Karnataka Live Updates: ಅಡೆ ತಡೆಗಳ ನಡುವೆಯೇ ಮಳೆ ಸಂತ್ರಸ್ತರನ್ನು ಭೇಟಿಯಾದ ಸಿದ್ದರಾಮಯ್ಯ

Kannada news live updates district political crime developments of satate

ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಕೊಡಗಿನ ಮದೆನಾಡು ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.‌ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಸಚಿವರಾದ ಜೀವಿಜಯ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ, ಪಕ್ಷದ ಜಿಲ್ಲಾ ಉಸ್ತುವಾರಿ ಲಕ್ಷ್ಮಣ್, ಮಾಜಿ ಶಾಸಕರಾದ ವೀಣಾ ಅಚ್ಚಯ್ಯ ಮತ್ತಿತರರು ಹಾಜರಿದ್ದರು.

ಕೊಪ್ಪಳ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು. ಕೊಪ್ಪಳದ ಅಶೋಕ ಸರ್ಕಲ್‌ನಲ್ಲಿ ಪ್ರತಿಭಟನೆ. ಕರ್ನಾಟಕದಲ್ಲಿ ಯುವತಿಯರಿಗೆ ನೌಕರಿ ಬೇಕು ಅಂದ್ರೆ ಮಂಚ‌ ಹತ್ತಬೇಕು ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ. ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಖಂಡಿಸಿ ಪ್ರೊಟೆಸ್ಟ್.ಹೆಣ್ಣಿನ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಟ್ಟಿರುವ ಪ್ರಿಯಾಂಕ ಖರ್ಗೆಗೆ ಧಿಕ್ಕಾರ ಎಂದು ಆಕ್ರೋಶ. 

ಕೊಡಗಿನಲ್ಲಿ ಸಿದ್ಧರಾಮಯ್ಯಗೆ ಕಪ್ಪು ಬಾವುಟದ ಸ್ವಾಗತ ಸಿದ್ಧರಾಮಯ್ಯಗೆ ಸಾವರ್ಕರ್ ಭಾವಚಿತ್ರ ನೀಡಿದ ಬಿ.ಜೆ.ಪಿ. ಯುವ ಮೋರ್ಚ ಕಾರ್ಯಕರ್ತರು. ಒಂದು ದಿನದ  ಜಿಲ್ಲಾ ಪ್ರವಾಸಕ್ಕಾಗಿ ಕೊಡಗಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಕೊಡಗಿನ ಗಡಿ ಭಾಗದ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಫ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಯುವ ಮೋರ್ಛಾ ಕಾರ್ಯಕರ್ತರು ಸಾವರ್ಕರ್  ಭಾವಚಿತ್ರವನ್ನು ಕಾರಿನಲ್ಲಿ ಕುಳಿತಿದ್ದ ಸಿದ್ಧರಾಮಯ್ಯ ಮಡಿಲಲ್ಲಿಟ್ಟರಲ್ಲದೇ,  ಕಪ್ಫುಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಸಿದ್ಧರಾಮಯ್ಯ  ಘೋಷಣೆ ಕೂಗಿದರು.

ಒಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಮಹತ್ವದ ಸ್ಥಾನ ದೊರೆತಿದೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಸಚಿವ ಶ್ರೀರಾಮುಲು ಬ್ಯಾಟಿಂಗ್ ಮಾಡಿರುವುದು ಕರ್ನಾಟಕದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಶಿವಮೊಗ್ಗ ಮತ್ತು ಭದ್ರಾವತಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, 144 ಸೆಕ್ಷನ್ ಇವತ್ತು ಅಂತ್ಯಗೊಳ್ಳಲಿದೆ. ಅಲ್ಲಲ್ಲಿ ಕೆಲವು ಅಪರಾಧ ಸುದ್ದಿಗಳು ವರದಿಯಾಗುತ್ತಿವೆ. ಕರ್ನಾಟಕದಲ್ಲಿ ಕ್ಷಣ ಕ್ಷಣ ಸುದ್ದಿಗೆ ಏಷ್ಯಾನಟ್ ಸುವರ್ಣನ್ಯೂಸ್.ಕಾಮ್ ಗೆ ಲಾಗಿನ್ ಆಗಿರಿ. 

2:38 PM IST

ಶಾಲೆಯಲ್ಲಿ ಗಣಪತಿ ಕೂರಿಸೋದು ನಿನ್ನೆ,ಮೊನ್ನೆಯ ಪದ್ಧತಿ ಅಲ್ಲ: ನಾಗೇಶ್

ತುಮಕೂರು: ಶಾಲೆಗಳಲ್ಲಿ ಗಣಪತಿ ಕೂರಿಸುವ ವಿಚಾರವಾಗಿ ತುಮಕೂರಿನ ತಿಪಟೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆ. ಗಣಪತಿ ಉತ್ಸವ ಈ ದೇಶದಲ್ಲಿ ಸ್ವಾತಂತ್ರ ಹೋರಾಟದ ಅಸ್ತ್ರವಾಗಿ ಶುರುವಾಯಿತು. ಅದಕ್ಕೂ ಮೊದಲು ಗಣಪತಿ ಪೂಜೆ ಎಲ್ಲಾ ದೇವರುಗಳಂತೆ ಮನೆಯೊಳಗೆ ನಡೆಯುತ್ತಿತ್ತು. ಬಾಲಗಂಗಧಾರನಾಥ್ ತಿಲಕ್ ರ ಕರೆ ಬಳಿಕ ಶಾಲೆಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಬೀದಿ ಹಳ್ಳಿಗಳಲ್ಲಿ ಹಾಗೂ ಎಲ್ಲೆಕಡೆ, ಗಣಪತಿ ಉತ್ಸವ ಶುರುವಾಯಿತು. ಯಾವುದೋ ಸರ್ಕಾರ ಬಂದ್ಮೇಲೆ ಶುರುವಾದ ಪದ್ದತಿಯಲ್ಲ. ತಲೆ ತಲೆಮಾರುಗಳಿಂದ ನಡೆದಿರುವ ಪದ್ದತಿಗಳು. ರಿಲಿಜೀಯಸ್ ಪ್ರಾಕ್ಟೀಸ್ ಮತ್ತು ಸೊಷಿಯಲ್ ಮೂಮೆಂಟ್. ಸ್ವಾತಂತ್ರ ಹೋರಾಟದಲ್ಲಿ ಭಾರತೀಯರನ್ನು ಒಗ್ಗೂಡಿಸಲು ಬಳಸಿದ ಒಂದು ಅಸ್ತ್ರ ಎಂದಿದ್ದಾರೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್.

1:28 PM IST

ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಿ: ಬಿಜೆಪಿ ಮಹಿಳಾ ಮೋರ್ಚಾ

ಹೆಣ್ಣು ಮಕ್ಕಳಿಗೆ ಕೆಲಸ ಬೇಕು ಅಂದ್ರೆ ಮಂಚ ಏರಬೇಕು ಎಂಬ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡಿಸಿ,  ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರುರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು ಸೇರಿದಂತೆ ಪಕ್ಷದ ಮುಖಂಡರು ಭಾಗಿ.

1:20 PM IST

ಸಿದ್ಧರಾಮಯ್ಯ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇನೆ: ಶ್ರೀರಾಮುಲು

ಬಳ್ಳಾರಿ: ಬಳ್ಳಾರಿಯಲ್ಲಿ ಶ್ರೀರಾಮುಲು ಹೇಳಿಕೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಆಹ್ವಾನಿಸುತ್ತೇನೆ ಎಂದ ಶ್ರೀರಾಮುಲು. ಸಿದ್ದರಾಮಯ್ಯ ಹಿಂದುಳಿದ ಸಮಾಜದ ನಾಯಕ. ಅವರು ಬಿಜೆಪಿಗೆ ಬರಲಿ ಬಂದ್ರೇ ಶಕ್ತಿ ಬರಲಿದೆ ಎಂದರು.ಕಾಂಗ್ರೆಸ್ ಪಕ್ಷದಿಂದ ಎಲ್ಲ ಹಿಂದೂಳಿದ ಹಿರಿಯ ನಾಯಕರು ಬಿಜೆಪಿಗೆ ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಬಿಜೆಪಿಗೆ ಬರಲಿ. ಬಿಜೆಪಿ ಹಿಂದುಳಿದ ವರ್ಗಗಳನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗೇ ಕಾಂಗ್ರೆಸ್ ನಿಂದ ಹಿರಿಯ ನಾಯಕರು ಬಿಜೆಪಿಗೆ ಬಂದಿದ್ದಾರೆ. ಸಿದ್ದರಾಮಯ್ಯರಿಗೆ ಡಿಕೆಶಿ ಇರಿಸುಮುರಿಸು ಮಾಡುತ್ತಿದ್ದಾರೆ. ಅವರಲ್ಲೇ ಸಾಕಷ್ಟು ಜಿದ್ದಾಜಿದ್ದಿ ಇದೆ. ಹೀಗಾಗಿ ಅವರನ್ನ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಹಿಂದುಳಿದ ನಾಯಕರು ಎಲ್ಲರೂ ಒಂದಾಗಬೇಕು. ಕುರುಬ ಸಮುದಾಯದಿಂದ ಬಿಜೆಪಿಯಿಂದ ಹಲವರು ಸಚಿವರಾಗಿದ್ದಾರೆ. ನಾನು ಎಂದೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಪಕ್ಷದ ಸಿದ್ಧಾಂತಗಳ  ಆಧಾರದ ಮೇಲೆ ಚುನಾವಣೆ ಎದುರಿಸುತ್ತೇನೆ. ಹಿಂದುಳಿದ ನಾಯಕರು ಪಕ್ಷಕ್ಕೆ ಬರಲಿ ಅನ್ನೋ ಅರ್ಥದಲ್ಲಿ ಹೇಳಿಕೆ ನೀಡಿರುವೆ. ಸಿದ್ದರಾಮಯ್ಯ ಬಗ್ಗೆ ಮಾತನಾಡಿರೋ ಕುರಿತು ನಿನ್ನೆ ರಾಜಾಧ್ಯಕ್ಷರಿಗೆ ಸ್ಪಷ್ಟಿಕರಣ ನೀಡಿ ಬಂದಿರುವೆ.  ಅವರನ್ನ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ, ಎಂದಿದ್ದಾರೆ.

12:53 PM IST

Udupi: ಬ್ರಹ್ಮಗಿರಿ ಸರ್ಕಲಿನಲ್ಲಿ ಸಾವರ್ಕರ್ ಫ್ಲೆಕ್ಸ್‌ಗೆ ವಿರೋಧ

ಉಡುಪಿ: ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ  ಸಾವರ್ಕರ್ ಫ್ಲೆಕ್ಸ್‌ಗೆ ವಿರೋಧ. ಫ್ಲೆಕ್ಸ್ ಅಳವಡಿಸಲು ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್- ಎಸ್ ಡಿಪಿಐ. ಆಕ್ಷೇಪ ಬಂದಾಗ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿದ್ದ ಯಶ್ ಪಾಲ್. ಸರ್ಕಲ್ ನಲ್ಲಿ ಸಾವರ್ಕರ್ ಪುತ್ತಳಿ ರಚಿಸಲು ಅನುಮತಿ ಕೋರಿದ ಯಶ್ ಪಾಲ್ ಸುವರ್ಣ. ಉಡುಪಿ ನಗರಸಭೆಗೆ ಯಶ್ ಪಾಲ್ ಸುವರ್ಣ ಅನುಮತಿ ಕೋರಿ ಪತ್ರ. ಯಶ್ ಪಾಲ್ ಸುವರ್ಣ ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಉಡುಪಿ ನಗರಸಭೆಯ ಅಧ್ಯಕ್ಷರು ಪೌರಾಯುಕ್ತರಿಗೆ ಪತ್ರ ಬರೆದ ಯಶ್ ಪಾಲ್ ಸುವರ್ಣ.

12:07 PM IST

ಟಿಪ್ಪು ಜಯಂತಿ ಆಚರಣೆ: ಸಿದ್ದು ಕ್ರಮಕ್ಕೆ ಕೊಡಗಿನಲ್ಲಿ ಆಕ್ರೋಶ

ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ  ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಜೊತೆಗೆ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿರುವ  ಹಿಂದು ವಿರೋಧಿ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆಂದು, BJP ಯುವ ಮೋರ್ಚಾ ಜಿಲ್ಲಾಧ್ಯಕ್ಷ  ದರ್ಶನ್ ಜೋಯಪ್ಪ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭ ಪೋಲೀಸರು ಬಿಗಿ ಬಂದೋಬಸ್ತ್  ವ್ಯವಸ್ಥೆಗೊಳಿಸಿ ಸಿದ್ಧರಾಮಯ್ಯರ ವಾಹನ ಮುಂದೆ ಚಲಿಸಲು ವ್ಯವಸ್ಥೆ ಮಾಡಲಾಯಿತು.

10:54 AM IST

Shivamogga: ಮಾಜಿ ಸೈನಿಕನಿಂದ ಶಾಂತಿ ಕಾಪಾಡಲು ಪೀಸ್ ಮಾರ್ಚ್

ಶಿವಮೊಗ್ಗದಲ್ಲಿ ಮಾಜಿ ಸೈನಿಕನಿಂದ ಶಾಂತಿ ಕಾಪಾಡಲು ಪೀಸ್ ಮಾರ್ಚ್.  ಶಿವಮೊಗ್ಗದ ಬಸ್ ನಿಲ್ದಾಣದಿಂದ ಡಿಸಿ ಕಚೇರಿವರೆಗೆ ತ್ರಿವರ್ಣ ಧ್ವಜ ಹಿಡಿದು ಶಾಂತಿ ಮೆರವಣಿಗೆ. ಶಿವಮೊಗ್ಗದ ಮಾಜಿ ಸೈನಿಕ ಮಂಜುನಾಥ ರಿಂದ ತ್ರಿವರ್ಣ ಧ್ವಜವನ್ನು ಹಿಡಿದು ಏಕ ವ್ಯಕ್ತಿ ಮೆರವಣಿಗ. ಶಿವಮೊಗ್ಗ ಜಿಲ್ಲೆಯಲ್ಲಿ  ಪ್ರಜೆಗಳು ಶಾಂತಿ ಹಾಗೂ ಸಮಾನತೆಯ ಬದುಕುವ ನಿಟ್ಟಿನಲ್ಲಿ ಸಾಗಬೇಕುರಾಷ್ಟ್ರೀಯತೆಗೆ ಅವಮಾನವಾಗುವಂತೆ ಯಾವುದೇ ಕೃತ್ಯಗಳು, ಘಟನೆಗಳು ನಡೆಯಬಾರದು.  ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮಾಜಿ ಸೈನಿಕನ ಮನವಿ. ಕೆಲ ಸಮಾಜಘಾತಕ ಶಕ್ತಿಗಳು ಈ ದೇಶದ ಸ್ವಾತಂತ್ರ ಹೋರಾಟಗಾರರನ್ನು ನಿಂದಿಸುತ್ತಿದ್ದಾರೆ.  ಅವಾಚ್ಯ ಶಬ್ದಗಳನ್ನು ಬಳಸುತ್ತಿರುವುದು ದೇಶದ ಸಮಸ್ತ ಸ್ವಾತಂತ್ರ ಹೋರಾಟಗಾರರಿಗೆ ಅವಮಾನಿಸಿದಂತೆ,  ದೇಶದ ಪ್ರಜೆಗಳ ರಕ್ಷಣೆಗಾಗಿ ಹಗಲಿರುಳು ಎನ್ನದೆ ಗಡಿಯನ್ನು ಕಾಯುತ್ತಿದ್ದಾರೆ. ಭಾರತದ ಏಕತೆಯ ಇರುವ ದುಷ್ಟಶಕ್ತಿಗಳ ವಿರುದ್ಧ ಸರಿಯಾದ ಕಾನೂನು ಕ್ರಮಕ್ಕೆ ಮುಂದಾಗಬೇಕು.  ದೇಶದ ವಿರುದ್ಧ ನಡೆಸುವ ಯಾವುದೇ ಕೃತ್ಯವನ್ನು ನಾವು ಖಂಡಿಸಬೇಕು, ಎಂದಿದ್ದಾರೆ.

10:33 AM IST

ಕೊಡಗಿಗೆ ಆಗಮಿಸಿದ ಸಿದ್ದರಾಮಯ್ಯ: ಗೋ ಬ್ಯಾಕ್ ಎಂದು ಆಕ್ರೋಶ

ಕೊಡಗು: ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಕೊಡಗಿಗೆ ಆಗಮಿಸಿದ ಸಿದ್ದರಾಮಯ್ಯ. ಕೊಡಗಿನ‌ ಗಡಿಯಲ್ಲೇ ಸಿದ್ದರಾಮಯ್ಯಗೆ ತಟ್ಟಿದ ಗೆರಾವ್, ಪ್ರತಿಭಟನೆ ಬಿಸಿ. ತಿತಿಮತಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಗೇರಾವ್, ಕಪ್ಪುಪಟ್ಟಿ ಪ್ರದರ್ಶನ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ನಡೆದ ಘಟನೆ. ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಗೆರಾವ್, ಕಪ್ಪು ಪಟ್ಟಿ ಪ್ರದರ್ಶನ. ಗೋ ಬ್ಯಾಕ್, ಸಿದ್ದು ಖಾನ್ ಅಂತ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ. ಟಿಪ್ಪು ಜಯಂತಿ ವಿಚಾರವಾಗಿ ಸಿದ್ದು ವಿರುದ್ಧ ಕೊಡಗಿನಲ್ಲಿ ಆರದ ಸಿಟ್ಟು.

10:14 AM IST

ತಮಿಳು ನಾಡು ಪ್ರವಾಸಕ್ಕೂ ಮುಂಚೆ ಆರ್ ಎಸ್ ಎಸ್ ನಾಯಕರ ಜೊತೆ ಸಿಎಂ ಸಭೆ

ಆರ್ ಎಸ್ ಎಸ್ ನಾಯಕರ ಜೊತೆ ಸಿಎಂ ಬೊಮ್ಮಾಯಿ‌ ಸಭೆ. ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಿಎಂ ಸಭೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು RSS ಮುಖಂಡರ ಜೊತೆ ಸಿಎಂ ಸಭೆ. ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ಹಿನ್ನೆಲೆ ಸಿಎಂ ಬೊಮ್ಮಾಯಿ‌ ಜೊತೆ ಚರ್ಚೆ ನಡೆಸುತ್ತಿರುವ ಪಕ್ಷದ ನಾಯಕರು.

9:46 AM IST

ಸೆಪ್ಟೆಂಬರ್ 7 ರಿಂದ ಚುನಾವಣಾ ದಂಡಯಾತ್ರೆಗೆ ಸಜ್ಜಾಗಿರುವ ಕಾಂಗ್ರೆಸ್

ಒಟ್ಟು ಹನ್ನೆರಡು ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆ. ಏಳು ರಾಜ್ಯಗಳ ಎಲೆಕ್ಷನ್ ಹಾಗೂ ಲೋಕಸಭಾ ಎಲೆಕ್ಷನ್ ಗುರಿಯಾಗಿಸಿಕೊಂಡು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ. ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರ ವರೆಗೂ ಕಾಂಗ್ರೆಸ್ ಮಹಾ ಪಾದಯಾತ್ರೆ. ಮುಂದೆ ಸಾರ್ವತ್ರಿಕ ಚುನಾವಣೆಗಳಿರುವ ರಾಜ್ಯಗಳಲ್ಲಿ ಹೆಚ್ಚು ಸಂಚಾರ ನಡೆಸಲಿರುವ ಭಾರತ್ ಜೋಡೋ ಯಾತ್ರೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಮುಂದೆ ಸಾರ್ವತ್ರಿಕ ಚುನಾವಣೆಗಳು ಬರಲಿವೆ ಹಾಗಾಗಿ ಈ ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆ ಹೆಚ್ಚು ಸಂಚಾರ ಮಾಡುವ ರೀತಿಯಲ್ಲಿ ಪ್ಲ್ಯಾನ್. ಕರ್ನಾಟಕ 21 ದಿನ, 511 ಕಿಲೋಮೀಟರ್ ಪಾದಯಾತ್ರೆ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಚುನಾವಣೆಗಳಿರುವ  ರಾಜ್ಯಗಳಲ್ಲಿ 15-20 ದಿನಗಳ ಕಾಲ ಪಾದಯಾತ್ರೆ. ಉಳಿದಂತೆ ಇತರೆ ರಾಜ್ಯಗಳಲ್ಲಿ 3 ರಿಂದ 5 ದಿನ ಪಾದಯಾತ್ರೆ ಮಾಡಲಿರುವ ಕಾಂಗ್ರೆಸ್ ನಾಯಕರು. ದೇಶಾದ್ಯಂತ ಒಟ್ಟು 3571 ಕಿಲೋ ಮೀಟರ್ ಹೆಜ್ಜೆ ಹಾಕಲಿರುವ ಕೈ ನಾಯಕರು. 148 ದಿನಗಳ ಕಾಲ ಭಾರತ್ ಜೋಡೋ ಯಾತ್ರೆ. ಒಟ್ಟು 68 ಲೋಕಸಭಾ ಕ್ಷೇತ್ರಗಳು, 203 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ದಂಡಯಾತ್ರೆ. ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಸಂಚಾರ ಮಾಡಲಿರುವ ಯಾತ್ರೆ. ಚಾಮರಾಜನಗರ, ಮೈಸೂರು ನಗರ, ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ನಲ್ಲಿ ಕ್ರಮಿಸಲಿರುವ ಮಾಡಲಿರುವ ಭಾರತ್ ಜೋಡೋ ಯಾತ್ರೆ.

9:36 AM IST

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022

ಮೈಸೂರು: ದಸರಾ ಗಜಪಡೆಗಳಿಗೆ ಇಂದಿನಿಂದ ಮರಳು ಮೂಟೆ ತಾಲೀಮು.ಇಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಅಭಿಮನ್ಯುಗೆ ಬೆನ್ನಿಗೆ ಗಾದಿ-ನಮ್ದಾ ಕಟ್ಟಿ ವಿಶೇಷ ಪೂಜೆ ನೆರವೇಸಿದ ಬಳಿಕ ಭಾರ ಹೊರುವ ತಾಲೀಮು ಆರಂಭ. ಅರ್ಚಕ ಪ್ರಹ್ಲಾದ್ ರಾವ್ ಅವರಿಂದ ಅಭಿಮನ್ಯುವಿಗೆ ವಿಶೇಷ ಪೂಜೆ ನೆರವೇರಿಕೆ. ಅಭಿಮನ್ಯು ಜೊತೆಗೆ ಕುಮ್ಕಿ ಆನೆಗಳಾಗಿ ಸಾಗಲಿರುವ ಚೈತ್ರಾ ಮತ್ತು ಕಾವೇರಿಯನ್ನು ಒಟ್ಟಿಗೆ ನಿಲ್ಲಿಸಿ ಪೂಜೆ ನೆರವೇರಿಕೆ. ಡಿಸಿಎಫ್‌ ಕರಿಕಾಳನ್ ಸಮ್ಮುಖದಲ್ಲಿ ಅಂಬಾರಿ ಆನೆ ಅಭಿಮನ್ಯು,ಕುಮ್ಕಿ ಆನೆಗಳಾದ ಚೈತ್ರಾ, ಕಾವೇರಿಗೆ ವಿಶೇಷ ಪೂಜೆ ಸಲ್ಲಿಕೆ. ಗಾದಿ-ನಮ್ದಾ ಜೊತೆಗೆ ಮರಳಿನ ಮೂಟೆಗಳನ್ನಿರಿಸಿ ಭಾರ ಹೊರುವ ತಾಲೀಮಿಗೆ ಚಾಲನೆ. ಗಾದಿ-ನಮ್ದಾ ಜೊತೆಗೆ ಮರಳಿನ ಮೂಟೆಗಳನ್ನು ಹೊತ್ತು ಸಾಗಿದ ಅಭಿಮನ್ಯು. ಆರಂಭದಲ್ಲಿ 500 ಕೆ ಜಿಯಷ್ಟು ಭಾರ ಹೊರಿಸಿ ತಾಲೀಮು. ದಿನ ಕಳೆದಂತೆ ಹಂತ ಹಂತವಾಗಿ ಭಾರ ಹೆಚ್ಚಿಸುತ್ತಾ 750 ಕೆ ಜಿ ತೂಕದ ಚಿನ್ನದ ಅಂಬಾರಿಯನ್ನು ಸುಲಲಿತವಾಗಿ ಹೊತ್ತು ಸಾಗಲು ಅಂಬಾರಿ ಆನೆಯನ್ನು ಅಣಿಗೊಳಿಸಲಿರುವ ಅರಣ್ಯ ಇಲಾಖೆ ಸಿಬ್ಬಂದಿ.ಇಂದು ಬೆಳಗ್ಗೆ ಪೂಜೆ ನೆರವೇರಿದ ಬಳಿಕ ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟ ಅಭಿಮನ್ಯು ಆ್ಯಂಡ್ ಟೀಮ್.
ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಸಾಗಿ ಬನ್ನಿ ಮಂಟಪ ತಲುಪಿದ ನಂತರ ಮತ್ತೆ ಅರಮನೆ ಆವರಣಕ್ಕೆ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಮರಳಿದೆ.

9:26 AM IST

ಶಿವಮೊಗ್ಗ - ಭದ್ರಾವತಿ ಅವಳಿ ನಗರದಲ್ಲಿ ಜನ ಜೀವನ ಸಹಜ ಸ್ಥಿತಿಯತ್ತ

ಇಂದು 144 ನಿಷೇದಾಜ್ಞೆ ಅಂತ್ಯ. ಶಿವಮೊಗ್ಗದ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ. ಅಮೀರ್ ಅಹ್ಮದ್ ಸರ್ಕಲ್, ಶಿವಪ್ಪನಾಯಕನ ಸರ್ಕಲ್, ಗಾಂಧಿ ಬಜಾರ್, ಎಂಕೆಕೆ ರಸ್ತೆ , ಸಿಗೆಹಟ್ಟಿ , ಬೈಪಾಸ್ ರಸ್ತೆ ಮೊದಲಾದ ಕಡೆಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್. ಪ್ಲೆಕ್ಸ್ ತೆರವು, ಚಾಕು ಇರಿತ ಸೇರಿ ಪ್ರತ್ಯೇಕ ನಾಲ್ಕು ಪ್ರಕರಣಗಳು ದಾಖಲು. ಚಾಕು ಇರಿತದ ಪ್ರಕರಣದಲ್ಲಿ ಆರೋಪಿಗಳ ಪೋಲಿಸ್ ಕಸ್ಟಡಿ ಇಂದು ಅಂತ್ಯ. ನಿಷೇದಾಜ್ಞೆ ನಡುವೆ ಶಾಲಾ ಕಾಲೇಜು ಎಂದಿನಂತೆ ಆರಂಭ. ಖಾಸಗಿ ಮತ್ತು ಕೆಎಸ್‌ಆರ್ಟಿಸಿ ಬಸ್, ಆಟೋ, ಟ್ಯಾಕ್ಸಿ ನಗರ ಸಾರಿಗೆ ಎಂದಿನಂತೆ ಆರಂಭ. ಬೈಕ್‌ಗಳಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ. 40 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ. ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

9:23 AM IST

ಇಂದು ಸಂಜೆ ತಿರುಪತಿಗೆ ತೆರಳಲಿರುವ ಸಿಎಂ ಬೊಮ್ಮಾಯಿ, BSY

ಇಂದು ಸಂಜೆ ತಿರುಪತಿಗೆ ತೆರಳಲಿರುವ ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಆರ್ ಅಶೋಕ್. ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಲಭಿಸಿದ ಹಿನ್ನಲೆಯಲ್ಲಿ 
ತಿರುಪತಿ ತಿಮ್ಮಪ್ಪನ ಆಶಿರ್ವಾದ ಪಡೆಯಲಿರುವ ಯಡಿಯೂರಪ್ಪ. ಯಡಿಯೂರಪ್ಪ ಜೊತೆ ಸಿಎಂ ಬೊಮ್ಮಾಯಿ, ಸಚಿವ ಅಶೋಕ್ ಕೂಡ ಭೇಟಿ. ಸಂಜೆ 5-30ಕ್ಕೆ ಪ್ರಯಾಣಿಸಲಿರುವ ನಾಯಕರು.

2:38 PM IST:

ತುಮಕೂರು: ಶಾಲೆಗಳಲ್ಲಿ ಗಣಪತಿ ಕೂರಿಸುವ ವಿಚಾರವಾಗಿ ತುಮಕೂರಿನ ತಿಪಟೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆ. ಗಣಪತಿ ಉತ್ಸವ ಈ ದೇಶದಲ್ಲಿ ಸ್ವಾತಂತ್ರ ಹೋರಾಟದ ಅಸ್ತ್ರವಾಗಿ ಶುರುವಾಯಿತು. ಅದಕ್ಕೂ ಮೊದಲು ಗಣಪತಿ ಪೂಜೆ ಎಲ್ಲಾ ದೇವರುಗಳಂತೆ ಮನೆಯೊಳಗೆ ನಡೆಯುತ್ತಿತ್ತು. ಬಾಲಗಂಗಧಾರನಾಥ್ ತಿಲಕ್ ರ ಕರೆ ಬಳಿಕ ಶಾಲೆಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಬೀದಿ ಹಳ್ಳಿಗಳಲ್ಲಿ ಹಾಗೂ ಎಲ್ಲೆಕಡೆ, ಗಣಪತಿ ಉತ್ಸವ ಶುರುವಾಯಿತು. ಯಾವುದೋ ಸರ್ಕಾರ ಬಂದ್ಮೇಲೆ ಶುರುವಾದ ಪದ್ದತಿಯಲ್ಲ. ತಲೆ ತಲೆಮಾರುಗಳಿಂದ ನಡೆದಿರುವ ಪದ್ದತಿಗಳು. ರಿಲಿಜೀಯಸ್ ಪ್ರಾಕ್ಟೀಸ್ ಮತ್ತು ಸೊಷಿಯಲ್ ಮೂಮೆಂಟ್. ಸ್ವಾತಂತ್ರ ಹೋರಾಟದಲ್ಲಿ ಭಾರತೀಯರನ್ನು ಒಗ್ಗೂಡಿಸಲು ಬಳಸಿದ ಒಂದು ಅಸ್ತ್ರ ಎಂದಿದ್ದಾರೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್.

1:28 PM IST:

ಹೆಣ್ಣು ಮಕ್ಕಳಿಗೆ ಕೆಲಸ ಬೇಕು ಅಂದ್ರೆ ಮಂಚ ಏರಬೇಕು ಎಂಬ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಖಂಡಿಸಿ,  ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರುರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು ಸೇರಿದಂತೆ ಪಕ್ಷದ ಮುಖಂಡರು ಭಾಗಿ.

1:20 PM IST:

ಬಳ್ಳಾರಿ: ಬಳ್ಳಾರಿಯಲ್ಲಿ ಶ್ರೀರಾಮುಲು ಹೇಳಿಕೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಆಹ್ವಾನಿಸುತ್ತೇನೆ ಎಂದ ಶ್ರೀರಾಮುಲು. ಸಿದ್ದರಾಮಯ್ಯ ಹಿಂದುಳಿದ ಸಮಾಜದ ನಾಯಕ. ಅವರು ಬಿಜೆಪಿಗೆ ಬರಲಿ ಬಂದ್ರೇ ಶಕ್ತಿ ಬರಲಿದೆ ಎಂದರು.ಕಾಂಗ್ರೆಸ್ ಪಕ್ಷದಿಂದ ಎಲ್ಲ ಹಿಂದೂಳಿದ ಹಿರಿಯ ನಾಯಕರು ಬಿಜೆಪಿಗೆ ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಬಿಜೆಪಿಗೆ ಬರಲಿ. ಬಿಜೆಪಿ ಹಿಂದುಳಿದ ವರ್ಗಗಳನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗೇ ಕಾಂಗ್ರೆಸ್ ನಿಂದ ಹಿರಿಯ ನಾಯಕರು ಬಿಜೆಪಿಗೆ ಬಂದಿದ್ದಾರೆ. ಸಿದ್ದರಾಮಯ್ಯರಿಗೆ ಡಿಕೆಶಿ ಇರಿಸುಮುರಿಸು ಮಾಡುತ್ತಿದ್ದಾರೆ. ಅವರಲ್ಲೇ ಸಾಕಷ್ಟು ಜಿದ್ದಾಜಿದ್ದಿ ಇದೆ. ಹೀಗಾಗಿ ಅವರನ್ನ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಹಿಂದುಳಿದ ನಾಯಕರು ಎಲ್ಲರೂ ಒಂದಾಗಬೇಕು. ಕುರುಬ ಸಮುದಾಯದಿಂದ ಬಿಜೆಪಿಯಿಂದ ಹಲವರು ಸಚಿವರಾಗಿದ್ದಾರೆ. ನಾನು ಎಂದೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಪಕ್ಷದ ಸಿದ್ಧಾಂತಗಳ  ಆಧಾರದ ಮೇಲೆ ಚುನಾವಣೆ ಎದುರಿಸುತ್ತೇನೆ. ಹಿಂದುಳಿದ ನಾಯಕರು ಪಕ್ಷಕ್ಕೆ ಬರಲಿ ಅನ್ನೋ ಅರ್ಥದಲ್ಲಿ ಹೇಳಿಕೆ ನೀಡಿರುವೆ. ಸಿದ್ದರಾಮಯ್ಯ ಬಗ್ಗೆ ಮಾತನಾಡಿರೋ ಕುರಿತು ನಿನ್ನೆ ರಾಜಾಧ್ಯಕ್ಷರಿಗೆ ಸ್ಪಷ್ಟಿಕರಣ ನೀಡಿ ಬಂದಿರುವೆ.  ಅವರನ್ನ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ, ಎಂದಿದ್ದಾರೆ.

12:53 PM IST:

ಉಡುಪಿ: ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ  ಸಾವರ್ಕರ್ ಫ್ಲೆಕ್ಸ್‌ಗೆ ವಿರೋಧ. ಫ್ಲೆಕ್ಸ್ ಅಳವಡಿಸಲು ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್- ಎಸ್ ಡಿಪಿಐ. ಆಕ್ಷೇಪ ಬಂದಾಗ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿದ್ದ ಯಶ್ ಪಾಲ್. ಸರ್ಕಲ್ ನಲ್ಲಿ ಸಾವರ್ಕರ್ ಪುತ್ತಳಿ ರಚಿಸಲು ಅನುಮತಿ ಕೋರಿದ ಯಶ್ ಪಾಲ್ ಸುವರ್ಣ. ಉಡುಪಿ ನಗರಸಭೆಗೆ ಯಶ್ ಪಾಲ್ ಸುವರ್ಣ ಅನುಮತಿ ಕೋರಿ ಪತ್ರ. ಯಶ್ ಪಾಲ್ ಸುವರ್ಣ ಬಿಜೆಪಿ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಉಡುಪಿ ನಗರಸಭೆಯ ಅಧ್ಯಕ್ಷರು ಪೌರಾಯುಕ್ತರಿಗೆ ಪತ್ರ ಬರೆದ ಯಶ್ ಪಾಲ್ ಸುವರ್ಣ.

12:07 PM IST:

ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ  ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಜೊತೆಗೆ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿರುವ  ಹಿಂದು ವಿರೋಧಿ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆಂದು, BJP ಯುವ ಮೋರ್ಚಾ ಜಿಲ್ಲಾಧ್ಯಕ್ಷ  ದರ್ಶನ್ ಜೋಯಪ್ಪ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭ ಪೋಲೀಸರು ಬಿಗಿ ಬಂದೋಬಸ್ತ್  ವ್ಯವಸ್ಥೆಗೊಳಿಸಿ ಸಿದ್ಧರಾಮಯ್ಯರ ವಾಹನ ಮುಂದೆ ಚಲಿಸಲು ವ್ಯವಸ್ಥೆ ಮಾಡಲಾಯಿತು.

10:54 AM IST:

ಶಿವಮೊಗ್ಗದಲ್ಲಿ ಮಾಜಿ ಸೈನಿಕನಿಂದ ಶಾಂತಿ ಕಾಪಾಡಲು ಪೀಸ್ ಮಾರ್ಚ್.  ಶಿವಮೊಗ್ಗದ ಬಸ್ ನಿಲ್ದಾಣದಿಂದ ಡಿಸಿ ಕಚೇರಿವರೆಗೆ ತ್ರಿವರ್ಣ ಧ್ವಜ ಹಿಡಿದು ಶಾಂತಿ ಮೆರವಣಿಗೆ. ಶಿವಮೊಗ್ಗದ ಮಾಜಿ ಸೈನಿಕ ಮಂಜುನಾಥ ರಿಂದ ತ್ರಿವರ್ಣ ಧ್ವಜವನ್ನು ಹಿಡಿದು ಏಕ ವ್ಯಕ್ತಿ ಮೆರವಣಿಗ. ಶಿವಮೊಗ್ಗ ಜಿಲ್ಲೆಯಲ್ಲಿ  ಪ್ರಜೆಗಳು ಶಾಂತಿ ಹಾಗೂ ಸಮಾನತೆಯ ಬದುಕುವ ನಿಟ್ಟಿನಲ್ಲಿ ಸಾಗಬೇಕುರಾಷ್ಟ್ರೀಯತೆಗೆ ಅವಮಾನವಾಗುವಂತೆ ಯಾವುದೇ ಕೃತ್ಯಗಳು, ಘಟನೆಗಳು ನಡೆಯಬಾರದು.  ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮಾಜಿ ಸೈನಿಕನ ಮನವಿ. ಕೆಲ ಸಮಾಜಘಾತಕ ಶಕ್ತಿಗಳು ಈ ದೇಶದ ಸ್ವಾತಂತ್ರ ಹೋರಾಟಗಾರರನ್ನು ನಿಂದಿಸುತ್ತಿದ್ದಾರೆ.  ಅವಾಚ್ಯ ಶಬ್ದಗಳನ್ನು ಬಳಸುತ್ತಿರುವುದು ದೇಶದ ಸಮಸ್ತ ಸ್ವಾತಂತ್ರ ಹೋರಾಟಗಾರರಿಗೆ ಅವಮಾನಿಸಿದಂತೆ,  ದೇಶದ ಪ್ರಜೆಗಳ ರಕ್ಷಣೆಗಾಗಿ ಹಗಲಿರುಳು ಎನ್ನದೆ ಗಡಿಯನ್ನು ಕಾಯುತ್ತಿದ್ದಾರೆ. ಭಾರತದ ಏಕತೆಯ ಇರುವ ದುಷ್ಟಶಕ್ತಿಗಳ ವಿರುದ್ಧ ಸರಿಯಾದ ಕಾನೂನು ಕ್ರಮಕ್ಕೆ ಮುಂದಾಗಬೇಕು.  ದೇಶದ ವಿರುದ್ಧ ನಡೆಸುವ ಯಾವುದೇ ಕೃತ್ಯವನ್ನು ನಾವು ಖಂಡಿಸಬೇಕು, ಎಂದಿದ್ದಾರೆ.

10:34 AM IST:

ಕೊಡಗು: ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಕೊಡಗಿಗೆ ಆಗಮಿಸಿದ ಸಿದ್ದರಾಮಯ್ಯ. ಕೊಡಗಿನ‌ ಗಡಿಯಲ್ಲೇ ಸಿದ್ದರಾಮಯ್ಯಗೆ ತಟ್ಟಿದ ಗೆರಾವ್, ಪ್ರತಿಭಟನೆ ಬಿಸಿ. ತಿತಿಮತಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಗೇರಾವ್, ಕಪ್ಪುಪಟ್ಟಿ ಪ್ರದರ್ಶನ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿಯಲ್ಲಿ ನಡೆದ ಘಟನೆ. ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಗೆರಾವ್, ಕಪ್ಪು ಪಟ್ಟಿ ಪ್ರದರ್ಶನ. ಗೋ ಬ್ಯಾಕ್, ಸಿದ್ದು ಖಾನ್ ಅಂತ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ. ಟಿಪ್ಪು ಜಯಂತಿ ವಿಚಾರವಾಗಿ ಸಿದ್ದು ವಿರುದ್ಧ ಕೊಡಗಿನಲ್ಲಿ ಆರದ ಸಿಟ್ಟು.

10:14 AM IST:

ಆರ್ ಎಸ್ ಎಸ್ ನಾಯಕರ ಜೊತೆ ಸಿಎಂ ಬೊಮ್ಮಾಯಿ‌ ಸಭೆ. ರೇಸ್ ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸಿಎಂ ಸಭೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು RSS ಮುಖಂಡರ ಜೊತೆ ಸಿಎಂ ಸಭೆ. ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ಹಿನ್ನೆಲೆ ಸಿಎಂ ಬೊಮ್ಮಾಯಿ‌ ಜೊತೆ ಚರ್ಚೆ ನಡೆಸುತ್ತಿರುವ ಪಕ್ಷದ ನಾಯಕರು.

9:46 AM IST:

ಒಟ್ಟು ಹನ್ನೆರಡು ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆ. ಏಳು ರಾಜ್ಯಗಳ ಎಲೆಕ್ಷನ್ ಹಾಗೂ ಲೋಕಸಭಾ ಎಲೆಕ್ಷನ್ ಗುರಿಯಾಗಿಸಿಕೊಂಡು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ. ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರ ವರೆಗೂ ಕಾಂಗ್ರೆಸ್ ಮಹಾ ಪಾದಯಾತ್ರೆ. ಮುಂದೆ ಸಾರ್ವತ್ರಿಕ ಚುನಾವಣೆಗಳಿರುವ ರಾಜ್ಯಗಳಲ್ಲಿ ಹೆಚ್ಚು ಸಂಚಾರ ನಡೆಸಲಿರುವ ಭಾರತ್ ಜೋಡೋ ಯಾತ್ರೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಮುಂದೆ ಸಾರ್ವತ್ರಿಕ ಚುನಾವಣೆಗಳು ಬರಲಿವೆ ಹಾಗಾಗಿ ಈ ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆ ಹೆಚ್ಚು ಸಂಚಾರ ಮಾಡುವ ರೀತಿಯಲ್ಲಿ ಪ್ಲ್ಯಾನ್. ಕರ್ನಾಟಕ 21 ದಿನ, 511 ಕಿಲೋಮೀಟರ್ ಪಾದಯಾತ್ರೆ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಚುನಾವಣೆಗಳಿರುವ  ರಾಜ್ಯಗಳಲ್ಲಿ 15-20 ದಿನಗಳ ಕಾಲ ಪಾದಯಾತ್ರೆ. ಉಳಿದಂತೆ ಇತರೆ ರಾಜ್ಯಗಳಲ್ಲಿ 3 ರಿಂದ 5 ದಿನ ಪಾದಯಾತ್ರೆ ಮಾಡಲಿರುವ ಕಾಂಗ್ರೆಸ್ ನಾಯಕರು. ದೇಶಾದ್ಯಂತ ಒಟ್ಟು 3571 ಕಿಲೋ ಮೀಟರ್ ಹೆಜ್ಜೆ ಹಾಕಲಿರುವ ಕೈ ನಾಯಕರು. 148 ದಿನಗಳ ಕಾಲ ಭಾರತ್ ಜೋಡೋ ಯಾತ್ರೆ. ಒಟ್ಟು 68 ಲೋಕಸಭಾ ಕ್ಷೇತ್ರಗಳು, 203 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ದಂಡಯಾತ್ರೆ. ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಸಂಚಾರ ಮಾಡಲಿರುವ ಯಾತ್ರೆ. ಚಾಮರಾಜನಗರ, ಮೈಸೂರು ನಗರ, ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ನಲ್ಲಿ ಕ್ರಮಿಸಲಿರುವ ಮಾಡಲಿರುವ ಭಾರತ್ ಜೋಡೋ ಯಾತ್ರೆ.

9:36 AM IST:

ಮೈಸೂರು: ದಸರಾ ಗಜಪಡೆಗಳಿಗೆ ಇಂದಿನಿಂದ ಮರಳು ಮೂಟೆ ತಾಲೀಮು.ಇಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ಅಭಿಮನ್ಯುಗೆ ಬೆನ್ನಿಗೆ ಗಾದಿ-ನಮ್ದಾ ಕಟ್ಟಿ ವಿಶೇಷ ಪೂಜೆ ನೆರವೇಸಿದ ಬಳಿಕ ಭಾರ ಹೊರುವ ತಾಲೀಮು ಆರಂಭ. ಅರ್ಚಕ ಪ್ರಹ್ಲಾದ್ ರಾವ್ ಅವರಿಂದ ಅಭಿಮನ್ಯುವಿಗೆ ವಿಶೇಷ ಪೂಜೆ ನೆರವೇರಿಕೆ. ಅಭಿಮನ್ಯು ಜೊತೆಗೆ ಕುಮ್ಕಿ ಆನೆಗಳಾಗಿ ಸಾಗಲಿರುವ ಚೈತ್ರಾ ಮತ್ತು ಕಾವೇರಿಯನ್ನು ಒಟ್ಟಿಗೆ ನಿಲ್ಲಿಸಿ ಪೂಜೆ ನೆರವೇರಿಕೆ. ಡಿಸಿಎಫ್‌ ಕರಿಕಾಳನ್ ಸಮ್ಮುಖದಲ್ಲಿ ಅಂಬಾರಿ ಆನೆ ಅಭಿಮನ್ಯು,ಕುಮ್ಕಿ ಆನೆಗಳಾದ ಚೈತ್ರಾ, ಕಾವೇರಿಗೆ ವಿಶೇಷ ಪೂಜೆ ಸಲ್ಲಿಕೆ. ಗಾದಿ-ನಮ್ದಾ ಜೊತೆಗೆ ಮರಳಿನ ಮೂಟೆಗಳನ್ನಿರಿಸಿ ಭಾರ ಹೊರುವ ತಾಲೀಮಿಗೆ ಚಾಲನೆ. ಗಾದಿ-ನಮ್ದಾ ಜೊತೆಗೆ ಮರಳಿನ ಮೂಟೆಗಳನ್ನು ಹೊತ್ತು ಸಾಗಿದ ಅಭಿಮನ್ಯು. ಆರಂಭದಲ್ಲಿ 500 ಕೆ ಜಿಯಷ್ಟು ಭಾರ ಹೊರಿಸಿ ತಾಲೀಮು. ದಿನ ಕಳೆದಂತೆ ಹಂತ ಹಂತವಾಗಿ ಭಾರ ಹೆಚ್ಚಿಸುತ್ತಾ 750 ಕೆ ಜಿ ತೂಕದ ಚಿನ್ನದ ಅಂಬಾರಿಯನ್ನು ಸುಲಲಿತವಾಗಿ ಹೊತ್ತು ಸಾಗಲು ಅಂಬಾರಿ ಆನೆಯನ್ನು ಅಣಿಗೊಳಿಸಲಿರುವ ಅರಣ್ಯ ಇಲಾಖೆ ಸಿಬ್ಬಂದಿ.ಇಂದು ಬೆಳಗ್ಗೆ ಪೂಜೆ ನೆರವೇರಿದ ಬಳಿಕ ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟ ಅಭಿಮನ್ಯು ಆ್ಯಂಡ್ ಟೀಮ್.
ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಸಾಗಿ ಬನ್ನಿ ಮಂಟಪ ತಲುಪಿದ ನಂತರ ಮತ್ತೆ ಅರಮನೆ ಆವರಣಕ್ಕೆ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಮರಳಿದೆ.

9:26 AM IST:

ಇಂದು 144 ನಿಷೇದಾಜ್ಞೆ ಅಂತ್ಯ. ಶಿವಮೊಗ್ಗದ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ. ಅಮೀರ್ ಅಹ್ಮದ್ ಸರ್ಕಲ್, ಶಿವಪ್ಪನಾಯಕನ ಸರ್ಕಲ್, ಗಾಂಧಿ ಬಜಾರ್, ಎಂಕೆಕೆ ರಸ್ತೆ , ಸಿಗೆಹಟ್ಟಿ , ಬೈಪಾಸ್ ರಸ್ತೆ ಮೊದಲಾದ ಕಡೆಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್. ಪ್ಲೆಕ್ಸ್ ತೆರವು, ಚಾಕು ಇರಿತ ಸೇರಿ ಪ್ರತ್ಯೇಕ ನಾಲ್ಕು ಪ್ರಕರಣಗಳು ದಾಖಲು. ಚಾಕು ಇರಿತದ ಪ್ರಕರಣದಲ್ಲಿ ಆರೋಪಿಗಳ ಪೋಲಿಸ್ ಕಸ್ಟಡಿ ಇಂದು ಅಂತ್ಯ. ನಿಷೇದಾಜ್ಞೆ ನಡುವೆ ಶಾಲಾ ಕಾಲೇಜು ಎಂದಿನಂತೆ ಆರಂಭ. ಖಾಸಗಿ ಮತ್ತು ಕೆಎಸ್‌ಆರ್ಟಿಸಿ ಬಸ್, ಆಟೋ, ಟ್ಯಾಕ್ಸಿ ನಗರ ಸಾರಿಗೆ ಎಂದಿನಂತೆ ಆರಂಭ. ಬೈಕ್‌ಗಳಲ್ಲಿ ಹಿಂಬದಿ ಸವಾರರಿಗೆ ನಿರ್ಬಂಧ. 40 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ. ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

9:23 AM IST: