Karnataka Live Updates: ಟಾರ್ಗೆಟ್‌ ಮಿಸ್‌ ಆಗಿ ಫಾಜಿಲ್‌ ಹತ್ಯೆ ಮಾಡಿರುವ ಶಂಕೆ

Kannada News Live upates Investigation of Fazil murder on rain in some parts of Karnataka

ಪ್ರವೀಣ್ ನೆಟ್ಟೂರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಣ್ಣೂರಿನ ತಲಸೇರಿಯಲ್ಲಿ ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು. ಪ್ರವೀಣ್ ಹತ್ಯೆಯಲ್ಲಿ ಭಾಗಿಯಾಗಿರುವ ಅನುಮಾನದ ಮೇಲೆ, ತಲಸೇರಿಯಲ್ಲಿ ಚಿಕಿನ್ ಸೆಂಟರ್ ಅಂಗಡಿ ನಡೆಸುತ್ತಿದ್ದ ಶಂಕಿತ ವ್ಯಕ್ತಿಯನ್ನು ಬಂದಿಸಿದ್ದಾರೆ. 

ಸಿಇಟಿ ಫಲಿತಾಂಶ ಪ್ರಕಟ ಮಾಡಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್. ಎಂಜಿನಿಯರ್‌ಗೆ - 171656 ranks, ಕೃಷಿ ಕೋರ್ಸ್- 139968, ಪಶುಸಂಗೋಪನೆ- 142820, ಯೋಗ ಮತ್ತು ನ್ಯಾಚುರೋಪತಿ- 142750, ಬಿ ಫಾರ್ಮ್ - 174568 ranks ನೀಡಲಾಗಿದೆ. 

ಶಿವಮೊಗ್ಗದ ಹರ್ಷ ಕೊಲೆ ನಂತರ, ಇದೀಗ ದಕ್ಷಿಣ ಕನ್ನಡದ ಪುತ್ತೂರಿನ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದ್ದು. ನಿರಂತರವಾಗಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿದ ಎಪಿವಿಪಿ ಕಾರ್ಯಕರ್ತರು ಗೃಹ ಸಚಿವ ಮನೆಗೆ ಮುತ್ತಿಗೆ ಹಾಕಿದ್ದಾರೆ. ಇದಕ್ಕೆ ಕಾರಣವೆನ್ನಲಾಗುತ್ತಿರುವ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಮನೆ ಮುಂದಿದ್ದ ಹೂವಿನ ಕುಂಡಗಳನ್ನು ಒಡೆದು ದಾಂಧಲೆ ಎಬ್ಬಿಸಿದ ಆಕ್ರೋಶಿತರನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. 

ಮಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಯಾದಗಿರಿಯಲ್ಲಿ ವರುಣನ ಅಬ್ಬರದಿಂದ ಸೇತುವೆ ಜಲಾವೃತವಾಗಿದೆ. ಜಲಾವೃತವಾದ ಸೇತುವೆ ಮೂಲಕವೇ ಜನರು ಸಂಚರಿಸುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಹೆಡಗಿಮದ್ರಾ-ಯಾದಗಿರಿಗೆ ತೆರಳುವ ಸೇತುವೆ ಜಲಾವೃತವಾಗಿದ್ದು, ಇದರ ಮೇಲಿಂದ ಬಸ್ ಸಂಚಾರವಾಗುತ್ತಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಸೇತುವೆ ಜಲಾವೃತವಾಗಿದೆ. ಮನೆಗಳಿಗೆ ನುಗ್ಗಿದ್ದ ಮಳೆ ನೀರು. ಪರಮೇಶಪಲ್ಲಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ ಮಳೆ ನೀರು. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಪರಮೇಶಪಲ್ಲಿ ಗ್ರಾಮ ನಿವಾಸಿಗಳಿಗೆ ಸಂಕಷ್ಟ. ಕಷ್ಟಪಟ್ಟು ನೀರು ಹೊರ ಹಾಕುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಎರಡೆರಡು ಸರಣಿ ಹತ್ಯೆ ನಡುವೆಯೇ ವರ್ಷಧಾರೆಯೂ ಜೋರಾಗಿದೆ. ಸಿಡಿಲು ಗುಡುಗಿನಿಂದ ಕೂಡಿದ ಭಾರೀ ಮಳೆ ಹಿನ್ನೆಲೆಯಲ್ಲಿ ರಾಜಕಾಲುವೆ ಅವ್ಯವಸ್ಥೆಗೊಂಡಿದೆ. ಮಳೆಗೆ ತತ್ತರಿಸಿದೆ ಮಂಗಳೂರು. ನಿದ್ದೆಯಿಂದ ಎದ್ದ ‌ಜನರಿಗೆ ಏಕಾಏಕಿ ಶಾಕ್ ಕೊಟ್ಟಿದ್ದಾನೆ ವರುಣ. ಒಂದೇ ರಾತ್ರಿ ಸುರಿದ ಮಳೆದ ಅಕ್ಷರಶಃ ನದಿಯಂತಾಗಿದೆ ಮಂಗಳೂರಿನ ರಸ್ತೆಗಳು. ಮನೆ, ವಸತಿ ಸಮುಚ್ಚಗಳ ಅಡಿ ಭಾಗಕ್ಕೆ ನೀರು ನುಗ್ಗಿ ವಾಹನಗಳಿಗೆ ಹಾನಿಯಾಗಿದೆ. ಭಾರೀ ಮಳೆಗೆ ಹಾನಿಯಾಗಿ ಜನಸಾಮಾನ್ಯರ ಪರದಾಡುವಂತಾಗಿದೆ. 

4:37 PM IST

ಹತ್ಯೆ ಮಾಡಬೇಕು ಅಂದುಕೊಂಡಿದ್ದು ಒಬ್ಬನ್ನ, ಮಾಡಿದ್ದು ಫಾಜಿಲ್‌ನ: ತನಿಖೆ ವೇಳೆ ಬಯಲು

ಸುರತ್ಕಲ್ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಟಾರ್ಗೆಟ್ ಮಿಸ್! ಯಾರನ್ನೋ ಟಾರ್ಗೆಟ್ ‌ಮಾಡಿ‌ ಮತ್ತಿನ್ಯಾರಿಗೋ ಮಚ್ಚು ಬೀಸಿದ ಹಂತಕರು. ಎಸ್‌ಡಿಪಿಐ ಮುಖಂಡನ ಕೊಲೆಗೆ ಸ್ಕೆಚ್‌ ಹಾಕಿದ್ದ ಹಂತಕರು. ಪ್ರತಿದಿನ ಅದೇ ಶಾಂಪಿಂಗ್‌ ಮಾಲ್‌ಗಳಿಗೆ ಬರುತ್ತಿದ್ದ ಎಸ್‌ಡಿಪಿಐ ಮುಖಂಡ. ಅಂದು ಎಸ್‌ಡಿಪಿಐ ಮುಖಂಡ ಬರುತ್ತಿರುವ ಮಾಹಿತಿ ಕಲೆಹಾಕಿದ್ದ ಗ್ಯಾಂಗ್. ಎಸ್‌ಡಿಪಿಐ ಮುಖಂಡನ ಆಗಮನಕ್ಕಾಗಿ ಕಾಯುತ್ತಿದ್ದರು. ಆದ್ರೆ ಎಸ್‌ಡಿಪಿಐ ಮುಖಂಡ ಅಲ್ಲಿಗೆ ಬರಲಿಲ್ಲ. ಹೀಗಾಗಿ ಅಲ್ಲೇ ಇದ್ದ ಮೊಬೈಲ್‌ ಅಂಗಡಿ ಮಾಲೀಕನ ಕೊಲೆ ಮಾಡಲು ತಯಾರಿ. ಮೊಬೈಲ್ ಅಂಗಡಿ ಮಾಲೀಕ ಕೈಗೆ ಸಿಗದ ಕಾರಣ ಪಕ್ಕದಲ್ಲೇ ಇದ್ದ ಫಾಜಿಲ್ ಹತ್ಯೆ. ಪೊಲೀಸರ ವಿಚಾರಣೆ ವೇಳೆ ಸತ್ಯ ಬಿಚ್ಚಿಟ್ಟ ಆರೋಪಿಗಳು.

3:37 PM IST

ಸಿಇಟಿ ರಿಪೀಟರ್ಸ್‌ ಮತ್ತು ಪೋಷಕರಿಂದ ಪ್ರತಭಟನೆ; ಫಲಿತಾಂಶದ ವಿರುದ್ಧ ಆಕ್ರೋಶ

ಸಿಇಟಿ ಪರೀಕ್ಷೆ ಫಲಿತಾಂಶ ಬೆನ್ನಲ್ಲೇ ಕೆಇಎ ಬೋರ್ಡ್ ಮುಂದೆ ರಿಪೀಟರ್ ವಿದ್ಯಾರ್ಥಿ ಹಾಗೂ ಪೋಷಕರ ಆಕ್ರೋಶ. ಸಿಇಟಿ ರಿಪೀಟರ್ ವಿದ್ಯಾರ್ಥಿಗಳಿಗೆ ರಿಸಲ್ಟ್ ನಲ್ಲಿ ಅನ್ಯಾಯ ಆಗಿದೆ ಅಂತ ಆಕ್ರೋಶ ವ್ಯಕ್ತಪಡಿಸ್ತಿರೋ ವಿದ್ಯಾರ್ಥಿಗಳು. ಪ್ರತಿ ವರ್ಷ CET ಮಾರ್ಕ್ಸ್ ಜೊತೆ ಪಿಯು ಮಾರ್ಕ್ಸ್ ಸೇರಿಸಿ ರಿಸಲ್ಟ್ ನೀಡಲಾಗ್ತಿತ್ತು. ಆದ್ರೆ ಕಳೆದ ಬಾರಿ ಕೋವಿಡ್ ಹಿನ್ನೆಲೆ ಪಿಯು ಪರೀಕ್ಷೆ ರದ್ದಾಗಿದ್ದು. ಕೇವಲ ಸಿಇಟಿ ಪರೀಕ್ಷೆಯ ಅಂಕವನ್ನ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಅದರಂತೆ ಈ ಬಾರಿ ಪರೀಕ್ಷೆ ಬರೆದ ರಿಪೀಟರ್ ವಿದ್ಯಾರ್ಥಿಗಳಿಗೆ ಕೇವಲ ಸಿಇಟಿ ಅಂಕ ಪರಿಗಣನೆಗೆ ತೆಗೆದುಕೊಂಡು ರಿಸಲ್ಟ್ ನೀಡಲಾಗಿದೆ. ಇನ್ನುಳಿದಂತೆ ಈ ಬಾರಿಯ ವಿದ್ಯಾರ್ಥಿಗಳಿಗೆ ಪಿಯು+CET ಮಾರ್ಕ್ಸ್ ಸೇರಿಸಿ ಫಲಿತಾಂಶ ನೀಡಿದ ಕೆಇಎ. CBSC ಹಾಗೂ ಪಿಯು ವಿದ್ಯಾರ್ಥಿಗಳ ಎರಡು ಅಂಕ ಗಣನೆಗೆ ತೆಗೆದುಕೊಂಡಿರುವ ಕೆಇಎ. ಆದ್ರೆ, ರಿಪೀಟರ್ ವಿದ್ಯಾರ್ಥಿಗಳ CET ಅಂಕ ಮಾತ್ರ ಗಣನೆಗೆ. ಈ ಹಿನ್ನೆಲೆ ಕಳೆದ ಬಾರಿ 90ಅಂಕ ಪಡೆದವರಿಗೂ 15000 ಒಳಗೆ ರ್ಯಂಕಿಂಗ್ ದೊರೆತಿತ್ತು. ಆದ್ರೆ ಈ ಬಾರಿ 98 ಅಂಕ ಪಡೆದಿದ್ರೂ ಸಹ 1 ಲಕ್ಷದ ಮೇಲೆ ರ್ಯಂಕಿಂಗ್ ದೊರೆತಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸ್ತಿರೋ ಪೋಷಕರು ಹಾಗೂ ವಿದ್ಯಾರ್ಥಿಗಳು. ಕೆಇಎ ಮುಂದೆ ಜಮಾವಣೆಗೊಂಡಿರೋ ಪೋಷಕರು ಹಾಗೂ ರಿಪೀಟರ್ ವಿದ್ಯಾರ್ಥಿಗಳು.

3:30 PM IST

ಎಲ್ಲರನ್ನೂ ಸಮಾನವಾಗಿ ಕಾಣುವುದು ಸರ್ಕಾರದ ಕರ್ತವ್ಯ; ಸತೀಶ್‌ ಜಾರಕಿಹೊಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆ ಪ್ರಕರಣ. ಫಾಜಿಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡದ ವಿಚಾರ. ಬಿಜೆಪಿಯವರು ಯಾವಾಗಲೂ ತಾರತಮ್ಯ ಮಾಡಿಯೇ ಮಾಡ್ತಾರೆ. ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ. ಹಿಂದೂ ಬೇರೆ ಮುಸ್ಲಿಂ ಬೇರೆ ಆ ಜಾತಿ ಬೇರೆ ಈ ಜಾತಿ ಬೇರೆ ಅಂತಾ ತಾರತಮ್ಯ. ಸತ್ತವರು ಸತ್ತಿದ್ದಾರೆ ಅವರಿಗೆ ಅಷ್ಟೇ, ಅವರ ಕುಟುಂಬಕ್ಕೆ ಅವರು ಜವಾಬ್ದಾರರು ಇರ್ತಾರೆ. ಪ್ರವೀಣ್ ಕುಟುಂಬಸ್ಥರಿಗೆ 25 ಲಕ್ಷ ರೂ ಹಣವನ್ನು ಸರ್ಕಾರದಿಂದ ನೀಡಲಾಗಿದೆ. ಹಿಂದೆ ಶಿವಮೊಗ್ಗದಲ್ಲಿ ಕೊಲೆ ನಡೆದಾಗ 25 ಲಕ್ಷ ರೂ. ಕೊಟ್ಟರು. ಬಿಜೆಪಿ ಕಾರ್ಯಕರ್ತರು ಎಂದು ಹೇಳಿದಾಗ ಹಣ ಕೊಡ್ತಾರೆ. ಬೇರೆಯವರಿಗೆ ಒಂದು ರೂಪಾಯಿ ಪರಿಹಾರ ನೀಡಲ್ಲ. ತಾರತಮ್ಯ ಮಾಡದೇ ಫಾಜಿಲ್ ಮನೆಗೂ ಸಿಎಂ ಭೇಟಿ ನೀಡಬೇಕು. ಈ ಸಂಬಂಧ ಕಾಂಗ್ರೆಸ್ ಒಂದೇ ಹೋರಾಟ ಮಾಡಿದ್ರೆ ಆಗಲ್ಲ, ಜನರ ಹೋರಾಟ ಆಗಬೇಕು. ಬಿಜೆಪಿ ಸರ್ಕಾರದ ವಿರುದ್ಧ ಅವರ ಕಾರ್ಯಕರ್ತರೇ ಇದೀಗ ರೋಸಿ ಹೋಗಿದ್ದಾರೆ. ನಮ್ಮ ಜನ ಸತ್ರೆ ರಾಜಕೀಯವಾಗಿ ಉಪಯೋಗ ಮಾಡ್ತಾರೆ ಅಂತಾ ಅವರೇ ಎಷ್ಟೋ ಸಂಘಟನೆಯವರು ಹೇಳ್ತಿದ್ದಾರೆ. ನಮಗೆ ರಕ್ಷಣೆ ಇಲ್ಲ ಅಂತಾ ಹೇಳುತ್ತಿದ್ದಾರೆ. ಸತ್ತರೂ ನ್ಯಾಯ ಕೊಡಿಸುವ ಬದಲಾಗಿ ವೋಟ್ ಆಗಿ ಹೇಗೆ ಸಿಗುತ್ತೆ ಅಂತಾ ಯೋಚನೆ. ಬಹಳಷ್ಟು ಮುಖಂಡರು ಕಲ್ಲು ಹೊಡೆಯುತ್ತಿದ್ದೆವು ಅಂತಾ ಹೇಳ್ತಿದ್ದಾರೆ. ಎನ್‌ಕೌಂಟರ್ ಮಾಡಬೇಕು ಅಂತಾ ಒಬ್ಬರು ಹೇಳ್ತಾರೆ. ಅದು ಪರಿಹಾರ ಸಲ್ಲ, ಸರಿಯಾದ ತನಿಖೆ ಆಗಬೇಕು. ಎಲ್ಲರನ್ನೂ ಸಮಾನತೆಯಿಂದ ಸರ್ಕಾರ ನೋಡಬೇಕು, ಸರ್ಕಾರದ ಡ್ಯೂಟಿ ಅದು. ಮುಸ್ಲಿಂ ಇರಲಿ, ಎಸ್ ಸಿ ಎಸ್ ಟಿ ಇರಲಿ ಎಲ್ಲರನ್ನೂ ಒಂದೇ ತಕಡಿಯಲ್ಲಿ ನೋಡಲು ಸರ್ಕಾರ  ಪ್ರಯತ್ನ ಮಾಡಬೇಕು. ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ.

3:07 PM IST

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹರಡುವಿಕೆಗೆ ಕಡಿವಾಣ, ಕಠಿಣ ಕ್ರಮಕ್ಕೆ ಮುಂದಾದ ಪೊಲೀಸ್‌

ದಕ್ಷಿಣ ಕನ್ನಡ ಕೋಮು ಸಂಘರ್ಷದ ಬಳಿಕ ಖಾಕಿ ಅಲರ್ಟ್. ಶಾಂತಿ ಸಭೆಯಲ್ಲಿ ಸಾಮಾಜಿಕ ತಾಣಗಳ ಬಗ್ಗೆ ವಿರೋಧದ ಬೆನ್ನಲ್ಲೇ ಖಡಕ್ ಹೆಜ್ಜೆ. ಸಾಮಾಜಿಕ ತಾಣಗಳ ಮೇಲೆ ನಿಯಂತ್ರಣಕ್ಕೆ ‌ಮುಂದಾದ ಪೊಲೀಸ್ ‌ಇಲಾಖೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಮತ್ತು ಅಗತ್ಯ ಕಾನೂನು ಕ್ರಮಕ್ಕೆ ಸೂಚನೆ. ದ.ಕ ಜಿಲ್ಲಾ ಪೊಲೀಸ್ ಮತ್ತು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಗಾ. ಸಿಆರ್‌ಪಿಸಿ 107ರ ಅಡಿ ಸುಳ್ಳು ಸುದ್ದಿ ಹರಡುವವರ ಮೇಲೆ ಕಾನೂನು ಕ್ರಮ. ಉಲ್ಲಂಘನೆ ಕಂಡುಬಂದಲ್ಲಿ ಬಂಧನಕ್ಕೆ ಮುಂದಾದ ಪೊಲೀಸ್ ‌ಇಲಾಖೆ.

3:03 PM IST

ಮೊದಲು ಮಾನವರು ಎಂಬುದನ್ನು ಅರಿಯಬೇಕು; ಶಾಂತಿ ಸಭೆ ಬಳಿಕ ಸಲಘಿ ಮಸೀದಿ ಅಧ್ಯಕ್ಷ

ಶಾಂತಿ ಸಭೆ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮುಸ್ಲಿಂ ‌ಮುಖಂಡರ ಹೇಳಿಕೆ. ಬಂಟ್ವಾಳದ ತಾಹಿರಾ ಸಲಫಿ ಮಸೀದಿ ಅಧ್ಯಕ್ಷ ಎಸ್‌.ಎಂ.ಇಸ್ಮಾಯಿಲ್ ಹೇಳಿಕೆ. ನಾವು ಹಿಂದೂ ಮುಸ್ಲಿಂ ಅನ್ನುವ ಬದಲು ಮೊದಲು ಮಾನವರು. ಆಚಾರ ವಿಚಾರ ಬೇರೆಯಾದ್ರೂ ಇಲ್ಲಿ ನಾವೆಲ್ಲಾ ಒಂದೇ. ನಮ್ಮ ಮುಸ್ಲಿಂ ವ್ಯಕ್ತಿಯನ್ನ ಕೊಂದರೆ ಪ್ರತಿಯಾಗಿ ಕೊಲ್ಲೋದಲ್ಲ. ಅಂಥ ವೇಳೆ ಶಿಕ್ಷೆ ಕೊಡಲು ‌ನಮ್ಮಲ್ಲಿ ಕಾನೂನು ಇದೆ, ಕುರಾನ್ ಹೇಳಿದೆ. ಇದರಲ್ಲಿ ಪ್ರತೀ ವರ್ಗವೂ ತಪ್ಪಿತಸ್ಥ, ಅವರವರ ಅನುಕೂಲಕ್ಕೆ ಜನ ಬಲಿಪಶು. ಹಿಂದೂ-ಮುಸ್ಲಿಮರ ಮಧ್ಯೆ ಇರೋರಿಗೆ ಮತ, ಧರ್ಮ ಇಲ್ಲ. ಈ ಸಭೆಗೆ ಬರದ ನಮ್ಮ ಮುಖಂಡರಿಗೆ ಅಸಮಾಧಾನ ಇದೆ. ಸಿಎಂ ತಾರತಮ್ಯ ಮಾಡಿದ್ದಾರೆ ಅಂತ ಅವರಿಗೆ ನೋವಿದೆ. ಆದರೆ ನಾನು ಡಿಸಿ ಕರೆದ ಕಾರಣ ಬಂದೆ, ಅವರಿಗೆ ಗೌರವ ಕೊಟ್ಟು. ನಾವು ಹೋಗಿ ನಮ್ಮ ನಿಲುವು ಹೇಳಬೇಕು, ಸುಮ್ಮನೆ ಕೂರೋದಲ್ಲ. ನಮ್ಮ ಮಾತನ್ನು ಯುವಕರು ಕೇಳಲು ಅವರಿಗೆ ಧಾರ್ಮಿಕ ‌ಪ್ರಜ್ಞ ಮೂಡಿಸಬೇಕು. ಧರ್ಮ ಎನ್ನುವುದು ಮನುಷ್ಯನನ್ನ ರಕ್ಷಿಸಬೇಕು. ಅದನ್ನ ಮಾಡದವರು ಯಾವುದೇ ಕಾರಣಕ್ಕೂ ಧಾರ್ಮಿಕ ಮುಖಂಡ ಆಗಲು ಸಾಧ್ಯವಿಲ್ಲ. ನನಗೆ ಈ ಸಭೆಯ ಬಗ್ಗೆ ತೃಪ್ತಿ ಇದೆ, ಜಿಲ್ಲಾಡಳಿತ ಸಮುದಾಯ ಮಧ್ಯೆ ಸರಿ ಮಾಡಲು ಯತ್ನಿಸ್ತಾ ಇದೆ.

2:48 PM IST

ಶಾಂತಿ ಸಮಿತಿ ಸಭೆ ಮುಕ್ತಾಯ; ಮುಖ್ಯ ವಿವರಗಳು ಇಲ್ಲಿವೆ

ಶಾಂತಿ ಸಮಿತಿ ಸಭೆಯ ವಿವರಗಳು

1. ಶಾಂತಿ ಸಮಿತಿ ಸಭೆಗಳನ್ನು ಸುಳ್ಯ, ಪುತ್ತೂರು, ಬೆಳ್ಳಾರೆ ಮತ್ತು ಇತರ ಸ್ಥಳೀಯ ಸ್ಥಳಗಳಲ್ಲಿ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂತು

2. ಎಲ್ಲಾ 3 ಕೊಲೆ ಪ್ರಕರಣದ ಸಂತ್ರಸ್ತರ ಕುಟುಂಬವನ್ನು ಸಿಎಂ ಭೇಟಿ ಮಾಡಬೇಕಿತ್ತು ಎಂಬ ಬಗ್ಗೆ ಮುಸ್ಲಿಂ ಮುಖಂಡರಿಂದ ಆಗ್ರಹ

3. ಮೃತ ಕುಟುಂಬಗಳಿಗೆ ಸಮಾನ ಪರಿಹಾರವನ್ನು ನೀಡಬೇಕು.

4. ಪ್ರಚೋದನಕಾರಿ ಭಾಷಣಗಳನ್ನು ಮಾಡುವವರ ವಿರುದ್ದ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕು

5. ಸುಳ್ಳು ಸುದ್ದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳನ್ನ ನಿಯಂತ್ರಿಸಬೇಕು.

6. ಎಲ್ಲಾ ಪಕ್ಷಗಳಲ್ಲಿರೋ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

7. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಂಘಟನೆಗಳು ಮತ್ತು ಮುಖಂಡರು ಭಾಗವಹಿಸಿಲ್ಲ, ಆದ್ದರಿಂದ ಪ್ರತಿಯೊಬ್ಬರನ್ನು ಒಳಗೊಂಡ ಮತ್ತೊಂದು ಸಭೆಯನ್ನು ಏರ್ಪಡಿಸಲು ನಿರ್ಧಾರ

8. ಬೆಳ್ಳಾರೆಯಲ್ಲಿ ಲಾಠಿ ಚಾರ್ಜ್ ಮಾಡಿದ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಇದು ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸಬಹುದು ಎಂಬ ಬಗ್ಗೆ ಕೆಲವರಿಂದ ಆಕ್ಷೇಪ

9. ಸ್ಥಳೀಯ ಮಾಧ್ಯಮಗಳು ಮತ್ತು ವೆಬ್ ಪೇಪರ್‌ಗಳು ಗೆರೆ ದಾಟದಂತೆ ಸಲಹೆ ನೀಡಬೇಕು.

10. ಪೊಲೀಸ್ ನೇಮಕಾತಿಯಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ ಹೊರಗಿನ ಜನರು ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ. ತುಳು ಬ್ಯಾರಿ ಕೊಂಕಣಿ ಮತ್ತು ಇತರ ಭಾಷೆಗಳನ್ನು ತಿಳಿಯದಿರುವುದು ಈ ಹೊತ್ತಿನಲ್ಲಿ ಅವರಿಗೆ ಅಡಚಣೆಯಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬಂತು

11. ಆರೋಪಿಗಳ ಹೊರತಾಗಿ ಪಿತೂರಿಯಲ್ಲಿ ತೊಡಗಿರುವ ಮತ್ತು ಆರೋಪಿಗಳಿಗೆ ವಿವಿಧ ವಿಧಾನಗಳಿಂದ ಬೆಂಬಲ ನೀಡುವವರನ್ನು ಸಹ ಬಂಧಿಸಿ ಕ್ರಮ ಕೈಗೊಳ್ಳಬೇಕು.

12. ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಮೂಲಕ ಸ್ಥಳೀಯ ಪೊಲೀಸರ ಸಾಮರ್ಥ್ಯಗಳನ್ನು ಪ್ರಶ್ನಿಸಲಾಗುತ್ತಿದೆ. ತನಿಖೆಯನ್ನು ಮುಂದುವರಿಸಲು ಸ್ಥಳೀಯ ಪೊಲೀಸರಿಗೆ ಅವಕಾಶ ನೀಡಬೇಕು ಎಂದು ಕೆಲವರು ಹೇಳಿದರು.

13. ದಾರಿತಪ್ಪಿದ ಯುವಕರಲ್ಲಿ ಮದ್ಯ, ಮಾದಕ ದ್ರವ್ಯಗಳ ಪ್ರಭಾವವನ್ನು ಪರಿಹರಿಸಬೇಕು.

14. ಆರೋಪಿಗಳಿಗೆ ಜೈಲುಗಳಲ್ಲಿ ಸಿಗುವ ಸೌಲಭ್ಯಗಳನ್ನು ಬಿಗಿಗೊಳಿಸುವುದು..ಉದಾ. ಹರ್ಷ ಪ್ರಕರಣದ ಆರೋಪಿಗೆ ಮೊಬೈಲ್ ಕೂಡ ಸಿಕ್ಕಿದೆ. ಇಂಥದ್ದನ್ನ ತಡೆಗಟ್ಟಲು ‌ಕ್ರಮಕ್ಕೆ ಆಗ್ರಹ

15. ಕೋಮು ಘಟನೆಗಳಿಂದಾಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಆತಿಥ್ಯ ಸಂಸ್ಥೆಗಳು ಮತ್ತು ಪ್ರವಾಸೋದ್ಯಮಕ್ಕೆ ಕೆಟ್ಟದಾಗಿ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಬೇಕು.

16 ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಬೇಕು, ಪ್ರಚೋದನಕಾರಿ ಭಾಷಣಗಳ ಮೇಲೆ ಕ್ರಮ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳಬೇಕು.

18. ಸಿಆರ್‌ಪಿಸಿ 144 ನಿಷೇಧಾಜ್ಞೆಗಳನ್ನು ವಿಧಿಸುವಾಗ ಕನಿಷ್ಠ ರಾತ್ರಿ 8 ಗಂಟೆಯ ನಂತರ ಮಾರ್ಪಡಿಸಬೇಕು.. 6 ಗಂಟೆಗೆ ಅಂಗಡಿ ಬಂದ್ ಬಗ್ಗೆ ಕೆಲವರ ಆಕ್ಷೇಪ

19. ಬಿಕ್ಕಟ್ಟಿನ ಸಮಯದಲ್ಲಿ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಬಗ್ಗೆಯೂ ಚರ್ಚೆ

20. 144 ಸಿಆರ್‌ಪಿಸಿ ನಿಷೇಧಾಜ್ಞೆ ವಿಧಿಸುವಾಗ ಖಾಸಗಿ ಬಸ್ ಮತ್ತು ಆಟೋ ಅಸೋಸಿಯೇಷನ್‌ಗಳ ಹಿತಾಸಕ್ತಿಗಳನ್ನು ಗೌರವಿಸಿ ಅವರಿಗೆ ಅವಕಾಶ ನೀಡಲು ಕೋರಿಕೆ.

21. ಹುಕ್ಕಾ ಬಾರ್, ಪಬ್‌ಗಳು ಇತ್ಯಾದಿಗಳ ಚಟುವಟಿಕೆಯನ್ನು ನಿಯಂತ್ರಿಸಬೇಕು.

2:46 PM IST

ಎಬಿವಿಪಿ ಕಾರ್ಯಕರ್ತರ ಮೇಲಿನ ಮೊಖದ್ದಮೆಯ ಮಾಹಿತಿ

ಗೃಹ ಸಚಿವರ ಸರ್ಕಾರಿ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ನುಗ್ಗಿದ ಪ್ರಕರಣ. ಬೆಳಿಗ್ಗೆ ಜೆಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿ, ಜಯ ಮಹಲ್  ಗೃಹ ಸಚಿವರ ಮನೆಯ ಬಳಿ ಪ್ರತಿಭಟನೆ. ಪ್ರತಿಭಟನೆ ಮಾಡಿದ್ದ 30 ಜನರ ವಿರುದ್ಧ ಪ್ರಕರಣ ದಾಖಲು. ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 87/2022. ಕಲಂ.448, 143, 147, 149 ಐಪಿಸಿ ಹಾಗೂ ಕಲಂ. 3 ಆಫ್  PDPP ಆಕ್ಟ್ ಪ್ರಕಾರ ಪ್ರಕರಣ ದಾಖಲು, 29 ಪುರುಷರು  ಹಾಗೂ ಒಬ್ಬರು ಮಹಿಳೆ ಸೇರಿದಂತೆ ಒಟ್ಟು 30 ಜನ. 30 ಮಂದಿ ಎಬಿವಿಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಿರುತ್ತಾರೆ. ಸದ್ಯ 30 ಜನರು ಸಿಎಆರ್ ನಾರ್ಥ್ ಥಣಿಸಂದ್ರದಲ್ಲಿ ಇದ್ದು ದಸ್ತಗಿರಿ ಕಾರ್ಯ ಮುಂದುವರೆಸಿರುತ್ತಾರೆ.

2:00 PM IST

ಪ್ರವೀಣ್‌ ಹತ್ಯೆ ಪ್ರಕರಣ, ಸರ್ಕಾರದ ವೈಫಲ್ಯ ಒಪ್ಪಿಕೊಂಡ ಸದಾನಂದ ಗೌಡ

ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ. ಭದ್ರತೆ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಒಪ್ಪಿಕೊಂಡ ಸದಾನಂದ ಗೌಡ. ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿಕೆ. ಪ್ರವೀಣ್ ಹತ್ಯೆ ಖಂಡನೀಯ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಜೆಪಿಯದ್ದೇ ಇದೆ. ಆದರೂ ಯಾಕೆ ದಿಟ್ಟ ಹೆಜ್ಜೆ ಇಡಲು ಹಿಂದೇಟು ಹಾಕ್ತಿದೆ ಅನ್ನೋ ಪ್ರಶ್ನೆ ಕಾರ್ಯಕರ್ತರಲ್ಲಿ ಇದೆ. ಸರ್ಕಾರ ದಿಟ್ಟ ಹೆಜ್ಜೆಯನ್ನು ಈಗಾಗಲೇ ಇಡಬೇಕಿತ್ತು. ಹರ್ಷ ಕೊಲೆ ಹಾಗೂ ಹಿಂದೆ ನಡೆದ ಕೊಲೆ ಸಂದರ್ಭದಲ್ಲಿ ದಿಟ್ಟ ಹೆಜ್ಜೆ ತಗೋಬೇಕಿತ್ತು. ಅದರಲ್ಲಿ ರಾಜ್ಯ ಸರ್ಕಾರ ಎಡವಿದೆ ಅನ್ನೋದನ್ನ ಒಪ್ಪಿಕೊಳ್ತೇನೆ. ಪೊಲೀಸ್ ಇಲಾಖೆ ದುರ್ಬಲರಾಗ್ತಿದ್ದಾರೆ. ಯಾರು ಹೆದರದ ವಾತಾವರಣ ಸೃಷ್ಟಿಯಾಗಿರೋದು ದುರ್ದೈವ. ಪ್ರವೀಣ್ ಪತ್ನಿ ಎರಡು ತಿಂಗಳಿಂದ ಬೆದರಿಕೆ ಬರ್ತಾ ಇತ್ತು ಅಂತಾ ಹೇಳಿದ್ದಾರೆ. ಅದನ್ನ ಪೊಲೀಸರಿಗೆ ಹೇಳಿದ್ರು ಪ್ರಯೋಜನವಾಗಿಲ್ಲ ಎಂದಿದ್ದಾರೆ. ಹೀಗೆನಾದ್ರೂ ಆಗಿದ್ರೆ ಅದು ನಿಜಕ್ಕೂ ಖಂಡನೀಯವಾದದ್ದು. ಶೀಘ್ರವಾಗಿ ಆರೋಪಿಗಳ ಪತ್ತೆಯಾಗಬೇಕು. ಮಸೂದ್ ಮನೆಗೆ ಸಿಎಂ ಭೇಟಿ ನೀಡಿಲ್ಲ ಅನ್ನೋ ಆರೋಪ ವಿಚಾರ. ಯಾರೆ ಇದ್ರೂ ಅವರ ಮನೆಗೆ ಹೋಗಬೇಕು. ಜವಾಬ್ದಾರಿ ಇದ್ದವರು ಆ ಕೆಲಸ ಮಾಡಬೇಕು ಎಂದ ಸದಾನಂದಗೌಡ. ಕಾಂಗ್ರೆಸ್ ಇದ್ದಾಗ ನಾವು ಸಾಕಷ್ಟು ಪ್ರತಿಭಟನೆ ನಡೆಸಿದ್ವಿ. ಆಗ ಹಿಂದೂ ಸಮಾಜದವರಿಗೆ ನಮ್ಮ ಸರ್ಕಾರ ಬಂದರೆ ರಕ್ಷಣೆ ಸಿಗತ್ತೆ ಅನ್ನೋ ಭಾವನೆ ಇತ್ತು. ಅದು ಕಡಿಮೆ ಆಗಿದೆ ಅನ್ನೋದಕ್ಕೆ ವ್ಯಕ್ತವಾಗ್ತಿರೊ ವಿರೋಧ ಸಾಕ್ಷಿಯಾಗಿದೆ. ತೇಜಸ್ವಿ ಸೂರ್ಯ ಹೇಳಿಕೆ ವಿಚಾರ. ಒಬ್ಬೊಬ್ಬರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ. ಆದರೆ ಸರ್ಕಾರ ಅಂತಹ ವಾತಾವರಣ ಸೃಷ್ಟಿ ಮಾಡಬೇಕು. 

1:57 PM IST

ಗೃಹ ಮಂತ್ರಿ ತರ ವರ್ತಿಸಿ, ಶಾಲೆ ಟೀಚರ್‌ ತರ ಅಲ್ಲ; ಜ್ಞಾನೇಂದ್ರಗೆ ಬಿಜೆಪಿ ಶಾಸಕ ತರಾಟೆ

ಎಬಿವಿಪಿ, ಬಿಜೆಪಿ ಕಾರ್ಯಕರ್ತರು ಗೃಹ ಸಚಿವರ ಮನೆಗೆ ಮುತ್ತಿಗೆ ವಿಚಾರ. ಹೋಂ ಮಿನಿಸ್ಟರ್ ಟೀಚರ್ ತರ ವರ್ತನೆ ಮಾಡಬೇಡಿ. ಹೋಂ ಮಿನಿಸ್ಟರ್ ಖಡಕ್ ಆಗಿ ಕೆಲಸ ಮಾಡಿ. ನಿಮಗೆ ಸರ್ಕಾರ, ಸಿಎಂ ಫ್ರೀ ಕೊಟ್ಟಿದೆ. ಉತ್ತಮ ಅಧಿಕಾರಿಗಳನ್ನು ಬಳಸಿಕೊಂಡು ಹಂತಕರನ್ನು ಹೆಡೆಮುರಿ ಕಟ್ಟಿ. ಗೃಹ ಸಚಿವರು ಸಮರ್ಥರಿದ್ದಾರೆ. ಆದ್ರೆ ಸೌಮ್ಯ ಸ್ವಭಾವದವರು ಇದಾರೆ. ಸ್ಕೂಲ್ ಮಕ್ಕಳಿಗೆ ಸ್ಕೂಲ್ ಮಾಸ್ತರ ಬುದ್ದಿ ಹೇಳೋದು ಬೇರೆ. ಸಮಾಜವಿರೋಧಿ, ಕೆಟ್ಟವರಿಗೆ, ಕ್ರಿಮಿನಲ್ಸ್ ಗಳಿಗೆ ಇನ್ಸ್ಪೆಕ್ಟರ್ ಭಾಷೆಯಲ್ಲಿಯೇ ಉತ್ತರಿಸಬೇಕು. ಸ್ಕೂಲ್ ಮಕ್ಕಳಿಗೆ ರಫ್ ಆಗಿ ಮಾತಾಡಿದ್ರೆ ನಡೆಯಲ್ಲ. ಇಂತಹ ಕ್ರಿಮಿನಲ್ಸ್ ಗಳಿಗೆ ಸ್ಮೂತ್ ಆಗಿ ಮಾತಾಡಿದ್ರೆ ನಡೆಯಲ್ಲ. ಕಾರ್ಯಕರ್ತರು ಸಿಟ್ಟಿಗೆದ್ದಿದ್ದು ನಿಜ, ಅದರಲ್ಲಿ ಎರಡು ಮಾತಿಲ್ಲ. ಎಲ್ಲರಿಗೂ ಈ ರೀತಿ ಆಗ್ತಿದೆ ಅಂತ ಸಿಟ್ಟಿಗೆದ್ದಿದ್ದಾರೆ. ಅದಕ್ಕಾಗಿ ಸೂಕ್ತ ಕಠಿಣ ಕ್ರಮ ಆಗಬೇಕು. ಇದರಿಂದ ಕಾರ್ಯಕರ್ತರಿಗೂ ಸರ್ಕಾರ ಕೆಲಸ ಮಾಡ್ತಿದೆ ಅಂತ ಅನಿಸ್ತದೆ. ಎಷ್ಟು ದಿನ ಕಠಿಣ ಕ್ರಮ ಅಂತ ಕಾರ್ಯಕರ್ತರು ಪ್ರಶ್ನಿಸುತ್ತಾರೆ. ಹುಣಸಗಿಯಲ್ಲಿ ಶಾಸಕ ರಾಜೂಗೌಡ ಹೇಳಿಕೆ.

1:55 PM IST

ವಿರೋಧ ಪಕ್ಷದಲ್ಲಿದ್ದಾಗ PFI-SDPI ಬ್ಯಾನ್‌ ಮಾಡ್ತೀನಿ ಅಂದಿದ್ವಿ, ಈಗ ಯಾಕೆ ಮಾಡ್ತಿಲ್ಲ; ಬಿಜೆಪಿ ಶಾಸಕ ಪ್ರಶ್ನೆ

ರಾಜ್ಯದಲ್ಲಿ SDPI, PFI ನಿಷೇಧ ವಿಚಾರ. ಹುಣಸಗಿಯಲ್ಲಿ ಶಾಸಕ ರಾಜೂಗೌಡ ಹೇಳಿಕೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ದೇ ಸರ್ಕಾರವಿದೆ PFI, SDPI ನಿಷೇಧಿಸಿ. ವಿರೋಧ ಪಕ್ಷದಲ್ಲಿದ್ದಾಗ PFI, SDPI ನಿಷೇಧಿಸಿ ಬ್ಯಾನ್ ಮಾಡ್ತೀವಿ ಅಂತ ಹೇಳೀದಿವಿ. ಹೀಗೂ ಅದೇ ಬ್ಯಾನ್ ಅಂತ ಹೇಳಿದ್ರೆ ಹೇಗೆ..? ಬ್ಯಾನ್ ಮಾಡೋದಿದ್ರೆ ಬ್ಯಾನ್ ಮಾಡಿ, ಇಲ್ಲ ಅಂದ್ರೆ ಇಲ್ಲ ಅಂತ ಹೇಳಿ. ನಾನು ಇದರ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯ ಹೇಳ್ತೇನೆ. ಸಿಎಂ ಹಾಗೂ ಗೃಹ ಸಚಿವರ ಜೊತೆ ಇದರ ಬಗ್ಗೆ ಮಾತಾಡ್ತೇನೆ. ಸಂಘ ಪರಿವಾರ ಬ್ಯಾನ್ ಮಾಡಿ ಎಂಬ ಕಾಂಗ್ರೇಸ್ ನಾಯಕರ ಹೇಳಿಕೆ ವಿಚಾರ. ಕಾಂಗ್ರೇಸ್ ನಾಯಕರ ವಿರುದ್ಧ ಶಾಸಕ ರಾಜೂಗೌಡ ವಾಗ್ದಾಳಿ. ಸಂಘ ಪರಿವಾರದ ಬಗ್ಗೆ ನಿಮಗೆ ಏನು ಗೊತ್ತು..? ಸಂಘ ಪರಿವಾರ ಏನು ಕೆಲಸ ಮಾಡುತ್ತೆ ಅಂತ ಗೊತ್ತಾ..? ಸಂಘ ಪರಿವಾರದವ್ರು ರಾಷ್ಟ್ರ ಕಟ್ಟುವ ಕೆಲಸ ಮಾಡ್ತಿದ್ದಾರೆ. ಕೋವಿಡ್, ಒಳ್ಲೆಯ ಭೂಕಂಪದಲ್ಲಿ ಕೆಲಸ ಮಾಡ್ತಾರೆ. ಸಂಘ ಪರಿವಾರದ ಬಗ್ಗೆ ಕಾಂಗ್ರೇಸ್ ನಾಯಕರಿಗೆ ಏನು ಗೊತ್ತಿಲ್ಲ. ಗೊತ್ತಿಲ್ಲದಿದ್ರೆ ಸಂಘದ ಶಾಖೆಗೆ ಬನ್ನಿ, ನಿಮಗೆ ಪ್ರೀ ಟ್ರೈನಿಂಗ್ ಕೊಡಲಾಗ್ತಿದೆ. ಪಕ್ಷಗಳು ಎಲ್ಲಾ ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು. ಹುಣಸಗಿಯಲ್ಲಿ ಶಾಸಕ ರಾಜೂಗೌಡ ಹೇಳಿಕೆ. 

1:42 PM IST

ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು; ಮಹಾಸಭಾ

ಅಖಿಲ ಭಾರತ ವೀರಶೈವ ಮಹಾಸಭಾ ಘಟಕದಿಂದ ಸುದ್ದಿಗೊಷ್ಟಿ. ಸುದ್ದಿಗೊಷ್ಟಿಯಲ್ಲಿ  ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಡಾ.ಎನ್.ತಿಪಣ್ಣ ಹೇಳಿಕೆ. ವೀರಶೈವ ಲಿಂಗಾಯತ ಸಮುದಾಯವನ್ನು ರಾಜ್ಯ ಸರ್ಕಾರ OBC ಪಟ್ಟಿಗೆ ಸೇರಿಸಿದೆ. ಆದ್ರೆ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ (OBC) ಪಟ್ಟಿಯಲ್ಲಿ  ವೀರಶೈವ ಲಿಂಗಾಯತ ಸಮುದಾಯ ಇಲ್ಲ. ಕೇಂದ್ರ ಸರ್ಕಾರ OBC ಪಟ್ಟಿಯಲ್ಲಿ ನಮ್ಮನ್ನು ಹೊರಗಿಟ್ಟಿದೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ನಮ್ಮ ಸಮುದಾಯವನ್ನು OBC ಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸ್ಸುಮಾಡಬೇಕು. ವೀರಶೈವ ಲಿಂಗಾಯತ ಸಮುದಾಯದಲ್ಲಿ ಯಾರು  ಸಾಹುಕಾರರಲ್ಲ. ನಮ್ಮ ಹತ್ರ ದುಡ್ಡಿಲ್ಲ...ಹಳ್ಳಿಯಲ್ಲಿ ನಮ್ಮ‌ ಸಮುದಾಯದ ಜನರು ಕಷ್ಟದಲ್ಲಿದ್ದಾರೆ. ನಮ್ಮ ಪರಿಸ್ಥಿತಿ ತುಂಬಾ ಚಿಂತಾ ಜನಕವಾಗಿದೆ. ನಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸುವಂತ್ತೆ ಆಗ್ರಹಿಸಿ ಮೆರವಣಿಗೆ ಮಾಡುತಿದ್ದೆವೆ. ಅಗಸ್ಟ್ 1 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೆರವಣಿಗೆ ಮಾಡುತಿದ್ದೆವೆ. ರಾಜ್ಯದ್ಯಾಂತ ಏಕ ಕಾಲದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ನೀಡುತೇವೆ. ಬೆಂಗಳೂರಿನಲ್ಲಿ ಮೆರವಣಿಗೆ ಅವಕಾಶ ಇಲ್ಲ. ಹಾಗಾಗಿ ಫ್ರೀಡಂ ಪಾರ್ಕ್ ನಲ್ಲಿ ಸಭೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡ್ತಿವಿ. ಸಮಾಜದ ಮಠಾಧೀಶರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಗಸ್ಟ್ 1 ರಂದು ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ಹೊಗಲಿದ್ದಾರೆ. ಹಾಗಾಗಿ ನಾವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡುತಿದ್ದೆವೆ. ಸಿಎಂ ದೆಹಲಿಯಿಂದ ಬಂದ ಬಳಿಕ ಅವರ ಭೇಟಿ ಮಾಡಿ ಅವರಿಗೆ ಮನವಿ ಮಾಡುತ್ತೆವೆ.

1:16 PM IST

ಪ್ರವೀಣ್ ಹತ್ಯೆ: ಕೇರಳದ ವ್ಯಕ್ತಿ ಸೆರೆ

ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು. ಪ್ರವೀಣ್ ಹತ್ಯೆಯಲ್ಲಿ ಭಾಗಿಯಾಗಿರುವ ಅನುಮಾನದ ಮೇಲೆ, ತಲಸೇರಿಯಲ್ಲಿ ಚಿಕಿನ್ ಸೆಂಟರ್ ಅಂಗಡಿ ನಡೆಸುತ್ತಿದ್ದ ಶಂಕಿತ ವ್ಯಕ್ತಿಯನ್ನು ಬಂದಿಸಿದ್ದಾರೆ. 

12:39 PM IST

ಲಿಂಗಾಯತ ಮೀಸಲಾತಿ ಆಗ್ರಹಿಸಿ ಪ್ರತಿಭಟನೆ ಆರಂಭ

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗಾಗಿ ಹೋರಾಟ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಶುರುವಾಗಿದೆ. ನಗರದ ನೆಹರು ಮೈದಾನದಿಂದ ಚನ್ನಮ್ಮ ವೃತ್ತದವರೆಗೆ ನಡೆಯಲಿರುವ ಪ್ರತಿಭಟನಾ ಮೆರವಣಿಗೆ. ನೆಹರು ಮೈದಾನದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಭೆ. ಪ್ರತಿಭಟನಾ ರ‌್ಯಾಲಿಗೆ ಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ. ರ್ಯಾಲಿಯಲ್ಲಿ ಸಮುದಾಯದ ಅನೇಕ ಮುಖಂಡರು ಭಾಗಿಯಾಗಿದ್ದಾರೆ. 

12:33 PM IST

ವಿಜಯ ನಗರ, ಕೊಪ್ಪಳಕ್ಕೆ ಉಸ್ತುವಾರಿ ಸಚಿವರ ನೇಮಕ

ಹಲವು ದಿನಗಳಿಂದ ಬಾಕಿ ಉಳಿದಿದ್ದ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಆನಂದ ಸಿಂಗ್ - ವಿಜಯನಗರ, ಶಶಿಕಲಾ ಜೊಲ್ಲೆ - ಕೊಪ್ಪಳದ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ. ಇನ್ನುಳಿದ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರು ಈಗಾಗಲೇ ಇದ್ದು, ಇವೆರಡು ಜಿಲ್ಲೆಗಳು ಮಾತ್ರ ಖಾಲಿ ಉಳಿದಿತ್ತು. 

11:13 AM IST

ಒತ್ತಡಕ್ಕೆ ಮಣಿದು ಇಬ್ಬರನ್ನು ಬಂಧಿಸಿದರಾ ಪೊಲೀಸರು?

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟೂರು ಹತ್ಯೆ ಕೇಸ್. ಒತ್ತಡಕ್ಕೆ ಮಣಿದು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ರಾ ಪೊಲೀಸರು? ಝಾಕಿರ್, ಶಫಿಕ್ ಬಂಧಿಸಿ ಒತ್ತಡ ಕಡಿಮೆ ಮಾಡಿಕೊಂಡಿತಾ ಸರ್ಕಾರ? ಮುಜುಗರದಿಂದ ತಪ್ಪಿಸಲಷ್ಟೇ ಇಬ್ಬರ ಬಂಧಿಸಿದ್ರಾ ಪೊಲೀಸರು? ಹಾಗಾದ್ರೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ ಇನ್ನೂ ಆಗಿಲ್ಲ ಯಾಕೆ? ಪೊಲೀಸರ ನಡೆ ಮೇಲೆ‌ ಬೆಟ್ಟದಷ್ಟು ಅನುಮಾನ. ಎಲ್ಲಾ ಮಾಹಿತಿ ಅಸ್ಪಷ್ಟವಾಗಿರುವಾಗಲೇ ಅವರೇ ಆರೋಪಿಗಳೆಂಬ ನಿರ್ಧಾರಕ್ಕೆ ಬಂದ ಖಾಕಿ. ಸರ್ಕಾರದ ಒತ್ತಡಕ್ಕೆ ಮಣಿದು ಇಬ್ಬರನ್ನು ಬಂಧಿಸಿ ಸುಮ್ಮನಾದ್ರಾ ಬೆಳ್ಳಾರೆ ಪೊಲೀಸರು? ಕೊಲೆ ಪ್ರಕರಣ ಸಂಬಂಧ ಆರೋಪಿ ಬಂಧಿಸುವಂತೆ ರಾಜ್ಯಾದ್ಯಂತ ಹೆಚ್ಚಾಗಿದ್ದ ಆಕ್ರೋಶ. ಅದೇ ಕಾರಣಕ್ಕೆ ತರಾತುರಿಯಲ್ಲಿ ಇಬ್ಬರನ್ನಷ್ಟೇ ಬಧಿಸಿದ ಪೊಲೀಸರು. ಹಾಗಾದ್ರೆ ಪೊಲೀಸರ ಮೇಲೆ ಅನುಮಾನ ಮೂಡಲು ಕಾರಣವೇನು? ಸಿಎಂ ಬೆಳ್ಳಾರೆ ಭೇಟಿ ವಿಚಾರ ತಿಳಿತಾ ಇದ್ದಂತೆ ಇಬ್ಬರ ಬಂಧನ ವಿಷಯ ಹೊರಬಿಟ್ಟ ಖಾಕಿ. ಆದರೆ ಕೊಲೆಯಲ್ಲಿ ಅವರ ಪಾತ್ರ ಏನು ಅನ್ನೋದನ್ನು ಸ್ಪಷ್ಟಪಡಿಸಿಲ್ಲ. ಇವರೇ ಪ್ರಮುಖ ಆರೋಪಿಗಳಾ ಅನ್ನೋದನ್ನೂ ಹೇಳಿಲ್ಲ. ಮೊನ್ನೆಯಷ್ಟೇ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದಿದ್ದ ಎಡಿಜಿಪಿ ಅಲೋಕ್‌ ಕುಮಾರ್. ಮಧ್ಯಾಹ್ನ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದಿದ್ದ ಖಾಕಿ. ಸಂಜೆ ಯಾಗುತ್ತಿದ್ದಂತೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲು‌ ಮುಂದಾಗಿಲ್ಲ. ಇವರೇ ಆರೋಪಿಗಳೆಂದು ನಿರ್ಧಾರಕ್ಕೆ ಬಂದು ಜೈಲಿಗಟ್ಟಿದ್ರು. ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣದಲ್ಲಿ ಆರೋಪಿಗಳ‌ ಹೆಚ್ಚಿನ ವಿಚಾರಣೆ ಆಗಿಲ್ಲ ಯಾಕೆ? ಎನ್ಐಎ ಗೆ ವರ್ಗಾವಣೆಯಾದ ಕೇಸ್ ನಲ್ಲಿ ಒಂದೇ ದಿನಕ್ಕೆ ಆರೋಪಿಗಳ‌ ವಿಚಾರಣೆ ಮುಗಿಸಿದ್ರಾ? ಸಣ್ಣ ಪುಟ್ಟ ಪ್ರಕರಣದಲ್ಲೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಪೊಲೀಸರು. ಆದರೆ ಇಂತಹ ದೊಡ್ಡ ಕೇಸ್ ನಲ್ಲಿ ಒಂದೇ ದಿನಕ್ಕೆ ಆರೋಪಿಗಳನ್ನು ಜೈಲಿಗೆ ಕಳಿಸಿದ್ದು ಯಾಕೆ? ಖಾಕಿಯ ಇದೇ ನಡೆ‌ ಈಗ ಅತಿಹೆಚ್ಚು ಅನುಮಾನಕ್ಕೆ ಕಾರಣ. 

11:00 AM IST

ವಿಜಯಪುರ: ಬಿಜ್ಜಳ ರಾಜ್ಯ ಹೆದ್ದಾರಿ ಸಂಚಾರ ಬಂದ್

ವಿಜಯಪುರ:ತಡರಾತ್ರಿ ಬಾರಿ ಮಳೆ, ಡೋಣಿ ನದಿಗೆ ಹರಿದು ಅಪಾರ ಪ್ರಮಾಣದ ನೀರು. ಬಿಜ್ಜಳ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ಡೋಣಿ ನದಿ ಪಾತ್ರದ ಮೇಲ್ಭಾಗದಲ್ಲಿ ಮಳೆ ಹಿನ್ನಲೆ, ಉಕ್ಕಿ ಹರಿಯುತ್ತಿರುವ ಡೋಣಿ. ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿಯ ರಾಜ್ಯ ಹೆದ್ದಾರಿ-61 ಕೆಳಸೇತುವೆ ಸಂಚಾರ ಬಂದ್. ಮನಗೂಳಿ - ದೇವಾಪುರ ಮಧ್ಯದ ತಾಳಿಕೋಟೆ, ಬಿಜ್ಜಳ ರಾಜ್ಯ ಹೆದ್ದಾರಿ ಸಂಖ್ಯೆ - 61. ನೀರಿನ ಹರಿವು ಕಡಿಮೆಯಾದ ಮೇಲೆ‌ ಸಂಚಾರಕ್ಕೆ ಮುಕ್ತಗೊಳ್ಳುವ ಸೇತುವೆ. ಕೆಲ ಗಂಟೆಯಲ್ಲಿ ಉಕ್ಕು ಹರಿದು ಬಳಿಕ ತಣ್ಣಗಾಗುವ ಡೋಣಿ ಪ್ರವಾಹ. ಹೀಗಾಗಿ ನೀರಿನ ಹರಿವು ಕಡಿಮೆಯಾಗೋದನ್ನ ಕಾಯುತ್ತಿರುವ ಜನ. ದುರಸ್ಥೀಕರಣಗೊಂಡ ಕೆಳ ಸೇತುವೆ ಮುಳುಗಡೆಯಾಗಿ ರಾಜ್ಯ ಹೆದ್ದಾರಿ ರಸ್ತೆ ಸಂಚಾರದಲ್ಲಿ ವ್ಯತ್ಯಯ, ಮುಖ್ಯ ಸೇತುವೆ ಶಿಥಿಲಗೊಂಡ ಕಾರಣ, ಆ ಪ್ರಮುಖ ಸೇತುವೆ ಮೇಲೆ‌ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ. ಹಳೆಯ ಕೆಳಸೇತುವೆಯನ್ನೇ ದುರಸ್ಥಿಗೊಳಿಸಿ, ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈಗ ಅದು ಕೂಡ ಬಂದ್ ಆಗಿದೆ. 

10:58 AM IST

ದಕ್ಷಿಣ ಕನ್ನಡ ಜಿಲ್ಲೆ ತಣ್ಣಗಾಗಿಸಲು ಇಂದು ಶಾಂತಿ ಸಭೆ, ಮಾಧ್ಯಮಕ್ಕೆ ನಿರ್ಬಂಧ

ಶಾಂತಿ ಸಭೆಗೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ. ಮಂಗಳೂರಿನ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿರುವ ಶಾಂತಿ ಸಭೆ. ಇಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಶಾಂತಿ ಸಭೆ .ಶಾಂತಿ ಸಭೆಗೆ ಮಾಧ್ಯಮದವರಿಗೆ ಅವಕಾಶವಿರುವುದಿಲ್ಲ. ಸಭೆಯಲ್ಲಿ ಚರ್ಚಿಸಲಾದ ವಿವರವನ್ನು ಮಾಧ್ಯಮದವರಿಗೆ ಸಭೆ ಬಳಿಕ ನೀಡಲು ‌ನಿರ್ಧಾರ. ಧಾರ್ಮಿಕ ಮುಖಂಡರು, ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರ ಉಪಸ್ಥಿತಿ. ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಮಿಷನರ್ ಶಶಿಕುಮಾರ್, ಎಸ್ಪಿ ಹೃಷಿಕೇಶ್ ಸೋನಾವಣೆ ಸೇರಿ ಅಧಿಕಾರಿಗಳು ಭಾಗಿ. ದ.ಕ ಜಿಲ್ಲೆಯ 31 ಠಾಣಾ ವ್ಯಾಪ್ತಿಯ ಪ್ರಮುಖ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ. ಮಂಗಳೂರು ಕಮಿಷನರೇಟ್ ನ 15 ಠಾಣೆ ಮತ್ತು ಎಸ್ಪಿ ಲಿಮಿಟ್ ನ 16 ಠಾಣೆ. ಆಯಾ ಠಾಣಾ ವ್ಯಾಪ್ತಿಯ ಪ್ರಮುಖ ನಾಲ್ವರು ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ. 

10:40 AM IST

ಬೆಂಗಳೂರಿಗೂ ವಕ್ಕರಿಸಿತೇ ಮಂಕಿಪಾಕ್ಸ್ ?

ಭಾರತವೂ ಸೇರಿದಂತೆ ಜಗತ್ತಿನ 65ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡುಬಂದಿರುವ ಮಂಕಿಪಾಕ್ಸ್ ಸೋಂಕು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿತೇ ಎಂಬ ಭೀತಿ ಶುರುವಾಗಿದ್ದು, ಆಫ್ರಿಕಾ ಮೂಲದ ಪ್ರಜೆಯಲ್ಲಿ ಸೋಂಕಿನ ಶಂಕಿತ ಲಕ್ಷಣ ಕಂಡಬಂದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:38 AM IST

SDPI-PFI ನಿಷೇಧಕ್ಕೆ ಆಗ್ರಹಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಮುತ್ತಿಗೆ ಹಾಕಿದ ಎಬಿವಿಪಿ

 ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ, ಮಂಗಳೂರಿನಲ್ಲಿ ಕೊಲೆಯಾದ ಪ್ರವೀಣ್‌ ನೆಟ್ಟಾರು ಸೇರಿದಂತೆ ಇತ್ತೀಚೆಗೆ ಹಿಂದೂ ಯುವಕರ ನಡೆದ ಹತ್ಯೆಗಳ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಇದೆ ಎಂದು ಆರೋಪಿಸಿ ಎಬಿವಿಪಿ ಪ್ರತಿಭಟಿಸುತ್ತಿದೆ. ಬೆಂಗಳೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ಸರ್ಕಾರಿ ನಿವಾಸದ ಮೇಲೆ ಮುತ್ತಿಗೆ ಹಾಕಲಾಗಿದೆ. ಮನೆಯ ಆವರಣದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದ್ದು ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ. ಹಿಂದೂ ಯುವಕರ ಹತ್ಯೆಯ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ ಎಂದು ಎಬಿವಿಪಿ ಆರೋಪಿಸಿದೆ

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

10:28 AM IST

ಮಂಗಳೂರು ಫಾಸಿಲ್ ಹತ್ಯೆ: ಪ್ರಕರಣ ಹಿಂದೆ ಬಿದ್ದ ಪೊಲೀಸರಿಗೆ ಸಿಕ್ಕಿತ್ತು ಸ್ಪೋಟಕ ಮಾಹಿತಿ

ಮಂಗಳೂರು ನಗರ ಪೊಲೀಸರ ಕೈಯಲ್ಲಿದೆ ಆರೋಪಿಗಳ ಕಂಪ್ಲೀಟ್ ಡೀಟೇಲ್ಸ್. ಎರಡು ಹಂತದಲ್ಲಿ ಆರೋಪಿಗಳ ಮಾಹಿತಿ ಪತ್ತೆ.  ಕಾರ್ ನಂಬರ್ ಮಾಹಿತಿ ಪಡೆದು ಬೆನ್ನು ಹತ್ತಿದ ಪೊಲೀಸರು.   ಕಾರಿನ ನಂಬರ್ ಅಡ್ರೆಸ್‌ನಲ್ಲಿರುವ ಮನೆಗೆ ನುಗ್ಗಿದ ಪೊಲೀಸರು. ಕಾರಿಗೆ ಸಂಬಂಧಪಟ್ಟವರನ್ನ ವಿಚಾರಸಿದ ಪೊಲೀಸರು. ವಿಚಾರಣೆ ವೇಳೆ ಹಂತಕ ಪಡೆಯ ಮಾಹಿತಿ ಪಡೆದ ಮಂಗಳೂರು ನಗರ ಪೊಲೀಸರು.  ಹಂತಕರ ಸ್ನೇಹಿತರ ವಿಚಾರಣೆಯೂ ಮುಗಿದಿದೆ. ಫಾಸಿಲ್ ಹತ್ಯೆ ನಡೆಸಿದವರ ಸ್ನೇಹಿತರ ವಿಚಾರಣೆ. ಸುರತ್ಕಲ್ ಪೊಲೀಸ್ ಠಾಣೆಗೆ ಕೆರತಂದು ವಿಚಾರಣೆ ಪೊಲೀಸರು. ಹಂತಕರ ಸಂಬಂಧಿಕರು ಹಾಗೂ ಸ್ನೇಹಿತರ ಮೊಬೈಲ್ ಮೇಲೆ ಹದ್ದಿನ ಕಣ್ಣು.

10:23 AM IST

ಶಾಂತಿ ಸಭೆ: ಸರಕಾರದ ತಾರತಮ್ಯ ಖಂಡಿಸಿ, ಬಹಿಷ್ಕಾರ

ಮಂಗಳೂರು: ಸುರತ್ಕಲ್ ಫಾಸಿಲ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ 11 ಗಂಟೆಗೆ ಶಾಂತಿ ಸಭೆ ನಡೆಯಲಿದೆ. ಎಡಿಜಿಪಿ ಅಲೋಕ್ ಕುಮಾರ್, ಆಯುಕ್ತ ಶಶಿಕುಮಾರ್, ಡಿಸಿ ಭಾಗಿಯಾಗಲಿದ್ದಾರೆ. ಧಾರ್ಮಿಕ ಮುಖಂಡರು ಹಾಗೂ ಸಂಘಟನೆಗಳ ಮುಖಂಡರ ಜೊತೆ ನಡೆಯಬೇಕಿದ್ದು ಶಾಂತಿ ಸಭೆಗೆ ಮುಸ್ಲಿಂ ಮುಖಂಡರಿಂದ ಬಹಿಷ್ಕಾರ. ಕೆಲವು ಮುಸ್ಲಿಂ ಮುಖಂಡರಿಂದ ಬಹಿಷ್ಕಾರ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಪೋಸ್ಟೋ‌ಗಳನ್ನು ಹರಿಬಿಟ್ಟಿರುವ ಮುಖಂಡರು. ಪ್ರವೀಣ್ ಕುಟುಂಬಕ್ಕೆ ಸರ್ಕಾರ ನೀಡಿದ ಆಶ್ವಾಸನೆ. ಸಮಾನ ಪರಿಹಾರದ ರಿತಿಯಲ್ಲಿಯೇ ಫಾಸಿಲ್ ಹಾಗೂ ಮಸೂದ್ ಕುಟುಂಬಕ್ಕೂ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆ ಶಾಂತಿ ಸಭೆಯನ್ನು ಬಹಿಷ್ಕರಿಸಿರುವ ಮುಸ್ಲಿಂ ಮುಖಂಡರು.

10:15 AM IST

ಹಿಂದೂಗಳ ಹತ್ಯೆ: ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ

ಶಿವಮೊಗ್ಗದ ಹರ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ, ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನ ಗೃಹ ಸಚಿವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಚಿವರ ಮನೆಗೆ ಗುಂಪು ಗುಂಪಾಗಿ ನುಗ್ಗಿದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮನೆ ಮುಂದಿದ್ದ ಪಾಟ್ಸ್ ಅನ್ನು ಕಾರ್ಯಕರ್ತರು ಒಡೆದಿದ್ದಾರೆ. SDPI and PFI ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ. 

10:12 AM IST

ಬೆಂಗಳೂರು ಏರ್‌ಪೋರ್ಟ್‌ಗೆ 5 ಹೆಚ್ಚುವರಿ ಮೆಮು ರೈಲು ಸಂಚಾರ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧ ರೈಲ್ವೆ ನಿಲ್ದಾಣಗಳಿಂದ ಹೆಚ್ಚುವರಿಯಾಗಿ ಐದು ಮೆಮು ರೈಲುಗಳ ಸಂಚಾರವನ್ನು ಶುಕ್ರವಾರದಿಂದ ಆರಂಭಿಸಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲ್ವೆ ನಿಲ್ದಾಣ, ಬೆಂಗಳೂರು ಕಂಟೋನ್ಮೆಂಟ್‌ ಮತ್ತು ಯಲಹಂಕದಿಂದ ದೇವನಹಳ್ಳಿಗೆ ರೈಲುಗಳು ಕಾರ್ಯ ನಿರ್ವಹಿಸಲಿವೆ. ವಿಮಾನ ಪ್ರಯಾಣಿಕರು, ವಿಮಾಣ ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಆ ಭಾಗದ ಜನರಿಗೆ ರೈಲ್ವೆಗಳ ಸೌಲಭ್ಯದಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಈ ಮೆಮು ರೈಲುಗಳು ಎಂಟು ಬೋಗಿಗಳನ್ನು ಹೊಂದಿವೆ. ಈ ಎಲ್ಲಾ ರೈಲುಗಳು ಸೋಮವಾರದಿಂದ-ಶನಿವಾರದವರೆಗೆ ಮಾತ್ರ ಸಂಚರಿಸುತ್ತವೆ. ಭಾನುವಾರ ಸೇವೆ ಇರುವುದಿಲ್ಲ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:11 AM IST

ಧಾರ್ಮಿಕ ಕ್ಷೇತ್ರಕ್ಕೆ ಸಿಎಂ ಭೇಟಿ

ಸೋಮವಾರ ಮೂರು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ‌. ದಾವಣಗೆರೆಯ ಸಿದ್ದೇಶ್ವರ ರಥ ವಜ್ರಾ ಮಹೋತ್ಸವ ಕಾರ್ಯಕ್ರಮ, ಗಂಗಾವತಿಯ ಅಂಜನಾದ್ರಿ ಬೆಟ್ಟ,ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿರುವ ಸಿಎಂ. ಸೋಮವಾರ ಬೆಳಗ್ಗೆ 9 ಗಂಟೆ ಬೆಂಗಳೂರಿನಿಂದ ದಾವಣಗೆರೆಗೆ ಪ್ರಯಾಣ. ದಾವಣಗೆರೆಯಲ್ಲಿ ಸಿದ್ದೇಶ್ವರ ರಥ ವಜ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿ. ದಾವಣಗೆರೆಯಿಂದ ಗಂಗಾವತಿ ಆನೆಗೊಂದಿಗೆ ಪ್ರಯಾಣಿಸಲಿದ್ದಾರೆ ಸಿಎಂ.ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ವೀಕ್ಷಿಸಲಿದ್ದು, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಜೊತೆ ಚರ್ಚಿಸುತ್ತಾರ.ೆಬಳಿಕ ಆನೆಗುಂದಿಯಿಂದ ಕೊಪ್ಪಳ ಕ್ಕೆ ಭೇಟಿ ನೀಡುತ್ತಾರ.ೆ ಕೊಪ್ಪಳದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡಿ, ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ. ಕೊಪ್ಪಳದಿಂದ ಬಳ್ಳಾರಿಯ ತೊರಣಗಲ್ಲುಗೆ ತೆರಳಲಿದ್ದಾರೆ.

10:02 AM IST

ತುಮಕೂರು: ಮಳೆಯಿಂದ ರಸ್ತೆ ಜಲಾವೃತ

ತುಮಕೂರು: ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಮಳೆ ನೀರಿನಿಂದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ದ್ಯಾವಯ್ಯನಪಾಳ್ಯ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದ್ಯಾವಯ್ಯನಪಾಳ್ಯ ಗ್ರಾಮ. ಪಾವಗಡ ಹಾಗೂ ದ್ಯಾವಯ್ಯನಪಾಳ್ಯಕ್ಕೆ ಹೋಗುವ ಪ್ರಮುಖ ರಸ್ತೆ ಮೇಲೆ‌ ಹರಿಯುತ್ತಿರುವ ಮಳೆ ನೀರು. ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಹೈರಾಣಾವಾಗಿದ್ದಾರೆ ಜನರು. ಶಾಲಾ ವಿದ್ಯಾರ್ಥಿಗಳು ಹಾಗೂ ಕೆಲಸಗಳಿಗೆ ಹೋಗುವ ಜನರು ಪರದಾಟ. ಪ್ರಮುಖ ರಸ್ತೆಯಲ್ಲಿ‌‌ ಮೇಲ್ಸೇತುವೆ ನಿರ್ಮಾಣ ಮಾಡದೇ ಇರುವುದೇ ಕಾರಣ ಎಂದು, ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ.

10:01 AM IST

ಬಳ್ಳಾರಿ: ಕೊಳೂರು ಗ್ರಾಮದಲ್ಲಿ ಅಪರಿಚಿತ ಯುವತಿ ಶವ ಪತ್ತೆ

ಬಳ್ಳಾರಿ: ಕೊಳೂರು ಗ್ರಾಮದಲ್ಲಿ ಅಪರಿಚಿತ ಯುವತಿ ಶವ ಪತ್ತೆ. ಕಾಲುವೆಯಲ್ಲಿ  ತೆಲಾಡುತ್ತಿದೆ ಅನಾಮಿಕ ಯುವತಿ ಶವ. ಬಳ್ಳಾರಿ ಜಿಲ್ಲೆ ಕೂರುಗೋಡು ತಾಲೂಕಿನ ಕೊಳೂರು ಗ್ರಾಮ. ಅನಾಮಿಕ ಯುವತಿ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು. ಶವ ಪತ್ತೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು. ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಘಟನೆ.

10:00 AM IST

ಎಡವಿ ಬಿದ್ದು, ಪರಿಣಾಮ ಪ್ರಾಣ ಕಳೆದುಕೊಂಡ ವ್ಯಕ್ತಿ.

ಮೈಸೂರಿನ ವಿವೇಕಾನಂದ ವೃತ್ತದ ಬಳಿ ಘಟನೆ. ಗಾರೆ ಕೆಲಸ ಮಾಡುವ ರಮೇಶ್ ಮೃತ ದುರ್ದೈವಿ. ಮೈಸೂರಿನ ಅಶೋಕಪುರಂ 10ನೇ ಕ್ರಾಸ್ ನಿವಾಸಿಯಾಗಿರುವ ರಮೇಶ್. ವಿವೇಕಾನಂದ ನಗರದಲ್ಲಿರುವ ಮಗನ ಮನೆಗೆ ಬೆಳಗಿನ ಉಪಹಾರಕ್ಕೆ ರವೆ ತೆಗೆದುಕೊಂಡು ಹೋಗುವಾಗ ಘಟನೆ. ಇಂದು ಬೆಳಗ್ಗೆ ನಡೆದ ಘಟನೆ. ತಲೆಗೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವ.  ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ.

4:36 PM IST:

ಸುರತ್ಕಲ್ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಟಾರ್ಗೆಟ್ ಮಿಸ್! ಯಾರನ್ನೋ ಟಾರ್ಗೆಟ್ ‌ಮಾಡಿ‌ ಮತ್ತಿನ್ಯಾರಿಗೋ ಮಚ್ಚು ಬೀಸಿದ ಹಂತಕರು. ಎಸ್‌ಡಿಪಿಐ ಮುಖಂಡನ ಕೊಲೆಗೆ ಸ್ಕೆಚ್‌ ಹಾಕಿದ್ದ ಹಂತಕರು. ಪ್ರತಿದಿನ ಅದೇ ಶಾಂಪಿಂಗ್‌ ಮಾಲ್‌ಗಳಿಗೆ ಬರುತ್ತಿದ್ದ ಎಸ್‌ಡಿಪಿಐ ಮುಖಂಡ. ಅಂದು ಎಸ್‌ಡಿಪಿಐ ಮುಖಂಡ ಬರುತ್ತಿರುವ ಮಾಹಿತಿ ಕಲೆಹಾಕಿದ್ದ ಗ್ಯಾಂಗ್. ಎಸ್‌ಡಿಪಿಐ ಮುಖಂಡನ ಆಗಮನಕ್ಕಾಗಿ ಕಾಯುತ್ತಿದ್ದರು. ಆದ್ರೆ ಎಸ್‌ಡಿಪಿಐ ಮುಖಂಡ ಅಲ್ಲಿಗೆ ಬರಲಿಲ್ಲ. ಹೀಗಾಗಿ ಅಲ್ಲೇ ಇದ್ದ ಮೊಬೈಲ್‌ ಅಂಗಡಿ ಮಾಲೀಕನ ಕೊಲೆ ಮಾಡಲು ತಯಾರಿ. ಮೊಬೈಲ್ ಅಂಗಡಿ ಮಾಲೀಕ ಕೈಗೆ ಸಿಗದ ಕಾರಣ ಪಕ್ಕದಲ್ಲೇ ಇದ್ದ ಫಾಜಿಲ್ ಹತ್ಯೆ. ಪೊಲೀಸರ ವಿಚಾರಣೆ ವೇಳೆ ಸತ್ಯ ಬಿಚ್ಚಿಟ್ಟ ಆರೋಪಿಗಳು.

3:37 PM IST:

ಸಿಇಟಿ ಪರೀಕ್ಷೆ ಫಲಿತಾಂಶ ಬೆನ್ನಲ್ಲೇ ಕೆಇಎ ಬೋರ್ಡ್ ಮುಂದೆ ರಿಪೀಟರ್ ವಿದ್ಯಾರ್ಥಿ ಹಾಗೂ ಪೋಷಕರ ಆಕ್ರೋಶ. ಸಿಇಟಿ ರಿಪೀಟರ್ ವಿದ್ಯಾರ್ಥಿಗಳಿಗೆ ರಿಸಲ್ಟ್ ನಲ್ಲಿ ಅನ್ಯಾಯ ಆಗಿದೆ ಅಂತ ಆಕ್ರೋಶ ವ್ಯಕ್ತಪಡಿಸ್ತಿರೋ ವಿದ್ಯಾರ್ಥಿಗಳು. ಪ್ರತಿ ವರ್ಷ CET ಮಾರ್ಕ್ಸ್ ಜೊತೆ ಪಿಯು ಮಾರ್ಕ್ಸ್ ಸೇರಿಸಿ ರಿಸಲ್ಟ್ ನೀಡಲಾಗ್ತಿತ್ತು. ಆದ್ರೆ ಕಳೆದ ಬಾರಿ ಕೋವಿಡ್ ಹಿನ್ನೆಲೆ ಪಿಯು ಪರೀಕ್ಷೆ ರದ್ದಾಗಿದ್ದು. ಕೇವಲ ಸಿಇಟಿ ಪರೀಕ್ಷೆಯ ಅಂಕವನ್ನ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಅದರಂತೆ ಈ ಬಾರಿ ಪರೀಕ್ಷೆ ಬರೆದ ರಿಪೀಟರ್ ವಿದ್ಯಾರ್ಥಿಗಳಿಗೆ ಕೇವಲ ಸಿಇಟಿ ಅಂಕ ಪರಿಗಣನೆಗೆ ತೆಗೆದುಕೊಂಡು ರಿಸಲ್ಟ್ ನೀಡಲಾಗಿದೆ. ಇನ್ನುಳಿದಂತೆ ಈ ಬಾರಿಯ ವಿದ್ಯಾರ್ಥಿಗಳಿಗೆ ಪಿಯು+CET ಮಾರ್ಕ್ಸ್ ಸೇರಿಸಿ ಫಲಿತಾಂಶ ನೀಡಿದ ಕೆಇಎ. CBSC ಹಾಗೂ ಪಿಯು ವಿದ್ಯಾರ್ಥಿಗಳ ಎರಡು ಅಂಕ ಗಣನೆಗೆ ತೆಗೆದುಕೊಂಡಿರುವ ಕೆಇಎ. ಆದ್ರೆ, ರಿಪೀಟರ್ ವಿದ್ಯಾರ್ಥಿಗಳ CET ಅಂಕ ಮಾತ್ರ ಗಣನೆಗೆ. ಈ ಹಿನ್ನೆಲೆ ಕಳೆದ ಬಾರಿ 90ಅಂಕ ಪಡೆದವರಿಗೂ 15000 ಒಳಗೆ ರ್ಯಂಕಿಂಗ್ ದೊರೆತಿತ್ತು. ಆದ್ರೆ ಈ ಬಾರಿ 98 ಅಂಕ ಪಡೆದಿದ್ರೂ ಸಹ 1 ಲಕ್ಷದ ಮೇಲೆ ರ್ಯಂಕಿಂಗ್ ದೊರೆತಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸ್ತಿರೋ ಪೋಷಕರು ಹಾಗೂ ವಿದ್ಯಾರ್ಥಿಗಳು. ಕೆಇಎ ಮುಂದೆ ಜಮಾವಣೆಗೊಂಡಿರೋ ಪೋಷಕರು ಹಾಗೂ ರಿಪೀಟರ್ ವಿದ್ಯಾರ್ಥಿಗಳು.

3:30 PM IST:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆ ಪ್ರಕರಣ. ಫಾಜಿಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡದ ವಿಚಾರ. ಬಿಜೆಪಿಯವರು ಯಾವಾಗಲೂ ತಾರತಮ್ಯ ಮಾಡಿಯೇ ಮಾಡ್ತಾರೆ. ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ. ಹಿಂದೂ ಬೇರೆ ಮುಸ್ಲಿಂ ಬೇರೆ ಆ ಜಾತಿ ಬೇರೆ ಈ ಜಾತಿ ಬೇರೆ ಅಂತಾ ತಾರತಮ್ಯ. ಸತ್ತವರು ಸತ್ತಿದ್ದಾರೆ ಅವರಿಗೆ ಅಷ್ಟೇ, ಅವರ ಕುಟುಂಬಕ್ಕೆ ಅವರು ಜವಾಬ್ದಾರರು ಇರ್ತಾರೆ. ಪ್ರವೀಣ್ ಕುಟುಂಬಸ್ಥರಿಗೆ 25 ಲಕ್ಷ ರೂ ಹಣವನ್ನು ಸರ್ಕಾರದಿಂದ ನೀಡಲಾಗಿದೆ. ಹಿಂದೆ ಶಿವಮೊಗ್ಗದಲ್ಲಿ ಕೊಲೆ ನಡೆದಾಗ 25 ಲಕ್ಷ ರೂ. ಕೊಟ್ಟರು. ಬಿಜೆಪಿ ಕಾರ್ಯಕರ್ತರು ಎಂದು ಹೇಳಿದಾಗ ಹಣ ಕೊಡ್ತಾರೆ. ಬೇರೆಯವರಿಗೆ ಒಂದು ರೂಪಾಯಿ ಪರಿಹಾರ ನೀಡಲ್ಲ. ತಾರತಮ್ಯ ಮಾಡದೇ ಫಾಜಿಲ್ ಮನೆಗೂ ಸಿಎಂ ಭೇಟಿ ನೀಡಬೇಕು. ಈ ಸಂಬಂಧ ಕಾಂಗ್ರೆಸ್ ಒಂದೇ ಹೋರಾಟ ಮಾಡಿದ್ರೆ ಆಗಲ್ಲ, ಜನರ ಹೋರಾಟ ಆಗಬೇಕು. ಬಿಜೆಪಿ ಸರ್ಕಾರದ ವಿರುದ್ಧ ಅವರ ಕಾರ್ಯಕರ್ತರೇ ಇದೀಗ ರೋಸಿ ಹೋಗಿದ್ದಾರೆ. ನಮ್ಮ ಜನ ಸತ್ರೆ ರಾಜಕೀಯವಾಗಿ ಉಪಯೋಗ ಮಾಡ್ತಾರೆ ಅಂತಾ ಅವರೇ ಎಷ್ಟೋ ಸಂಘಟನೆಯವರು ಹೇಳ್ತಿದ್ದಾರೆ. ನಮಗೆ ರಕ್ಷಣೆ ಇಲ್ಲ ಅಂತಾ ಹೇಳುತ್ತಿದ್ದಾರೆ. ಸತ್ತರೂ ನ್ಯಾಯ ಕೊಡಿಸುವ ಬದಲಾಗಿ ವೋಟ್ ಆಗಿ ಹೇಗೆ ಸಿಗುತ್ತೆ ಅಂತಾ ಯೋಚನೆ. ಬಹಳಷ್ಟು ಮುಖಂಡರು ಕಲ್ಲು ಹೊಡೆಯುತ್ತಿದ್ದೆವು ಅಂತಾ ಹೇಳ್ತಿದ್ದಾರೆ. ಎನ್‌ಕೌಂಟರ್ ಮಾಡಬೇಕು ಅಂತಾ ಒಬ್ಬರು ಹೇಳ್ತಾರೆ. ಅದು ಪರಿಹಾರ ಸಲ್ಲ, ಸರಿಯಾದ ತನಿಖೆ ಆಗಬೇಕು. ಎಲ್ಲರನ್ನೂ ಸಮಾನತೆಯಿಂದ ಸರ್ಕಾರ ನೋಡಬೇಕು, ಸರ್ಕಾರದ ಡ್ಯೂಟಿ ಅದು. ಮುಸ್ಲಿಂ ಇರಲಿ, ಎಸ್ ಸಿ ಎಸ್ ಟಿ ಇರಲಿ ಎಲ್ಲರನ್ನೂ ಒಂದೇ ತಕಡಿಯಲ್ಲಿ ನೋಡಲು ಸರ್ಕಾರ  ಪ್ರಯತ್ನ ಮಾಡಬೇಕು. ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ.

3:07 PM IST:

ದಕ್ಷಿಣ ಕನ್ನಡ ಕೋಮು ಸಂಘರ್ಷದ ಬಳಿಕ ಖಾಕಿ ಅಲರ್ಟ್. ಶಾಂತಿ ಸಭೆಯಲ್ಲಿ ಸಾಮಾಜಿಕ ತಾಣಗಳ ಬಗ್ಗೆ ವಿರೋಧದ ಬೆನ್ನಲ್ಲೇ ಖಡಕ್ ಹೆಜ್ಜೆ. ಸಾಮಾಜಿಕ ತಾಣಗಳ ಮೇಲೆ ನಿಯಂತ್ರಣಕ್ಕೆ ‌ಮುಂದಾದ ಪೊಲೀಸ್ ‌ಇಲಾಖೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಮತ್ತು ಅಗತ್ಯ ಕಾನೂನು ಕ್ರಮಕ್ಕೆ ಸೂಚನೆ. ದ.ಕ ಜಿಲ್ಲಾ ಪೊಲೀಸ್ ಮತ್ತು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಗಾ. ಸಿಆರ್‌ಪಿಸಿ 107ರ ಅಡಿ ಸುಳ್ಳು ಸುದ್ದಿ ಹರಡುವವರ ಮೇಲೆ ಕಾನೂನು ಕ್ರಮ. ಉಲ್ಲಂಘನೆ ಕಂಡುಬಂದಲ್ಲಿ ಬಂಧನಕ್ಕೆ ಮುಂದಾದ ಪೊಲೀಸ್ ‌ಇಲಾಖೆ.

3:03 PM IST:

ಶಾಂತಿ ಸಭೆ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮುಸ್ಲಿಂ ‌ಮುಖಂಡರ ಹೇಳಿಕೆ. ಬಂಟ್ವಾಳದ ತಾಹಿರಾ ಸಲಫಿ ಮಸೀದಿ ಅಧ್ಯಕ್ಷ ಎಸ್‌.ಎಂ.ಇಸ್ಮಾಯಿಲ್ ಹೇಳಿಕೆ. ನಾವು ಹಿಂದೂ ಮುಸ್ಲಿಂ ಅನ್ನುವ ಬದಲು ಮೊದಲು ಮಾನವರು. ಆಚಾರ ವಿಚಾರ ಬೇರೆಯಾದ್ರೂ ಇಲ್ಲಿ ನಾವೆಲ್ಲಾ ಒಂದೇ. ನಮ್ಮ ಮುಸ್ಲಿಂ ವ್ಯಕ್ತಿಯನ್ನ ಕೊಂದರೆ ಪ್ರತಿಯಾಗಿ ಕೊಲ್ಲೋದಲ್ಲ. ಅಂಥ ವೇಳೆ ಶಿಕ್ಷೆ ಕೊಡಲು ‌ನಮ್ಮಲ್ಲಿ ಕಾನೂನು ಇದೆ, ಕುರಾನ್ ಹೇಳಿದೆ. ಇದರಲ್ಲಿ ಪ್ರತೀ ವರ್ಗವೂ ತಪ್ಪಿತಸ್ಥ, ಅವರವರ ಅನುಕೂಲಕ್ಕೆ ಜನ ಬಲಿಪಶು. ಹಿಂದೂ-ಮುಸ್ಲಿಮರ ಮಧ್ಯೆ ಇರೋರಿಗೆ ಮತ, ಧರ್ಮ ಇಲ್ಲ. ಈ ಸಭೆಗೆ ಬರದ ನಮ್ಮ ಮುಖಂಡರಿಗೆ ಅಸಮಾಧಾನ ಇದೆ. ಸಿಎಂ ತಾರತಮ್ಯ ಮಾಡಿದ್ದಾರೆ ಅಂತ ಅವರಿಗೆ ನೋವಿದೆ. ಆದರೆ ನಾನು ಡಿಸಿ ಕರೆದ ಕಾರಣ ಬಂದೆ, ಅವರಿಗೆ ಗೌರವ ಕೊಟ್ಟು. ನಾವು ಹೋಗಿ ನಮ್ಮ ನಿಲುವು ಹೇಳಬೇಕು, ಸುಮ್ಮನೆ ಕೂರೋದಲ್ಲ. ನಮ್ಮ ಮಾತನ್ನು ಯುವಕರು ಕೇಳಲು ಅವರಿಗೆ ಧಾರ್ಮಿಕ ‌ಪ್ರಜ್ಞ ಮೂಡಿಸಬೇಕು. ಧರ್ಮ ಎನ್ನುವುದು ಮನುಷ್ಯನನ್ನ ರಕ್ಷಿಸಬೇಕು. ಅದನ್ನ ಮಾಡದವರು ಯಾವುದೇ ಕಾರಣಕ್ಕೂ ಧಾರ್ಮಿಕ ಮುಖಂಡ ಆಗಲು ಸಾಧ್ಯವಿಲ್ಲ. ನನಗೆ ಈ ಸಭೆಯ ಬಗ್ಗೆ ತೃಪ್ತಿ ಇದೆ, ಜಿಲ್ಲಾಡಳಿತ ಸಮುದಾಯ ಮಧ್ಯೆ ಸರಿ ಮಾಡಲು ಯತ್ನಿಸ್ತಾ ಇದೆ.

2:48 PM IST:

ಶಾಂತಿ ಸಮಿತಿ ಸಭೆಯ ವಿವರಗಳು

1. ಶಾಂತಿ ಸಮಿತಿ ಸಭೆಗಳನ್ನು ಸುಳ್ಯ, ಪುತ್ತೂರು, ಬೆಳ್ಳಾರೆ ಮತ್ತು ಇತರ ಸ್ಥಳೀಯ ಸ್ಥಳಗಳಲ್ಲಿ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂತು

2. ಎಲ್ಲಾ 3 ಕೊಲೆ ಪ್ರಕರಣದ ಸಂತ್ರಸ್ತರ ಕುಟುಂಬವನ್ನು ಸಿಎಂ ಭೇಟಿ ಮಾಡಬೇಕಿತ್ತು ಎಂಬ ಬಗ್ಗೆ ಮುಸ್ಲಿಂ ಮುಖಂಡರಿಂದ ಆಗ್ರಹ

3. ಮೃತ ಕುಟುಂಬಗಳಿಗೆ ಸಮಾನ ಪರಿಹಾರವನ್ನು ನೀಡಬೇಕು.

4. ಪ್ರಚೋದನಕಾರಿ ಭಾಷಣಗಳನ್ನು ಮಾಡುವವರ ವಿರುದ್ದ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕು

5. ಸುಳ್ಳು ಸುದ್ದಿಗಳನ್ನು ಪ್ರಕಟಿಸದಂತೆ ಮಾಧ್ಯಮಗಳನ್ನ ನಿಯಂತ್ರಿಸಬೇಕು.

6. ಎಲ್ಲಾ ಪಕ್ಷಗಳಲ್ಲಿರೋ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

7. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಂಘಟನೆಗಳು ಮತ್ತು ಮುಖಂಡರು ಭಾಗವಹಿಸಿಲ್ಲ, ಆದ್ದರಿಂದ ಪ್ರತಿಯೊಬ್ಬರನ್ನು ಒಳಗೊಂಡ ಮತ್ತೊಂದು ಸಭೆಯನ್ನು ಏರ್ಪಡಿಸಲು ನಿರ್ಧಾರ

8. ಬೆಳ್ಳಾರೆಯಲ್ಲಿ ಲಾಠಿ ಚಾರ್ಜ್ ಮಾಡಿದ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಇದು ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸಬಹುದು ಎಂಬ ಬಗ್ಗೆ ಕೆಲವರಿಂದ ಆಕ್ಷೇಪ

9. ಸ್ಥಳೀಯ ಮಾಧ್ಯಮಗಳು ಮತ್ತು ವೆಬ್ ಪೇಪರ್‌ಗಳು ಗೆರೆ ದಾಟದಂತೆ ಸಲಹೆ ನೀಡಬೇಕು.

10. ಪೊಲೀಸ್ ನೇಮಕಾತಿಯಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ ಹೊರಗಿನ ಜನರು ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ. ತುಳು ಬ್ಯಾರಿ ಕೊಂಕಣಿ ಮತ್ತು ಇತರ ಭಾಷೆಗಳನ್ನು ತಿಳಿಯದಿರುವುದು ಈ ಹೊತ್ತಿನಲ್ಲಿ ಅವರಿಗೆ ಅಡಚಣೆಯಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬಂತು

11. ಆರೋಪಿಗಳ ಹೊರತಾಗಿ ಪಿತೂರಿಯಲ್ಲಿ ತೊಡಗಿರುವ ಮತ್ತು ಆರೋಪಿಗಳಿಗೆ ವಿವಿಧ ವಿಧಾನಗಳಿಂದ ಬೆಂಬಲ ನೀಡುವವರನ್ನು ಸಹ ಬಂಧಿಸಿ ಕ್ರಮ ಕೈಗೊಳ್ಳಬೇಕು.

12. ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಮೂಲಕ ಸ್ಥಳೀಯ ಪೊಲೀಸರ ಸಾಮರ್ಥ್ಯಗಳನ್ನು ಪ್ರಶ್ನಿಸಲಾಗುತ್ತಿದೆ. ತನಿಖೆಯನ್ನು ಮುಂದುವರಿಸಲು ಸ್ಥಳೀಯ ಪೊಲೀಸರಿಗೆ ಅವಕಾಶ ನೀಡಬೇಕು ಎಂದು ಕೆಲವರು ಹೇಳಿದರು.

13. ದಾರಿತಪ್ಪಿದ ಯುವಕರಲ್ಲಿ ಮದ್ಯ, ಮಾದಕ ದ್ರವ್ಯಗಳ ಪ್ರಭಾವವನ್ನು ಪರಿಹರಿಸಬೇಕು.

14. ಆರೋಪಿಗಳಿಗೆ ಜೈಲುಗಳಲ್ಲಿ ಸಿಗುವ ಸೌಲಭ್ಯಗಳನ್ನು ಬಿಗಿಗೊಳಿಸುವುದು..ಉದಾ. ಹರ್ಷ ಪ್ರಕರಣದ ಆರೋಪಿಗೆ ಮೊಬೈಲ್ ಕೂಡ ಸಿಕ್ಕಿದೆ. ಇಂಥದ್ದನ್ನ ತಡೆಗಟ್ಟಲು ‌ಕ್ರಮಕ್ಕೆ ಆಗ್ರಹ

15. ಕೋಮು ಘಟನೆಗಳಿಂದಾಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಆತಿಥ್ಯ ಸಂಸ್ಥೆಗಳು ಮತ್ತು ಪ್ರವಾಸೋದ್ಯಮಕ್ಕೆ ಕೆಟ್ಟದಾಗಿ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಬೇಕು.

16 ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಬೇಕು, ಪ್ರಚೋದನಕಾರಿ ಭಾಷಣಗಳ ಮೇಲೆ ಕ್ರಮ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳಬೇಕು.

18. ಸಿಆರ್‌ಪಿಸಿ 144 ನಿಷೇಧಾಜ್ಞೆಗಳನ್ನು ವಿಧಿಸುವಾಗ ಕನಿಷ್ಠ ರಾತ್ರಿ 8 ಗಂಟೆಯ ನಂತರ ಮಾರ್ಪಡಿಸಬೇಕು.. 6 ಗಂಟೆಗೆ ಅಂಗಡಿ ಬಂದ್ ಬಗ್ಗೆ ಕೆಲವರ ಆಕ್ಷೇಪ

19. ಬಿಕ್ಕಟ್ಟಿನ ಸಮಯದಲ್ಲಿ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ಬಗ್ಗೆಯೂ ಚರ್ಚೆ

20. 144 ಸಿಆರ್‌ಪಿಸಿ ನಿಷೇಧಾಜ್ಞೆ ವಿಧಿಸುವಾಗ ಖಾಸಗಿ ಬಸ್ ಮತ್ತು ಆಟೋ ಅಸೋಸಿಯೇಷನ್‌ಗಳ ಹಿತಾಸಕ್ತಿಗಳನ್ನು ಗೌರವಿಸಿ ಅವರಿಗೆ ಅವಕಾಶ ನೀಡಲು ಕೋರಿಕೆ.

21. ಹುಕ್ಕಾ ಬಾರ್, ಪಬ್‌ಗಳು ಇತ್ಯಾದಿಗಳ ಚಟುವಟಿಕೆಯನ್ನು ನಿಯಂತ್ರಿಸಬೇಕು.

2:46 PM IST:

ಗೃಹ ಸಚಿವರ ಸರ್ಕಾರಿ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ನುಗ್ಗಿದ ಪ್ರಕರಣ. ಬೆಳಿಗ್ಗೆ ಜೆಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿ, ಜಯ ಮಹಲ್  ಗೃಹ ಸಚಿವರ ಮನೆಯ ಬಳಿ ಪ್ರತಿಭಟನೆ. ಪ್ರತಿಭಟನೆ ಮಾಡಿದ್ದ 30 ಜನರ ವಿರುದ್ಧ ಪ್ರಕರಣ ದಾಖಲು. ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 87/2022. ಕಲಂ.448, 143, 147, 149 ಐಪಿಸಿ ಹಾಗೂ ಕಲಂ. 3 ಆಫ್  PDPP ಆಕ್ಟ್ ಪ್ರಕಾರ ಪ್ರಕರಣ ದಾಖಲು, 29 ಪುರುಷರು  ಹಾಗೂ ಒಬ್ಬರು ಮಹಿಳೆ ಸೇರಿದಂತೆ ಒಟ್ಟು 30 ಜನ. 30 ಮಂದಿ ಎಬಿವಿಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಿರುತ್ತಾರೆ. ಸದ್ಯ 30 ಜನರು ಸಿಎಆರ್ ನಾರ್ಥ್ ಥಣಿಸಂದ್ರದಲ್ಲಿ ಇದ್ದು ದಸ್ತಗಿರಿ ಕಾರ್ಯ ಮುಂದುವರೆಸಿರುತ್ತಾರೆ.

2:00 PM IST:

ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ. ಭದ್ರತೆ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಒಪ್ಪಿಕೊಂಡ ಸದಾನಂದ ಗೌಡ. ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿಕೆ. ಪ್ರವೀಣ್ ಹತ್ಯೆ ಖಂಡನೀಯ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಜೆಪಿಯದ್ದೇ ಇದೆ. ಆದರೂ ಯಾಕೆ ದಿಟ್ಟ ಹೆಜ್ಜೆ ಇಡಲು ಹಿಂದೇಟು ಹಾಕ್ತಿದೆ ಅನ್ನೋ ಪ್ರಶ್ನೆ ಕಾರ್ಯಕರ್ತರಲ್ಲಿ ಇದೆ. ಸರ್ಕಾರ ದಿಟ್ಟ ಹೆಜ್ಜೆಯನ್ನು ಈಗಾಗಲೇ ಇಡಬೇಕಿತ್ತು. ಹರ್ಷ ಕೊಲೆ ಹಾಗೂ ಹಿಂದೆ ನಡೆದ ಕೊಲೆ ಸಂದರ್ಭದಲ್ಲಿ ದಿಟ್ಟ ಹೆಜ್ಜೆ ತಗೋಬೇಕಿತ್ತು. ಅದರಲ್ಲಿ ರಾಜ್ಯ ಸರ್ಕಾರ ಎಡವಿದೆ ಅನ್ನೋದನ್ನ ಒಪ್ಪಿಕೊಳ್ತೇನೆ. ಪೊಲೀಸ್ ಇಲಾಖೆ ದುರ್ಬಲರಾಗ್ತಿದ್ದಾರೆ. ಯಾರು ಹೆದರದ ವಾತಾವರಣ ಸೃಷ್ಟಿಯಾಗಿರೋದು ದುರ್ದೈವ. ಪ್ರವೀಣ್ ಪತ್ನಿ ಎರಡು ತಿಂಗಳಿಂದ ಬೆದರಿಕೆ ಬರ್ತಾ ಇತ್ತು ಅಂತಾ ಹೇಳಿದ್ದಾರೆ. ಅದನ್ನ ಪೊಲೀಸರಿಗೆ ಹೇಳಿದ್ರು ಪ್ರಯೋಜನವಾಗಿಲ್ಲ ಎಂದಿದ್ದಾರೆ. ಹೀಗೆನಾದ್ರೂ ಆಗಿದ್ರೆ ಅದು ನಿಜಕ್ಕೂ ಖಂಡನೀಯವಾದದ್ದು. ಶೀಘ್ರವಾಗಿ ಆರೋಪಿಗಳ ಪತ್ತೆಯಾಗಬೇಕು. ಮಸೂದ್ ಮನೆಗೆ ಸಿಎಂ ಭೇಟಿ ನೀಡಿಲ್ಲ ಅನ್ನೋ ಆರೋಪ ವಿಚಾರ. ಯಾರೆ ಇದ್ರೂ ಅವರ ಮನೆಗೆ ಹೋಗಬೇಕು. ಜವಾಬ್ದಾರಿ ಇದ್ದವರು ಆ ಕೆಲಸ ಮಾಡಬೇಕು ಎಂದ ಸದಾನಂದಗೌಡ. ಕಾಂಗ್ರೆಸ್ ಇದ್ದಾಗ ನಾವು ಸಾಕಷ್ಟು ಪ್ರತಿಭಟನೆ ನಡೆಸಿದ್ವಿ. ಆಗ ಹಿಂದೂ ಸಮಾಜದವರಿಗೆ ನಮ್ಮ ಸರ್ಕಾರ ಬಂದರೆ ರಕ್ಷಣೆ ಸಿಗತ್ತೆ ಅನ್ನೋ ಭಾವನೆ ಇತ್ತು. ಅದು ಕಡಿಮೆ ಆಗಿದೆ ಅನ್ನೋದಕ್ಕೆ ವ್ಯಕ್ತವಾಗ್ತಿರೊ ವಿರೋಧ ಸಾಕ್ಷಿಯಾಗಿದೆ. ತೇಜಸ್ವಿ ಸೂರ್ಯ ಹೇಳಿಕೆ ವಿಚಾರ. ಒಬ್ಬೊಬ್ಬರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ. ಆದರೆ ಸರ್ಕಾರ ಅಂತಹ ವಾತಾವರಣ ಸೃಷ್ಟಿ ಮಾಡಬೇಕು. 

1:57 PM IST:

ಎಬಿವಿಪಿ, ಬಿಜೆಪಿ ಕಾರ್ಯಕರ್ತರು ಗೃಹ ಸಚಿವರ ಮನೆಗೆ ಮುತ್ತಿಗೆ ವಿಚಾರ. ಹೋಂ ಮಿನಿಸ್ಟರ್ ಟೀಚರ್ ತರ ವರ್ತನೆ ಮಾಡಬೇಡಿ. ಹೋಂ ಮಿನಿಸ್ಟರ್ ಖಡಕ್ ಆಗಿ ಕೆಲಸ ಮಾಡಿ. ನಿಮಗೆ ಸರ್ಕಾರ, ಸಿಎಂ ಫ್ರೀ ಕೊಟ್ಟಿದೆ. ಉತ್ತಮ ಅಧಿಕಾರಿಗಳನ್ನು ಬಳಸಿಕೊಂಡು ಹಂತಕರನ್ನು ಹೆಡೆಮುರಿ ಕಟ್ಟಿ. ಗೃಹ ಸಚಿವರು ಸಮರ್ಥರಿದ್ದಾರೆ. ಆದ್ರೆ ಸೌಮ್ಯ ಸ್ವಭಾವದವರು ಇದಾರೆ. ಸ್ಕೂಲ್ ಮಕ್ಕಳಿಗೆ ಸ್ಕೂಲ್ ಮಾಸ್ತರ ಬುದ್ದಿ ಹೇಳೋದು ಬೇರೆ. ಸಮಾಜವಿರೋಧಿ, ಕೆಟ್ಟವರಿಗೆ, ಕ್ರಿಮಿನಲ್ಸ್ ಗಳಿಗೆ ಇನ್ಸ್ಪೆಕ್ಟರ್ ಭಾಷೆಯಲ್ಲಿಯೇ ಉತ್ತರಿಸಬೇಕು. ಸ್ಕೂಲ್ ಮಕ್ಕಳಿಗೆ ರಫ್ ಆಗಿ ಮಾತಾಡಿದ್ರೆ ನಡೆಯಲ್ಲ. ಇಂತಹ ಕ್ರಿಮಿನಲ್ಸ್ ಗಳಿಗೆ ಸ್ಮೂತ್ ಆಗಿ ಮಾತಾಡಿದ್ರೆ ನಡೆಯಲ್ಲ. ಕಾರ್ಯಕರ್ತರು ಸಿಟ್ಟಿಗೆದ್ದಿದ್ದು ನಿಜ, ಅದರಲ್ಲಿ ಎರಡು ಮಾತಿಲ್ಲ. ಎಲ್ಲರಿಗೂ ಈ ರೀತಿ ಆಗ್ತಿದೆ ಅಂತ ಸಿಟ್ಟಿಗೆದ್ದಿದ್ದಾರೆ. ಅದಕ್ಕಾಗಿ ಸೂಕ್ತ ಕಠಿಣ ಕ್ರಮ ಆಗಬೇಕು. ಇದರಿಂದ ಕಾರ್ಯಕರ್ತರಿಗೂ ಸರ್ಕಾರ ಕೆಲಸ ಮಾಡ್ತಿದೆ ಅಂತ ಅನಿಸ್ತದೆ. ಎಷ್ಟು ದಿನ ಕಠಿಣ ಕ್ರಮ ಅಂತ ಕಾರ್ಯಕರ್ತರು ಪ್ರಶ್ನಿಸುತ್ತಾರೆ. ಹುಣಸಗಿಯಲ್ಲಿ ಶಾಸಕ ರಾಜೂಗೌಡ ಹೇಳಿಕೆ.

1:55 PM IST:

ರಾಜ್ಯದಲ್ಲಿ SDPI, PFI ನಿಷೇಧ ವಿಚಾರ. ಹುಣಸಗಿಯಲ್ಲಿ ಶಾಸಕ ರಾಜೂಗೌಡ ಹೇಳಿಕೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ದೇ ಸರ್ಕಾರವಿದೆ PFI, SDPI ನಿಷೇಧಿಸಿ. ವಿರೋಧ ಪಕ್ಷದಲ್ಲಿದ್ದಾಗ PFI, SDPI ನಿಷೇಧಿಸಿ ಬ್ಯಾನ್ ಮಾಡ್ತೀವಿ ಅಂತ ಹೇಳೀದಿವಿ. ಹೀಗೂ ಅದೇ ಬ್ಯಾನ್ ಅಂತ ಹೇಳಿದ್ರೆ ಹೇಗೆ..? ಬ್ಯಾನ್ ಮಾಡೋದಿದ್ರೆ ಬ್ಯಾನ್ ಮಾಡಿ, ಇಲ್ಲ ಅಂದ್ರೆ ಇಲ್ಲ ಅಂತ ಹೇಳಿ. ನಾನು ಇದರ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಅಭಿಪ್ರಾಯ ಹೇಳ್ತೇನೆ. ಸಿಎಂ ಹಾಗೂ ಗೃಹ ಸಚಿವರ ಜೊತೆ ಇದರ ಬಗ್ಗೆ ಮಾತಾಡ್ತೇನೆ. ಸಂಘ ಪರಿವಾರ ಬ್ಯಾನ್ ಮಾಡಿ ಎಂಬ ಕಾಂಗ್ರೇಸ್ ನಾಯಕರ ಹೇಳಿಕೆ ವಿಚಾರ. ಕಾಂಗ್ರೇಸ್ ನಾಯಕರ ವಿರುದ್ಧ ಶಾಸಕ ರಾಜೂಗೌಡ ವಾಗ್ದಾಳಿ. ಸಂಘ ಪರಿವಾರದ ಬಗ್ಗೆ ನಿಮಗೆ ಏನು ಗೊತ್ತು..? ಸಂಘ ಪರಿವಾರ ಏನು ಕೆಲಸ ಮಾಡುತ್ತೆ ಅಂತ ಗೊತ್ತಾ..? ಸಂಘ ಪರಿವಾರದವ್ರು ರಾಷ್ಟ್ರ ಕಟ್ಟುವ ಕೆಲಸ ಮಾಡ್ತಿದ್ದಾರೆ. ಕೋವಿಡ್, ಒಳ್ಲೆಯ ಭೂಕಂಪದಲ್ಲಿ ಕೆಲಸ ಮಾಡ್ತಾರೆ. ಸಂಘ ಪರಿವಾರದ ಬಗ್ಗೆ ಕಾಂಗ್ರೇಸ್ ನಾಯಕರಿಗೆ ಏನು ಗೊತ್ತಿಲ್ಲ. ಗೊತ್ತಿಲ್ಲದಿದ್ರೆ ಸಂಘದ ಶಾಖೆಗೆ ಬನ್ನಿ, ನಿಮಗೆ ಪ್ರೀ ಟ್ರೈನಿಂಗ್ ಕೊಡಲಾಗ್ತಿದೆ. ಪಕ್ಷಗಳು ಎಲ್ಲಾ ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡಬಾರದು. ಹುಣಸಗಿಯಲ್ಲಿ ಶಾಸಕ ರಾಜೂಗೌಡ ಹೇಳಿಕೆ. 

1:42 PM IST:

ಅಖಿಲ ಭಾರತ ವೀರಶೈವ ಮಹಾಸಭಾ ಘಟಕದಿಂದ ಸುದ್ದಿಗೊಷ್ಟಿ. ಸುದ್ದಿಗೊಷ್ಟಿಯಲ್ಲಿ  ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಡಾ.ಎನ್.ತಿಪಣ್ಣ ಹೇಳಿಕೆ. ವೀರಶೈವ ಲಿಂಗಾಯತ ಸಮುದಾಯವನ್ನು ರಾಜ್ಯ ಸರ್ಕಾರ OBC ಪಟ್ಟಿಗೆ ಸೇರಿಸಿದೆ. ಆದ್ರೆ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ (OBC) ಪಟ್ಟಿಯಲ್ಲಿ  ವೀರಶೈವ ಲಿಂಗಾಯತ ಸಮುದಾಯ ಇಲ್ಲ. ಕೇಂದ್ರ ಸರ್ಕಾರ OBC ಪಟ್ಟಿಯಲ್ಲಿ ನಮ್ಮನ್ನು ಹೊರಗಿಟ್ಟಿದೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ನಮ್ಮ ಸಮುದಾಯವನ್ನು OBC ಪಟ್ಟಿಗೆ ಸೇರಿಸಬೇಕು ಎಂದು ಶಿಫಾರಸ್ಸುಮಾಡಬೇಕು. ವೀರಶೈವ ಲಿಂಗಾಯತ ಸಮುದಾಯದಲ್ಲಿ ಯಾರು  ಸಾಹುಕಾರರಲ್ಲ. ನಮ್ಮ ಹತ್ರ ದುಡ್ಡಿಲ್ಲ...ಹಳ್ಳಿಯಲ್ಲಿ ನಮ್ಮ‌ ಸಮುದಾಯದ ಜನರು ಕಷ್ಟದಲ್ಲಿದ್ದಾರೆ. ನಮ್ಮ ಪರಿಸ್ಥಿತಿ ತುಂಬಾ ಚಿಂತಾ ಜನಕವಾಗಿದೆ. ನಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸುವಂತ್ತೆ ಆಗ್ರಹಿಸಿ ಮೆರವಣಿಗೆ ಮಾಡುತಿದ್ದೆವೆ. ಅಗಸ್ಟ್ 1 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೆರವಣಿಗೆ ಮಾಡುತಿದ್ದೆವೆ. ರಾಜ್ಯದ್ಯಾಂತ ಏಕ ಕಾಲದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ನೀಡುತೇವೆ. ಬೆಂಗಳೂರಿನಲ್ಲಿ ಮೆರವಣಿಗೆ ಅವಕಾಶ ಇಲ್ಲ. ಹಾಗಾಗಿ ಫ್ರೀಡಂ ಪಾರ್ಕ್ ನಲ್ಲಿ ಸಭೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡ್ತಿವಿ. ಸಮಾಜದ ಮಠಾಧೀಶರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಗಸ್ಟ್ 1 ರಂದು ಸಿಎಂ ಬಸವರಾಜ್ ಬೊಮ್ಮಾಯಿ ದೆಹಲಿಗೆ ಹೊಗಲಿದ್ದಾರೆ. ಹಾಗಾಗಿ ನಾವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡುತಿದ್ದೆವೆ. ಸಿಎಂ ದೆಹಲಿಯಿಂದ ಬಂದ ಬಳಿಕ ಅವರ ಭೇಟಿ ಮಾಡಿ ಅವರಿಗೆ ಮನವಿ ಮಾಡುತ್ತೆವೆ.

1:16 PM IST:

ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಮಂಗಳೂರು ಪೊಲೀಸರು. ಪ್ರವೀಣ್ ಹತ್ಯೆಯಲ್ಲಿ ಭಾಗಿಯಾಗಿರುವ ಅನುಮಾನದ ಮೇಲೆ, ತಲಸೇರಿಯಲ್ಲಿ ಚಿಕಿನ್ ಸೆಂಟರ್ ಅಂಗಡಿ ನಡೆಸುತ್ತಿದ್ದ ಶಂಕಿತ ವ್ಯಕ್ತಿಯನ್ನು ಬಂದಿಸಿದ್ದಾರೆ. 

12:39 PM IST:

ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗಾಗಿ ಹೋರಾಟ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಶುರುವಾಗಿದೆ. ನಗರದ ನೆಹರು ಮೈದಾನದಿಂದ ಚನ್ನಮ್ಮ ವೃತ್ತದವರೆಗೆ ನಡೆಯಲಿರುವ ಪ್ರತಿಭಟನಾ ಮೆರವಣಿಗೆ. ನೆಹರು ಮೈದಾನದಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಭೆ. ಪ್ರತಿಭಟನಾ ರ‌್ಯಾಲಿಗೆ ಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ. ರ್ಯಾಲಿಯಲ್ಲಿ ಸಮುದಾಯದ ಅನೇಕ ಮುಖಂಡರು ಭಾಗಿಯಾಗಿದ್ದಾರೆ. 

12:33 PM IST:

ಹಲವು ದಿನಗಳಿಂದ ಬಾಕಿ ಉಳಿದಿದ್ದ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಆನಂದ ಸಿಂಗ್ - ವಿಜಯನಗರ, ಶಶಿಕಲಾ ಜೊಲ್ಲೆ - ಕೊಪ್ಪಳದ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ. ಇನ್ನುಳಿದ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರು ಈಗಾಗಲೇ ಇದ್ದು, ಇವೆರಡು ಜಿಲ್ಲೆಗಳು ಮಾತ್ರ ಖಾಲಿ ಉಳಿದಿತ್ತು. 

11:13 AM IST:

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟೂರು ಹತ್ಯೆ ಕೇಸ್. ಒತ್ತಡಕ್ಕೆ ಮಣಿದು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ರಾ ಪೊಲೀಸರು? ಝಾಕಿರ್, ಶಫಿಕ್ ಬಂಧಿಸಿ ಒತ್ತಡ ಕಡಿಮೆ ಮಾಡಿಕೊಂಡಿತಾ ಸರ್ಕಾರ? ಮುಜುಗರದಿಂದ ತಪ್ಪಿಸಲಷ್ಟೇ ಇಬ್ಬರ ಬಂಧಿಸಿದ್ರಾ ಪೊಲೀಸರು? ಹಾಗಾದ್ರೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ ಇನ್ನೂ ಆಗಿಲ್ಲ ಯಾಕೆ? ಪೊಲೀಸರ ನಡೆ ಮೇಲೆ‌ ಬೆಟ್ಟದಷ್ಟು ಅನುಮಾನ. ಎಲ್ಲಾ ಮಾಹಿತಿ ಅಸ್ಪಷ್ಟವಾಗಿರುವಾಗಲೇ ಅವರೇ ಆರೋಪಿಗಳೆಂಬ ನಿರ್ಧಾರಕ್ಕೆ ಬಂದ ಖಾಕಿ. ಸರ್ಕಾರದ ಒತ್ತಡಕ್ಕೆ ಮಣಿದು ಇಬ್ಬರನ್ನು ಬಂಧಿಸಿ ಸುಮ್ಮನಾದ್ರಾ ಬೆಳ್ಳಾರೆ ಪೊಲೀಸರು? ಕೊಲೆ ಪ್ರಕರಣ ಸಂಬಂಧ ಆರೋಪಿ ಬಂಧಿಸುವಂತೆ ರಾಜ್ಯಾದ್ಯಂತ ಹೆಚ್ಚಾಗಿದ್ದ ಆಕ್ರೋಶ. ಅದೇ ಕಾರಣಕ್ಕೆ ತರಾತುರಿಯಲ್ಲಿ ಇಬ್ಬರನ್ನಷ್ಟೇ ಬಧಿಸಿದ ಪೊಲೀಸರು. ಹಾಗಾದ್ರೆ ಪೊಲೀಸರ ಮೇಲೆ ಅನುಮಾನ ಮೂಡಲು ಕಾರಣವೇನು? ಸಿಎಂ ಬೆಳ್ಳಾರೆ ಭೇಟಿ ವಿಚಾರ ತಿಳಿತಾ ಇದ್ದಂತೆ ಇಬ್ಬರ ಬಂಧನ ವಿಷಯ ಹೊರಬಿಟ್ಟ ಖಾಕಿ. ಆದರೆ ಕೊಲೆಯಲ್ಲಿ ಅವರ ಪಾತ್ರ ಏನು ಅನ್ನೋದನ್ನು ಸ್ಪಷ್ಟಪಡಿಸಿಲ್ಲ. ಇವರೇ ಪ್ರಮುಖ ಆರೋಪಿಗಳಾ ಅನ್ನೋದನ್ನೂ ಹೇಳಿಲ್ಲ. ಮೊನ್ನೆಯಷ್ಟೇ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದಿದ್ದ ಎಡಿಜಿಪಿ ಅಲೋಕ್‌ ಕುಮಾರ್. ಮಧ್ಯಾಹ್ನ ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದಿದ್ದ ಖಾಕಿ. ಸಂಜೆ ಯಾಗುತ್ತಿದ್ದಂತೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲು‌ ಮುಂದಾಗಿಲ್ಲ. ಇವರೇ ಆರೋಪಿಗಳೆಂದು ನಿರ್ಧಾರಕ್ಕೆ ಬಂದು ಜೈಲಿಗಟ್ಟಿದ್ರು. ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಪ್ರಕರಣದಲ್ಲಿ ಆರೋಪಿಗಳ‌ ಹೆಚ್ಚಿನ ವಿಚಾರಣೆ ಆಗಿಲ್ಲ ಯಾಕೆ? ಎನ್ಐಎ ಗೆ ವರ್ಗಾವಣೆಯಾದ ಕೇಸ್ ನಲ್ಲಿ ಒಂದೇ ದಿನಕ್ಕೆ ಆರೋಪಿಗಳ‌ ವಿಚಾರಣೆ ಮುಗಿಸಿದ್ರಾ? ಸಣ್ಣ ಪುಟ್ಟ ಪ್ರಕರಣದಲ್ಲೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಪೊಲೀಸರು. ಆದರೆ ಇಂತಹ ದೊಡ್ಡ ಕೇಸ್ ನಲ್ಲಿ ಒಂದೇ ದಿನಕ್ಕೆ ಆರೋಪಿಗಳನ್ನು ಜೈಲಿಗೆ ಕಳಿಸಿದ್ದು ಯಾಕೆ? ಖಾಕಿಯ ಇದೇ ನಡೆ‌ ಈಗ ಅತಿಹೆಚ್ಚು ಅನುಮಾನಕ್ಕೆ ಕಾರಣ. 

11:00 AM IST:

ವಿಜಯಪುರ:ತಡರಾತ್ರಿ ಬಾರಿ ಮಳೆ, ಡೋಣಿ ನದಿಗೆ ಹರಿದು ಅಪಾರ ಪ್ರಮಾಣದ ನೀರು. ಬಿಜ್ಜಳ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ಡೋಣಿ ನದಿ ಪಾತ್ರದ ಮೇಲ್ಭಾಗದಲ್ಲಿ ಮಳೆ ಹಿನ್ನಲೆ, ಉಕ್ಕಿ ಹರಿಯುತ್ತಿರುವ ಡೋಣಿ. ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿಯ ರಾಜ್ಯ ಹೆದ್ದಾರಿ-61 ಕೆಳಸೇತುವೆ ಸಂಚಾರ ಬಂದ್. ಮನಗೂಳಿ - ದೇವಾಪುರ ಮಧ್ಯದ ತಾಳಿಕೋಟೆ, ಬಿಜ್ಜಳ ರಾಜ್ಯ ಹೆದ್ದಾರಿ ಸಂಖ್ಯೆ - 61. ನೀರಿನ ಹರಿವು ಕಡಿಮೆಯಾದ ಮೇಲೆ‌ ಸಂಚಾರಕ್ಕೆ ಮುಕ್ತಗೊಳ್ಳುವ ಸೇತುವೆ. ಕೆಲ ಗಂಟೆಯಲ್ಲಿ ಉಕ್ಕು ಹರಿದು ಬಳಿಕ ತಣ್ಣಗಾಗುವ ಡೋಣಿ ಪ್ರವಾಹ. ಹೀಗಾಗಿ ನೀರಿನ ಹರಿವು ಕಡಿಮೆಯಾಗೋದನ್ನ ಕಾಯುತ್ತಿರುವ ಜನ. ದುರಸ್ಥೀಕರಣಗೊಂಡ ಕೆಳ ಸೇತುವೆ ಮುಳುಗಡೆಯಾಗಿ ರಾಜ್ಯ ಹೆದ್ದಾರಿ ರಸ್ತೆ ಸಂಚಾರದಲ್ಲಿ ವ್ಯತ್ಯಯ, ಮುಖ್ಯ ಸೇತುವೆ ಶಿಥಿಲಗೊಂಡ ಕಾರಣ, ಆ ಪ್ರಮುಖ ಸೇತುವೆ ಮೇಲೆ‌ ವಾಹನ ಸಂಚಾರಕ್ಕೆ ನಿಷೇಧಿಸಲಾಗಿದೆ. ಹಳೆಯ ಕೆಳಸೇತುವೆಯನ್ನೇ ದುರಸ್ಥಿಗೊಳಿಸಿ, ತಾತ್ಕಾಲಿಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈಗ ಅದು ಕೂಡ ಬಂದ್ ಆಗಿದೆ. 

10:58 AM IST:

ಶಾಂತಿ ಸಭೆಗೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ. ಮಂಗಳೂರಿನ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿರುವ ಶಾಂತಿ ಸಭೆ. ಇಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಶಾಂತಿ ಸಭೆ .ಶಾಂತಿ ಸಭೆಗೆ ಮಾಧ್ಯಮದವರಿಗೆ ಅವಕಾಶವಿರುವುದಿಲ್ಲ. ಸಭೆಯಲ್ಲಿ ಚರ್ಚಿಸಲಾದ ವಿವರವನ್ನು ಮಾಧ್ಯಮದವರಿಗೆ ಸಭೆ ಬಳಿಕ ನೀಡಲು ‌ನಿರ್ಧಾರ. ಧಾರ್ಮಿಕ ಮುಖಂಡರು, ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರ ಉಪಸ್ಥಿತಿ. ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಮಿಷನರ್ ಶಶಿಕುಮಾರ್, ಎಸ್ಪಿ ಹೃಷಿಕೇಶ್ ಸೋನಾವಣೆ ಸೇರಿ ಅಧಿಕಾರಿಗಳು ಭಾಗಿ. ದ.ಕ ಜಿಲ್ಲೆಯ 31 ಠಾಣಾ ವ್ಯಾಪ್ತಿಯ ಪ್ರಮುಖ ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ. ಮಂಗಳೂರು ಕಮಿಷನರೇಟ್ ನ 15 ಠಾಣೆ ಮತ್ತು ಎಸ್ಪಿ ಲಿಮಿಟ್ ನ 16 ಠಾಣೆ. ಆಯಾ ಠಾಣಾ ವ್ಯಾಪ್ತಿಯ ಪ್ರಮುಖ ನಾಲ್ವರು ಧಾರ್ಮಿಕ ಮುಖಂಡರನ್ನು ಆಹ್ವಾನಿಸಲಾಗಿದೆ. 

10:40 AM IST:

ಭಾರತವೂ ಸೇರಿದಂತೆ ಜಗತ್ತಿನ 65ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡುಬಂದಿರುವ ಮಂಕಿಪಾಕ್ಸ್ ಸೋಂಕು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟಿತೇ ಎಂಬ ಭೀತಿ ಶುರುವಾಗಿದ್ದು, ಆಫ್ರಿಕಾ ಮೂಲದ ಪ್ರಜೆಯಲ್ಲಿ ಸೋಂಕಿನ ಶಂಕಿತ ಲಕ್ಷಣ ಕಂಡಬಂದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:38 AM IST:

 ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ, ಮಂಗಳೂರಿನಲ್ಲಿ ಕೊಲೆಯಾದ ಪ್ರವೀಣ್‌ ನೆಟ್ಟಾರು ಸೇರಿದಂತೆ ಇತ್ತೀಚೆಗೆ ಹಿಂದೂ ಯುವಕರ ನಡೆದ ಹತ್ಯೆಗಳ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಇದೆ ಎಂದು ಆರೋಪಿಸಿ ಎಬಿವಿಪಿ ಪ್ರತಿಭಟಿಸುತ್ತಿದೆ. ಬೆಂಗಳೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ಸರ್ಕಾರಿ ನಿವಾಸದ ಮೇಲೆ ಮುತ್ತಿಗೆ ಹಾಕಲಾಗಿದೆ. ಮನೆಯ ಆವರಣದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದ್ದು ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ. ಹಿಂದೂ ಯುವಕರ ಹತ್ಯೆಯ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ. ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ ಎಂದು ಎಬಿವಿಪಿ ಆರೋಪಿಸಿದೆ

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

10:28 AM IST:

ಮಂಗಳೂರು ನಗರ ಪೊಲೀಸರ ಕೈಯಲ್ಲಿದೆ ಆರೋಪಿಗಳ ಕಂಪ್ಲೀಟ್ ಡೀಟೇಲ್ಸ್. ಎರಡು ಹಂತದಲ್ಲಿ ಆರೋಪಿಗಳ ಮಾಹಿತಿ ಪತ್ತೆ.  ಕಾರ್ ನಂಬರ್ ಮಾಹಿತಿ ಪಡೆದು ಬೆನ್ನು ಹತ್ತಿದ ಪೊಲೀಸರು.   ಕಾರಿನ ನಂಬರ್ ಅಡ್ರೆಸ್‌ನಲ್ಲಿರುವ ಮನೆಗೆ ನುಗ್ಗಿದ ಪೊಲೀಸರು. ಕಾರಿಗೆ ಸಂಬಂಧಪಟ್ಟವರನ್ನ ವಿಚಾರಸಿದ ಪೊಲೀಸರು. ವಿಚಾರಣೆ ವೇಳೆ ಹಂತಕ ಪಡೆಯ ಮಾಹಿತಿ ಪಡೆದ ಮಂಗಳೂರು ನಗರ ಪೊಲೀಸರು.  ಹಂತಕರ ಸ್ನೇಹಿತರ ವಿಚಾರಣೆಯೂ ಮುಗಿದಿದೆ. ಫಾಸಿಲ್ ಹತ್ಯೆ ನಡೆಸಿದವರ ಸ್ನೇಹಿತರ ವಿಚಾರಣೆ. ಸುರತ್ಕಲ್ ಪೊಲೀಸ್ ಠಾಣೆಗೆ ಕೆರತಂದು ವಿಚಾರಣೆ ಪೊಲೀಸರು. ಹಂತಕರ ಸಂಬಂಧಿಕರು ಹಾಗೂ ಸ್ನೇಹಿತರ ಮೊಬೈಲ್ ಮೇಲೆ ಹದ್ದಿನ ಕಣ್ಣು.

10:23 AM IST:

ಮಂಗಳೂರು: ಸುರತ್ಕಲ್ ಫಾಸಿಲ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಮಂಗಳೂರಿನಲ್ಲಿ 11 ಗಂಟೆಗೆ ಶಾಂತಿ ಸಭೆ ನಡೆಯಲಿದೆ. ಎಡಿಜಿಪಿ ಅಲೋಕ್ ಕುಮಾರ್, ಆಯುಕ್ತ ಶಶಿಕುಮಾರ್, ಡಿಸಿ ಭಾಗಿಯಾಗಲಿದ್ದಾರೆ. ಧಾರ್ಮಿಕ ಮುಖಂಡರು ಹಾಗೂ ಸಂಘಟನೆಗಳ ಮುಖಂಡರ ಜೊತೆ ನಡೆಯಬೇಕಿದ್ದು ಶಾಂತಿ ಸಭೆಗೆ ಮುಸ್ಲಿಂ ಮುಖಂಡರಿಂದ ಬಹಿಷ್ಕಾರ. ಕೆಲವು ಮುಸ್ಲಿಂ ಮುಖಂಡರಿಂದ ಬಹಿಷ್ಕಾರ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಪೋಸ್ಟೋ‌ಗಳನ್ನು ಹರಿಬಿಟ್ಟಿರುವ ಮುಖಂಡರು. ಪ್ರವೀಣ್ ಕುಟುಂಬಕ್ಕೆ ಸರ್ಕಾರ ನೀಡಿದ ಆಶ್ವಾಸನೆ. ಸಮಾನ ಪರಿಹಾರದ ರಿತಿಯಲ್ಲಿಯೇ ಫಾಸಿಲ್ ಹಾಗೂ ಮಸೂದ್ ಕುಟುಂಬಕ್ಕೂ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆ ಶಾಂತಿ ಸಭೆಯನ್ನು ಬಹಿಷ್ಕರಿಸಿರುವ ಮುಸ್ಲಿಂ ಮುಖಂಡರು.

10:16 AM IST:

ಶಿವಮೊಗ್ಗದ ಹರ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ, ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನ ಗೃಹ ಸಚಿವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಹಿಂದೂ ಕಾರ್ಯಕರ್ತರ ಹತ್ಯೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಚಿವರ ಮನೆಗೆ ಗುಂಪು ಗುಂಪಾಗಿ ನುಗ್ಗಿದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮನೆ ಮುಂದಿದ್ದ ಪಾಟ್ಸ್ ಅನ್ನು ಕಾರ್ಯಕರ್ತರು ಒಡೆದಿದ್ದಾರೆ. SDPI and PFI ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ. 

10:12 AM IST:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧ ರೈಲ್ವೆ ನಿಲ್ದಾಣಗಳಿಂದ ಹೆಚ್ಚುವರಿಯಾಗಿ ಐದು ಮೆಮು ರೈಲುಗಳ ಸಂಚಾರವನ್ನು ಶುಕ್ರವಾರದಿಂದ ಆರಂಭಿಸಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲ್ವೆ ನಿಲ್ದಾಣ, ಬೆಂಗಳೂರು ಕಂಟೋನ್ಮೆಂಟ್‌ ಮತ್ತು ಯಲಹಂಕದಿಂದ ದೇವನಹಳ್ಳಿಗೆ ರೈಲುಗಳು ಕಾರ್ಯ ನಿರ್ವಹಿಸಲಿವೆ. ವಿಮಾನ ಪ್ರಯಾಣಿಕರು, ವಿಮಾಣ ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಆ ಭಾಗದ ಜನರಿಗೆ ರೈಲ್ವೆಗಳ ಸೌಲಭ್ಯದಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಈ ಮೆಮು ರೈಲುಗಳು ಎಂಟು ಬೋಗಿಗಳನ್ನು ಹೊಂದಿವೆ. ಈ ಎಲ್ಲಾ ರೈಲುಗಳು ಸೋಮವಾರದಿಂದ-ಶನಿವಾರದವರೆಗೆ ಮಾತ್ರ ಸಂಚರಿಸುತ್ತವೆ. ಭಾನುವಾರ ಸೇವೆ ಇರುವುದಿಲ್ಲ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

10:11 AM IST:

ಸೋಮವಾರ ಮೂರು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ‌. ದಾವಣಗೆರೆಯ ಸಿದ್ದೇಶ್ವರ ರಥ ವಜ್ರಾ ಮಹೋತ್ಸವ ಕಾರ್ಯಕ್ರಮ, ಗಂಗಾವತಿಯ ಅಂಜನಾದ್ರಿ ಬೆಟ್ಟ,ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಲಿರುವ ಸಿಎಂ. ಸೋಮವಾರ ಬೆಳಗ್ಗೆ 9 ಗಂಟೆ ಬೆಂಗಳೂರಿನಿಂದ ದಾವಣಗೆರೆಗೆ ಪ್ರಯಾಣ. ದಾವಣಗೆರೆಯಲ್ಲಿ ಸಿದ್ದೇಶ್ವರ ರಥ ವಜ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿ. ದಾವಣಗೆರೆಯಿಂದ ಗಂಗಾವತಿ ಆನೆಗೊಂದಿಗೆ ಪ್ರಯಾಣಿಸಲಿದ್ದಾರೆ ಸಿಎಂ.ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ವೀಕ್ಷಿಸಲಿದ್ದು, ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಜೊತೆ ಚರ್ಚಿಸುತ್ತಾರ.ೆಬಳಿಕ ಆನೆಗುಂದಿಯಿಂದ ಕೊಪ್ಪಳ ಕ್ಕೆ ಭೇಟಿ ನೀಡುತ್ತಾರ.ೆ ಕೊಪ್ಪಳದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡಿ, ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಭೇಟಿ. ಕೊಪ್ಪಳದಿಂದ ಬಳ್ಳಾರಿಯ ತೊರಣಗಲ್ಲುಗೆ ತೆರಳಲಿದ್ದಾರೆ.

10:02 AM IST:

ತುಮಕೂರು: ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಮಳೆ ನೀರಿನಿಂದ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ದ್ಯಾವಯ್ಯನಪಾಳ್ಯ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದ್ಯಾವಯ್ಯನಪಾಳ್ಯ ಗ್ರಾಮ. ಪಾವಗಡ ಹಾಗೂ ದ್ಯಾವಯ್ಯನಪಾಳ್ಯಕ್ಕೆ ಹೋಗುವ ಪ್ರಮುಖ ರಸ್ತೆ ಮೇಲೆ‌ ಹರಿಯುತ್ತಿರುವ ಮಳೆ ನೀರು. ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಹೈರಾಣಾವಾಗಿದ್ದಾರೆ ಜನರು. ಶಾಲಾ ವಿದ್ಯಾರ್ಥಿಗಳು ಹಾಗೂ ಕೆಲಸಗಳಿಗೆ ಹೋಗುವ ಜನರು ಪರದಾಟ. ಪ್ರಮುಖ ರಸ್ತೆಯಲ್ಲಿ‌‌ ಮೇಲ್ಸೇತುವೆ ನಿರ್ಮಾಣ ಮಾಡದೇ ಇರುವುದೇ ಕಾರಣ ಎಂದು, ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ.

10:01 AM IST:

ಬಳ್ಳಾರಿ: ಕೊಳೂರು ಗ್ರಾಮದಲ್ಲಿ ಅಪರಿಚಿತ ಯುವತಿ ಶವ ಪತ್ತೆ. ಕಾಲುವೆಯಲ್ಲಿ  ತೆಲಾಡುತ್ತಿದೆ ಅನಾಮಿಕ ಯುವತಿ ಶವ. ಬಳ್ಳಾರಿ ಜಿಲ್ಲೆ ಕೂರುಗೋಡು ತಾಲೂಕಿನ ಕೊಳೂರು ಗ್ರಾಮ. ಅನಾಮಿಕ ಯುವತಿ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು. ಶವ ಪತ್ತೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು. ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಘಟನೆ.

10:00 AM IST: