Karnataka News Live updates: ' ಮೊಟ್ಟೆ ಹೊಡೆದಿದ್ದಕ್ಕೆ ಮತ್ತೆ ಸಿದ್ದು ಕೊಡಗಿಗೆ ಹೋಗುತ್ತಿದ್ದಾರೆ'

Kannada News Live updates accidents in Athani and chikkodi and other news of Karnataka

ಸಿದ್ರಾಮಯ್ಯ ಮೇಲೆ ಮೊಟ್ಟೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ರಾಮಯ್ಯ ಅವರನ್ನ ಟಚ್ ಮಾಡಲಿ ನೋಡೋಣ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ ತೀಕ್ಷ್ಣ ಪ್ರತಿಕ್ರಿಯೆಸಿದ್ದಾರೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಆಡಕಿ ಗ್ರಾಮದಲ್ಲಿ ಸಚಿವ ಅಶೋಕ ಹೇಳಿಕೆ ನೀಡಿದ್ದು, ಟಚ್ ಆಗಿದೆಯಲ್ಲ, ಮೊಟ್ಟೆ ಟಚ್ ಮಾಡಿದ್ದಾರಲ್ಲ ಎಂದಿದ್ದಾರೆ. ಬಿಜೆಪಿ ಬಗ್ಗೆ ಭಯ ಇದೆಯಲ್ಲ. ತಡಿತಾರೆ ಅನ್ನೋ ಭಯ ಇದೆಯಲ್ಲಾ ಅಷ್ಟೇ ಸಾಕು. ಚಾಮರಾಜಪೇಟೆ ಮೈದಾನದಲ್ಲಿ ಯಾಕೆ 75 ವರ್ಷಗಳಿಂದ ಧ್ವಜಾರೋಹಣ ಮಾಡಲಿಲ್ಲ? ಬರುವ ಜನವೇರಿ 26 ಕ್ಕೂ ಅಲ್ಲಿಯೇ ಧ್ವಜಾರೋಹಣ ಮಾಡ್ತಿವಿ. ಸಿದ್ರಾಮಯ್ಯ ಕೊಡಗಿಗೆ ನುಗ್ತಿವಿ ಅನ್ನೋ ಬದಲು ರಾಷ್ಟ್ರಧ್ವಜ ಹಾರಿಸೋದಕ್ಕೆ, ನಾಡ ಧ್ವಜ ಹಾರಿಸೋದಕ್ಕಾಗಿ 26 ರಂದು ಕೊಡಗಿಗೆ ನುಗ್ತಿವಿ ಅನ್ನಬೇಕಿತ್ತು. ಆಗ ಅವರನ್ನು ರಾಷ್ಟ್ರಪ್ರೇಮಿ ಅಂತ ಜನ ಮೆಚ್ಚುತ್ತಿದ್ದರು, ಎಂದು ಟಾಂಗ್ ನೀಡಿದ್ದಾರೆ.

ಮಡಿಕೇರಿ ಪ್ರವಾಸದ ವೇಳೆ ಸಿದ್ದರಾಮಯ್ಯಗೆ ಬಟ್ಟನ್ ಚಾಕುವಿನಿಂದ ಹೊಡೆದಿದ್ದರು. ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಅಚ್ಚರಿ ಆರೋಪ. ಅಂದು ಸಿದ್ದರಾಮಯ್ಯ ಅವರೊಂದಿಗೆ ನಾನು ಕಾರಿನಲ್ಲಿ ಕುಳಿತಿದ್ದೆ. ನಾವು ಹೋಗುವ ಮಾರ್ಗದಲ್ಲಿ 7 ಕಡೆಗಳಲ್ಲಿ ಕಪ್ಪುಪಟ್ಟಿ, 3 ಕಡೆಗಳಲ್ಲಿ ಮೊಟ್ಟೆ ಹಿಡಿದುಕೊಂಡಿದ್ದರು. ಇದಲ್ಲದೆ ಅದೇ ಮಾರ್ಗದಲ್ಲಿ ಒಂದು ಕಡೆ ಬಟ್ಟನ್ ಚಾಕು ಹೊಡೆದಿದ್ದಾರೆ. ಇದನ್ನ ನಾವೇ ನೋಡಿದ್ದೇನೆ, ಎಂದು ಮೈಸೂರಿನಲ್ಲಿ ಕಾಂಗ್ರೆಸ್ ವಕ್ತರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.

ತಂದೆಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಗ ಆತ್ಮಹತ್ಯ. ಬೆಂಗಳೂರಿನ ಜೆಜೆ ನಗರದಲ್ಲಿ ಘಟನೆ. ಚಂದು (19) ಆತ್ಮಹತ್ಯೆ ‌ಮಾಡಿಕೊಂಡಿರುವ ಯುವಕ. ಚಂದು ತಂದೆಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಪ್ರತಿದಿನ ಅಪ್ಪ- ಮಗನ ಮಧ್ಯೆ ಗಲಾಟೆ ನಡೀತಿತ್ತು. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ನಂತರ ರೂಮ್ ಬಾಗಿಲು ಹಾಕಿಕೊಂಡಿದ್ದ ಮಗ ಚಂದು. ಬೆಳಗ್ಗೆ ರೂಮ್ ಬಾಗಿಲು ತೆಗೆದ ವೇಳೆ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಕೊರೋನಾ ವೈರಸ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಸಂಭ್ರಮದಿಂದ ನಡೆಯದ ಗಣೇಶೋತ್ಸವವನ್ನು ಈ ವರ್ಷ ಅದ್ಱೂರಿಯಾಗಿ ನಡೆಸಲು ಬೆಂಗಳೂರು ಸಿದ್ಧಗೊಳ್ಳುತ್ತಿದೆ. ಆ ಬಗ್ಗೆ ಬಿಬಿಎಂಪಿ ತಯಾರಿ ನಡೆಸುತ್ತಿದ್ದು, ಗಣೇಶ ವಿಸರ್ಜನೆಗೆ ನಾಲ್ಕು ಕಲ್ಯಾಣಿಗಳಲ್ಲಿ ವ್ಯವಸ್ಥೆ ಮಾಡುಲಾಗುತ್ತದೆ, ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರನಾಥ್ ಹೇಳಿದ್ದಾರೆ. ಜೊತೆಗೆ ಮನೆಗಳಲ್ಲಿ ಕೂರಿಸುವ ಸಣ್ಣಪುಟ್ಟ ಗಣೇಶ ವಿಸರ್ಜನೆಗೆ ವಾರ್ಡ್ ಮಟ್ಟದಲ್ಲಿ ವಾಟರ್ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು. ರಸ್ತೆ ಬದಿಯಲ್ಲಿ ಕೂರಿಸುವ ಗಣೇಶ ಕ್ಕೆ ಹೆಚ್ಚೆಂದರೆ 15 ದಿನ ಅವಕಾಶ ನೀಡಲಾಗಿದೆ, ಎಂದಿದ್ದಾರೆ. 

6:37 PM IST

ಉದ್ಯೋಗ ಕೊಡ ಬೇಕಾದ ಕೈಗೆ ಬಿಜೆಪಿ ಮೊಟ್ಟೆ ನೀಡುತ್ತಿದೆ: ಡಾ.ಎಚ್.ಸಿ.ಮಹಾದೇವಪ್ಪ

ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳುತ್ತಿರುವ ಬಿಜೆಪಿಗರೇ ತಮ್ಮ ಶಾಸಕ ಅಪ್ಪಚ್ಚು ರಂಜನ್ ಅವರಿಂದ ಆರೋಪಿಗೆ ಠಾಣೆಯಿಂದ ಜಾಮೀನು ಕೊಟ್ಟು ಕರೆತಂದಿದ್ದೇಕೆ? ಸ್ಥಳೀಯವಾಗಿ ಕಾಂಗ್ರೆಸ್ ಮುಖಂಡರಿಗೇ ಸರಿಯಾಗಿ ತಿಳಿಯದ ಈತ ಹಠಾತ್ತನೇ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು ಹೇಗೆ? ಉದ್ಯೋಗ ನೀಡಬೇಕಾದ ಮುಗ್ದ ಯುವಕರ ಕೈಗೆ ಮೊಟ್ಟೆಗಳನ್ನು ನೀಡಿ ಕೊನೆಗೆ ಅವರನ್ನೇ ಅಪಾಯಕ್ಕೆ ನೂಕುವ ಬಿಜೆಪಿಗರ ಕುತಂತ್ರಕ್ಕೆ ಯುವಕರು ಬಲಿಯಾಗುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ.

4:31 PM IST

ಬನ್ನಿ ಅಂದ್ರೆ ಶೂಟಿಂಗ್‌ಗೆ ಬರ್ತೀನಿ; ಮತ್ತೆ ಚಿತ್ರೀಕರಣಕ್ಕೆ ಹೋಗಲು ಸಿದ್ಧ ಎಂದ ನಟ ಅನಿರುದ್ಧ್

ನಿರ್ಮಾಪಕ ಆರೂರು ಜಗದೀಶ್ ಮಾಡಿರುವ ಆರೋಪಗಳಿಗೆ ಅನಿರುದ್ಧ್ ಪ್ರತಿಕ್ರಿಯೆ ನೀಡದ್ದಾರೆ. ನನಗೆ ಯಶಸ್ಸು ಸಿಕ್ಕಿದ್ದು ವೀಕ್ಷಕರಿಂದ. ದುರಹಂಕಾರ ಅಂತ ಹೇಳುತ್ತಾರೆ, ನನಗೆಲ್ಲಿದೆ ದುರಹಂಕಾರ, ನನ್ನಲ್ಲಿ ದುರಹಂಕಾರ ಇದ್ದಿದ್ದರೆ, ಅಭಿನಯದಲ್ಲೂ ಕಾಣಿಸುತ್ತಿತ್ತು ಎಂದಿದ್ದಾರೆ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

4:16 PM IST

ಗಣೇಶೋತ್ಸವಕ್ಕೆ ಬಿಬಿಎಂಪ ಭರ್ಜರಿ ತಯಾರಿ

ಗಣೇಶೋತ್ಸವ ವಿಚಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ . ಗಣೇಶ ಚತುರ್ಥಿ ಹಬ್ಬದ ಸನ್ನಿವೇಶವೆರೋದ್ರಿಂದ ಈಗಾಗಲೇ ಪೊಲೀಸ್ ಇಲಾಕೆಯೊಂದಿಗೆ ಸಭೆ ನಡೆಸಿದ್ದೆವೆ. ಅಗ್ನಿ ಶಾಮಕ ಇಲಾಖೆ , ಬಿಸ್ಕಾಂ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿದ್ದು ಕ್ರಮಗಳ ಬಗ್ಗೆ ಹೊಸ ಆದೇಶ ಹೊರಡಿಸಲಾಗುವುದು. ಕೊರೊನಾ ಹಿನ್ನೆಲೆ ಎರಡು ವರ್ಷದ ನಿಯಮಗಳು ಬೇರೆಯದೆ ಇದ್ದವು. ಆದ್ರೇ ಈ ಬಾರಿ ಎರಡು ವರ್ಷಗಳ ಹಿಂದೆ ಇದ್ದ ನಿಯಮಗಳಲ್ಲಿ ಸ್ವಲ್ಪ ಹೊಸ ನಿಯಮಗಳನ್ನು ಸೇರ್ಪಡಿಸಿ, ಮಾನದಂಡ ನೀಡಲಾಗುವುದು. ಸಿಂಗಲ್ ವಿಂಡೋ ಮೂಲಕ ಗಣೇಶ ಕೂರಿಸುವವರಿಗೆ NoC ವ್ಯವಸ್ಥೆ ಮಾಡಲಾಗುವುದು. ಎಲ್ಲ ವಲಯಗಳಲ್ಲಿಯೂ ಎನ್ ಓಸಿ ಪಡೆಯ ಬಹುದಾಗಿದೆ.

3:44 PM IST

ಚಾಮರಾಜ ಪೇಟೆ ಮೈದಾನಲ್ಲಿಯೇ ರಾಜ್ಯೋತ್ಸವ, ಕನ್ನಡ ಬಾವುಟಕ್ಕೂ ಅನುಮತಿ ಕೊಡುವೆ: ಅಶೋಕ್

ಬೆಂಗಳೂರಿನ ಚಾಮರಾಜ ಪೇಟೆ ಮೈದಾನಲ್ಲಿ ಈಗಾಗಲೇ ರಾಷ್ಟ್ರ ಧ್ವಜ ಶಾಂತಿಯುತವಾಗಿ ಹಾರಿಸಲಾಗಿದೆ, ಇದೆ ಮೈದಾನಲ್ಲಿ ಬರುವ ನವೆಂಬರ್ 1ರ ರಾಜ್ಯೋತ್ಸವ ದಿನದಂದು ಕನ್ನಡ ಬಾವುಟ ಕೂಡಾ ಹಾರಿಸಾಲು ಅನುಮತಿ  ನೀಡುವುದಾಗಿ ಸಚಿವ ಅಶೋಕ ಹೇಳಿದ್ದಾರೆ., ಶಾಂತಿ ಸಹಬಾಳ್ವೆ ಬಿಜೆಪಿ ಸರ್ಕಾರದ ಉದ್ದೇಶ. ವಿರೋಧ ಪಕ್ಷದವರು ವಿನಕಾರಣ ಸುವ್ಯವಸ್ಥೆ ಇಲ್ಲ ಅಂತ ಟೀಕಿಸ್ತಾರೆ, ಅದು ಇಲ್ಲಾಂದ್ರೆ ಹೇಗೆ ಧ್ವಜರೋಹಣ ಶಾಂತಿಯಿಂದ ಚಾಮರಾಜ ಪೇಟೆ ಮೈದಾನಲ್ಲಿ ಆಯ್ತು ಅನ್ನೋದು ತಿಳ್ಕೊ ಬೇಕು ಎಂದು ವಿಪಕ್ಷಗಳಿಗೆ ಮಾತಲ್ಲಿಯೇ ಟಾಂಗ್ ನೀಡಿದರು.

3:11 PM IST

ಹಾಡಹಗಲಿನಲ್ಲೇ ಮಹಿಳೆಯಿಂದ ಹಣ ದೋಚಿ ಪರಾರಿಯಾದ ಕಳ್ಳ

Mysore: ಹಾಡಹಗಲಿನಲ್ಲೇ ಮಹಿಳೆಯಿಂದ ಹಣ ದೋಚಿ ಪರಾರಿಯಾದ ಕಳ್ಳ. ಎಚ್.ಡಿ.ಕೋಟೆ ಪಟ್ಟಣದ ಮುತ್ತಮ್ಮ 1.79ಲಕ್ಷ ಹಣ ಕಳೆದುಕೊಂಡ ಮಹಿಳೆ. ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಎದುರಿನಲ್ಲಿ ಘಟನೆ. ಘಟನೆಯಿಂದ ಭಯಭೀತರಾದ ಜನತೆ. ಮಹಿಳಾ ಸಂಘದಿಂದ ಸಾಲ ಮಂಜೂರು ಮಾಡಿಸಿದ ಮುತ್ತಮ್ಮ ಬ್ಯಾಂಕಿನಿಂದ ಹಣ ಡ್ರಾಮಾಡಿ ಹಿಂದಿರುಗುವಾಗ ಘಟನೆ. ಮುತ್ತಮ್ಮ ಅವರ ಕೈಯ್ಯಲ್ಲಿ ಹಣ ಇದ್ದ ಬ್ಯಾಗ್ ಕಸಿದುಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾದ ಚಾಲಾಕಿ ಕಳ್ಳ. ಸಾರ್ವಜನಿಕ ಸ್ಥಳದಲ್ಲೇ ಘಟನೆ ಸಂಭವಿಸಿದರೂ ಕೈಗೆ ಸಿಗದೆ ಪರಾರಿಯಾದ ಕಳ್ಳ. ಕಳ್ಳನಿಗಾಗಿ ಪೋಲೀಸರ ತೀವ್ರ ಹುಡುಕಾಟ.

2:27 PM IST

ನಮಗೇನು ಮೊಟ್ಟೆ ಎಸೆಯಲು ಬರಲ್ವಾ?: ಡಿಕೆಶಿ ಹೇಳಿಕೆಗೆ ಅಶ್ವಥ್ ನಾರಾಯಣ್ ಟಾಂಗ್

ರಾಮನಗರ: ನಮಗೇನು ಮೊಟ್ಟೆ ಎಸೆಯಲು ಬರಲ್ವಾ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ. 'ಇದು ಅವರ ಸಂಸ್ಕೃತಿ ಏನು ಎಂಬುದನ್ನ ತೋರಿಸತ್ತೆ.
ಅವರು ಪ್ರಚೋದನೆ ನೀಡುತ್ತಿದ್ದಾರೆ. ನಾವು ಮೊಟ್ಟೆ ಎಸೆತ ಪ್ರಕರಣವನ್ನು ಖಂಡಿಸಿದ್ದೇವೆ. ಆ ಘಟನೆಯನ್ನ ನಾವೂ ಯಾರೂ ಸಮರ್ಥಿಸಿಕೊಂಡಿಲ್ಲ. 'ಈಗ ಡಿ.ಕೆ. ಶಿವಕುಮಾರ್ ಪ್ರಚೋದನೆ ಹೇಳಿಕೆ ನೀಡುತ್ತಿದ್ದಾರೆ. ಇದೇ ನಮಗೂ ಕಾಂಗ್ರೆಸ್‌ಗೂ ಇರುವ ವ್ಯತ್ಯಾಸ. ಯಾರೂ ಮೊಟ್ಟೆ ಎಸೆದಿದ್ದಾರೋ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿದ್ದೇವೆ. ರಾಮನಗರದಲ್ಲಿ ಡಿಕೆಶಿ ಹೇಳಿಕೆಗೆ ಸಚಿವ ಅಶ್ವಥ್ ನಾರಾಯಣ್ ಟಾಂಗ್.ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವರು, ಸಮಾಜದಲ್ಲಿ ತಪ್ಪು ಮಾಡುವುದು ಸಹಜ. *ಮಾಡಿದ ತಪ್ಪನ್ನ ಸರಿಪಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಈಗ ಸಿದ್ದರಾಮಯ್ಯ ಪಶ್ವತ್ತಾಪ ಪಟ್ಟಿಲ್ಲ ಎನ್ನಬಹುದು. ಶ್ರೀಗಳ ಮಾತು ನಂಬ ಬೇಕಾ, ಇಲ್ಲಾ ಸಿದ್ದರಾಮಯ್ಯ ಅವರ ಮಾತು ನಂಬಬೇಕಾ? ಸ್ವಾರ್ಥಕ್ಕಾಗಿ ರಾಜಕೀಯ ಮಾಡಬಾರದು. ಸಮಾಜ ಅವರನ್ನ ನೋಡುತ್ತಿದೆ. ಹೇಳಿಕೆ ಬದಲಿಸಿಕೊಂಡರೆ ವ್ಯಕ್ತಿತ್ವಕ್ಕೆ ಧಕ್ಕೆಯಾಗಲಿದೆ. ಇವರು ಹೇಳಿದನ್ನೆಲ್ಲ ನಂಬ ಬಾರದು ಎಂಬ ಭಾವನೆ ಜನರಲ್ಲಿ ಬರುತ್ತದೆ. ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ.

1:51 PM IST

ಕ್ಯಾರಾವ್ಯಾನ್ ಇಲ್ಲದಿದ್ರೆ ಹೆಂಗಸರು ಬಟ್ಟೆ ಬದಲಾಯಿಸೋದು ಹೇಗೆ?: ಅನಿರುದ್ಧ್

ಮನಸ್ಥಾಪ ಭಿನ್ನಾಭಿಪ್ರಾಯ ಸರ್ವೇ ಸಾಮಾನ್ಯ. ಒಂದು ಮನೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುತ್ತೆ. ಅದನ್ನ ಹೊರಗೆ ಹೇಳಿಕೊಂಡು ಹೋಗೋ ಬುದ್ದಿ ನನಗಿಲ್ಲ. ದಾರವಾಹಿ ಎಲ್ಲರೂ ನನ್ನ ಕುಟುಂಬ ಇದ್ದಂತೆ. ಎರಡನೇ ಆರೋಪ ಕ್ಯಾರಾವನ್ ಇಲ್ಲದಿದ್ರೆ ಶೂಟಿಂಗ್ ಗೆ ಬರುತ್ತನೇ ಇರಲಿಲ್ಲ ಅಂತ ಹೇಳಿದ್ದಾರೆ. ನಾನು ರಂಗಭೂಮಿ ಕಲಾವಿಧ ಕ್ಯಾರಾವ್ಯಾನ್ ಇಲ್ದದೇ ಇರೋಕೆ ಗೊತ್ತು. ಕಲಾವಿದರೆಲ್ಲಾ ನೀವು ಕ್ಯಾರಾವ್ಯಾನ್‌ ಕೇಳಲ್ಲ, ನಮಗೂ ಕೊಡಲ್ಲ ಅಂತ ಹೇಳಿದ್ರು. ಕಾಡಿನಲ್ಲಿ ಶೂಟಿಂಗ್ ಮಾಡುವಾಗ ಕ್ಯಾರಾವಾನ್ ಇಲ್ಲದಿದ್ರೆ ಹೇಗೆ ಇರಬೇಕು? ಹೆಂಗಸರು ಇದ್ದಾಗ ಕ್ಯಾರಾವ್ಯಾನ್ ಇಲ್ಲದಿದ್ರೆ ಅವರು ಬಟ್ಟೆ ಬದಲಾಯಿಸೋದು ಹೇಗೆ? ಅಕ್ಕ ಪಕ್ಕ ಇರೋರ ಮನೆಗೆ ಹೋಗಿ ಬಾತ್ ರೂಂ ಕೇಳೋಕೆ ಆಗುತ್ತಾ? ಒಂದು ಸೀನ್ ಪೇಪರ್ ಕಳಿಸೋದು ತುಂಬಾ ತಡವಾಗಿ ಕಳಿಸ್ತಿದ್ರು. ಸ್ವಲ್ಪ ಬೇಗ ಕಳಿಸಿ ಅಂತ ಕೇಳಿದ್ದು ತಪ್ಪಾ?

1:47 PM IST

ಕರುನಾಡನ್ನಗಲಿದ ಗಾಯಕ ಶಿವಮೊಗ್ಗ ಸುಬ್ಬಣ್ಣ ಪತ್ನಿಗೆ ಮೋದಿ ಸಾಂತ್ವನ

'ಆನಂದಮಯ ಈ ಜಗ ಹೃದಯ' ಎಂದು ಕಣ್ಣು ಮುಚ್ಚಿ ಹಾಡಲು ಶುರು ಮಾಡಿದರೆ ಸಾಕು, ಸೂರ್ಯೋದಯ, ಚಂದ್ರೋದಯ ಎಲ್ಲವೂ ಕೇಳುಗನ ಅನುಭವವಕ್ಕೆ ಬರುತ್ತಿದ್ದವು. ಅದು ಬರೀ ಕುವೆಂಪು ಬರೆದ ಸಾಲಿನ ಮಹಿಮೆ ಮಾತ್ರವಲ್ಲ, ಕವನದ ಪ್ರತಿ ಪದವನ್ನೂ ಅನುಭವಿಸಿ ಹಾಡುತ್ತಿದ್ದ ಸುಬ್ಬಣ್ಣ ಅವರ ಗಾಯನದ ಶೈಲಿಯೂ ಕೇಳುಗನ ಹೃದಯಕ್ಕೆ ನಾಟುವಂತಿರುತ್ತಿತ್ತು. ಅಂಥ ಮಹಾನ್ ಗಾಯಕ ಕರುನಾಡನ್ನು ಅಗಲಿದ್ದಾರೆ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕುಟುಂಬಕ್ಕೆ ನೀಡಲೆಂದು ಮೋದಿ ಅವರು ಸುಬ್ಬಣ್ಣ ಪತ್ನಿ ಶಾಂತಾ ಅವರಿಗೆ ಪತ್ರ ಬರೆದಿದ್ದಾರೆ. 

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

1:11 PM IST

ಆಚಾರವಿಲ್ಲದ ನಾಲಿಗೆಗಳ ಮೇಲೆ ನೀಚ ಮಾತುಗಳು, ಅಪಪ್ರಚಾರಗಳು ನರ್ತಿಸುತ್ತಿವೆ: ವಿಜಯೇಂದ್ರ

ಯಾರೊಬ್ಬರ ಭಾವನೆಯೂ ಕೆರಳದಂತೆ ಮಾತನಾಡುವುದು ಜವಾಬ್ದಾರಿಯುಳ್ಳವರ ನಡೆಯಾಗಬೇಕಿದೆ ಎನ್ನುವ ಮೂಲಕ ಸಾವರ್ಕರ್ ಕುರಿತ ಸಿದ್ದರಾಮಯ್ಯ ಹೇಳಿಕೆಗಳಿಗೆ ತಿರುಗೇಟು ನೀಡಿದ‌ ವಿಜಯೇಂದ್ರ. ಕಾಂಗ್ರೆಸ್ ಭವನ ಸಿದ್ದರಾಮಯ್ಯ ಭಾಷಣ. ವಿಜ್ಞಾನ ತಂತ್ರಜ್ಞಾನ ಸಂಪರ್ಕ ಕ್ಷೇತ್ರ ಎಲ್ಲ ಕ್ಷೇತ್ರಗಳಲ್ಲೂ ಕೂಡ ಜಗತ್ತಿನ ಮುಂದುವರಿದ ರಾಷ್ಟ್ರಗಳ ಮಟ್ಟಕ್ಕೆ ಭಾರತ ನಿಲ್ಲಬೇಕು ಅಂತ ರಾಜಿವ್ ಗಾಂಧಿ ತೀರ್ಮಾನ ಮಾಡಿದರು. ಯುವಕರಲ್ಲಿ ಅಪಾರವಾದ ಭರವಸೆ ಇತ್ತು ರಾಜೀವ್ ಗಾಂಧಿಯವರಿಗೆ ಇತಿಹಾಸ ಗೊತ್ತಿರುವವರು ಮಾತ್ರ ದೇಶದ ಭವಿಷ್ಯ ರೂಪಿಸಲು ಸಾಧ್ಯ. ಅದಕ್ಕಾಗಿಯೇ ಬಿಜೆಪಿ ಯವರು ಭಾರತದ ಇತಿಹಾಸವನ್ನೇ ತಿರುಚಲು ಶುರು ಮಾಡಿದ್ದಾರೆ. ಯಾರಿಗೂ ಇತಿಹಾಸ ಗೊತ್ತಾಗಬಾರದು ಅಂತ ಇತಿಹಾಸವನ್ನೇ ತಿರುಚುತ್ತಿದ್ದಾರೆ. ಜನರ ಚರಿತ್ರೆಯನ್ನೇ ಬದಲು ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡ್ತಿದ್ದಾರೆ. ಜಾತಿ ಧರ್ಮದ ಹೆಸರಲ್ಲಿ ಯುವಕರ ಮನಸ್ಸು ಕಲುಷಿತ ಮಾಡುವ ನೀಚ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಯುವಕರು ಇತಿಹಾಸ ಅರ್ಥ ಮಾಡಿಕೊಳ್ಳಬೇಕು, ಎಂದು ಟ್ವೀಟ್ ಮಾಡಿದ್ದಾರೆ. 

12:31 PM IST

ಪ್ರತ್ಯೇಕ ಲಿಂಗಾಯತ ಧರ್ಮ: ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತು - ಏನಿದರ ಹಕೀಕತ್ತು?

ಬೆಂಗಳೂರು(ಆ.20):  ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯು ಟರ್ನ್‌ ಹೊಡೆದಿದ್ದಾರೆ. ಹೌದು, ಸಿದ್ದರಾಮಯ್ಯ ಹೇಳಿಕೆ ಹಿಂದಿನ ಲೆಕ್ಕಾಚಾರದ ಬಗ್ಗೆ ಇದೀಗ ಗಂಭೀರವಾದ ಚರ್ಚೆ ಆರಂಭವಾಗಿದೆ. ಸೈದ್ಧಾಂತಿಕವಾಗಿ ಧರ್ಮದ ವಿಚಾರದಲ್ಲಿ ಅಬ್ಬರಿಸಿದ್ದ ಸಿದ್ದರಾಮಯ್ಯ ಮುಗ್ಗರಿಸಿದ್ರಾ? ಎಂಬ ಚರ್ಚೆ ಕೂಡ ಚರ್ಚೆ ನಡೆಯುತ್ತಿದೆ. ಚುನಾವಣೆ ದೃಷ್ಟಿಯಿಂದ ಪಶ್ಚಾತಾಪದ ಮಾತನಾಡಿದ್ರಾ ಸಿದ್ದರಾಮಯ್ಯ?, ಇವರ ಪಶ್ಚಾತಾಪದ ಹಿಂದಿದೆ ಹತ್ತಾರು ಲೆಕ್ಕಾಚಾರಗಳಿವೆ. 

ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

12:12 PM IST

ಮನೆ ಪರಿಹಾ: ರ ನೀಡುವಲ್ಲಿ ತಾರತಮ್ಯ: ತಲೆ ಮೇಲೆ ಕಲ್ಲು ಹೊತ್ತಿ

ಹಾವೇರಿ; ಮನೆ ಪರಿಹಾರ ನೀಡುವಲ್ಲಿ ತಾರತಮ್ಯ ಹಿನ್ನೆಲೆಯಲ್ಲಿ ತಲೆ ಮೇಲೆ ಕಲ್ಲು ಹೊತ್ತು ಮತ್ತೂರ ಗ್ರಾಪಂ ಮುಂದೆ ಸಂತ್ರಸ್ತರ ಪ್ರತಿಭಟನೆ. ಅರ್ಹರಿಗೆ ಪರಿಹಾರ ನೀಡದ ಗ್ರಾಪಂ ಅಧಿಕಾರಿಗಳಿಗೆ ಪ್ರತಿಭಟನೆ ಬಿಸಿ. ಪರಿಹಾರ ವಂಚಿತ ಫಲಾನುಭವಿಗಳಿಂದ ಒಂಟಿ ಕಾಲ ಮೇಲೆ ನಿಂತು ಪ್ರತಿಭಟನೆ. ಗ್ರಾಮ ಪಂಚಾಯಿತಿ ಎದುರು ತಲೆ ಮೇಲೆ ಕಲ್ಲು ಹೊತ್ತು ವಿನೂತನವಾಗಿ ಪ್ರತಿಭಟನೆ. ಅಕಾಲಿಕ ಮಳೆಯಿಂದಾಗಿ ಮನೆ ಕಳೆದುಕೊಂಡ ಮತ್ತೂರು ಗ್ರಾಮದ ಮಲ್ಲೇಶಪ್ಪ ಕೋನಮ್ಮನವರ, ಸೋಮಪ್ಪ ಹೊಸಳ್ಳಿ. ಶೋಭವ್ವ ಹಾರಗೊಪ್ಪ ವಜ್ರಬಿ ಮುಲ್ಲಾ. ಮಲ್ಲಪ್ಪ ಹೊಸಳ್ಳಿಯಿಂದ ಪ್ರತಿಭಟನೆ ಮಹಾತ್ಮ ಗಾಂಧಿ . ಪೋಟೊದೊಂದಿಗೆ ಗ್ರಾಪಂ ಎದುರು ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಬಿದ್ದರೂ ಸಹ ಅಧಿಕಾರಿಗಳು ನಮ್ಮತ್ತ ನೋಡದೆ ತಮಗೆ ಬೇಕಾದವರಿಗೆ ಮನೆ ಹಾನಿ ಪರಿಹಾರ ಹಾಕಿದ್ದಾರೆ ಎಂದು ಮಲ್ಲೇಶಪ್ಪ ಕೋನಮ್ಮನವರ  ಆರೋಪಿಸಿದ್ದಾರೆ.

11:29 AM IST

ಸಿಎಂ ಸೂಚನೆ ನೀಡಿದ ಬಳಿಕವೂ ಸಿದ್ದರಾಮಯ್ಯ ಗೆ ಇನ್ನೂ ನೀಡದ ಹೆಚ್ಚಿನ ಭದ್ರತೆ

ಸಿದ್ದರಾಮಯ್ಯಗೆ ಎಂದಿನಂತೆಯೇ ಒಂದು ಎಸ್ಕಾರ್ಟ್ ಹಾಗೂ ಒಂದು ಪೈಲಟ್ ಟೀಂ ಮಾತ್ರ. ಒಟ್ಟೂ 10 ಮಂದಿ ಅಂಗ ರಕ್ಷಕರು ಮಾತ್ರ ಎಂದಿನಂತೆ ಹಾಜರ್ ನಿನ್ನೆ ಮಾತ್ರ ಶೃಂಗೇರಿಯಲ್ಲಿ ನೀಡಲಾಗಿದ್ದ ಹೆಚ್ಚಿನ ಭದ್ರತೆ. ಸಿದ್ದರಾಮಯ್ಯ ನಿವಾಸಕ್ಕೂ ಇನ್ನೂ ಒದಗದ ಹೆಚ್ಚಿನ ಭದ್ರತಾ ಸಿಬ್ಬಂದಿ. ಸಿದ್ದರಾಮಯ್ಯಗೆ ಈಗಾಗಲೇ ಮೂರು ಬಾರಿ ಬಂದಿರುವ ಬೆದರಿಕೆ ಪತ್ರ. ಬಿಟಿ ಲಲಿತಾ ನಾಯಕ್ ಅವರಿಗೂ ಬಂದಿರುವ ಬೆದರಿಕೆ ಪತ್ರದಲ್ಲಿ ಸಿದ್ದರಾಮಯ್ಯ ಹೆಸರೂ ಉಲ್ಲೇಖ. ಮೊಟ್ಟೆ ಘಟನೆ ಬಳಿಕ ಸಿಎಂ ಹೆಚ್ಚಿನ ಭದ್ರತೆ ನೀಡುವ ಭರವಸೆ. ಸಿಎಂ ಸೂಚನೆ ಬಳಿಕವೂ ಕೇವಲ ಒಂದು ಪೈಲಟ್ ಒಂದು ಎಸ್ಕಾರ್ಟ್ ಮಾತ್ರ.

11:26 AM IST

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: ಕೊಡಗಿನ ಶಾಸಕರ ಕೊಠಡಿಗೆ ಸರ್ಪಗಾವಲು

ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಡಗಿನ ಶಾಸಕರ ಕೊಠಡ್ಡಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಶಾಸಕರ ಭವನದಲ್ಲಿರುವ ಕೊಡಗಿನ ಬಿಜೆಪಿ ಶಾಸಕರ ಕೊಠಡಿಗೆ ಪೊಲೀಸ್ ಭದ್ರತೆ.
ಅಪ್ಪಚ್ಷು ರಂಜನ್ ಮತ್ತು ಕೆ ಜಿ ಬೊಪ್ಪಯ್ಯ ಕೊಠಡಿಗೆ ಪೊಲೀಸ್ ಭದ್ರತೆ.. ಅವರ ಕಚೇರಿ ಬಳಿ ಬ್ಯಾರಿಕೇಡ್ ಹಾಕಿ ಇಬ್ಬಿಬ್ಬರು ಪಿಸಿಗಳನ್ನ ಹಾಕಿ ಭದ್ರತೆಗೆ ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅಥಾವ ಸಿದ್ದರಾಮಯ್ಯ ಅಭಿಮಾನಿಗಳು ಕೊಠಡಿ ಬಳಿ ಬಂದು ಪ್ರತಿಭಟನೆ ಮಾಡಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಭದ್ರತಾ ಹಾಕಿರುವ ಎಲ್ ಹೆಚ್ ಪೋಲಿಸರು. ಎಲ್ ಹೆಚ್ ಪ್ರವೇಶಕ್ಕೂ ಭಾರಿ ಭದ್ರತೆ ಕೈಗೊಂಡಿರುವ ಪೊಲೀಸರು. ಯಾರೇ ಎಲ್ ಹೆಚ್ ಪ್ರವೇಶ ಮಾಡಬೇಕು ಅಂದ್ರೂ ಪರಿಮಿಷನ್ ಇದ್ರೆ ಮಾತ್ರ ಒಳಗಡೆ ಪ್ರವೇಶ.

11:16 AM IST

ಬಿಬಿಎಂಪಿ ಚುನಾವಣೆಗೆ ಕ್ಷಣಗಣನೆ: ಇಂದು ಚುನಾವಣಾ ಆಯೋಗದಿಂದ ಹೈ ವೋಲ್ಟೇಜ್ ಮೀಟಿಂಗ್

ಬಿಬಿಎಂಪಿ ಅಧಿಕಾರಿಗಳ ಜೊತೆ ಇಂದು ಚುನಾವಣಾ ಆಯೋಗದ ಪೂರ್ವಭಾವಿ ಸಭೆ. ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಲಿರೋ ಬಿಬಿಎಂಪಿ ಅಧಿಕಾರಿಗಳು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಸಭೆಯಲ್ಲಿ ಭಾಗಿ. ಸಭೆಯಲ್ಲಿ ವಾರ್ಡ್ ಮರುವಿಂಗಡಣೆ, ಮೀಸಲಾತಿ ಕುರಿತಂತೆ ಚರ್ಚೆ. ರಾಜ್ಯ ಚುನಾವಣಾ ಆಯೋಗದಿಂದ ಬಿಬಿಎಂಪಿ ಚುನಾವಣಾ ಸಭೆ ಕರೆದಿರುವ ಚುನಾವಣಾಧಿಕಾರಿಗಳು. ಚುನಾವಣೆ ನಡೆಸೋಕೆ ಅಗತ್ಯವಿರೋ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ. ಮತದಾರರ ಚೀಟಿ..ವಾರ್ಡ ವ್ಯಾಪ್ತಿ.. ಮತದಾನಕ್ಕೆ ಅವಶ್ಯಕತೆ ಇರೋ ಶಾಲಾ.ಕಾಲೇಜು ಕಟ್ಟಡಗಳ ಬಗ್ಗೆ ಮಾಹಿತಿ ಪಡೆಯಲ್ಲಿರೋ ಅಯೋಗ. ಇನ್ನೂ ಮತದಾರರ ಗುರುತಿನ ಚೀಟಿ ವಿತರಣೆ. ಮತದಾರರ ಪಟ್ಟಿ ಬಿಡುಗಡೆ ಬಗ್ಗೆ ಚರ್ಚೆ. ಚುನಾವಣೆಗೆ ಬೇಕಗಿರೋ ಸಿಬ್ಬಂದಿ ನೇಮಕ. ಸಿಬ್ಬಂದಿಗೆ ಬ್ಯಾಲೆಟ್ ಪೇಪರ್ ಹಾಗೂ ಇವಿಎಂ ಯಂತ್ರಗಳ ಬಗ್ಗೆ ಟ್ರೈನಿಂಗ್. ಇನ್ನು ಇತರೆ ಚುನಾವಣಾ ವಿಷಯಗಳ ಬಗ್ಗೆ ಮಾಹಿತಿ ಪಡೆಯಲ್ಲಿರೋ ಅಯೋಗ.

10:56 AM IST

ಮಠಗಳ ಭೇಟಿ ಚುನಾವಣಾ ತಂತ್ರವೇ? ಖಂಡ್ರೆ ಹೇಳಿದ್ದೇನು?

ರಂಭಾಪುರಿ ಶ್ರೀ ಹಾಗೂ ಸಿದ್ದರಾಮಯ್ಯ ನಡುವೆ ಪ್ರತ್ಯೇಕ ಧರ್ಮದ ವಿಚಾರ ಮಾತುಕತೆಗೆ ಸಂಬಂಧಿಸಿದಂತೆ ನಾನು ಯಾವ ನಾಯಕರ ವಿಚಾರದ ಬಗ್ಗೆಯೂ ಮಾತನಾಡಲ್ಲ. ನಾನು, ಶಾಮನೂರು ಶಿವಶಂಕರಪ್ಪ ಸೇರಿ ಓಗ್ಗೂಡಿಸುವ ಕೆಲಸ ಮಾಡಿದ್ವಿ. ವೀರಶೈವ - ಲಿಂಗಾಯತ ಬೇರೆ ಬೇರೆ ಅಲ್ಲ. ತಾತ್ವಿಕವಾಗಿ ಒಂದೇ ಎಂಬ  ಭಾವನೆ ಅದನ್ನೇ ನಾವು ಪ್ರತಿಪಾದನೆ ಮಾಡಿದ್ದೇವೆ. ಅದಕ್ಕೆ ಬದ್ದರಾಗಿಯೂ ಇದ್ದೇವೆ. ಡಿಕೆ ಶಿವಕುಮಾರ್ ಕೂಡ ಈ ಹಿಂದೆ ಹೇಳಿದ್ದಾರೆ. ಅಧ್ಯಕ್ಷರೇ ಹೇಳಿದ ಮೇಲೆ ನಾನು ಹೇಳೋದು ಏನಿದೆ? ಚುನಾವಣಾ ದೃಷ್ಟಿಯಿಂದ ಸಿದ್ದರಾಮಯ್ಯ ರಂಭಾಪುರಿ ಮಠಕ್ಕೆ ಹೋಗಿಲ್ಲ. ನಾನು ಚುನಾವಣಾ ಪೂರ್ವದಲ್ಲೇ ಸಂಪುಟ ಸಭೆಯಲ್ಲೇ ಹೇಳಿದ್ದೆ. ಇದು ಬೇಡ, ಇದು ನಮ್ಮ ವಿರೋಧಿಗಳಿಗೆ ಅಸ್ತ್ರ ಕೊಟ್ಟಂತೆ  ಆಗುತ್ತದೆ ಎಂದು. ಇದು ನಮಗೆ ಹಿನ್ನೆಡೆ ಆಗುತ್ತೆ ಅಂತ ಹೇಳಿದ್ದೆ . ಆದರೆ ಬಹುಮತ ನನ್ನ ಪರ ಇರಲಿಲ್ಲ.ನಾನು, ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ಪ್ರಯತ್ನ ಮಾಡಿದ್ವಿ. ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ರು. ಅದರಿಂದ ನಮಗೆ ಹಿನ್ನೆಡೆ ಆಯ್ತು. ಈಗ ಎಲ್ಲಾ ಗೊಂದಲಗಳು ನಿವಾರಣೆ ಆಗಿದೆ. ಲಿಂಗಾಯತರು ಜಾತ್ಯಾತೀತ ಹಿನ್ನೆಲೆ ಉಳ್ಳವರು. ನಾವು ಒಳ್ಳೆಯ ಆಡಳಿತ ಕೊಟ್ಟಿದ್ದೇವೆ. ಕಾಂಗ್ರೆಸ್ ಮೇಲೆ ಜನರಿಗೆ ವಿಶ್ವಾಸ ಇದೆ ಮತ್ತೆ ಆಶೀರ್ವಾದ ಮಾಡ್ತಾರೆ. ಮಠಗಳ ಭೇಟಿ ಎಲೆಕ್ಷನ್ ಸ್ಟ್ರಾಟಜಿನಾ? ಎಂಬ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, ಮಠಗಳ ಭೇಟಿಗೆ ಹೋಗೋದು ಸಹಜ. ರಾಹುಲ್ ಗಾಂಧಿ ಹಿಂದೆಯೂ ಅನುಭವ ಮಂಟಪಕ್ಕೆ ಭೇಟಿ ಕೊಟ್ಟಿದ್ರು. ಮುರುಘಾ ಮಠಕ್ಕೆ ಭೇಟಿ ನೀಡಿ ಲಿಂಗ‌ ದೀಕ್ಷೆ ಪಡೆದಿದ್ದಾರೆ. ಸಿದ್ದರಾಮಯ್ಯ ಕೂಡ ಮಠಕ್ಕೆ ಭೇಟಿ ನೀಡಿದ್ದಾರೆ. ಇದೆಲ್ಲದಕ್ಕೂ ರಾಜಕೀಯ ತಳಕು ಹಾಕುವುದು ಸರಿ ಅಲ್ಲ, ಎಂದಿದ್ದಾರೆ. 

10:50 AM IST

​​​​​​​ರಂಭಾಪುರಿ ಶ್ರೀ ಮತ್ತು ಸಿದ್ದರಾಮಯ್ಯ ಸಂಭಾಷಣೆ ಬಗ್ಗೆ ಪ್ರತಿಕ್ರಿಯೆ ನೀಡಲದ ಸಿಎಂ

ಲಿಂಗಾಯುತ ಪ್ರತ್ಯೇಕ ಧರ್ಮ ವಿಭಜನೆಗೆ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಸ್ವಾಮೀಜಿಗಳ  ನಡುವೆ ನಡೆದ ಸಂಭಾಷಣೆ ಅದು. ಅದರ ಬಗ್ಗೆ ನಾನು ಮಾತನಾಡಲ್ಲ. ಆ ಸತ್ಯ ಏನು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಗುರುಗಳು ನಿನ್ನೆ ಒಂದು ಹೇಳಿದ್ರು, ಇವತ್ತು ಒಂದು ಹೇಳಿದ್ರು. ಅವರಿಬ್ಬರ ಮಧ್ಯೆ ಏನ್ ಸಂಭಾಷಣೆ ನಡೆದಿದೆ ಅನ್ನೋದು ನನಗೆ ಗೊತ್ತಿಲ್ಲ.

10:25 AM IST

ಮೈಸೂರಿನ ಮಸೀದಿ ಗೋಪುರ ತೆರವು ಸಮಸ್ಯೆ ಸುಖಾಂತ್ಯ

ಮೈಸೂರಿನಲ್ಲಿ ಬಗೆ ಹರಿದ ಆತಂಕಕ್ಕೆ‌ ಕಾರಣವಾಗಿದ್ದ ಸಮಸ್ಯೆ. ರಸ್ತೆ ಅಗಲಿಕರಣಕ್ಕೆ‌ ಸಮಸ್ಯೆಯಾಗಿದ್ದ ಮಸೀದಿ ಗೋಪುರ ತೆರವು.ಮಾತುಕತೆ ಮೂಲಕ ಗೋಪುರ ತೆರವು ಸಮಸ್ಯೆಗೆ ಪರಿಹಾರ. ಮೈಸೂರಿನ ಇರ್ವಿನ್ ರಸ್ತೆಯ ಮಸೀದಿಯ ಗೋಪುರ. ಜೆಸಿಬಿ ಮೂಲಕ ಗೋಪುರ ತೆರವುಗೊಳಿಸಿದ ಮಸೀದಿ ಆಡಳಿತ ಮಂಡಳಿ. ರಸ್ತೆ ಅಗಲೀಕರಣಕ್ಕೆ ಮಸೀದಿಯ ಎರಡು ಗೋಪುರ ಅಡ್ಡಿ. ಈ ಸಂಬಂಧ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಗಲೀಕರಣ ಕಾಮಗಾರಿ. ಹೈಕೋರ್ಟ್ ಸಹಾ ಗೋಪುರ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಗೋಪುರ ತೆರವುಗೊಳಿಸಲು ಒಪ್ಪಿದ ಮಸೀದಿಯವರು. ತಾವೇ ನಿಂತು ಗೋಪುರ ತೆರವುಗೊಳಿಸಿದ ಮಸೀದಿ ಸಿಬ್ಬಂದಿ.

10:24 AM IST

ಪರ ವಿರೋಧ ಚರ್ಚೆ ನಡುವೆಯೇ ಚಾಮರಾಜನಗರದಲ್ಲಿ ವೀರ ಸಾವರ್ಕರ್ ಪ್ಲೆಕ್ಸ್ ಅಳವಡಿಕೆ

ಚಾಮರಾಜನಗರ: ವೀರ ಸಾವರ್ಕರ್ ಪ್ಲೆಕ್ಸ್ ಅಳವಡಿಕೆ. ರಾಜ್ಯದಲ್ಲಿ ವೀರ ಸಾವರ್ಕರ್ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಬಿಜೆಪಿ ಯುವ ಮೊರ್ಚಾದಿಂದ ಬೃಹತ್ ಪ್ಲೆಕ್ಸ್ ಅಳವಡಿಕೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಘಟನೆ. ಇತಿಹಾಸ ಅರಿಯದೆ ಸಾವರ್ಕರ್ ಬಗ್ಗೆ ಬೇಕಾಬಿಟ್ಟಿ ಮಾತನಾಡ್ತಿದ್ದಾರೆಂದು ಆಕ್ರೋಶ. ಸಾವರ್ಕರ್ ಬಗ್ಗೆ ತಿಳಿಯಲು ಅವರ ಭಾವಚಿತ್ರ,ಓದಲು ಪುಸ್ತಕ ಕೊಡುವುದಾಗಿ ಎಚ್ಚರಿಕೆ.

10:13 AM IST

ಮುಂದುವರೆದಿದೆ ಕೈ ನಾಯಕರ ಟೆಂಪಲ್ ರನ್

ಹುಬ್ಬಳ್ಳಿ: ಹುಬ್ಬಳ್ಳಿ ‌ಮೂರುಸಾವಿರಮಠ, ಸಿದ್ಧಾರೂಢ ಮಠ, ಪತೇಶಾವಲಿ ದರ್ಗಾಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ ಭೇಟಿ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಪಾಟೀಲ. ಬೆಳಿಗ್ಗೆಯಿಂದ ಟೆಂಪಲ್ ರನ್. ಪಾಟೀಲರಿಗೆ ಶಾಸಕರಾದ ಶ್ರೀನಿವಾಸ ‌ಮಾನೆ, ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವರು ಸಾಥ್.

9:46 AM IST

ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ

.ಸಿದ್ದರಾಮೋತ್ಸವದ ಬಳಿಕ ಮಡಿಕೇರಿ ಚಲೋ ಬೃಹತ್ ಪಾದಯಾತ್ರೆಗೆ ಸಜ್ಜು. ಮೈಸೂರಿನಲ್ಲಿ ತಯಾರಾಗುತ್ತಿದೆ ಮಡಿಕೇರಿ ಚಲೋ ಬ್ಲೂ ಪ್ರಿಂಟ್.! ಮಡಿಕೇರಿ ಪ್ರವಾಸದ ವೇಳೆ ಸಿದ್ದರಾಮಯ್ಯ ಕಾರ್ ಮೇಲೆ ಮೊಟ್ಟೆ ಹೊಡೆದ ಪ್ರಕರಣ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪಡೆಯಿಂದ ಮಡಿಕೇರಿ ಚಲೋ ರೂಪುರೇಷೆ. ಇದೆ ಆಗಸ್ಟ್ 26ರಂದು ಹಮ್ಮಿಕೊಳ್ಳಲಾಗಿರುವ ಮಡಿಕೇರಿ ಚಲೋ. ಬಳ್ಳಾರಿ ಪಾದಯಾತ್ರೆಯ ಮಾದರಿಯಲ್ಲಿ ಆಯೋಜನೆ ಚಿಂತನೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಾರಿ ಚರ್ಚೆ. ಸಿದ್ದರಾಮಯ್ಯ ಪರ ನಿಂತ ನೆಟ್ಟಿಗರು.

9:45 AM IST

ಸಾವರ್ಕರ್ಗೆ ಪೋಟೋಗೆ ಬೆಂಕಿ: 12 ಕಾಂಗ್ರೆಸ್ ಕಾರ್ಯಕರ್ತರ ಮೆಲೆ FIR ದಾಖಲು

ಧಾರವಾಡ:  ಸಾರ್ವಕರ್ ಪೋಟೊ ಸುಟ್ಟು ಮೊಟ್ಟೆ ಹೊಡೆದ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ  12 ಕಾಂಗ್ರೆಸ್ ಕಾರ್ಯಕರ್ತರ ಮೆಲೆ ಎಫ್ಐಆರ್ ದಾಖಲಾಗಿದೆ. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿ‌ನ್ನೆ ಸಂಜೆ ನಡೆದ ಪ್ರಕರಣ.  ಪ್ರತಿಬಟನೆ ವೇಳೆ ಸಾರ್ವಕರ್ ಪೋಟೋ ಸುಟ್ಡು ಮೊಟ್ಟೆ ಹೊಡೆದಿರುವ ಕಾಂಗ್ರೆಸ್ ಕಾರ್ಯಕರ್ತರು. ಸ್ವಾತಂತ್ರ ಹೋರಾಟಗಾರರಿಗೆ ಅವಮಾನ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರು.  ಶಿವಾನಂದ ಸತ್ತಿಗೇರಿ ಅವರಿಂದ ದೂರು.ಅಲ್ತಾಪ್ ಹಳ್ಳೂರ, ಅನಿಲ ಪಾಟೀಲ, ನಾಗರಾಜ್ ಗೌರಿ, ಆನಂದ ಸಿಂಗನಾಥ್,ಆಸಿಪ್ ಸನದಿ, ಸೌರಬ್, ಅರವಿಂದ ಏಗನಗೌಡರ್, ಮೈನುದ್ದಿನ ನಧಾಪ್, ಮನೋಜ್ ಕರ್ಜಗಿ ರಾಬರ್ಟ,  12 ಕಾಂಗ್ರೆಸ್ ಕಾರ್ಯಕರ್ತರ ಮೆಲೆ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

9:39 AM IST

ಟ್ವಿಟರ್ ಡಿಬಿ ಬದಲಿಸಿ, ಸಾವರ್ಕರ್ ವಿರೋಧಿಗಳಿಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ

ಟ್ವಿಟರ್ ಡಿಪಿ ಬದಲಿಸಿದ ಸಂಸದ ಪ್ರತಾಪ್ ಸಿಂಹ. ಟ್ವಿಟರ್ ಅಧಿಕೃತ ಖಾತೆಯ ಡಿಪಿಯಲ್ಲಿ ಸಾವರ್ಕರ್ ಫೋಟೋ ಹಾಕಿಕೊಂಡ ಪ್ರತಾಪ್ ಸಿಂಹ. ಸಾವರ್ಕರ್ ಭಾವಚಿತ್ರದ ಜೊತೆ ಫೋಟೋ ತೆಗೆಸಿಕೊಂಡ ಚಿತ್ರ ಹಾಕಿಕೊಂಡ ಪ್ರತಾಪ್ ಸಿಂಹ. ಡಿಪಿಗೆ ಸಾವರ್ಕರ್ ಫೋಟೋ ಹಾಕುವ ಮೂಲಕ ಸಾವರ್ಕರ್ ವಿರೋಧಿಗಳಿಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ.

9:35 AM IST

ಸಿಎಂ ಭೇಟಿಗೆ ಆಗಮಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಸಿಎಂ ಆರ್.ಟಿ ನಗರ ನಿವಾಸದಲ್ಲಿ ಸಿಎಂ ಭೇಟಿಯಾದ ರಮೇಶ್ ಜಾರಕಿಹೊಳಿ. ನಿನ್ನೆಯೂ ಸಿಎಂ ಭೇಟಿಯಾಗಿದ್ದ ರಮೇಶ್ ಜಾರಕಿಹೊಳಿ. ಮೊನ್ನೆ ರಾಜ್ಯಧ್ಯಕ್ಷ ಕಟೀಲ್ ರನ್ನ ಭೇಟಿಯಾಗಿದ್ದ ರಮೇಶ್ ಜಾರಕಿಹೊಳಿ. ಇದೀಗೆ ಮತ್ತೆ ಮತ್ತೆ ಸಿಎಂ ಭೇಟಿಯಾಗಿ ಚರ್ಚೆ ನಡೆಸುತ್ತಿರುವ ರಮೇಶ್ ಜಾರಕಿಹೊಳಿ. ಸಂಪುಟಕ್ಕೆ ಸರ್ಪಡೆಯಾಗಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ರಮೇಶ್ ಜಾರಿಕಿಹೊಳಿ.

9:32 AM IST

ಕಿರುತೆರೆಯಿಂದ ಅನಿರುದ್ಧ್ ಗೆ ಬಹಿಷ್ಕಾರ: ಕಿರುತೆರೆ ನಿರ್ಮಾಪಕರ ಸಂಘದಿಂದ ನಿರ್ಧಾರ

ಕಿರುತೆರೆಯಿಂದ ನಟ ಅನಿರುದ್ ಕಿಕ್ ಔಟ್! ಕಿರುತೆರೆ ನಿರ್ಮಾಪಕರ ಸಂಘದಿಂದ ದೊಡ್ಡ ನಿರ್ಧಾರ. ಎರಡು ವರ್ಷ ಅನಿರುದ್ದ್ ಅವರನ್ನ ಬಾಯ್‌ ಕಾಟ್ ಮಾಡಿದ್ದೇವೆ. ಜೊತೆ ಜೊತೆಯಲಿ ಧಾರವಾಹಿ ನಾಯಕ ನಟ ಅನಿರುದ್ದ್ ಅವರಿಗೆ ಇನ್ಮುಂದೆ ಕಿರುತೆರೆಯ ಯಾವುದೇ ಕಾರ್ಯಕ್ರಮಗಳಲ್ಲಿ ಅನಿರುದ್ಧ್ ಗೆ ಅವಕಾಶ ಕೊಡದಂತೆ ನಿರ್ಧರಿಸಿದ್ದೇವೆ. ಜೊತೆ ಜೊತೆಯಲಿ ದಾರವಹಿಯಿಂದಲೂ ಕೈ ಬಿಡಲು ನಿರ್ಧಾರಿಸಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಬಾಸ್ಕರ್ ಅವರಿಂದ ಮಾಹಿತಿ.

ಅನಿರುದ್ಧ್ ಅವರನ್ನ ಬ್ಯಾನ್ ಮಾಡಿಲ್ಲ ಎರಡು ವರ್ಷ ಅವರನ್ನ ಕಿರುತೆರೆಯಿಂದ ದೂರ ಇಡುತ್ತಿದ್ದೇವೆ. ಜೊತೆ ಜೊತೆಯಲಿ ಧಾರವಾಹಿ ತಂಡದ ಜೊತೆ ಅನಿರುದ್ಧ್ ಕಿರಿಕ್ ಮಾಡಿಕೊಂಡಿದ್ದರು. ನಟ ಅನಿರುದ್ಧ್ ಅವರು ಜೊತೆ ಜೊತೆಯಲಿ ಸೀರಿಯಲ್ ನಿರ್ದೇಶಕ ಮಧು ಉತ್ತಮ್ ಗೆ ಮೂರ್ಖ ಅಂತ ಕರೆದಿದ್ದಾರೆ. ಸ್ಕ್ರಿಪ್ಟ್ ವಿಚಾರಕ್ಕೆ ನಿರ್ದೇಶಕರಿಗೆ ನಿಂದಿಸಿ ಶೂಟಿಂಗ್ ಸೆಟ್ಟಿನಿಂದ ಹೊರ ಹೋಗಿದ್ದಾರೆ. ಧಾರಾವಾಹಿ ದೃಶ್ಯ ಬದಲಾವಣೆ ಮಾಡುವಂತೆ ನಿರ್ದೇಶಕ ಮಧು ಉತ್ತಮ್ ಜತೆ ಅನಿರುಧ್ದ್ ಕಿರಿಕ್ ಮಾಡಿಕೊಂಡಿದ್ದರು. ಹಲವು ಭಾರಿ ಜಗಳ ಆಡಿ ಶೂಟಿಂಗ್ ಸೆಟ್ ನಿಂದ ಹೊರ ನೆಡೆದಿದ್ದ ಅನಿರುದ್ದ್. ಕಳೆದ ಎರಡು ದಿನದ ಹಿಂದೆ ಕೂಡ ಧಾರವಾಹಿ ತಂಡದ‌ ಜೊತೆ ಜಗಳ ಆಡಿಕೊಂಡು ಶೂಟಿಂಗ್ ಮಾಡದೇ ಹೊರ ನಡೆದಿದ್ರು. ಇದನ್ನ ಸಹಿಸಿ ಸಹಿಸಿ ಸಾಕಾಗಿದೆ. ಹಲವು‌ ಭಾರಿ ಈ ಘಟನೆ ಆಗಿದೆ ಅಂತ ಈ ನಿರ್ಧಾರ ಮಾಡಿದ್ದೇವೆ ಎಂದಿದೆ ಧಾರಾವಾಹಿ ತಂಡ. 

ಹೆಚ್ಚಿನ ಮಾಹಿತಿ ಇಲ್ಲಿದೆ

6:37 PM IST:

ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳುತ್ತಿರುವ ಬಿಜೆಪಿಗರೇ ತಮ್ಮ ಶಾಸಕ ಅಪ್ಪಚ್ಚು ರಂಜನ್ ಅವರಿಂದ ಆರೋಪಿಗೆ ಠಾಣೆಯಿಂದ ಜಾಮೀನು ಕೊಟ್ಟು ಕರೆತಂದಿದ್ದೇಕೆ? ಸ್ಥಳೀಯವಾಗಿ ಕಾಂಗ್ರೆಸ್ ಮುಖಂಡರಿಗೇ ಸರಿಯಾಗಿ ತಿಳಿಯದ ಈತ ಹಠಾತ್ತನೇ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು ಹೇಗೆ? ಉದ್ಯೋಗ ನೀಡಬೇಕಾದ ಮುಗ್ದ ಯುವಕರ ಕೈಗೆ ಮೊಟ್ಟೆಗಳನ್ನು ನೀಡಿ ಕೊನೆಗೆ ಅವರನ್ನೇ ಅಪಾಯಕ್ಕೆ ನೂಕುವ ಬಿಜೆಪಿಗರ ಕುತಂತ್ರಕ್ಕೆ ಯುವಕರು ಬಲಿಯಾಗುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ.

4:32 PM IST:

ನಿರ್ಮಾಪಕ ಆರೂರು ಜಗದೀಶ್ ಮಾಡಿರುವ ಆರೋಪಗಳಿಗೆ ಅನಿರುದ್ಧ್ ಪ್ರತಿಕ್ರಿಯೆ ನೀಡದ್ದಾರೆ. ನನಗೆ ಯಶಸ್ಸು ಸಿಕ್ಕಿದ್ದು ವೀಕ್ಷಕರಿಂದ. ದುರಹಂಕಾರ ಅಂತ ಹೇಳುತ್ತಾರೆ, ನನಗೆಲ್ಲಿದೆ ದುರಹಂಕಾರ, ನನ್ನಲ್ಲಿ ದುರಹಂಕಾರ ಇದ್ದಿದ್ದರೆ, ಅಭಿನಯದಲ್ಲೂ ಕಾಣಿಸುತ್ತಿತ್ತು ಎಂದಿದ್ದಾರೆ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

4:16 PM IST:

ಗಣೇಶೋತ್ಸವ ವಿಚಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ . ಗಣೇಶ ಚತುರ್ಥಿ ಹಬ್ಬದ ಸನ್ನಿವೇಶವೆರೋದ್ರಿಂದ ಈಗಾಗಲೇ ಪೊಲೀಸ್ ಇಲಾಕೆಯೊಂದಿಗೆ ಸಭೆ ನಡೆಸಿದ್ದೆವೆ. ಅಗ್ನಿ ಶಾಮಕ ಇಲಾಖೆ , ಬಿಸ್ಕಾಂ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಿದ್ದು ಕ್ರಮಗಳ ಬಗ್ಗೆ ಹೊಸ ಆದೇಶ ಹೊರಡಿಸಲಾಗುವುದು. ಕೊರೊನಾ ಹಿನ್ನೆಲೆ ಎರಡು ವರ್ಷದ ನಿಯಮಗಳು ಬೇರೆಯದೆ ಇದ್ದವು. ಆದ್ರೇ ಈ ಬಾರಿ ಎರಡು ವರ್ಷಗಳ ಹಿಂದೆ ಇದ್ದ ನಿಯಮಗಳಲ್ಲಿ ಸ್ವಲ್ಪ ಹೊಸ ನಿಯಮಗಳನ್ನು ಸೇರ್ಪಡಿಸಿ, ಮಾನದಂಡ ನೀಡಲಾಗುವುದು. ಸಿಂಗಲ್ ವಿಂಡೋ ಮೂಲಕ ಗಣೇಶ ಕೂರಿಸುವವರಿಗೆ NoC ವ್ಯವಸ್ಥೆ ಮಾಡಲಾಗುವುದು. ಎಲ್ಲ ವಲಯಗಳಲ್ಲಿಯೂ ಎನ್ ಓಸಿ ಪಡೆಯ ಬಹುದಾಗಿದೆ.

3:44 PM IST:

ಬೆಂಗಳೂರಿನ ಚಾಮರಾಜ ಪೇಟೆ ಮೈದಾನಲ್ಲಿ ಈಗಾಗಲೇ ರಾಷ್ಟ್ರ ಧ್ವಜ ಶಾಂತಿಯುತವಾಗಿ ಹಾರಿಸಲಾಗಿದೆ, ಇದೆ ಮೈದಾನಲ್ಲಿ ಬರುವ ನವೆಂಬರ್ 1ರ ರಾಜ್ಯೋತ್ಸವ ದಿನದಂದು ಕನ್ನಡ ಬಾವುಟ ಕೂಡಾ ಹಾರಿಸಾಲು ಅನುಮತಿ  ನೀಡುವುದಾಗಿ ಸಚಿವ ಅಶೋಕ ಹೇಳಿದ್ದಾರೆ., ಶಾಂತಿ ಸಹಬಾಳ್ವೆ ಬಿಜೆಪಿ ಸರ್ಕಾರದ ಉದ್ದೇಶ. ವಿರೋಧ ಪಕ್ಷದವರು ವಿನಕಾರಣ ಸುವ್ಯವಸ್ಥೆ ಇಲ್ಲ ಅಂತ ಟೀಕಿಸ್ತಾರೆ, ಅದು ಇಲ್ಲಾಂದ್ರೆ ಹೇಗೆ ಧ್ವಜರೋಹಣ ಶಾಂತಿಯಿಂದ ಚಾಮರಾಜ ಪೇಟೆ ಮೈದಾನಲ್ಲಿ ಆಯ್ತು ಅನ್ನೋದು ತಿಳ್ಕೊ ಬೇಕು ಎಂದು ವಿಪಕ್ಷಗಳಿಗೆ ಮಾತಲ್ಲಿಯೇ ಟಾಂಗ್ ನೀಡಿದರು.

3:11 PM IST:

Mysore: ಹಾಡಹಗಲಿನಲ್ಲೇ ಮಹಿಳೆಯಿಂದ ಹಣ ದೋಚಿ ಪರಾರಿಯಾದ ಕಳ್ಳ. ಎಚ್.ಡಿ.ಕೋಟೆ ಪಟ್ಟಣದ ಮುತ್ತಮ್ಮ 1.79ಲಕ್ಷ ಹಣ ಕಳೆದುಕೊಂಡ ಮಹಿಳೆ. ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಎದುರಿನಲ್ಲಿ ಘಟನೆ. ಘಟನೆಯಿಂದ ಭಯಭೀತರಾದ ಜನತೆ. ಮಹಿಳಾ ಸಂಘದಿಂದ ಸಾಲ ಮಂಜೂರು ಮಾಡಿಸಿದ ಮುತ್ತಮ್ಮ ಬ್ಯಾಂಕಿನಿಂದ ಹಣ ಡ್ರಾಮಾಡಿ ಹಿಂದಿರುಗುವಾಗ ಘಟನೆ. ಮುತ್ತಮ್ಮ ಅವರ ಕೈಯ್ಯಲ್ಲಿ ಹಣ ಇದ್ದ ಬ್ಯಾಗ್ ಕಸಿದುಕೊಂಡು ಕ್ಷಣಮಾತ್ರದಲ್ಲಿ ಪರಾರಿಯಾದ ಚಾಲಾಕಿ ಕಳ್ಳ. ಸಾರ್ವಜನಿಕ ಸ್ಥಳದಲ್ಲೇ ಘಟನೆ ಸಂಭವಿಸಿದರೂ ಕೈಗೆ ಸಿಗದೆ ಪರಾರಿಯಾದ ಕಳ್ಳ. ಕಳ್ಳನಿಗಾಗಿ ಪೋಲೀಸರ ತೀವ್ರ ಹುಡುಕಾಟ.

2:27 PM IST:

ರಾಮನಗರ: ನಮಗೇನು ಮೊಟ್ಟೆ ಎಸೆಯಲು ಬರಲ್ವಾ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ. 'ಇದು ಅವರ ಸಂಸ್ಕೃತಿ ಏನು ಎಂಬುದನ್ನ ತೋರಿಸತ್ತೆ.
ಅವರು ಪ್ರಚೋದನೆ ನೀಡುತ್ತಿದ್ದಾರೆ. ನಾವು ಮೊಟ್ಟೆ ಎಸೆತ ಪ್ರಕರಣವನ್ನು ಖಂಡಿಸಿದ್ದೇವೆ. ಆ ಘಟನೆಯನ್ನ ನಾವೂ ಯಾರೂ ಸಮರ್ಥಿಸಿಕೊಂಡಿಲ್ಲ. 'ಈಗ ಡಿ.ಕೆ. ಶಿವಕುಮಾರ್ ಪ್ರಚೋದನೆ ಹೇಳಿಕೆ ನೀಡುತ್ತಿದ್ದಾರೆ. ಇದೇ ನಮಗೂ ಕಾಂಗ್ರೆಸ್‌ಗೂ ಇರುವ ವ್ಯತ್ಯಾಸ. ಯಾರೂ ಮೊಟ್ಟೆ ಎಸೆದಿದ್ದಾರೋ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿದ್ದೇವೆ. ರಾಮನಗರದಲ್ಲಿ ಡಿಕೆಶಿ ಹೇಳಿಕೆಗೆ ಸಚಿವ ಅಶ್ವಥ್ ನಾರಾಯಣ್ ಟಾಂಗ್.ಮಾಜಿ ಸಿಎಂ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವರು, ಸಮಾಜದಲ್ಲಿ ತಪ್ಪು ಮಾಡುವುದು ಸಹಜ. *ಮಾಡಿದ ತಪ್ಪನ್ನ ಸರಿಪಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಈಗ ಸಿದ್ದರಾಮಯ್ಯ ಪಶ್ವತ್ತಾಪ ಪಟ್ಟಿಲ್ಲ ಎನ್ನಬಹುದು. ಶ್ರೀಗಳ ಮಾತು ನಂಬ ಬೇಕಾ, ಇಲ್ಲಾ ಸಿದ್ದರಾಮಯ್ಯ ಅವರ ಮಾತು ನಂಬಬೇಕಾ? ಸ್ವಾರ್ಥಕ್ಕಾಗಿ ರಾಜಕೀಯ ಮಾಡಬಾರದು. ಸಮಾಜ ಅವರನ್ನ ನೋಡುತ್ತಿದೆ. ಹೇಳಿಕೆ ಬದಲಿಸಿಕೊಂಡರೆ ವ್ಯಕ್ತಿತ್ವಕ್ಕೆ ಧಕ್ಕೆಯಾಗಲಿದೆ. ಇವರು ಹೇಳಿದನ್ನೆಲ್ಲ ನಂಬ ಬಾರದು ಎಂಬ ಭಾವನೆ ಜನರಲ್ಲಿ ಬರುತ್ತದೆ. ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ.

1:51 PM IST:

ಮನಸ್ಥಾಪ ಭಿನ್ನಾಭಿಪ್ರಾಯ ಸರ್ವೇ ಸಾಮಾನ್ಯ. ಒಂದು ಮನೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುತ್ತೆ. ಅದನ್ನ ಹೊರಗೆ ಹೇಳಿಕೊಂಡು ಹೋಗೋ ಬುದ್ದಿ ನನಗಿಲ್ಲ. ದಾರವಾಹಿ ಎಲ್ಲರೂ ನನ್ನ ಕುಟುಂಬ ಇದ್ದಂತೆ. ಎರಡನೇ ಆರೋಪ ಕ್ಯಾರಾವನ್ ಇಲ್ಲದಿದ್ರೆ ಶೂಟಿಂಗ್ ಗೆ ಬರುತ್ತನೇ ಇರಲಿಲ್ಲ ಅಂತ ಹೇಳಿದ್ದಾರೆ. ನಾನು ರಂಗಭೂಮಿ ಕಲಾವಿಧ ಕ್ಯಾರಾವ್ಯಾನ್ ಇಲ್ದದೇ ಇರೋಕೆ ಗೊತ್ತು. ಕಲಾವಿದರೆಲ್ಲಾ ನೀವು ಕ್ಯಾರಾವ್ಯಾನ್‌ ಕೇಳಲ್ಲ, ನಮಗೂ ಕೊಡಲ್ಲ ಅಂತ ಹೇಳಿದ್ರು. ಕಾಡಿನಲ್ಲಿ ಶೂಟಿಂಗ್ ಮಾಡುವಾಗ ಕ್ಯಾರಾವಾನ್ ಇಲ್ಲದಿದ್ರೆ ಹೇಗೆ ಇರಬೇಕು? ಹೆಂಗಸರು ಇದ್ದಾಗ ಕ್ಯಾರಾವ್ಯಾನ್ ಇಲ್ಲದಿದ್ರೆ ಅವರು ಬಟ್ಟೆ ಬದಲಾಯಿಸೋದು ಹೇಗೆ? ಅಕ್ಕ ಪಕ್ಕ ಇರೋರ ಮನೆಗೆ ಹೋಗಿ ಬಾತ್ ರೂಂ ಕೇಳೋಕೆ ಆಗುತ್ತಾ? ಒಂದು ಸೀನ್ ಪೇಪರ್ ಕಳಿಸೋದು ತುಂಬಾ ತಡವಾಗಿ ಕಳಿಸ್ತಿದ್ರು. ಸ್ವಲ್ಪ ಬೇಗ ಕಳಿಸಿ ಅಂತ ಕೇಳಿದ್ದು ತಪ್ಪಾ?

1:48 PM IST:

'ಆನಂದಮಯ ಈ ಜಗ ಹೃದಯ' ಎಂದು ಕಣ್ಣು ಮುಚ್ಚಿ ಹಾಡಲು ಶುರು ಮಾಡಿದರೆ ಸಾಕು, ಸೂರ್ಯೋದಯ, ಚಂದ್ರೋದಯ ಎಲ್ಲವೂ ಕೇಳುಗನ ಅನುಭವವಕ್ಕೆ ಬರುತ್ತಿದ್ದವು. ಅದು ಬರೀ ಕುವೆಂಪು ಬರೆದ ಸಾಲಿನ ಮಹಿಮೆ ಮಾತ್ರವಲ್ಲ, ಕವನದ ಪ್ರತಿ ಪದವನ್ನೂ ಅನುಭವಿಸಿ ಹಾಡುತ್ತಿದ್ದ ಸುಬ್ಬಣ್ಣ ಅವರ ಗಾಯನದ ಶೈಲಿಯೂ ಕೇಳುಗನ ಹೃದಯಕ್ಕೆ ನಾಟುವಂತಿರುತ್ತಿತ್ತು. ಅಂಥ ಮಹಾನ್ ಗಾಯಕ ಕರುನಾಡನ್ನು ಅಗಲಿದ್ದಾರೆ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕುಟುಂಬಕ್ಕೆ ನೀಡಲೆಂದು ಮೋದಿ ಅವರು ಸುಬ್ಬಣ್ಣ ಪತ್ನಿ ಶಾಂತಾ ಅವರಿಗೆ ಪತ್ರ ಬರೆದಿದ್ದಾರೆ. 

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

1:11 PM IST:

ಯಾರೊಬ್ಬರ ಭಾವನೆಯೂ ಕೆರಳದಂತೆ ಮಾತನಾಡುವುದು ಜವಾಬ್ದಾರಿಯುಳ್ಳವರ ನಡೆಯಾಗಬೇಕಿದೆ ಎನ್ನುವ ಮೂಲಕ ಸಾವರ್ಕರ್ ಕುರಿತ ಸಿದ್ದರಾಮಯ್ಯ ಹೇಳಿಕೆಗಳಿಗೆ ತಿರುಗೇಟು ನೀಡಿದ‌ ವಿಜಯೇಂದ್ರ. ಕಾಂಗ್ರೆಸ್ ಭವನ ಸಿದ್ದರಾಮಯ್ಯ ಭಾಷಣ. ವಿಜ್ಞಾನ ತಂತ್ರಜ್ಞಾನ ಸಂಪರ್ಕ ಕ್ಷೇತ್ರ ಎಲ್ಲ ಕ್ಷೇತ್ರಗಳಲ್ಲೂ ಕೂಡ ಜಗತ್ತಿನ ಮುಂದುವರಿದ ರಾಷ್ಟ್ರಗಳ ಮಟ್ಟಕ್ಕೆ ಭಾರತ ನಿಲ್ಲಬೇಕು ಅಂತ ರಾಜಿವ್ ಗಾಂಧಿ ತೀರ್ಮಾನ ಮಾಡಿದರು. ಯುವಕರಲ್ಲಿ ಅಪಾರವಾದ ಭರವಸೆ ಇತ್ತು ರಾಜೀವ್ ಗಾಂಧಿಯವರಿಗೆ ಇತಿಹಾಸ ಗೊತ್ತಿರುವವರು ಮಾತ್ರ ದೇಶದ ಭವಿಷ್ಯ ರೂಪಿಸಲು ಸಾಧ್ಯ. ಅದಕ್ಕಾಗಿಯೇ ಬಿಜೆಪಿ ಯವರು ಭಾರತದ ಇತಿಹಾಸವನ್ನೇ ತಿರುಚಲು ಶುರು ಮಾಡಿದ್ದಾರೆ. ಯಾರಿಗೂ ಇತಿಹಾಸ ಗೊತ್ತಾಗಬಾರದು ಅಂತ ಇತಿಹಾಸವನ್ನೇ ತಿರುಚುತ್ತಿದ್ದಾರೆ. ಜನರ ಚರಿತ್ರೆಯನ್ನೇ ಬದಲು ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಪಟ್ಟಭದ್ರ ಹಿತಾಸಕ್ತಿಗಳು ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡ್ತಿದ್ದಾರೆ. ಜಾತಿ ಧರ್ಮದ ಹೆಸರಲ್ಲಿ ಯುವಕರ ಮನಸ್ಸು ಕಲುಷಿತ ಮಾಡುವ ನೀಚ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಯುವಕರು ಇತಿಹಾಸ ಅರ್ಥ ಮಾಡಿಕೊಳ್ಳಬೇಕು, ಎಂದು ಟ್ವೀಟ್ ಮಾಡಿದ್ದಾರೆ. 

12:31 PM IST:

ಬೆಂಗಳೂರು(ಆ.20):  ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯು ಟರ್ನ್‌ ಹೊಡೆದಿದ್ದಾರೆ. ಹೌದು, ಸಿದ್ದರಾಮಯ್ಯ ಹೇಳಿಕೆ ಹಿಂದಿನ ಲೆಕ್ಕಾಚಾರದ ಬಗ್ಗೆ ಇದೀಗ ಗಂಭೀರವಾದ ಚರ್ಚೆ ಆರಂಭವಾಗಿದೆ. ಸೈದ್ಧಾಂತಿಕವಾಗಿ ಧರ್ಮದ ವಿಚಾರದಲ್ಲಿ ಅಬ್ಬರಿಸಿದ್ದ ಸಿದ್ದರಾಮಯ್ಯ ಮುಗ್ಗರಿಸಿದ್ರಾ? ಎಂಬ ಚರ್ಚೆ ಕೂಡ ಚರ್ಚೆ ನಡೆಯುತ್ತಿದೆ. ಚುನಾವಣೆ ದೃಷ್ಟಿಯಿಂದ ಪಶ್ಚಾತಾಪದ ಮಾತನಾಡಿದ್ರಾ ಸಿದ್ದರಾಮಯ್ಯ?, ಇವರ ಪಶ್ಚಾತಾಪದ ಹಿಂದಿದೆ ಹತ್ತಾರು ಲೆಕ್ಕಾಚಾರಗಳಿವೆ. 

ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ

12:12 PM IST:

ಹಾವೇರಿ; ಮನೆ ಪರಿಹಾರ ನೀಡುವಲ್ಲಿ ತಾರತಮ್ಯ ಹಿನ್ನೆಲೆಯಲ್ಲಿ ತಲೆ ಮೇಲೆ ಕಲ್ಲು ಹೊತ್ತು ಮತ್ತೂರ ಗ್ರಾಪಂ ಮುಂದೆ ಸಂತ್ರಸ್ತರ ಪ್ರತಿಭಟನೆ. ಅರ್ಹರಿಗೆ ಪರಿಹಾರ ನೀಡದ ಗ್ರಾಪಂ ಅಧಿಕಾರಿಗಳಿಗೆ ಪ್ರತಿಭಟನೆ ಬಿಸಿ. ಪರಿಹಾರ ವಂಚಿತ ಫಲಾನುಭವಿಗಳಿಂದ ಒಂಟಿ ಕಾಲ ಮೇಲೆ ನಿಂತು ಪ್ರತಿಭಟನೆ. ಗ್ರಾಮ ಪಂಚಾಯಿತಿ ಎದುರು ತಲೆ ಮೇಲೆ ಕಲ್ಲು ಹೊತ್ತು ವಿನೂತನವಾಗಿ ಪ್ರತಿಭಟನೆ. ಅಕಾಲಿಕ ಮಳೆಯಿಂದಾಗಿ ಮನೆ ಕಳೆದುಕೊಂಡ ಮತ್ತೂರು ಗ್ರಾಮದ ಮಲ್ಲೇಶಪ್ಪ ಕೋನಮ್ಮನವರ, ಸೋಮಪ್ಪ ಹೊಸಳ್ಳಿ. ಶೋಭವ್ವ ಹಾರಗೊಪ್ಪ ವಜ್ರಬಿ ಮುಲ್ಲಾ. ಮಲ್ಲಪ್ಪ ಹೊಸಳ್ಳಿಯಿಂದ ಪ್ರತಿಭಟನೆ ಮಹಾತ್ಮ ಗಾಂಧಿ . ಪೋಟೊದೊಂದಿಗೆ ಗ್ರಾಪಂ ಎದುರು ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಬಿದ್ದರೂ ಸಹ ಅಧಿಕಾರಿಗಳು ನಮ್ಮತ್ತ ನೋಡದೆ ತಮಗೆ ಬೇಕಾದವರಿಗೆ ಮನೆ ಹಾನಿ ಪರಿಹಾರ ಹಾಕಿದ್ದಾರೆ ಎಂದು ಮಲ್ಲೇಶಪ್ಪ ಕೋನಮ್ಮನವರ  ಆರೋಪಿಸಿದ್ದಾರೆ.

11:29 AM IST:

ಸಿದ್ದರಾಮಯ್ಯಗೆ ಎಂದಿನಂತೆಯೇ ಒಂದು ಎಸ್ಕಾರ್ಟ್ ಹಾಗೂ ಒಂದು ಪೈಲಟ್ ಟೀಂ ಮಾತ್ರ. ಒಟ್ಟೂ 10 ಮಂದಿ ಅಂಗ ರಕ್ಷಕರು ಮಾತ್ರ ಎಂದಿನಂತೆ ಹಾಜರ್ ನಿನ್ನೆ ಮಾತ್ರ ಶೃಂಗೇರಿಯಲ್ಲಿ ನೀಡಲಾಗಿದ್ದ ಹೆಚ್ಚಿನ ಭದ್ರತೆ. ಸಿದ್ದರಾಮಯ್ಯ ನಿವಾಸಕ್ಕೂ ಇನ್ನೂ ಒದಗದ ಹೆಚ್ಚಿನ ಭದ್ರತಾ ಸಿಬ್ಬಂದಿ. ಸಿದ್ದರಾಮಯ್ಯಗೆ ಈಗಾಗಲೇ ಮೂರು ಬಾರಿ ಬಂದಿರುವ ಬೆದರಿಕೆ ಪತ್ರ. ಬಿಟಿ ಲಲಿತಾ ನಾಯಕ್ ಅವರಿಗೂ ಬಂದಿರುವ ಬೆದರಿಕೆ ಪತ್ರದಲ್ಲಿ ಸಿದ್ದರಾಮಯ್ಯ ಹೆಸರೂ ಉಲ್ಲೇಖ. ಮೊಟ್ಟೆ ಘಟನೆ ಬಳಿಕ ಸಿಎಂ ಹೆಚ್ಚಿನ ಭದ್ರತೆ ನೀಡುವ ಭರವಸೆ. ಸಿಎಂ ಸೂಚನೆ ಬಳಿಕವೂ ಕೇವಲ ಒಂದು ಪೈಲಟ್ ಒಂದು ಎಸ್ಕಾರ್ಟ್ ಮಾತ್ರ.

11:26 AM IST:

ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಡಗಿನ ಶಾಸಕರ ಕೊಠಡ್ಡಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಶಾಸಕರ ಭವನದಲ್ಲಿರುವ ಕೊಡಗಿನ ಬಿಜೆಪಿ ಶಾಸಕರ ಕೊಠಡಿಗೆ ಪೊಲೀಸ್ ಭದ್ರತೆ.
ಅಪ್ಪಚ್ಷು ರಂಜನ್ ಮತ್ತು ಕೆ ಜಿ ಬೊಪ್ಪಯ್ಯ ಕೊಠಡಿಗೆ ಪೊಲೀಸ್ ಭದ್ರತೆ.. ಅವರ ಕಚೇರಿ ಬಳಿ ಬ್ಯಾರಿಕೇಡ್ ಹಾಕಿ ಇಬ್ಬಿಬ್ಬರು ಪಿಸಿಗಳನ್ನ ಹಾಕಿ ಭದ್ರತೆಗೆ ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅಥಾವ ಸಿದ್ದರಾಮಯ್ಯ ಅಭಿಮಾನಿಗಳು ಕೊಠಡಿ ಬಳಿ ಬಂದು ಪ್ರತಿಭಟನೆ ಮಾಡಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಭದ್ರತಾ ಹಾಕಿರುವ ಎಲ್ ಹೆಚ್ ಪೋಲಿಸರು. ಎಲ್ ಹೆಚ್ ಪ್ರವೇಶಕ್ಕೂ ಭಾರಿ ಭದ್ರತೆ ಕೈಗೊಂಡಿರುವ ಪೊಲೀಸರು. ಯಾರೇ ಎಲ್ ಹೆಚ್ ಪ್ರವೇಶ ಮಾಡಬೇಕು ಅಂದ್ರೂ ಪರಿಮಿಷನ್ ಇದ್ರೆ ಮಾತ್ರ ಒಳಗಡೆ ಪ್ರವೇಶ.

11:16 AM IST:

ಬಿಬಿಎಂಪಿ ಅಧಿಕಾರಿಗಳ ಜೊತೆ ಇಂದು ಚುನಾವಣಾ ಆಯೋಗದ ಪೂರ್ವಭಾವಿ ಸಭೆ. ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಲಿರೋ ಬಿಬಿಎಂಪಿ ಅಧಿಕಾರಿಗಳು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಸಭೆಯಲ್ಲಿ ಭಾಗಿ. ಸಭೆಯಲ್ಲಿ ವಾರ್ಡ್ ಮರುವಿಂಗಡಣೆ, ಮೀಸಲಾತಿ ಕುರಿತಂತೆ ಚರ್ಚೆ. ರಾಜ್ಯ ಚುನಾವಣಾ ಆಯೋಗದಿಂದ ಬಿಬಿಎಂಪಿ ಚುನಾವಣಾ ಸಭೆ ಕರೆದಿರುವ ಚುನಾವಣಾಧಿಕಾರಿಗಳು. ಚುನಾವಣೆ ನಡೆಸೋಕೆ ಅಗತ್ಯವಿರೋ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ. ಮತದಾರರ ಚೀಟಿ..ವಾರ್ಡ ವ್ಯಾಪ್ತಿ.. ಮತದಾನಕ್ಕೆ ಅವಶ್ಯಕತೆ ಇರೋ ಶಾಲಾ.ಕಾಲೇಜು ಕಟ್ಟಡಗಳ ಬಗ್ಗೆ ಮಾಹಿತಿ ಪಡೆಯಲ್ಲಿರೋ ಅಯೋಗ. ಇನ್ನೂ ಮತದಾರರ ಗುರುತಿನ ಚೀಟಿ ವಿತರಣೆ. ಮತದಾರರ ಪಟ್ಟಿ ಬಿಡುಗಡೆ ಬಗ್ಗೆ ಚರ್ಚೆ. ಚುನಾವಣೆಗೆ ಬೇಕಗಿರೋ ಸಿಬ್ಬಂದಿ ನೇಮಕ. ಸಿಬ್ಬಂದಿಗೆ ಬ್ಯಾಲೆಟ್ ಪೇಪರ್ ಹಾಗೂ ಇವಿಎಂ ಯಂತ್ರಗಳ ಬಗ್ಗೆ ಟ್ರೈನಿಂಗ್. ಇನ್ನು ಇತರೆ ಚುನಾವಣಾ ವಿಷಯಗಳ ಬಗ್ಗೆ ಮಾಹಿತಿ ಪಡೆಯಲ್ಲಿರೋ ಅಯೋಗ.

10:56 AM IST:

ರಂಭಾಪುರಿ ಶ್ರೀ ಹಾಗೂ ಸಿದ್ದರಾಮಯ್ಯ ನಡುವೆ ಪ್ರತ್ಯೇಕ ಧರ್ಮದ ವಿಚಾರ ಮಾತುಕತೆಗೆ ಸಂಬಂಧಿಸಿದಂತೆ ನಾನು ಯಾವ ನಾಯಕರ ವಿಚಾರದ ಬಗ್ಗೆಯೂ ಮಾತನಾಡಲ್ಲ. ನಾನು, ಶಾಮನೂರು ಶಿವಶಂಕರಪ್ಪ ಸೇರಿ ಓಗ್ಗೂಡಿಸುವ ಕೆಲಸ ಮಾಡಿದ್ವಿ. ವೀರಶೈವ - ಲಿಂಗಾಯತ ಬೇರೆ ಬೇರೆ ಅಲ್ಲ. ತಾತ್ವಿಕವಾಗಿ ಒಂದೇ ಎಂಬ  ಭಾವನೆ ಅದನ್ನೇ ನಾವು ಪ್ರತಿಪಾದನೆ ಮಾಡಿದ್ದೇವೆ. ಅದಕ್ಕೆ ಬದ್ದರಾಗಿಯೂ ಇದ್ದೇವೆ. ಡಿಕೆ ಶಿವಕುಮಾರ್ ಕೂಡ ಈ ಹಿಂದೆ ಹೇಳಿದ್ದಾರೆ. ಅಧ್ಯಕ್ಷರೇ ಹೇಳಿದ ಮೇಲೆ ನಾನು ಹೇಳೋದು ಏನಿದೆ? ಚುನಾವಣಾ ದೃಷ್ಟಿಯಿಂದ ಸಿದ್ದರಾಮಯ್ಯ ರಂಭಾಪುರಿ ಮಠಕ್ಕೆ ಹೋಗಿಲ್ಲ. ನಾನು ಚುನಾವಣಾ ಪೂರ್ವದಲ್ಲೇ ಸಂಪುಟ ಸಭೆಯಲ್ಲೇ ಹೇಳಿದ್ದೆ. ಇದು ಬೇಡ, ಇದು ನಮ್ಮ ವಿರೋಧಿಗಳಿಗೆ ಅಸ್ತ್ರ ಕೊಟ್ಟಂತೆ  ಆಗುತ್ತದೆ ಎಂದು. ಇದು ನಮಗೆ ಹಿನ್ನೆಡೆ ಆಗುತ್ತೆ ಅಂತ ಹೇಳಿದ್ದೆ . ಆದರೆ ಬಹುಮತ ನನ್ನ ಪರ ಇರಲಿಲ್ಲ.ನಾನು, ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ ಪ್ರಯತ್ನ ಮಾಡಿದ್ವಿ. ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ರು. ಅದರಿಂದ ನಮಗೆ ಹಿನ್ನೆಡೆ ಆಯ್ತು. ಈಗ ಎಲ್ಲಾ ಗೊಂದಲಗಳು ನಿವಾರಣೆ ಆಗಿದೆ. ಲಿಂಗಾಯತರು ಜಾತ್ಯಾತೀತ ಹಿನ್ನೆಲೆ ಉಳ್ಳವರು. ನಾವು ಒಳ್ಳೆಯ ಆಡಳಿತ ಕೊಟ್ಟಿದ್ದೇವೆ. ಕಾಂಗ್ರೆಸ್ ಮೇಲೆ ಜನರಿಗೆ ವಿಶ್ವಾಸ ಇದೆ ಮತ್ತೆ ಆಶೀರ್ವಾದ ಮಾಡ್ತಾರೆ. ಮಠಗಳ ಭೇಟಿ ಎಲೆಕ್ಷನ್ ಸ್ಟ್ರಾಟಜಿನಾ? ಎಂಬ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, ಮಠಗಳ ಭೇಟಿಗೆ ಹೋಗೋದು ಸಹಜ. ರಾಹುಲ್ ಗಾಂಧಿ ಹಿಂದೆಯೂ ಅನುಭವ ಮಂಟಪಕ್ಕೆ ಭೇಟಿ ಕೊಟ್ಟಿದ್ರು. ಮುರುಘಾ ಮಠಕ್ಕೆ ಭೇಟಿ ನೀಡಿ ಲಿಂಗ‌ ದೀಕ್ಷೆ ಪಡೆದಿದ್ದಾರೆ. ಸಿದ್ದರಾಮಯ್ಯ ಕೂಡ ಮಠಕ್ಕೆ ಭೇಟಿ ನೀಡಿದ್ದಾರೆ. ಇದೆಲ್ಲದಕ್ಕೂ ರಾಜಕೀಯ ತಳಕು ಹಾಕುವುದು ಸರಿ ಅಲ್ಲ, ಎಂದಿದ್ದಾರೆ. 

10:50 AM IST:

ಲಿಂಗಾಯುತ ಪ್ರತ್ಯೇಕ ಧರ್ಮ ವಿಭಜನೆಗೆ ಸಿದ್ದರಾಮಯ್ಯ ಪಶ್ಚಾತ್ತಾಪ ವಿಚಾರವಾಗಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಸ್ವಾಮೀಜಿಗಳ  ನಡುವೆ ನಡೆದ ಸಂಭಾಷಣೆ ಅದು. ಅದರ ಬಗ್ಗೆ ನಾನು ಮಾತನಾಡಲ್ಲ. ಆ ಸತ್ಯ ಏನು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಗುರುಗಳು ನಿನ್ನೆ ಒಂದು ಹೇಳಿದ್ರು, ಇವತ್ತು ಒಂದು ಹೇಳಿದ್ರು. ಅವರಿಬ್ಬರ ಮಧ್ಯೆ ಏನ್ ಸಂಭಾಷಣೆ ನಡೆದಿದೆ ಅನ್ನೋದು ನನಗೆ ಗೊತ್ತಿಲ್ಲ.

10:47 AM IST:

ಮೈಸೂರಿನಲ್ಲಿ ಬಗೆ ಹರಿದ ಆತಂಕಕ್ಕೆ‌ ಕಾರಣವಾಗಿದ್ದ ಸಮಸ್ಯೆ. ರಸ್ತೆ ಅಗಲಿಕರಣಕ್ಕೆ‌ ಸಮಸ್ಯೆಯಾಗಿದ್ದ ಮಸೀದಿ ಗೋಪುರ ತೆರವು.ಮಾತುಕತೆ ಮೂಲಕ ಗೋಪುರ ತೆರವು ಸಮಸ್ಯೆಗೆ ಪರಿಹಾರ. ಮೈಸೂರಿನ ಇರ್ವಿನ್ ರಸ್ತೆಯ ಮಸೀದಿಯ ಗೋಪುರ. ಜೆಸಿಬಿ ಮೂಲಕ ಗೋಪುರ ತೆರವುಗೊಳಿಸಿದ ಮಸೀದಿ ಆಡಳಿತ ಮಂಡಳಿ. ರಸ್ತೆ ಅಗಲೀಕರಣಕ್ಕೆ ಮಸೀದಿಯ ಎರಡು ಗೋಪುರ ಅಡ್ಡಿ. ಈ ಸಂಬಂಧ ನೆನೆಗುದಿಗೆ ಬಿದ್ದಿದ್ದ ರಸ್ತೆ ಅಗಲೀಕರಣ ಕಾಮಗಾರಿ. ಹೈಕೋರ್ಟ್ ಸಹಾ ಗೋಪುರ ತೆರವುಗೊಳಿಸುವಂತೆ ಆದೇಶ ನೀಡಿತ್ತು. ಗೋಪುರ ತೆರವುಗೊಳಿಸಲು ಒಪ್ಪಿದ ಮಸೀದಿಯವರು. ತಾವೇ ನಿಂತು ಗೋಪುರ ತೆರವುಗೊಳಿಸಿದ ಮಸೀದಿ ಸಿಬ್ಬಂದಿ.

10:24 AM IST:

ಚಾಮರಾಜನಗರ: ವೀರ ಸಾವರ್ಕರ್ ಪ್ಲೆಕ್ಸ್ ಅಳವಡಿಕೆ. ರಾಜ್ಯದಲ್ಲಿ ವೀರ ಸಾವರ್ಕರ್ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಬಿಜೆಪಿ ಯುವ ಮೊರ್ಚಾದಿಂದ ಬೃಹತ್ ಪ್ಲೆಕ್ಸ್ ಅಳವಡಿಕೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಘಟನೆ. ಇತಿಹಾಸ ಅರಿಯದೆ ಸಾವರ್ಕರ್ ಬಗ್ಗೆ ಬೇಕಾಬಿಟ್ಟಿ ಮಾತನಾಡ್ತಿದ್ದಾರೆಂದು ಆಕ್ರೋಶ. ಸಾವರ್ಕರ್ ಬಗ್ಗೆ ತಿಳಿಯಲು ಅವರ ಭಾವಚಿತ್ರ,ಓದಲು ಪುಸ್ತಕ ಕೊಡುವುದಾಗಿ ಎಚ್ಚರಿಕೆ.

10:13 AM IST:

ಹುಬ್ಬಳ್ಳಿ: ಹುಬ್ಬಳ್ಳಿ ‌ಮೂರುಸಾವಿರಮಠ, ಸಿದ್ಧಾರೂಢ ಮಠ, ಪತೇಶಾವಲಿ ದರ್ಗಾಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ ಭೇಟಿ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಪಾಟೀಲ. ಬೆಳಿಗ್ಗೆಯಿಂದ ಟೆಂಪಲ್ ರನ್. ಪಾಟೀಲರಿಗೆ ಶಾಸಕರಾದ ಶ್ರೀನಿವಾಸ ‌ಮಾನೆ, ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವರು ಸಾಥ್.

9:46 AM IST:

.ಸಿದ್ದರಾಮೋತ್ಸವದ ಬಳಿಕ ಮಡಿಕೇರಿ ಚಲೋ ಬೃಹತ್ ಪಾದಯಾತ್ರೆಗೆ ಸಜ್ಜು. ಮೈಸೂರಿನಲ್ಲಿ ತಯಾರಾಗುತ್ತಿದೆ ಮಡಿಕೇರಿ ಚಲೋ ಬ್ಲೂ ಪ್ರಿಂಟ್.! ಮಡಿಕೇರಿ ಪ್ರವಾಸದ ವೇಳೆ ಸಿದ್ದರಾಮಯ್ಯ ಕಾರ್ ಮೇಲೆ ಮೊಟ್ಟೆ ಹೊಡೆದ ಪ್ರಕರಣ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪಡೆಯಿಂದ ಮಡಿಕೇರಿ ಚಲೋ ರೂಪುರೇಷೆ. ಇದೆ ಆಗಸ್ಟ್ 26ರಂದು ಹಮ್ಮಿಕೊಳ್ಳಲಾಗಿರುವ ಮಡಿಕೇರಿ ಚಲೋ. ಬಳ್ಳಾರಿ ಪಾದಯಾತ್ರೆಯ ಮಾದರಿಯಲ್ಲಿ ಆಯೋಜನೆ ಚಿಂತನೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬಾರಿ ಚರ್ಚೆ. ಸಿದ್ದರಾಮಯ್ಯ ಪರ ನಿಂತ ನೆಟ್ಟಿಗರು.

9:45 AM IST:

ಧಾರವಾಡ:  ಸಾರ್ವಕರ್ ಪೋಟೊ ಸುಟ್ಟು ಮೊಟ್ಟೆ ಹೊಡೆದ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ  12 ಕಾಂಗ್ರೆಸ್ ಕಾರ್ಯಕರ್ತರ ಮೆಲೆ ಎಫ್ಐಆರ್ ದಾಖಲಾಗಿದೆ. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿ‌ನ್ನೆ ಸಂಜೆ ನಡೆದ ಪ್ರಕರಣ.  ಪ್ರತಿಬಟನೆ ವೇಳೆ ಸಾರ್ವಕರ್ ಪೋಟೋ ಸುಟ್ಡು ಮೊಟ್ಟೆ ಹೊಡೆದಿರುವ ಕಾಂಗ್ರೆಸ್ ಕಾರ್ಯಕರ್ತರು. ಸ್ವಾತಂತ್ರ ಹೋರಾಟಗಾರರಿಗೆ ಅವಮಾನ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರು.  ಶಿವಾನಂದ ಸತ್ತಿಗೇರಿ ಅವರಿಂದ ದೂರು.ಅಲ್ತಾಪ್ ಹಳ್ಳೂರ, ಅನಿಲ ಪಾಟೀಲ, ನಾಗರಾಜ್ ಗೌರಿ, ಆನಂದ ಸಿಂಗನಾಥ್,ಆಸಿಪ್ ಸನದಿ, ಸೌರಬ್, ಅರವಿಂದ ಏಗನಗೌಡರ್, ಮೈನುದ್ದಿನ ನಧಾಪ್, ಮನೋಜ್ ಕರ್ಜಗಿ ರಾಬರ್ಟ,  12 ಕಾಂಗ್ರೆಸ್ ಕಾರ್ಯಕರ್ತರ ಮೆಲೆ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

9:40 AM IST:

ಟ್ವಿಟರ್ ಡಿಪಿ ಬದಲಿಸಿದ ಸಂಸದ ಪ್ರತಾಪ್ ಸಿಂಹ. ಟ್ವಿಟರ್ ಅಧಿಕೃತ ಖಾತೆಯ ಡಿಪಿಯಲ್ಲಿ ಸಾವರ್ಕರ್ ಫೋಟೋ ಹಾಕಿಕೊಂಡ ಪ್ರತಾಪ್ ಸಿಂಹ. ಸಾವರ್ಕರ್ ಭಾವಚಿತ್ರದ ಜೊತೆ ಫೋಟೋ ತೆಗೆಸಿಕೊಂಡ ಚಿತ್ರ ಹಾಕಿಕೊಂಡ ಪ್ರತಾಪ್ ಸಿಂಹ. ಡಿಪಿಗೆ ಸಾವರ್ಕರ್ ಫೋಟೋ ಹಾಕುವ ಮೂಲಕ ಸಾವರ್ಕರ್ ವಿರೋಧಿಗಳಿಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ.

9:35 AM IST:

ಸಿಎಂ ಆರ್.ಟಿ ನಗರ ನಿವಾಸದಲ್ಲಿ ಸಿಎಂ ಭೇಟಿಯಾದ ರಮೇಶ್ ಜಾರಕಿಹೊಳಿ. ನಿನ್ನೆಯೂ ಸಿಎಂ ಭೇಟಿಯಾಗಿದ್ದ ರಮೇಶ್ ಜಾರಕಿಹೊಳಿ. ಮೊನ್ನೆ ರಾಜ್ಯಧ್ಯಕ್ಷ ಕಟೀಲ್ ರನ್ನ ಭೇಟಿಯಾಗಿದ್ದ ರಮೇಶ್ ಜಾರಕಿಹೊಳಿ. ಇದೀಗೆ ಮತ್ತೆ ಮತ್ತೆ ಸಿಎಂ ಭೇಟಿಯಾಗಿ ಚರ್ಚೆ ನಡೆಸುತ್ತಿರುವ ರಮೇಶ್ ಜಾರಕಿಹೊಳಿ. ಸಂಪುಟಕ್ಕೆ ಸರ್ಪಡೆಯಾಗಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ರಮೇಶ್ ಜಾರಿಕಿಹೊಳಿ.

9:32 AM IST: