Karnataka News Live updates: ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡೋದು ತಪ್ಪು: ಜೋಶಿ

Kannada News live updates congress protest against BJP for throwing eggs on former CM Siddaramaiah

ಸಾವರ್ಕರ್, ದೇಶಭಕ್ತರೆಂದು ಮಹಾತ್ಮಾ ಗಾಂಧಿ ಅವರೂ ಸಹ ಒಪ್ಪಿಕೊಂಡಿದ್ದರು. ಇಂದಿರಾ ಗಾಂಧಿಯವರೂ ಸಹ ಅವರನ್ನ ಒಪ್ಪಿಕೊಂಡಿದ್ದರು. ಆದ್ರೆ ಸಿದ್ಧರಾಮಯ್ಯ ಅವರು   ಹಗುರವಾಗಿ ಮಾತನಾಡುವುದು ಸರಿಯಲ್ಲ.ಇಂದಿರಾಗಾಂಧಿ ಅವರ ಪತ್ರಗಳನ್ನೇ ಕಾಂಗ್ರೆಸ್ ನವರು ಒಪ್ಪೊಕೊಳ್ಳೋಲು ತಯಾರಿಲ್ಲ. ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಓಟ್ ಬ್ಯಾಂಕ್ ಗೆ ಕಾಂಗ್ರೆಸ್ ಮುಂದಾಗಿತ್ತು.ದೇಶದಲ್ಲಿ ಈಗಿರುವ ಕಾಂಗ್ರೆಸ್ ನಕಲಿ ಕಾಂಗ್ರೆಸ್.ನಕಲಿ ಗಾಂಧಿಗಳನ್ನ ಮೆಚ್ಚಿಸುವುದಕ್ಕೆ ಕಾಂಗ್ರೆಸ್ ನವರು ಈ ರೀತಿ ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ,. ಸಿದ್ಧರಾಮಯ್ಯ ಕರ್ನಾಟಕದಲ್ಲಿ ಭ್ರಮೆಯಲ್ಲಿ ಓಡಾಡುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

ಸಿದ್ದರಾಮಯ್ಯ ಕಾರಿಗೆ  ಮೊಟ್ಟೆ ಎಸೆದ ಪ್ರಕರಣದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್‌ನಿಂದ ವಿನೂತನ ಪ್ರತಿಭಟನೆ ನಡೆಸಲಾಗುತ್ತಿದೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ವಿನೂತನ ಪ್ರತಿಭಟನೆ. ಬೆಂಗಳೂರಿನ ಯುದ್ದ ಸ್ಮಾರಕದ ಬಳಿ ನಡೆಯಲಿರುವ ಪ್ರತಿಭಟನೆ. ಮೊಟ್ಟೆ ವಿತರಣೆ ಮಾಡಲು‌ ಮುಂದಾಗಿರುವ ಯೂತ್ ಕಾಂಗ್ರೆಸ್ ಕಾರ್ಯಕರ್ತರು.ಎಲ್ಲಾ ಸಚಿವರಿಗೆ ಮೊಟ್ಟೆ ವಿತರಣೆ ಮಾಡುವ ಮೂಲಕ ಪ್ರತಿಭಟನೆ ಮಾಡಲಿರುವ ಯೂತ್ ಕಾಂಗ್ರೆಸ್ ಕಾರ್ಯಕರ್ತರು

3:57 PM IST

ಪ್ರತಿಭಟಿಸುವಾಗ ಲಕ್ಷ್ಮಣ ರೇಖೆ ಮೀರಬಾರದು: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ, ಪ್ರಧಾನಿ ಮೋದಿ, ಬೊಮ್ಮಾಯಿ ಹಾಗೂ ಕಟೀಲ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪಂಥಾಹ್ವಾನ ವಿಚಾರ. ಸಿದ್ಧರಾಮಯ್ಯ ಅವರು ರಾಜ್ಯ ಕಂಡ ಮುಖ್ಯಮಂತ್ರಿಗಳು. ಬಿಜೆಪಿಯ ಯಾವುದೇ ನಾಯಕರು ಇಂತಹ ಘಟನೆಗಳಿಗೆ ಯಾವುದೇ ರೀತಿಯ ಪ್ರಚೋದನೆ ನೀಡಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದ್ರೆ ಯಾರೂ ಲಕ್ಷ್ಮಣ ರೇಖೆ ಮೀರಬಾರದು‌. ಅವರ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಆದ್ರೆ ಇದನ್ನೇ ಸಿದ್ಧರಾಮಯ್ಯ ಅವರು ಪ್ರಚೋದನೆ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಈ ತರ ಮಾಡುವುದು ಸರಿಯಲ್ಲ, ಎಂದಿದ್ದಾರೆ. 

2:45 PM IST

ಸಿದ್ದರಾಮಯ್ಯ ನೋಡಿ ಬಿಜೆಪಿಗೆ ದಿಗ್ಭ್ರಮೆ ಆಗಿದೆ: ಪುಟ್ಟರಂಗ ಶೆಟ್ಟಿ

ಚಾಮರಾಜನಗರ: ಸಿದ್ದರಾಮಯ್ಯ ಅವರನ್ನ ನೋಡಿ ಬಿಜೆಪಿ ಯವರು ದಿಗ್ಭ್ರಮೆ ಆಗಿದ್ದಾರೆ. ಚಾಮರಾಜನಗರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಹೇಳಿಕೆ. ಅವರನ್ನ ಅವೈಡ್ ಮಾಡಲು ಆಗ್ತಿಲ್ಲ. ವಿಪಕ್ಷ ನಾಯಕನ ಮೇಲೆ ಈ ರೀತಿ ಆಗ್ತಿದೆ ಅಂದ್ರೆ ಇದಕ್ಕೆ ಶಾಸಕರು, ಸಚಿವರು ಕುಮ್ಮಕ್ಕು ಕೊಡ್ತಾರೆ ಅಂದ್ರೆ ನಮ್ಮ ವ್ಯವಸ್ಥೆ ಏನಾಗಿದೆ? ಇದನ್ನ ಬಿಟ್ಟು ನೀವು ಅಭಿವೃದ್ಧಿ ಕಡೆ ಗಮನ ಕೊಡಿ. ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಹಾಗೆ ನಾವೂ ಮಾಡಿದರೆ ಇವರ ಒಬ್ಬರು ಮಂತ್ರಿಗಳು ನಮ್ಮ ಕಡೆ ಬರಲು ಆಗಲ್ಲ. ಚಾಲೇಂಜ್ ಮಾಡ್ತಿನಿ ನಾನು. ಆ ರೀತಿ ಕೆಲಸ ಮಾಡುವುದರಿಂದ ಯಾವ ರೀತಿ ಮುಖಭಂಗ ಆಗುತ್ತೆ? ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೊ ಕಿತ್ತಾಕಿದ್ದು ನಿಜ, ಈಶ್ವರಪ್ಪನವರ ಮನೆ ಮುಂದೆ ಟಿಪ್ಪು ಸುಲ್ತಾನ್ ಫೋಟೊ ಹಾಕಿದ್ರೆ ಸುಮ್ನೆ ಇರ್ತಾರಾ? ಶಾಸಕ ಪುಟ್ಟರಂಗಶೆಟ್ಟಿ ಪ್ರಶ್ನೆ..

11:27 AM IST

ಯಾವುದೇ ಕಾರಣಕ್ಕೂ ರಾಯಚೂರು ತೆಲಂಗಾಣಕ್ಕೆ ಸೇರಲು ಬಿಡೋಲ್ಲ: ಶರವಣ

ರಾಯಚೂರು: ನಗರದಲ್ಲಿ ಎಂಎಲ್‌ಸಿ ಶರವಣ ಹೇಳಿಕೆ. ರಾಯಚೂರು ತೆಲಂಗಾಣ ಸೇರ್ಪಡೆ ವಿಚಾರವಾಗಿ ತೆಲಂಗಾಣ ಸಿಎಂ ಕೆಸಿಆರ್ ಹೇಳಿಕೆ ಖಂಡಿಸಿದ ಎಂಎಲ್‌ಸಿ ಶರವಣ. ರಾಯಚೂರು ನಗರದ ಶಾಸಕರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಶಾಸಕರಿಗೆ ಪರಿಜ್ಞಾನ ಇಲ್ವಾ? ಜನರು ಶಾಸಕರೇ ಸೇವಕವೆಂದು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ‌ಸರ್ಕಾರವಿದೆ. ರಾಯಚೂರು ಅಭಿವೃದ್ಧಿ ಮಾಡಬೇಕಾಗಿತ್ತು. ಅದು ಬಿಟ್ಟು ಸಚಿವರ ಮುಂದೆ ರಾಯಚೂರು ತೆಲಂಗಾಣಕ್ಕೆ ಸೇರಿಸಿ ಅಂತ ಹೇಳಿದ್ದು ನಿಮಗೆ ನೈತಿಕತೆ ಇಲ್ವಾ?
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೀವಂತವಾಗಿದೆ ನಾವು ಜೀವಂತವಾಗಿ ಇರುವರೆಗೂ ಯಾವುದೇ ಕಾರಣಕ್ಕೂ ರಾಯಚೂರು ತೆಲಂಗಾಣಕ್ಕೆ ಸೇರಿಸಲು ಬಿಡಲ್ಲ. ಮುಂದಿನ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರ ಬರುತ್ತೆ. ರಾಯಚೂರಿನ ಸೇವಕರಾದ ಡಾ.ಶಿವರಾಜ್ ಪಾಟೀಲ್‌ ಅವರನ್ನು ಮನೆಗೆ ಕಳಿಸುವ ಕೆಲಸ ಆಗುತ್ತೆ ಎಂದಿದ್ದಾರೆ. ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶರವಣ, ಇಂತಹ ಘಟನೆಗಳು ಆಗದಂತೆ ನೋಡಿ ಕೊಳ್ಳಬೇಕಿದೆ. ಕೊಡಗಿನಲ್ಲಿ ಸಿದ್ದರಾಮಯ್ಯಗೆ ಅವಮಾನ ಮಾಡಿದ್ದು ಸರಿಯಲ್ಲ. ಇದನ್ನು ತೀವ್ರವಾಗಿ ಖಂಡಿಸುವೆ. ಎರಡು ಪಕ್ಷಗಳು ಧರ್ಮದ ಅಜೆಂಡಾದಲ್ಲಿ ರಾಜಕೀಯ ಮಾಡುತ್ತಿರುವುದು ತರವಲ್ಲ. ಚುನಾವಣೆ ವರ್ಷ ಇರುವುದರಿಂದ ಇಂತಹ ಆಟಗಳು ನಡೆಸಿದ್ದಾರೆ. ಇದನ್ನು ಜೆಡಿಎಸ್ ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಿದ್ದಾರೆ ಶರವಣ.

11:12 AM IST

HSR ಲೇಔಟ್‌ನಲ್ಲಿ ವೃದ್ದ ಮಹಿಳೆ ಕೊಲೆ: ಹಂತಕರು ಅರೆಸ್ಟ್

ವೃದ್ದೆ ಕೊಂದು ಚಿನ್ನಾಭರಣ ದೋಚಿದ್ದ ಹಂತಕರು ಅರೆಸ್ಟ್.ಜಯಶ್ರಿ ಎಂಬ ವೃದ್ಧೆಯನ್ನ ಕಟ್ಟಿ ಹಾಕಿ ದರೋಡೆ ಮಾಡಿದ ಗ್ಯಾಂಗ್. ಬಳಿಕ ವೃದ್ದೆಯನ್ನ ಹತ್ಯೆ ಮಾಡಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿತ್ತು ಈ ಖತರ್ನಾಕ್ ಗ್ಯಾಂಗ್. ಪೊಲೀಸರ ಸಮಯಪ್ರಜ್ಞೆಯಿಂದ ನೇಪಾಳ ಮೂಲದ ಆರೋಪಿಗಳು ಅರೆಸ್ಟ್. ಆರೋಪಿಗಳು ನೇಪಾಳ ಮೂಲದವರು ಎಂದು ತಿಳಿಯುತ್ತಿದ್ದಂತೆ ಅಲರ್ಟ್.ಆರೋಪಿಗಳ ಬೆನ್ನತ್ತಿ ನೇಪಾಳ ದಾರಿ ಹಿಡಿದ ಎರಡು ತಂಡಗಳು. ಲೈವ್ ಲೋಕೇಷನ್, ಟೋಲ್ ಸಿಸಿಟಿವಿ ಮೂಲಕ ಆರೋಪಿಗಳನ್ನ ಬೆನ್ನತ್ತಿದ್ದ ಪೊಲೀಸರು. ಭಾರತದ ಗಡಿ ದಾಟುವ ಮುನ್ನ ಆರೋಪಿಗಳ ಬಂಧನಕ್ಕೆ ಪೊಲೀಸರ ಪ್ರಯತ್ನ. ಲಕ್ನೋ ಮೂಲಕ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳು. ಅದ್ರೆ ತನ್ನ ಸಹಚರರು ಬಾರದ ಹಿನ್ನಲೆ ಕಾನ್ಪುರದಲ್ಲಿಯೇ ಉಳಿದಿತ್ತು ಗ್ಯಾಂಗ್. ಲೈವ್ ಲೋಕೇಷನ್ ವೇಳೆ ಆರೋಪಿಗಳು ಕಾನ್ಪುರದಲ್ಲಿ ಇರುವುದು ಪತ್ತೆ. ಕೂಡಲೇ ಕಾನ್ಪುರದಲ್ಲಿ ಆರೋಪಿಗಳ ರೌಂಡಪ್ ಮಾಡಿ ಸೆರೆ ಹಿಡಿದ ಪೊಲೀಸರು. ಆರೋಪಿಗಳನ್ನ ಚಿನ್ನಾಭರಣ ಸಹಿತ ಬಂಧಿಸಿ ಕರೆ ತಂದ ವಿಶೇಷ ತಂಡ. ನೇಪಾಳಿ ಗ್ಯಾಂಗ್ ಬಂಧನಕ್ಕೆ ಆರು ಇನ್ಸ್‌ಪೆಕ್ಟರ್ಸ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದ ಆಗ್ನೇಯ ವಿಭಾಗ ಡಿಸಿಪಿ ಸಿ ಕೆ ಬಾಬಾ.

11:10 AM IST

ಸಿದ್ದಾಂತಕ್ಕೆ ಸಿದ್ದಾಂತ ಉತ್ತರವಾಗಬೇಕು,

ಸಿದ್ದಾಂತವನ್ನು ಕಲ್ಲು-ಮೊಟ್ಟೆಗಳ ಮೂಲಕ ಎದುರಿಸುವುದು, ಸಮರ್ಥಿಸುವುದು ಹೇಡಿಗಳ ಲಕ್ಷಣ. ಬನ್ನಿ ಚರ್ಚೆ ಮಾಡೋಣವೆಂದು ಕೊಡಿಗಿನಲ್ಲಿ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. 

10:48 AM IST

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ: ಆರೋಪಿಗಳನ್ನು ವಶಕ್ಕೆ ಪಡೆದ NIB

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದೆ ರಾಷ್ಟ್ರೀಯ ತನಿಖಾ ದಳ. ಆರೋಪಿಗಳಾದ ರಿಯಾಜ್ (27), ನೌಫಲ್ (28), ಅಬಿದ್ (22), ಸೈಯ್ಯದ್ (32) ಮತ್ತು ಅಬ್ದುಲ್ ಬಶೀರ್ (29) ವಶಕ್ಕೆ ಪಡೆಯಲಾಗಿದೆ. ಬೆಳ್ಳಾರೆ ಪೊಲೀಸರ ವಶದಿಂದ ಎನ್‌ಐಎ ವಶಕ್ಕೆ ಆರೋಪಿಗಳು. ಐದು ದಿನಗಳ ಕಾಲ ಅರು ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ. ಜುಲೈ 27ರಂದು ನಡೆದಿದ್ದ ಪ್ರವೀಣ್ ನೆಟ್ಟಾರು ಹತ್ಯೆ.

10:44 AM IST

ಸಾಕಿದ ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಬಂಧನ

ಬೆಂಗಳೂರು: ಸಾಕಾಣಿಕ ಹಂದಿಗಳನ್ನು ಕಳ್ಳತನ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ. ಚಿಕ್ಕಜಾಲ ಪೊಲೀಸರಿಂದ ಹತ್ತು ಮಂದಿ ಆರೋಪಿಗಳ ಬಂಧನ. ಹುಣಸೇಮಾರನಹಳ್ಳಿ ಬಳಿ ಶೆಡ್ ನಲ್ಲಿ ಎಂಬತ್ತು ಸಾಕಾಣಿಕೆ ಹಂದಿಗಳನ್ನು ಎರಡು ಟೆಂಪೋಗಳಿಗೆ ತುಂಬುತ್ತಿದ್ದ ಆಸಾಮಿಗಳು. ಇಪ್ಪತ್ತು ಲಕ್ಷ ಮೌಲ್ಯದ ಹಂದಿಗಳನ್ನು ತುಂಬುತ್ತಿದ್ದು, ಶೆಡ್ ಬಳಿ ಬಂದಿದ್ದ ಮಾಲೀಕ. ಇದೇ ವೇಳೆ ಮಾಲೀಕ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿ. ರಾಯಚೂರಿನಿಂದ ಬಂದು ಬೆಂಗಳೂರಿನ ಗ್ರಾಮಾಂತರ ಭಾಗದಲ್ಲಿ ಸಾಕಾಣಿಕೆ ಹಂದಿಗಳನ್ನು ಕದಿಯುತ್ತಿದ್ದ ಗ್ಯಾಂಗ್. ಪ್ರಕರಣ ದಾಖಲಿಸಿಕೊಂಡು ಬಂಧನ ಮಾಡಲು ಹೋದ ಪೊಲೀಸರ ಮೇಲೆಯೂ ಹಲ್ಲೆ. ಕಳ್ಳತನ ಮಾಡಿದ್ದ ಹಂದಿಗಳನ್ನ ಕಡಿಮೆ ಹಣಕ್ಕೆ ಖರೀದಿ ಮಾಡ್ತಿದ್ದ ರಾಯಚೂರಿನ ಕಿರಣ್. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

10:42 AM IST

ಕಾಂಗ್ರೆಸ್ ಮುಂಖಡೆ ಭವ್ಯನರಸಿಂಹಮೂರ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಕಾಂಗ್ರೆಸ್ ಮುಂಖಡೆ ಭವ್ಯನರಸಿಂಹಮೂರ್ತಿಯನ್ನು ವಶಕ್ಕೆ ಪಡೆದ ಪೊಲೀಸರು. ವಿಜಯನಗರ ಪೊಲೀಸರಿಂದ ವಶಕ್ಕೆ. KPSC  ಭ್ರಷ್ಟಾಚಾರದ ಬಗ್ಗೆ ಪ್ರತಿಭಟನೆಗೆ ಪ್ಲಾನ್ ಮಾಡಿದ್ದ ಭವ್ಯ. ವಿಜಯನಗರದಲ್ಲಿ ಜಾಥವನ್ನು‌ ಹಮ್ಮಿಕೊಳ್ಳಯವ ಪ್ಲಾನ್ ಮಾಡಿದ್ರು. ಪೊಲೀಸರ ಅನುಮತಿ ಪಡೆಯದೇ ಜಾಥಾ ಮಾಡಲು ಪ್ಲಾನ್ ಮಾಡಲಾಗಿತ್ತು. 2 ಸಾವಿರ ಅಭ್ಯರ್ಥಿಗಳನ್ನು ಸೇರಿಸಿ ಇವತ್ತು ಜಾಥಾ ಹಮ್ಮಿಕೊಳ್ಳಲಾಗಿತ್ತು. ಇದೀಗ ಭವ್ಯ ನರಸಿಂಹಮೂರ್ತಿಯನ್ನು ವಶಕ್ಕೆ ಪಡೆದ ವಿಜಯನಗರ ಪೊಲೀಸರು.

3:57 PM IST:

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ, ಪ್ರಧಾನಿ ಮೋದಿ, ಬೊಮ್ಮಾಯಿ ಹಾಗೂ ಕಟೀಲ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪಂಥಾಹ್ವಾನ ವಿಚಾರ. ಸಿದ್ಧರಾಮಯ್ಯ ಅವರು ರಾಜ್ಯ ಕಂಡ ಮುಖ್ಯಮಂತ್ರಿಗಳು. ಬಿಜೆಪಿಯ ಯಾವುದೇ ನಾಯಕರು ಇಂತಹ ಘಟನೆಗಳಿಗೆ ಯಾವುದೇ ರೀತಿಯ ಪ್ರಚೋದನೆ ನೀಡಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದ್ರೆ ಯಾರೂ ಲಕ್ಷ್ಮಣ ರೇಖೆ ಮೀರಬಾರದು‌. ಅವರ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಆದ್ರೆ ಇದನ್ನೇ ಸಿದ್ಧರಾಮಯ್ಯ ಅವರು ಪ್ರಚೋದನೆ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಈ ತರ ಮಾಡುವುದು ಸರಿಯಲ್ಲ, ಎಂದಿದ್ದಾರೆ. 

3:57 PM IST:

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ, ಪ್ರಧಾನಿ ಮೋದಿ, ಬೊಮ್ಮಾಯಿ ಹಾಗೂ ಕಟೀಲ್ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪಂಥಾಹ್ವಾನ ವಿಚಾರ. ಸಿದ್ಧರಾಮಯ್ಯ ಅವರು ರಾಜ್ಯ ಕಂಡ ಮುಖ್ಯಮಂತ್ರಿಗಳು. ಬಿಜೆಪಿಯ ಯಾವುದೇ ನಾಯಕರು ಇಂತಹ ಘಟನೆಗಳಿಗೆ ಯಾವುದೇ ರೀತಿಯ ಪ್ರಚೋದನೆ ನೀಡಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದ್ರೆ ಯಾರೂ ಲಕ್ಷ್ಮಣ ರೇಖೆ ಮೀರಬಾರದು‌. ಅವರ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಆದ್ರೆ ಇದನ್ನೇ ಸಿದ್ಧರಾಮಯ್ಯ ಅವರು ಪ್ರಚೋದನೆ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಈ ತರ ಮಾಡುವುದು ಸರಿಯಲ್ಲ, ಎಂದಿದ್ದಾರೆ. 

2:45 PM IST:

ಚಾಮರಾಜನಗರ: ಸಿದ್ದರಾಮಯ್ಯ ಅವರನ್ನ ನೋಡಿ ಬಿಜೆಪಿ ಯವರು ದಿಗ್ಭ್ರಮೆ ಆಗಿದ್ದಾರೆ. ಚಾಮರಾಜನಗರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಹೇಳಿಕೆ. ಅವರನ್ನ ಅವೈಡ್ ಮಾಡಲು ಆಗ್ತಿಲ್ಲ. ವಿಪಕ್ಷ ನಾಯಕನ ಮೇಲೆ ಈ ರೀತಿ ಆಗ್ತಿದೆ ಅಂದ್ರೆ ಇದಕ್ಕೆ ಶಾಸಕರು, ಸಚಿವರು ಕುಮ್ಮಕ್ಕು ಕೊಡ್ತಾರೆ ಅಂದ್ರೆ ನಮ್ಮ ವ್ಯವಸ್ಥೆ ಏನಾಗಿದೆ? ಇದನ್ನ ಬಿಟ್ಟು ನೀವು ಅಭಿವೃದ್ಧಿ ಕಡೆ ಗಮನ ಕೊಡಿ. ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಹಾಗೆ ನಾವೂ ಮಾಡಿದರೆ ಇವರ ಒಬ್ಬರು ಮಂತ್ರಿಗಳು ನಮ್ಮ ಕಡೆ ಬರಲು ಆಗಲ್ಲ. ಚಾಲೇಂಜ್ ಮಾಡ್ತಿನಿ ನಾನು. ಆ ರೀತಿ ಕೆಲಸ ಮಾಡುವುದರಿಂದ ಯಾವ ರೀತಿ ಮುಖಭಂಗ ಆಗುತ್ತೆ? ಶಿವಮೊಗ್ಗದಲ್ಲಿ ಸಾವರ್ಕರ್ ಫೋಟೊ ಕಿತ್ತಾಕಿದ್ದು ನಿಜ, ಈಶ್ವರಪ್ಪನವರ ಮನೆ ಮುಂದೆ ಟಿಪ್ಪು ಸುಲ್ತಾನ್ ಫೋಟೊ ಹಾಕಿದ್ರೆ ಸುಮ್ನೆ ಇರ್ತಾರಾ? ಶಾಸಕ ಪುಟ್ಟರಂಗಶೆಟ್ಟಿ ಪ್ರಶ್ನೆ..

11:27 AM IST:

ರಾಯಚೂರು: ನಗರದಲ್ಲಿ ಎಂಎಲ್‌ಸಿ ಶರವಣ ಹೇಳಿಕೆ. ರಾಯಚೂರು ತೆಲಂಗಾಣ ಸೇರ್ಪಡೆ ವಿಚಾರವಾಗಿ ತೆಲಂಗಾಣ ಸಿಎಂ ಕೆಸಿಆರ್ ಹೇಳಿಕೆ ಖಂಡಿಸಿದ ಎಂಎಲ್‌ಸಿ ಶರವಣ. ರಾಯಚೂರು ನಗರದ ಶಾಸಕರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಶಾಸಕರಿಗೆ ಪರಿಜ್ಞಾನ ಇಲ್ವಾ? ಜನರು ಶಾಸಕರೇ ಸೇವಕವೆಂದು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ‌ಸರ್ಕಾರವಿದೆ. ರಾಯಚೂರು ಅಭಿವೃದ್ಧಿ ಮಾಡಬೇಕಾಗಿತ್ತು. ಅದು ಬಿಟ್ಟು ಸಚಿವರ ಮುಂದೆ ರಾಯಚೂರು ತೆಲಂಗಾಣಕ್ಕೆ ಸೇರಿಸಿ ಅಂತ ಹೇಳಿದ್ದು ನಿಮಗೆ ನೈತಿಕತೆ ಇಲ್ವಾ?
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಜೀವಂತವಾಗಿದೆ ನಾವು ಜೀವಂತವಾಗಿ ಇರುವರೆಗೂ ಯಾವುದೇ ಕಾರಣಕ್ಕೂ ರಾಯಚೂರು ತೆಲಂಗಾಣಕ್ಕೆ ಸೇರಿಸಲು ಬಿಡಲ್ಲ. ಮುಂದಿನ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರ ಬರುತ್ತೆ. ರಾಯಚೂರಿನ ಸೇವಕರಾದ ಡಾ.ಶಿವರಾಜ್ ಪಾಟೀಲ್‌ ಅವರನ್ನು ಮನೆಗೆ ಕಳಿಸುವ ಕೆಲಸ ಆಗುತ್ತೆ ಎಂದಿದ್ದಾರೆ. ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶರವಣ, ಇಂತಹ ಘಟನೆಗಳು ಆಗದಂತೆ ನೋಡಿ ಕೊಳ್ಳಬೇಕಿದೆ. ಕೊಡಗಿನಲ್ಲಿ ಸಿದ್ದರಾಮಯ್ಯಗೆ ಅವಮಾನ ಮಾಡಿದ್ದು ಸರಿಯಲ್ಲ. ಇದನ್ನು ತೀವ್ರವಾಗಿ ಖಂಡಿಸುವೆ. ಎರಡು ಪಕ್ಷಗಳು ಧರ್ಮದ ಅಜೆಂಡಾದಲ್ಲಿ ರಾಜಕೀಯ ಮಾಡುತ್ತಿರುವುದು ತರವಲ್ಲ. ಚುನಾವಣೆ ವರ್ಷ ಇರುವುದರಿಂದ ಇಂತಹ ಆಟಗಳು ನಡೆಸಿದ್ದಾರೆ. ಇದನ್ನು ಜೆಡಿಎಸ್ ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದಿದ್ದಾರೆ ಶರವಣ.

11:12 AM IST:

ವೃದ್ದೆ ಕೊಂದು ಚಿನ್ನಾಭರಣ ದೋಚಿದ್ದ ಹಂತಕರು ಅರೆಸ್ಟ್.ಜಯಶ್ರಿ ಎಂಬ ವೃದ್ಧೆಯನ್ನ ಕಟ್ಟಿ ಹಾಕಿ ದರೋಡೆ ಮಾಡಿದ ಗ್ಯಾಂಗ್. ಬಳಿಕ ವೃದ್ದೆಯನ್ನ ಹತ್ಯೆ ಮಾಡಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿತ್ತು ಈ ಖತರ್ನಾಕ್ ಗ್ಯಾಂಗ್. ಪೊಲೀಸರ ಸಮಯಪ್ರಜ್ಞೆಯಿಂದ ನೇಪಾಳ ಮೂಲದ ಆರೋಪಿಗಳು ಅರೆಸ್ಟ್. ಆರೋಪಿಗಳು ನೇಪಾಳ ಮೂಲದವರು ಎಂದು ತಿಳಿಯುತ್ತಿದ್ದಂತೆ ಅಲರ್ಟ್.ಆರೋಪಿಗಳ ಬೆನ್ನತ್ತಿ ನೇಪಾಳ ದಾರಿ ಹಿಡಿದ ಎರಡು ತಂಡಗಳು. ಲೈವ್ ಲೋಕೇಷನ್, ಟೋಲ್ ಸಿಸಿಟಿವಿ ಮೂಲಕ ಆರೋಪಿಗಳನ್ನ ಬೆನ್ನತ್ತಿದ್ದ ಪೊಲೀಸರು. ಭಾರತದ ಗಡಿ ದಾಟುವ ಮುನ್ನ ಆರೋಪಿಗಳ ಬಂಧನಕ್ಕೆ ಪೊಲೀಸರ ಪ್ರಯತ್ನ. ಲಕ್ನೋ ಮೂಲಕ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳು. ಅದ್ರೆ ತನ್ನ ಸಹಚರರು ಬಾರದ ಹಿನ್ನಲೆ ಕಾನ್ಪುರದಲ್ಲಿಯೇ ಉಳಿದಿತ್ತು ಗ್ಯಾಂಗ್. ಲೈವ್ ಲೋಕೇಷನ್ ವೇಳೆ ಆರೋಪಿಗಳು ಕಾನ್ಪುರದಲ್ಲಿ ಇರುವುದು ಪತ್ತೆ. ಕೂಡಲೇ ಕಾನ್ಪುರದಲ್ಲಿ ಆರೋಪಿಗಳ ರೌಂಡಪ್ ಮಾಡಿ ಸೆರೆ ಹಿಡಿದ ಪೊಲೀಸರು. ಆರೋಪಿಗಳನ್ನ ಚಿನ್ನಾಭರಣ ಸಹಿತ ಬಂಧಿಸಿ ಕರೆ ತಂದ ವಿಶೇಷ ತಂಡ. ನೇಪಾಳಿ ಗ್ಯಾಂಗ್ ಬಂಧನಕ್ಕೆ ಆರು ಇನ್ಸ್‌ಪೆಕ್ಟರ್ಸ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದ ಆಗ್ನೇಯ ವಿಭಾಗ ಡಿಸಿಪಿ ಸಿ ಕೆ ಬಾಬಾ.

11:10 AM IST:

ಸಿದ್ದಾಂತವನ್ನು ಕಲ್ಲು-ಮೊಟ್ಟೆಗಳ ಮೂಲಕ ಎದುರಿಸುವುದು, ಸಮರ್ಥಿಸುವುದು ಹೇಡಿಗಳ ಲಕ್ಷಣ. ಬನ್ನಿ ಚರ್ಚೆ ಮಾಡೋಣವೆಂದು ಕೊಡಿಗಿನಲ್ಲಿ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. 

10:48 AM IST:

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದೆ ರಾಷ್ಟ್ರೀಯ ತನಿಖಾ ದಳ. ಆರೋಪಿಗಳಾದ ರಿಯಾಜ್ (27), ನೌಫಲ್ (28), ಅಬಿದ್ (22), ಸೈಯ್ಯದ್ (32) ಮತ್ತು ಅಬ್ದುಲ್ ಬಶೀರ್ (29) ವಶಕ್ಕೆ ಪಡೆಯಲಾಗಿದೆ. ಬೆಳ್ಳಾರೆ ಪೊಲೀಸರ ವಶದಿಂದ ಎನ್‌ಐಎ ವಶಕ್ಕೆ ಆರೋಪಿಗಳು. ಐದು ದಿನಗಳ ಕಾಲ ಅರು ಆರೋಪಿಗಳನ್ನು ವಶಕ್ಕೆ ಪಡೆದ ಎನ್‌ಐಎ. ಜುಲೈ 27ರಂದು ನಡೆದಿದ್ದ ಪ್ರವೀಣ್ ನೆಟ್ಟಾರು ಹತ್ಯೆ.

10:44 AM IST:

ಬೆಂಗಳೂರು: ಸಾಕಾಣಿಕ ಹಂದಿಗಳನ್ನು ಕಳ್ಳತನ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ. ಚಿಕ್ಕಜಾಲ ಪೊಲೀಸರಿಂದ ಹತ್ತು ಮಂದಿ ಆರೋಪಿಗಳ ಬಂಧನ. ಹುಣಸೇಮಾರನಹಳ್ಳಿ ಬಳಿ ಶೆಡ್ ನಲ್ಲಿ ಎಂಬತ್ತು ಸಾಕಾಣಿಕೆ ಹಂದಿಗಳನ್ನು ಎರಡು ಟೆಂಪೋಗಳಿಗೆ ತುಂಬುತ್ತಿದ್ದ ಆಸಾಮಿಗಳು. ಇಪ್ಪತ್ತು ಲಕ್ಷ ಮೌಲ್ಯದ ಹಂದಿಗಳನ್ನು ತುಂಬುತ್ತಿದ್ದು, ಶೆಡ್ ಬಳಿ ಬಂದಿದ್ದ ಮಾಲೀಕ. ಇದೇ ವೇಳೆ ಮಾಲೀಕ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿ. ರಾಯಚೂರಿನಿಂದ ಬಂದು ಬೆಂಗಳೂರಿನ ಗ್ರಾಮಾಂತರ ಭಾಗದಲ್ಲಿ ಸಾಕಾಣಿಕೆ ಹಂದಿಗಳನ್ನು ಕದಿಯುತ್ತಿದ್ದ ಗ್ಯಾಂಗ್. ಪ್ರಕರಣ ದಾಖಲಿಸಿಕೊಂಡು ಬಂಧನ ಮಾಡಲು ಹೋದ ಪೊಲೀಸರ ಮೇಲೆಯೂ ಹಲ್ಲೆ. ಕಳ್ಳತನ ಮಾಡಿದ್ದ ಹಂದಿಗಳನ್ನ ಕಡಿಮೆ ಹಣಕ್ಕೆ ಖರೀದಿ ಮಾಡ್ತಿದ್ದ ರಾಯಚೂರಿನ ಕಿರಣ್. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

10:42 AM IST: