನಿಸಿದ್ದಾರೆ. 

12:17 PM IST

ಧ್ವಜಕ್ಕೆ ಬಿಜೆಪಿ ಅವಮಾನ, ಸಿದ್ದು ಆರೋಪಕ್ಕೆ ಅಶ್ವಥ್ ನಾರಾಯಣ್ ತಿರುಗೇಟು

ಧ್ವಜಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ, ನಾಟಕ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಿದ್ದರಾಮಯ್ಯಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ಯಾರಿಗಾದರೂ ಚೆನ್ನಾಗಿ ನಾಟಕ ಮಾಡೋಕೆ ಬರುತ್ತೆ ಅಂದರೆ ಅದು ಸಿದ್ದರಾಮಯ್ಯ ನವರಿಗೆ ಮಾತ್ರ. ನಾಟಕದ ಅನುಭವವನ್ನು ಅವರು ಬೇರೆಯವರಿಗೆ ಹೇಳಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡೋದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲಿ ತಪ್ಪು ಕಂಡು ಹಿಡಿಯೋದು, ದೋಷ ಎತ್ತಿ ಹಿಡಿಯೋದು ಸರಿಯಲ್ಲ. ಒಳ್ಳೆಯದು ಮಾಡೋಕೆ ಆಗಿಲ್ಲ ಅಂದರೆ ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ. ಒಳ್ಳೆಯದು ಮಾಡೋಕೆ ಯೋಗ್ಯತೆ ಇಲ್ಲ ಅಂದರೆ ಕೆಟ್ಟದ್ದನ್ನು ಹೇಳಬೇಡಿ. ನಿಮ್ಮ ಭಕ್ತಿ ದೇಶದ ಮೇಲೆ ಇದ್ರೆ ತಮ್ಮ ಕರ್ತವ್ಯದ ಮೂಲಕ ಮಾಡಿ. ಅದು ಬಿಟ್ಟು ಇಂತಹ ಢೋಂಗಿ ಹೇಳಿಕೆಗಳನ್ನು ನಿಲ್ಲಿಸಿ ಎಂದು ಸಿಟ್ಟಾದ ಅಶ್ವಥ್ ನಾರಾಯಣ್. 

10:33 AM IST

ರಾಷ್ಟ್ರೀಯ ಕ್ರೀಡಾಪಟು ಕರ್ನಾಟಕ ಕ್ರೀಡಾ ರತ್ನ ವಿನಯ್ ಗೌಡ ವಿಧಿವಶ

ತೀರ್ಥಹಳ್ಳಿ ರಾಷ್ಟ್ರೀಯ ಕ್ರೀಡಾಪಟು ಹೆಗ್ಗಳಿಕೆಯ ಕರ್ನಾಟಕ ಕ್ರೀಡಾ ರತ್ನ ವಿನಯ್ ಗೌಡ ವಿಧಿವಶ.  ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯ ಹೂವಪ್ಪ ಗೌಡರ ಪುತ್ರ. ಕ್ರೀಡಾಪಟು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ವಿಜೇತ ವಿನಯ್ ಗೌಡ ( 35) ಅನಾರೋಗ್ಯದಿಂದ ಉಡುಪಿ ಜಿಲ್ಲೆಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದೆ ದಿಢೀರನೆ ಜ್ವರ ಕಾಣಿಸಿ ಕೊಂಡಿತ್ತು. ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ. ಖೋ, ಖೋ ಪಂದ್ಯದ ಕ್ರೀಡಾಪಟು ಆಗಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದರು. ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ಪಡೆದಿದ್ದರು. ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿದ್ದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:11 AM IST

ಚಿತ್ರದುರ್ಗ: ಕೋಟೆನಾಡಲ್ಲಿ ಗಮನ ಸೆಳೆಯುತ್ತಿರುವ ತ್ರಿವರ್ಣ ಧ್ವಜದ ಲೈಟಿಂಗ್ಸ್

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕೋಟೆನಾಡು ಚಿತ್ರದುರ್ಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದ್ರಲ್ಲಂತೂ ನಗರದಲ್ಲಿರುವ ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ತ್ರಿವರ್ಣ ಧ್ವಜದ ಬಣ್ಣದ ಲೈಟಿಂಗ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ಆ.3ರಿಂದ ಆರಂಭವಾಗಿರುವ ದೀಪಾಲಂಕಾರ ಆ.16 ರ ವರೆಗೆ ನಡೆಯಲಿದೆ. ಮಳೆಯ ಕಾರಣಕ್ಕೆ ಹಾಗಾಗ ವ್ಯತ್ಯಯ ಆಗುತ್ತಿದೆ. ಅದನ್ನು ಹೊರತು ಪಡಿಸಿದ್ರೆ ಸಂಜೆ ಮೇಲೆ ಕೋಟೆಗೆ ಯಾರಿಗೂ ಪ್ರವೇಶ ವಿಲ್ಲದ ಕಾರಣ, ರಾತ್ರಿ ವೇಳೆ ಮಾತ್ರ ದೀಪಾಲಂಕಾರದಿಂದ ಕೋಟೆ ಕಂಗೊಳಿಸುತ್ತದೆ.‌ ಕಲ್ಲಿನ ಕೋಟೆಯ ಮುಂಭಾಗ ಹಾಗೂ ಬತೇರಿಯಲ್ಲಿ ತ್ರಿವರ್ಣ ಧ್ವಜದ ದ್ವೀಪಾಲಂಕಾರವನ್ನು ಎಲ್ಲರೂ ದೂರದಿಂದಲೇ ನೋಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

10:02 AM IST

ಈದ್ಗಾ ಮೈದಾನ: ಮತ್ತೆ ಸಂಧಾನ ಸಭೆಗೆ ಮುಂದಾದ ಪೊಲೀಸ್ ಇಲಾಖೆ

ಮತ್ತೆ ಸಂಧಾನ ಸಭೆಗೆ ಮುಂದಾದ ಪೊಲೀಸ್ ಇಲಾಖೆ. ಈದ್ಗಾ ಮೈದಾನ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸ್ ಇಲಾಖೆ ಯಿಂದ ಶಾಂತಿ ಸಭೆ. ಒಂದು ಕಡೆ ಶಾಸಕ ಜಮೀರ್ ಹೇಳಿಕೆ ಖಂಡಿಸಿ ಹಿಂದು ಸಂಘಟನೆಗಳಿಂದ ಅಕ್ರೋಶ, ಮತ್ತೊಂದು ಕಡೆ ಹಿಂದು ಸಂಘಟನೆಗಳಿಂದ ಗಣೇಶೋತ್ಸವ ಮಾಡುವ ನಿರ್ಧಾರ. ಇವೆರಡರ ನಡುವೆ ಪೆಚ್ಚಿಗೆ ಸಿಲ್ಲುಕ್ಕಿದ ಪೊಲೀಸ್ ಇಲಾಖೆ. ಈ  ಹಿನ್ನೆಲೆಯಲ್ಲಿ ಇಂದು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ. ಇಂದು ಸಂಜೆ 4.30 ಕ್ಕೆ ಶಾಂತಿ ಸಭೆ. ಇಂದಿನ ಸಭೆಗೆ ಮುಸ್ಲಿಂ ಮುಖಂಡರು.. ಕನ್ನಡ ಪರ ಸಂಘಟನೆಗಳು.. ಹಿಂದುಪರ ಸಂಘಟನೆಗಳು.. ಚಾಮರಾಜಪೇಟೆ ನಾಗರಿಕ ವೇದಿಕೆ ಸೇರಿದಂತೆ ಹಲವು ಸಂಘಟನೆಯ ಮುಖಂಡರು ಭಾಗಿ. ಸಭೆ ನೇತೃತ್ವವನ್ನು ಸ್ಥಾಳಿಯ ಎಸಿಪಿ..ಸರ್ಕಲ್ ಇನ್ ಸ್ಪೆಕ್ಟರ್ ವಹಿಸಿದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಸಭೆಯಲ್ಲಿ ಚರ್ಚೆ. ಸೌಹಾರ್ದ ದಿಂದ ಈ ಬಾರಿ ಸ್ವಾತಂತ್ರ ದಿನಚಾರಣೆ ಅಚರಿಸಲು ಶಾಂತಿ ಸಭೆಯಲ್ಲಿ ಚರ್ಚೆ.

9:59 AM IST

ಸಿದ್ದರಾಮೋತ್ಸವಕ್ಕೆ ಪಕ್ಷಾತೀತವಾಗಿ ಸೇರಿದ ಜನರು: ಭೈರತಿ ಬಸವರಾಜು

ದಾವಣಗೆರೆ: ಸಿದ್ದರಾಮೋತ್ಸವದಲ್ಲಿ ಸೇರಿದ್ದ ಜನ ಪಕ್ಷಾತೀತವಾಗಿ ಸೇರಿದ್ದರು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿಕೆ. ದಾವಣಗೆರೆಯಲ್ಲಿ ಮಾತನಾಡಿದ ಬೈರತಿ ಬಸವರಾಜ್, ನಾನು ಮಾಹಿತಿಯನ್ನು ತೆಗೆದುಕೊಂಡಿದ್ದೇನೆ. ಬೇರೆ ಬೇರೆ ಪಕ್ಷದವರೂ ಅಲ್ಲಿದ್ದರು. ಜನರು ಸೇರಿದ ತಕ್ಷಣ ಅವುಗಳೆಲ್ಲಾ ಮತಗಳಾಗಿ ಪರಿವರ್ತನೆ ಆಗಬೇಕಲ್ಲ? ಮೋದಿಯವರು ಬಂದರೂ ಜನರು ಸೇರುತ್ತಾರೆ. ನಮ್ಮದು 11 ಕೋಟಿ ಕಾರ್ಯಕರ್ತರು ಇರುವ ಪಕ್ಷ. ನಾವು ಕಾರ್ಯಕ್ರಮಗಳನ್ನು ಮಾಡಿದಾಗ ನಮ್ಮ ಕಾರ್ಯಕರ್ತರು ಬರುತ್ತಾರೆ. ನಾವು ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿ ಕಾರ್ಯಕ್ರಮ ಮಾಡೋದಿಲ್ಲ. ನಮ್ಮ ಅಭಿವೃದ್ಧಿ ಕೆಲಸಗಳು‌ ಜನರಿಗೆ ನೀಡಿದ ಉತ್ತಮ ಆಡಳಿತ ಕುರಿತಾಗಿ ಕಾರ್ಯಕ್ರಮ ಮಾಡುತ್ತೇವೆ. ಅಮಿತಾ ಷಾ ಮೊನ್ನೆ ಬೆಂಗಳೂರಿಗೆ ಬಂದಿದ್ದು  ಕೈಗಾರಿಕಾ ಉದ್ಯಮಿಗಳ ಸಭೆಗೆ  ಕಾರ್ಯಕ್ರಮಕ್ಕೆ. ಸಿದ್ದರಾಮೋತ್ಸವಕ್ಮೆ ಸಂಬಂಧಪಟ್ಟಂಗೆ ಯಾವುದೇ ಚರ್ಚೆ ಆಗಿಲ್ಲ ಎಂದ ಬೈರತಿ

9:54 AM IST

ಕೊಪ್ಪ-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿ ಬಿರುಕು

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮುಂದುವರಿದ  ಮಳೆ. ಕೊಪ್ಪ-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಬಿರುಕು. ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ರಸ್ತೆ ಕುಸಿಯುವ ಭೀತಿ. ಶೃಂಗೇರಿ ತಾಲೂಕಿನ ಉಳುಮೆ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಬಿರುಕು. ಹೆದ್ದಾರಿಯಲ್ಲಿ ರೆಡ್ ಪಟ್ಟಿ ಅಳವಡಿಸಿ ವಾಹನ ಸವಾರರಿಗೆ ಎಚ್ಚರಿಕೆ. ಚಿಕ್ಕಮಗಳೂರು ಜಿಲ್ಲೆಯ ‌ಶೃಂಗೇರಿ ತಾಲೂಕಿನಲ್ಲಿ ಘಟನೆ. 

9:51 AM IST

Shivamogga: ವರುಣನ ಆರ್ಭಟ ಕೆರೆ ಕೋಡಿಯ ನಾಲೆ ಒಡೆದು ಅನಾಹುತ

ಶಿಕಾರಿಪುರ ತಾಲೂಕಿನ ತುಮರಿ ಹೊಸೂರು ಗ್ರಾಮದಲ್ಲಿ ಜಮೀನುಗಳು ಜಲಾವೃತ. ಕೊಪ್ಪದ ಕೆರೆ ಕೋಡಿ ನೀರು ಹರಿಯುವ ನಾಲೆ ಒಡೆದು ಜಲಾವೃತ .ಕೆರೆ ನಾಲೆ ಒಡೆದು ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತ.  ಜಮೀನಿನ ಮೂಲಕ ಹರಿದು ಕುಮದ್ವತಿ ನದಿಗೆ ಸೇರುತ್ತಿರುವ ಕೋಡಿ ನೀರು. ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ರೈತರ ಆಕ್ರೋಶ.

9:50 AM IST

ಅಂತ್ಯ ಸಂಸ್ಕಾರಕ್ಕಿಲ್ಲ ಜಾಗ: ಹೆಣ ಇಟ್ಟು ಪ್ರತಿಭಟನೆ

ತಾಲೂಕು ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ. ಹನುಮಾಪುರದೊಡ್ಡಿ ಗ್ರಾಮಸ್ಥರಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ. ಚನ್ನಪಟ್ಟಣ ತಾಲೂಕು ಕಚೇರಿ ಮುಂದೆ ಪ್ರತಿಭಟನೆ. ಹನುಮಾಪುರದೊಡ್ಡಿ ಗ್ರಾಮದಲ್ಲಿ ಸುಮಾರು 150 ಕುಟುಂಬಗಳು ವಾಸಿಸುತ್ತಿವೆ. ಸ್ಮಶಾನಕ್ಕೆ ಇದ್ದ ಜಾಗವನ್ನು ಖಾಸಗಿ ವ್ಯಕ್ತಿ ನನಗೆ ಸೇರಿದ್ದು, ಎಂದು ಅಡ್ಡಿ. ಶವ ಸಂಸ್ಕಾರಕ್ಕೆ ಜಾಗವಿಲ್ಲದೇ ರೊಚ್ಚಿಗೆದ್ದ ಗ್ರಾಮಸ್ಥರು. ತಹಶೀಲ್ದಾರ್ ಕಚೇರಿ ಎದುರು ಶವ ಇರಿಸಿ ಪ್ರತಿಭಟನೆ

4:19 PM IST:

ಕೋಲಾರ: ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ,ಓರ್ವ ಬೈಕ್ ಸವಾರನಿಗೆ ಗಾಯ. ಸಂಸದ ಮುನಿಸ್ವಾಮಿ ಚಲಿಸುತ್ತಿದ್ದ ಕಾರಿನ ಮುಂಭಾಗ ಘಟನೆ. ಬೈಕ್ ಸವಾರನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಸಂಸದ ಮುನಿಸ್ವಾಮಿ. ಕೋಲಾರದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದ ಅಫಘಾತ. ಅಫಘಾತದಲ್ಲಿ ಗಾಯಗೊಂಡದವರನ್ನು ಉಪಚರಿಸಿ ತಮ್ಮ ಕಾರಿನಲ್ಲೇ ಗಾಯಾಳುವನ್ನ ಕರೆದೊಯ್ದು ಆಸ್ಪತ್ರೆಗೆ ದಾಖಲು. ಕೋಲಾರದ ಜಿಲ್ಲಾಸ್ಪತ್ರೆಗೆ ಗಾಯಾಳನ್ನು ದಾಖಲಿಸಿದ ಸಂಸದರು.

3:33 PM IST:

ಚಿಕ್ಕಮಗಳೂರು: ನೀರಿನಲ್ಲಿ ಕಾರು ಸಮೇತ ಕೊಚ್ಚಿ ಹೋಗಿ ವ್ಯಕ್ತಿ ಸಾವು. ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಸಾತ್ಕೊಳಿ ಬಳಿ ಘಟನೆ. ಶೆಟ್ಟಿಕೊಪ್ಪ ನಿವಾಸಿ ಪ್ರಸನ್ನ (50) ಮೃತ ದುರ್ದೈವಿ. ನಿನ್ನೆ ರಾತ್ರಿ ಮನೆಗೆ ತೆರಳುವ ವೇಳೆ ನಡೆದಿರುವ ಅವಘಡ. ರಸ್ತೆ ಮೇಲೆ ನೀರು ಹರಿಯುತ್ತಿರುವುದನ್ನು ಗಮನಿಸದೇ ಕಾರು ಚಲಾಯಿಸಿದ ವ್ಯಕ್ತಿ.ನಿನ್ನೆಯಿಂದಲೂ ಪ್ರಸನ್ನರಿಗಾಗಿ ಹುಡುಕಾಟ ನಡೆಸುತ್ತಿದ್ದ ಕುಟುಂಬಸ್ಥರು.ಇಂದು ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಪತ್ತೆಯಾದ ಮೃತದೇಹ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗೆ ಇದು 3 ನೇ ಬಲಿ.

3:31 PM IST:

ಬೆಂಗಳೂರಿನ ರಿಚ್ಮಂಡ್ ಸರ್ಕಲ್ (Richmond Circle) ಬಳಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಅನುಮಾನಾಸ್ಪದ ವಸ್ತು ಪತ್ತೆಯಾದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅನುಮಾನಾಸ್ಪದ ಬ್ಯಾಗ್ ಕಂಡು ಪೊಲೀಸರಿಗೆ ಅಪರಿಚಿತ ವ್ಯಕ್ತಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಹೋಗಿ ಪೊಲೀಸರು ಪರಿಶೀಲನೆ  ನಡೆಸಿದ್ದಾರೆ. 

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2:40 PM IST:

ಚಿತ್ರದುರ್ಗ: ಚಿಕ್ಕಜಾಜೂರು ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. 4 ಮಂದಿ ಅಂತರ್ ರಾಜ್ಯ ಕಳ್ಳರನ್ನ ಬಂಧನ, 9.5 ಲಕ್ಷ ಚಿನ್ನಾಭರಣ ವಶ. ಪುರುಷೋತ್ತಮ್ ನಾಯ್ಕ್ (19), ಜೀವನ್, (19) ಸಚೀನ್ (22), ಪುನೀತ್ ನಾಯ್ಕ್ (22) ಬಂಧಿತರು. ಬಂಧಿತರು ದಾವಣಗೆರೆ ಜಿಲ್ಲೆಯ ನಾಗರಕಟ್ಟೆ ನಿವಾಸಿಗಳು. ಬಂಧಿತರಿಂದ 9.5 ಲಕ್ಷ ಮೌಲ್ಯದ 188 ಗ್ರಾಂ ಚಿನ್ನಾಭರಣ ವಶ. ಹೊಳಲ್ಕೆರೆ ಸಿಪಿಐ ರವೀಶ್ ಹಾಗೂ ಪಿಎಸ್ಐ ಬಾಹುಬಲಿ ನೇತೃತ್ವದಲ್ಲಿ ಕಾರ್ಯಾಚರಣೆ. ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

1:08 PM IST:

ಚಿಕ್ಕೋಡಿ: ಪೂಜೆ ಮಾಡುವಾಗ ಗೋಡೆ ಕುಸಿದು ನಾಲ್ವರಿಗೆ ಗಂಭೀರ ಗಾಯ. ನಿರಂತರ ಮಳೆಗೆ ನೆನೆದಿದ್ದ ಗೋಡೆ ಕುಸಿದು ಅವಘಡ. ಮೊಹರಂ ನಿಮಿತ್ಯ ಕುಂಡಲಿ ಪೂಜೆಯಲ್ಲಿ ತೊಡಗಿದ್ದ ಜನರು. ಈ ವೇಳೆ ಗೋಡೆ ಬಿದ್ದು ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಬೆಳಗಾವಿ ಜಿಲ್ಲೆಯ ರಾಯಭಾಗ ಸೌಂದತ್ತಿವಾಡಿ ಗ್ರಾಮದಲ್ಲಿ ನಡೆದ ಘಟನೆ. ಗ್ರಾಮದ ಮಂಗಲ ಹಿರೇಗೌಡ, ಶ್ರೀದೇವಿ ತಂಗಡೆ, ಸೇರಿ ನಾಲ್ವರಿಗೆ ಗಂಭೀರಗಳಾಗಿವೆ. ಕೂಡಲೇ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿರಂತರ ಮಳೆಯಿಂದ ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಅವಘಡಗಳು.

1:07 PM IST:

ಶೇಷಾದ್ರಿಪುರಂ ಪೊಲೀಸರ ಕಾರ್ಯಚರಣೆ. ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರು ಮಂದಿ ಆರೋಪಿಗಳ ಬಂಧನ. ನಬೀರ್ ಪಾಷ, ಸಲ್ಮಾನ್ ಪಾಷ, ನವಾಜ್ ಪಾಷ, ಸೈಯದ್, ನಯಾಜ್ ಬಂಧಿತ ಆರೋಪಿಗಳು. ಬೆಳಗಿನ ಜಾವ ಓಡಾಡುವವರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳು. ಬಂಧಿತರಿಂದ 80 ಸಾವಿರ ಬೆಲೆಬಾಳುವ 13 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

12:38 PM IST:

ಮಾಲೀಕನ ಗಮನಕ್ಕೆ ಬಾರದಂತೆ ಜ್ಯುವೆಲರಿ ಶಾಪ್ ಕೊಳ್ಳೆ ಹೊಡೆಯುತಿದ್ದ ಗ್ಯಾಂಗ್ ಬಂಧನ. ನಾಗರಾಜು, ರವಿ, ಮಹದೇವ್ ಬಂಧಿತರು. ಹಲಸೂರು ಗೇಟ್ ನ ಬಿಎಸ್ ಜ್ಯುವೆಲರ್ಸ್ ನಲ್ಲಿ ಕೆಲಸಕ್ಕಿದ್ದ ಆರೋಪಿಗಳು. ಮಾಲೀಕನ ಗಮನಕ್ಕೆ ಬಾರದ ರೀತಿ ಹಂತ ಹಂತವಾಗಿ ಬೆಳ್ಳಿ ಕದಿಯುತಿದ್ದ ಆರೋಪಿಗಳು. ಒಂದೂವರೆ ವರ್ಷದಲ್ಲಿ 41 ಕೆಜಿ ಬೆಳ್ಳಿ ಎಗರಿಸಿದ್ದ ಗ್ಯಾಂಗ್. ಜೊತೆಗೆ ಚಿನ್ನ ಹಾಗೂ ನಗದು ಸಹ ಕದಿಯುತಿದ್ದ ಆರೋಪಿಗಳು. ಒಮ್ಮೆ ಬಿಸ್ಕೆಟ್ ನಾಪತ್ತೆ ವೇಳೆ ಸಿಸಿಟಿವಿ ಪರಿಶೀಲಿಸಿದಾಗ ಕೃತ್ಯ ಬಯಲು. ಹಲಸೂರು ಗೇಟ್ ಪೊಲೀಸ್ ಠಾಣೆಗೆ ಮಾಲೀಕ ದೂರು. ದೂರು ಸಂಬಂಧ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ 7.5 ಲಕ್ಷ ರೂ. ಮೌಲ್ಯದ 41 ಕೆಜಿ ಬೆಳ್ಳಿ, 150 ಗ್ರಾಂ ಚಿನ್ನ, 4 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

12:20 PM IST:

ಮಂಗಳೂರಿನಲ್ಲಿ ವಿಪಕ್ಷ ನಾಯಕ ಯು.ಟಿ.ಖಾದರ್ ಹೇಳಿಕೆ, ಭಾರತದ ರಾಷ್ಟ್ರಧ್ವಜಕ್ಕೆ ತಿದ್ದುಪಡಿ ತಂದು ಖಾದಿ ಬದಲು ಪಾಲಿಸ್ಟರ್ ಬಳಕೆ ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಈ ನಡೆ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ. ರಾಷ್ಟ್ರಧ್ವಜ ಖಾಲಿ ಬಟ್ಟೆಯಲ್ಲ, ಖಾದಿ ಈ ದೇಶದ ತಾಯಿ ಬೇರು. ವಿದೇಶದಿಂದ ಪಾಲಿಸ್ಟರ್ ತಂದು ಗುಡ್ಡೆ ಹಾಕುವುದು ಸರಿಯಲ್ಲ. ಖಾದಿ ನೇಯುವ ಚರಕ ಖಾಲಿ ಚಿಹ್ನೆಯಲ್ಲ, ಅದು ರಾಜಾಡಳಿತ ಕಿತ್ತೆಸೆದ ಸಂಕೇತ. ಈ ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ಖಾದಿಗೆ ಪ್ರೋತ್ಸಾಹ ಕೂಡುವ ಪದ್ದತಿ ಇತ್ತು. ಖಾದಿ ತೊಡುವ ಸಂದೇಶವನ್ನ ಕೇಂದ್ರ ಸರ್ಕಾರ ಇಡೀ ವಿಶ್ವಕ್ಕೆ ಕೊಡಬೇಕಿತ್ತು. ಖಾದಿಯಲ್ಲಿ ಈ ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸಂಕೇತವಿದೆ. ನಾವು ಮಾತಿನಲ್ಲಿ ಸ್ವದೇಶಿ, ಕೆಲಸದ ಅನುಷ್ಠಾನದಲ್ಲಿ ವಿದೇಶಿ ತಂತ್ರವಿದೆ. ಪಾಲಿಸ್ಟರ್ ವಿದೇಶದಿಂದ ಅಮದಿಗೆ ಅವಕಾಶ ಕೊಡಲಾಗಿದೆ, ಇದರಿಂದ ಚೀನಾಗೆ ಲಾಭ. ಇದು ದೊಡ್ಡ ವ್ಯಾಪಾರಿಗಳು ಮತ್ತು ಗಾರ್ಮೆಂಟ್ ಬ್ಯುಸಿನೆಸ್‌ಗೆ ಲಾಭ. ಸ್ಪಷ್ಟತೆ ಇಲ್ಲದ ಈ ನಿರ್ಧಾರ ಇಡೀ ದೇಶಕ್ಕೆ ಅವಮಾನ. ಕೇಂದ್ರ ಇದನ್ನ ಪುನರ್ ಪರಿಶೀಲಿಸಿ ಖಾದಿಗೆ ಮಹತ್ವ ಕೊಡಲಿ. ಸ್ವಾತಂತ್ರ್ಯದ 75ನೇ ವರ್ಷದ ಹೆಸರಲ್ಲಿ ಹರ್ ಘರ್ ತಿರಂಗ ತೀರ್ಮಾನ ಆಗಿದೆ. ಆದರೆ ಈ ಬಗ್ಗೆ ಸ್ಪಷ್ಟತೆಯ ಒಂದು ಗೈಡ್ ಲೈನ್ ಕೊಡಬೇಕಿದೆ. ಈಗ ಬಂದಿರೋ ಪ್ಲಾಗ್‌ಗಳಲ್ಲೂ ಹಲವಾರು ಸಮಸ್ಯೆ ಇದೆ. ಜೊತೆಗೆ ಹಲವು ರೇಟ್ ಗಳಲ್ಲಿ ಪ್ಲಾಗ್ ಮಾರಾಟ ಆಗ್ತಿದೆ. ಘೋಷಣೆ ಮತ್ತು ಪ್ರಚಾರದ ಮೊದಲು ಸಮರ್ಪಕ ಅನುಷ್ಠಾನ ಆಗಲಿ. ಇನ್ನೂ ಹಲವರಿಗೆ ಮನೆಯೇ ಇಲ್ಲ, ಬಾವುಟ ಹಾರಿಸೋದು ಎಲ್ಲಿ? ಹಾಗಾದ್ರೆ ಮನೆ ಇಲ್ಲದವರು ಇದನ್ನ ಆಚರಣೆ ಮಾಡೋದು ಬೇಡವಾ? ಎಂದು ಪ್ರಶ್ನಿಸಿದ್ದಾರೆ. 

12:17 PM IST:

ಧ್ವಜಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ, ನಾಟಕ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಿದ್ದರಾಮಯ್ಯಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ಯಾರಿಗಾದರೂ ಚೆನ್ನಾಗಿ ನಾಟಕ ಮಾಡೋಕೆ ಬರುತ್ತೆ ಅಂದರೆ ಅದು ಸಿದ್ದರಾಮಯ್ಯ ನವರಿಗೆ ಮಾತ್ರ. ನಾಟಕದ ಅನುಭವವನ್ನು ಅವರು ಬೇರೆಯವರಿಗೆ ಹೇಳಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡೋದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲಿ ತಪ್ಪು ಕಂಡು ಹಿಡಿಯೋದು, ದೋಷ ಎತ್ತಿ ಹಿಡಿಯೋದು ಸರಿಯಲ್ಲ. ಒಳ್ಳೆಯದು ಮಾಡೋಕೆ ಆಗಿಲ್ಲ ಅಂದರೆ ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ. ಒಳ್ಳೆಯದು ಮಾಡೋಕೆ ಯೋಗ್ಯತೆ ಇಲ್ಲ ಅಂದರೆ ಕೆಟ್ಟದ್ದನ್ನು ಹೇಳಬೇಡಿ. ನಿಮ್ಮ ಭಕ್ತಿ ದೇಶದ ಮೇಲೆ ಇದ್ರೆ ತಮ್ಮ ಕರ್ತವ್ಯದ ಮೂಲಕ ಮಾಡಿ. ಅದು ಬಿಟ್ಟು ಇಂತಹ ಢೋಂಗಿ ಹೇಳಿಕೆಗಳನ್ನು ನಿಲ್ಲಿಸಿ ಎಂದು ಸಿಟ್ಟಾದ ಅಶ್ವಥ್ ನಾರಾಯಣ್. 

10:33 AM IST:

ತೀರ್ಥಹಳ್ಳಿ ರಾಷ್ಟ್ರೀಯ ಕ್ರೀಡಾಪಟು ಹೆಗ್ಗಳಿಕೆಯ ಕರ್ನಾಟಕ ಕ್ರೀಡಾ ರತ್ನ ವಿನಯ್ ಗೌಡ ವಿಧಿವಶ.  ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆಯ ಹೂವಪ್ಪ ಗೌಡರ ಪುತ್ರ. ಕ್ರೀಡಾಪಟು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ವಿಜೇತ ವಿನಯ್ ಗೌಡ ( 35) ಅನಾರೋಗ್ಯದಿಂದ ಉಡುಪಿ ಜಿಲ್ಲೆಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದೆ ದಿಢೀರನೆ ಜ್ವರ ಕಾಣಿಸಿ ಕೊಂಡಿತ್ತು. ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ. ಖೋ, ಖೋ ಪಂದ್ಯದ ಕ್ರೀಡಾಪಟು ಆಗಿ ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದರು. ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು ಪಡೆದಿದ್ದರು. ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿದ್ದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:11 AM IST:

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕೋಟೆನಾಡು ಚಿತ್ರದುರ್ಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದ್ರಲ್ಲಂತೂ ನಗರದಲ್ಲಿರುವ ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ತ್ರಿವರ್ಣ ಧ್ವಜದ ಬಣ್ಣದ ಲೈಟಿಂಗ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ಆ.3ರಿಂದ ಆರಂಭವಾಗಿರುವ ದೀಪಾಲಂಕಾರ ಆ.16 ರ ವರೆಗೆ ನಡೆಯಲಿದೆ. ಮಳೆಯ ಕಾರಣಕ್ಕೆ ಹಾಗಾಗ ವ್ಯತ್ಯಯ ಆಗುತ್ತಿದೆ. ಅದನ್ನು ಹೊರತು ಪಡಿಸಿದ್ರೆ ಸಂಜೆ ಮೇಲೆ ಕೋಟೆಗೆ ಯಾರಿಗೂ ಪ್ರವೇಶ ವಿಲ್ಲದ ಕಾರಣ, ರಾತ್ರಿ ವೇಳೆ ಮಾತ್ರ ದೀಪಾಲಂಕಾರದಿಂದ ಕೋಟೆ ಕಂಗೊಳಿಸುತ್ತದೆ.‌ ಕಲ್ಲಿನ ಕೋಟೆಯ ಮುಂಭಾಗ ಹಾಗೂ ಬತೇರಿಯಲ್ಲಿ ತ್ರಿವರ್ಣ ಧ್ವಜದ ದ್ವೀಪಾಲಂಕಾರವನ್ನು ಎಲ್ಲರೂ ದೂರದಿಂದಲೇ ನೋಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

10:02 AM IST:

ಮತ್ತೆ ಸಂಧಾನ ಸಭೆಗೆ ಮುಂದಾದ ಪೊಲೀಸ್ ಇಲಾಖೆ. ಈದ್ಗಾ ಮೈದಾನ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸ್ ಇಲಾಖೆ ಯಿಂದ ಶಾಂತಿ ಸಭೆ. ಒಂದು ಕಡೆ ಶಾಸಕ ಜಮೀರ್ ಹೇಳಿಕೆ ಖಂಡಿಸಿ ಹಿಂದು ಸಂಘಟನೆಗಳಿಂದ ಅಕ್ರೋಶ, ಮತ್ತೊಂದು ಕಡೆ ಹಿಂದು ಸಂಘಟನೆಗಳಿಂದ ಗಣೇಶೋತ್ಸವ ಮಾಡುವ ನಿರ್ಧಾರ. ಇವೆರಡರ ನಡುವೆ ಪೆಚ್ಚಿಗೆ ಸಿಲ್ಲುಕ್ಕಿದ ಪೊಲೀಸ್ ಇಲಾಖೆ. ಈ  ಹಿನ್ನೆಲೆಯಲ್ಲಿ ಇಂದು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ. ಇಂದು ಸಂಜೆ 4.30 ಕ್ಕೆ ಶಾಂತಿ ಸಭೆ. ಇಂದಿನ ಸಭೆಗೆ ಮುಸ್ಲಿಂ ಮುಖಂಡರು.. ಕನ್ನಡ ಪರ ಸಂಘಟನೆಗಳು.. ಹಿಂದುಪರ ಸಂಘಟನೆಗಳು.. ಚಾಮರಾಜಪೇಟೆ ನಾಗರಿಕ ವೇದಿಕೆ ಸೇರಿದಂತೆ ಹಲವು ಸಂಘಟನೆಯ ಮುಖಂಡರು ಭಾಗಿ. ಸಭೆ ನೇತೃತ್ವವನ್ನು ಸ್ಥಾಳಿಯ ಎಸಿಪಿ..ಸರ್ಕಲ್ ಇನ್ ಸ್ಪೆಕ್ಟರ್ ವಹಿಸಿದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಸಭೆಯಲ್ಲಿ ಚರ್ಚೆ. ಸೌಹಾರ್ದ ದಿಂದ ಈ ಬಾರಿ ಸ್ವಾತಂತ್ರ ದಿನಚಾರಣೆ ಅಚರಿಸಲು ಶಾಂತಿ ಸಭೆಯಲ್ಲಿ ಚರ್ಚೆ.

9:59 AM IST:

ದಾವಣಗೆರೆ: ಸಿದ್ದರಾಮೋತ್ಸವದಲ್ಲಿ ಸೇರಿದ್ದ ಜನ ಪಕ್ಷಾತೀತವಾಗಿ ಸೇರಿದ್ದರು. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿಕೆ. ದಾವಣಗೆರೆಯಲ್ಲಿ ಮಾತನಾಡಿದ ಬೈರತಿ ಬಸವರಾಜ್, ನಾನು ಮಾಹಿತಿಯನ್ನು ತೆಗೆದುಕೊಂಡಿದ್ದೇನೆ. ಬೇರೆ ಬೇರೆ ಪಕ್ಷದವರೂ ಅಲ್ಲಿದ್ದರು. ಜನರು ಸೇರಿದ ತಕ್ಷಣ ಅವುಗಳೆಲ್ಲಾ ಮತಗಳಾಗಿ ಪರಿವರ್ತನೆ ಆಗಬೇಕಲ್ಲ? ಮೋದಿಯವರು ಬಂದರೂ ಜನರು ಸೇರುತ್ತಾರೆ. ನಮ್ಮದು 11 ಕೋಟಿ ಕಾರ್ಯಕರ್ತರು ಇರುವ ಪಕ್ಷ. ನಾವು ಕಾರ್ಯಕ್ರಮಗಳನ್ನು ಮಾಡಿದಾಗ ನಮ್ಮ ಕಾರ್ಯಕರ್ತರು ಬರುತ್ತಾರೆ. ನಾವು ಸಿದ್ದರಾಮೋತ್ಸವಕ್ಕೆ ಪ್ರತಿಯಾಗಿ ಕಾರ್ಯಕ್ರಮ ಮಾಡೋದಿಲ್ಲ. ನಮ್ಮ ಅಭಿವೃದ್ಧಿ ಕೆಲಸಗಳು‌ ಜನರಿಗೆ ನೀಡಿದ ಉತ್ತಮ ಆಡಳಿತ ಕುರಿತಾಗಿ ಕಾರ್ಯಕ್ರಮ ಮಾಡುತ್ತೇವೆ. ಅಮಿತಾ ಷಾ ಮೊನ್ನೆ ಬೆಂಗಳೂರಿಗೆ ಬಂದಿದ್ದು  ಕೈಗಾರಿಕಾ ಉದ್ಯಮಿಗಳ ಸಭೆಗೆ  ಕಾರ್ಯಕ್ರಮಕ್ಕೆ. ಸಿದ್ದರಾಮೋತ್ಸವಕ್ಮೆ ಸಂಬಂಧಪಟ್ಟಂಗೆ ಯಾವುದೇ ಚರ್ಚೆ ಆಗಿಲ್ಲ ಎಂದ ಬೈರತಿ

9:54 AM IST:

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮುಂದುವರಿದ  ಮಳೆ. ಕೊಪ್ಪ-ಶೃಂಗೇರಿ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಬಿರುಕು. ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ರಸ್ತೆ ಕುಸಿಯುವ ಭೀತಿ. ಶೃಂಗೇರಿ ತಾಲೂಕಿನ ಉಳುಮೆ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಬಿರುಕು. ಹೆದ್ದಾರಿಯಲ್ಲಿ ರೆಡ್ ಪಟ್ಟಿ ಅಳವಡಿಸಿ ವಾಹನ ಸವಾರರಿಗೆ ಎಚ್ಚರಿಕೆ. ಚಿಕ್ಕಮಗಳೂರು ಜಿಲ್ಲೆಯ ‌ಶೃಂಗೇರಿ ತಾಲೂಕಿನಲ್ಲಿ ಘಟನೆ. 

9:51 AM IST:

ಶಿಕಾರಿಪುರ ತಾಲೂಕಿನ ತುಮರಿ ಹೊಸೂರು ಗ್ರಾಮದಲ್ಲಿ ಜಮೀನುಗಳು ಜಲಾವೃತ. ಕೊಪ್ಪದ ಕೆರೆ ಕೋಡಿ ನೀರು ಹರಿಯುವ ನಾಲೆ ಒಡೆದು ಜಲಾವೃತ .ಕೆರೆ ನಾಲೆ ಒಡೆದು ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತ.  ಜಮೀನಿನ ಮೂಲಕ ಹರಿದು ಕುಮದ್ವತಿ ನದಿಗೆ ಸೇರುತ್ತಿರುವ ಕೋಡಿ ನೀರು. ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ರೈತರ ಆಕ್ರೋಶ.

9:52 AM IST: