Karnataka Updates: ರಾಜ್ಯಾದ್ಯಂತ ಮುಂದುವರೆದ ಮಹಾಮಳೆ: ಜನಜೀವನ ಅಸ್ತವ್ಯಸ್ತ

Kananda News live updates Red alert in state water released from Cusec

ಕರ್ನಾಟಕದ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದ್ದು, ಕೃಷ್ಣ ರಾಜ ಸಾಗರ ಆಣೆಕಟ್ಟೆಯಿಂದ 99,038 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿಯೂ ಬಿಡದೆ ವರುಣ ತನ್ನ ಆರ್ಭಟ ತೋರುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಇಲ್ಲದೇ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯದಲ್ಲಿ ಹೇಗಿದೆ ಮಳೆಯ ಆರ್ಭಟ ಹೇಗಿದೆ? ಸೇರಿದಂದತೆ ರಾಜ್ಯದ ಪ್ರಮುಖ ಸುದ್ದಿಗಳ ಕ್ವಿಕ್‌ ರೌಂಡಪ್‌ ಇಲ್ಲಿದೆ  

6:43 PM IST

ಉಡುಪಿ: ನೀರಿನ ರಭಸಕ್ಕೆ ಕೊಚ್ಚಿ ಹೋದ ಬಾಲಕಿ

ಉಡುಪಿ: ನೀರಿನ ರಭಸಕ್ಕೆ  ಬಾಲಕಿ  ಕೊಚ್ಚಿ ಹೋಗಿದ್ದಾಳೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿಯಲ್ಲಿ ಘಟನೆ ನಡೆದಿದೆ. ಸನ್ನಿಧಿ (7 ) ನೀರುಪಾಲಾದ ಬಾಲಕಿ.  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯ ಕಲಿಯುತ್ತಿದ್ದ ಸನ್ನಿಧಿ ಶಾಲೆಯಿಂದ ಮನೆಗೆ ಬರುವಾಗ ಈ ಘಟನೆ ನಡೆದಿದೆ. ಕಾಲು ಸಂಕ ದಾಟುವಾಗ ಬಾಲಕಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಗ್ರಾಮಸ್ಥರು  ಹುಡುಕಾಟ ಮುಂದುವರೆಸಿದ್ದಾರೆ. 

6:12 PM IST

ವಿಜಯನಗರ: ಧ್ವಜಾರೋಹಣಕ್ಕೆ ಮತ್ತೆ ಉಸ್ತುವಾರಿಗಳು ಬದಲು‌ ಮಾಡಿದ ಸರ್ಕಾರ

ವಿಜಯನಗರ: ಧ್ವಜಾರೋಹಣಕ್ಕೆ ಸರ್ಕಾರ.. ಮತ್ತೊಮ್ಮೆ ಉಸ್ತುವಾರಿಗಳು ಬದಲು‌ ಮಾಡಿದೆ.   ಆ.15 ರಂದು ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣಕ್ಕೆ ಸಚಿವರ ನೇಮಕ.  ವಿಜಯನಗರಕ್ಕೆ ಆನಂದ್ ಸಿಂಗ್, ಕೊಪ್ಪಳಕ್ಕೆ ಶಶಿಕಲಾ ಜೊಲ್ಲೆ, ಮಂಡ್ಯಕ್ಕೆ ಆರ್. ಅಶೋಕ್ ಧ್ವಜಾರೋಹಣ ಮಾಡಲಿದ್ದಾರೆ.  ಧ್ವಜಾರೋಹಣ ಉಸ್ತುವಾರಿಗಾಗಿ ಪಟ್ಟು ಹಿಡಿದಿದ್ದ ಸಚಿವ ಆನಂದ ಸಿಂಗ್. ವಿಜಯನಗರದಲ್ಲಿ 405 ಅಡಿ ಎತ್ತರದ ಧ್ವಜಸ್ತಂಬ ನಿರ್ಮಾಣ ಮಾಡಲಾಗುತ್ತಿದೆ.  ಆ.15 ರಂದು ಸಚಿವ ಆನಂದ್ ಸಿಂಗ್ 405 ಅಡಿ ಎತ್ತರದ ಧ್ವಜಾರೋಹಣ ಮಾಡಲಿದ್ದಾರೆ.  ಇದೇ ಧ್ವಜಸ್ಥಂಬದಲ್ಲಿ ಧ್ವಜಾರೋಹಣ ಮಾಡಬೇಕೆಂದು ಆನಂದ್ ಸಿಂಗ್ ‌ಹಠ ಮಾಡಿದ್ದರು. ಕೊನೆಗೂ ಆನಂದ ಸಿಂಗ್ ಹಠಕ್ಕೆ ಸರ್ಕಾರ ಮಣಿದಿದೆ. 

5:53 PM IST

ಹಾಸನ: ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಬಿಜೆಪಿ ಕಾರ್ಯಕರ್ತರ ಬೃಹತ್ ಪ್ರತಿಭಟನೆ

ಹಾಸನ: ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಶಾಸಕರು ಸ್ಥಳೀಯ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.  ಬಿಜೆಪಿ ಮುಖಂಡ ಎನ್‌.ಆರ್. ಸಂತೋಷ್ ನೇತೃತ್ವದಲ್ಲಿ ಅರಸೀಕೆರೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ. 

ಹಾಸನ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಪಿಪಿ ವೃತ್ತದವರೆಗೂ ಮೆರವಣಿಗೆ ಸಾಗಿದ್ದು, ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಮಳೆಯಲ್ಲಿಯೇ ಪ್ರತಿಭಟನೆ ಮಾಡಿದ್ದಾರೆ.  ಪ್ರತಿಭಟನೆಯಲ್ಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ರವಿಕುಮಾರ್, ನಗರಸಭೆ ಅಧ್ಯಕ್ಷ ಗಿರೀಶ್ ಭಾಗಿಯಾಗಿದ್ದರು. 

5:25 PM IST

ಕೊಡಗು: ಮಳೆಹಾನಿ ಪ್ರದೇಶಗಳಿಗೆ ಸಚಿವ ಬಿ ಸಿ ನಾಗೇಶ್ ಭೇಟಿ

ಕೊಡಗು: ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಭೇಟಿ ನೀಡಿದರು. ಮಳೆಹಾನಿ‌ ವೀಕ್ಷಣೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಸ್ತುವಾರಿ ಸಚಿವರು "ಮನೆ ಹಾನಿಯಾದ ಸಂತ್ರಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ, ಕುಶಾಲನಗರದ ಕುವೆಂಪು ಸಾಯಿ ಬಡಾವಣೆಗೆ ನೀರು ನುಗ್ಗಿದ್ದು, ಅಲ್ಲಿಗೂ ಭೇಟಿ ನೀಡಲಾಗಿದೆ, ಆ ಬಡಾವಣೆಗಳಿಗೆ ತಡೆಗೋಡೆ ನಿರ್ಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ, ಅದಕ್ಕಾಗಿ ಈಗಾಗಲೇ ಐದು ಕೋಟೆ ಮೀಸಲು, ಮಳೆ ನಿಂತ ಬಳಿಕ ತಡೆಗೋಡೆ ಕಾಮಗಾರಿ" ಎಂದರು

"ಈ ವರ್ಷ ಕಾವೇರಿ ನದಿಯ ಪ್ರವಾಹದಿಂದ ಅಷ್ಟೊಂದು ಹಾನಿಯಾಗಿಲ್ಲ, ಕೊಡಗಿನಲ್ಲಿ ಜಲಸ್ಫೋಟ ಆಗುತ್ತಿದ್ದರೂ ಇದುವರೆಗೆ ತಜ್ಞರ ತಂಡ ಬಾರದ ವಿಚಾರ, ಭೂಕಂಪನ ಮತ್ತು ಭೂಕುಸಿತಕ್ಕೆ ಸಂಬಂಧವಿದೆಯಾ ಎಂದು ಪರಿಶೀಲನೆ ಮಾಡಬೇಕಾಗಿದೆ,  ಅದಕ್ಕೆ ಸಂಬಂಧಿಸಿದ ವಿಶ್ವವಿದ್ಯಾನಿಲಯ ಪ್ರೊಫೇಸರ್ ಗಳ ಜೊತೆಗೆ ಚರ್ಚಿಸಲಾಗಿದೆ, ಮಳೆ ಬರುತ್ತಿರುವುದರಿಂದ ಈಗ ಪರಿಶೀಲನೆ ಸಾಧ್ಯವಿಲ್ಲ, ಮಳೆ ಮುಗಿದ ತಜ್ಞರು ಬರುತ್ತಾರೆ, ಇದಕ್ಕೆ ಶಾಶ್ವತ ಪರಿಹಾರ ಸಿಗುತ್ತಾ ನೋಡಬೇಕಾಗಿದೆ" ಎಂದು ಪ್ರವಾಹ ಭೀತಿ ಎದುರಿಸುತ್ತಿರುವ ಸ್ಥಳಗಳ ಪರಿಶೀಲಿಸಿ ಸಚಿವ ಬಿ ಸಿ ನಾಗೇಶ್ ಹೇಳಿದರು

5:19 PM IST

ಉಡುಪಿಯಲ್ಲಿ ನಿರಂತರ ಗಾಳಿ ಮಳೆ, ಮೀನಿನ ದರ ದುಪ್ಪಟ್ಟು

 ಹವಾಮಾನ ವೈಪರಿತ್ಯ ಉಂಟಾಗಿರುವುದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೀನು ಖರೀದಿ ಮಾಡುವ ಗ್ರಾಹಕರ ಮೇಲೂ ಪರಿಣಾಮ ಬೀರಿದ್ದು ಮೀನಿನ ದರ ಗಗನಕ್ಕೇರಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

5:09 PM IST

ರಾಯಚೂರು: ಬೈಕ್‌ಗೆ ಬಸ್ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

ರಾಯಚೂರು: ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದ ಬಳಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರಿಬ್ಬರು ಕೊಪ್ಪಳ ಜಿಲ್ಲೆ 
ಗಂಗಾವತಿ ತಾಲೂಕಿನ ಮುಷ್ಟೂರು ಗ್ರಾಮದ ದುರಗಪ್ಪ ತಂ. ಬಸ್ಸಪ್ಪ (42), ಈರಣ್ಣ ತಂ. ಬಸ್ಸಪ್ಪ ಕಬ್ಬೇರ್ (38)  ಎಂದು ಗುರುತಿಸಲಾಗಿದೆ.

ಮೃತರು ಶ್ರಾವಣ ಮಾಸದ 2ನೇ ಸೋಮವಾರದ ಅಂಗವಾಗಿ ಸುಕ್ಷೇತ್ರ ಮಾಡಶಿರವಾರ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ಗಂಗಾವತಿ ತಾಲೂಕಿನ ಮುಷ್ಟೂರು ಗ್ರಾಮಕ್ಕೆ  ತೆರಳುತ್ತಿರುವಾಗ ಬೈಕ್ ಗೆ ಬಸ್ ಡಿಕ್ಕಿ ಹೊಡೆದು ‌ಇಬ್ಬರು ರಸ್ತೆಯಲ್ಲಿಯೇ ಪ್ರಾಣಬಿಟ್ಟಿದ್ದಾರೆ.

4:47 PM IST

ಬೆಂಗಳೂರು: ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳ ಶವ ಪತ್ತೆ

ಬೆಂಗಳೂರು: ತಾಯಿ-ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು ಈ ಸಂಬಂಧ ಬನಶಂಕರಿ ಪೊಲೀಸರು ಸ್ಥಳಕ್ಕೆ‌ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿರುವಾಗ ಎರಡು ದಿನಗಳ ಹಿಂದೆ ತಾಯಿ-ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ದಂತ ವೈದ್ಯೆಯಾಗಿರುವ ಕೊಡಗಿನ ವಿರಾಜಪೇಟೆ ಮೂಲದ ಶೈಮಾ (39) ಮತ್ತು ಮಗಳು ಆರಾಧನ (10) ಮೃತ ದುರ್ದೈವಿಗಳು. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿನಗರದ ಮನೆಯೊಂದರಲ್ಲಿ‌ ತಾಯಿ-ಮಗಳು ವಾಸ ಮಾಡುತ್ತಿದ್ದರು. ಕೌಟುಂಬಿಕ ಕಲಹ ಶಂಕೆ ಹಿನ್ನೆಲೆ ಎರಡು ದಿನಗಳ ಹಿಂದೆ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ

4:25 PM IST

ತುಮಕೂರು: ಮಹಿಳೆಯ ಸರ ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಹಿಡಿದ ಗ್ರಾಮಸ್ಥರು

ತುಮಕೂರು: ಮಹಿಳೆಯ ಸರ ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದಿದ್ದಾರೆ.  ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಹಾಲುಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ. ದಂಡಿನಶಿವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ‌ ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದ ಖದೀಮರು. ಆದರೆ ದಾರಿ ತಪ್ಪಿ ಮತ್ತೆ ಗ್ರಾಮದೊಳಗೆ ಕಳ್ಳರ ಬಂದಿದ್ದಾರೆ. 

ಈ ವೇಳೆ ಕಳ್ಳರನ್ನು ಹಿಡಿದು ಗ್ರಾಮಸ್ಥರು ಕಟ್ಟಿ ಹಾಕಿದ್ದಾರೆ.  ಕಳ್ಳರಿಗೆ ಹಾಲಗೊಂಡನಹಳ್ಳಿ ಗ್ರಾಮಸ್ಥರು ಗೂಸಾ ನೀಡಿದ್ದಾರೆ. ಹಾಸನ ಜಿಲ್ಲೆ ಗಿಡಗ ಗ್ರಾಮ ಮೂಲದ ಖದೀಮರರನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. 
 
1:33 PM IST

ಈದ್ಗಾ ಮೈದಾನದಲ್ಲಿ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ: ಜಮೀರ್

ಬೆಂಗಳೂರು:; ಬಿಬಿಎಂಪಿ ಮೇಲೆ ತೂಗುಗತ್ತಿಯಂತೆ ತೂಗುತ್ತಿದ್ದ ಈದ್ಗಾ ಮೈದಾನ ವಿವಾದ ಈಗ ಕಂದಾಯವಿಲಾಖೆ ಮುಂದಿದೆ. ಇದು ವಕ್ಫ್ ಬೋರ್ಡ್ ಹಾಗೂ ಬಿಬಿಎಂಪಿ ಆಸ್ತಿಯಲ್ಲ ಎಂದು ಬಿಬಿಎಂಪಿ ಟ್ವಿಸ್ಟ್ ನೀಡಿತ್ತು. ಆದ್ರೂಬಕೂಡ ಚಾ.ಆಟದ ಮೈದಾನ ವಿವಾದ ಯಾಕೋ ಬಗೆಹರಿಯೋಬಲಕ್ಷಣನೇ ಕಾಣ್ತಿಲ್ಲ. ಇಷ್ಟೆಲ್ಲ ಆದ್ಮೇಲೆ ಶಾಸಕ ಜಮೀರ್ ಎಂಟ್ರಿ ಕೊಟ್ಟು ಸ್ವಾತಂತ್ರೋತ್ಸವಕ್ಕೆ ಮಾತದರ ಅನುಮತಿ ಬಿಟ್ರೆ ಗಣೇಶೋತ್ಸವ ಸೇರಿದಂತೆ ಯಾವುದೇ ಧಾರ್ಮಿ ಆಚರಣೆಗೆ ಅನುಮತಿಯಿಲ್ಲ ಎಂಬ ಹೇಳಿಕೆಯ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. 

12:18 PM IST

ನಾವು ಸ್ವಾತಂತ್ರ್ಯ ತಂದು ಕೊಟ್ಟಿದ್ದಕ್ಕೇ ಎಚ್ಡಿಕೆ ಸಿಎಂ ಆಗಿದ್ದು: ಡಿಕೆಶಿ

ಡಿಕೆಶಿವಕುಮಾರ್ ಹೇಳಿಕೆ, ಎಚ್ ಡಿ ಕುಮಾರಸ್ವಾಮಿ ಗೆ ಡಿಕೆಶಿ ತಿರುಗೇಟು. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಕುಮಾರಸ್ವಾಮಿ ಸಿಎಂ ಆಗಲಿ ಅಂತ. ನಾವು ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಸಿಎಂ ಆಗಿದ್ದು, ಯಡಿಯೂರಪ್ಪ ಸಿಎಂ ಆಗಿದ್ದು. ಇಲ್ಲದಿದ್ದರೆ ಇವರೆಲ್ಲ ಸಿಎಂ ಆಗೋಕೆ  ಪ್ರಜಾಪ್ರಭುತ್ವದಲ್ಲಿ ಸಾಧ್ಯ ಆಗ್ತಿತ್ತಾ? ಅವರು ಏನು ಬೇಕಾದರೂ ಹೇಳಲಿ ಈ ಧ್ವಜ ಎಲ್ಲರಿಗೂ ಅಧಿಕಾರ ಕೊಟ್ಟಿದೆ.

10:56 AM IST

ಕಾಡಾನೆಗೆ ರೈತ ಬಲಿ: ಸಕಲೇಶಪುರ ಬಂದ್‌ಗೆ ವಿವಿಧ ಸಂಘಟನೆಗಳ ಕರೆ

 ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾದ ಘಟನೆಯನ್ನು ವಿರೋಧಿಸಿ, ವಿವಿಧ ಸಂಘಟನೆಗಳಿಂದ ಸಕಲೇಶಪುರ ತಾಲೂಕು ಬಂದ್‌ಗೆ ಕರೆ ನೀಡಿದೆ. ನಿರಂತರ ಕಾಡಾನೆ ಹಾವಳಿಯಾದರೂ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಜನರು. ಸ್ಥಳಕ್ಕೆ ಅರಣ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರು ಬರೋವರೆಗೆ ಮೃತದೇಹ ತೆಗೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇಂದು ಮುಂಜಾನೆ ಗದ್ದೆಗೆ ಹೋಗೋ ವೇಳೆ ಕಾಡಾನೆ ದಾಳಿಗೆ ಬಲಿಯಾಗಿರುವ ರೈತ ಮಂಜುನಾಥ್. ಕಳೆದ ಆರು ತಿಂಗಳಲ್ಲಿ ಐದು ಜನರು ಬಲಿಯಾದರೂ ಸರ್ಕಾರದಿಂದ ಸೂಕ್ತ ಕ್ರಮ ಆಗಿಲ್ಲ ಎಂದು ಆಕ್ರೋಶ. ಸಚಿವರುಗಳು ಬರೋ ವರೆಗೂ ಮೃತದೇಹ ತೆಗೆಯಲು ಬಿಡಲ್ಲ ಎಂದು ಸ್ಥಳೀಯರ ಎಚ್ಚರಿಕೆ.

10:41 AM IST

ಬೆಳ್ಳಾರೆ ಹತ್ಯೆ: ಅಧಿಕೃತ ತನಿಖೆ ಚುರುಕುಗೊಳಿಸಿದ ಎನ್ಐಎ

ಬಿಜೆಪಿ ಮುಖಂಡ ಬೆಳ್ಳಾರೆ ಪ್ರವೀಣ್  ಕೊಲೆ ಪ್ರಕರಣದ ತನಿಖೆಯನ್ನು ಆರಂಭಿಸಿದ ಎನ್ಐಎ. ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ ಎಫ್ಐಆರ್ ದಾಖಲು.ಎನ್ಐಎ ದೆಹಲಿ ಕಚೇರಿಯಲ್ಲಿ ಎಫ್ಐಆರ್ ದಾಖಲು. ಎಫ್ಐಆರ್ ದಾಖಲಿಸಿ ಅಧಿಕೃತವಾಗಿ ತನಿಖೆ ಆರಂಭಿಸಿದ ಎನ್ಐಎ. ಬಂಧಿತ ಆರೋಪಿಗಳು ಸೇರಿ ನಾಪತ್ತೆಯಾದವರ ಮೇಲೆ ಎಫ್ಐಆರ್. ಐಪಿಸಿ 302, 34 ಸೇರಿ ಹಲವು ಕಲಂಗಳ ಅಡಿಯಲ್ಲಿ ಎಫ್ಐಆರ್ ದಾಖಲು. ಈಗಾಗಲೇ ಸುಳ್ಯ, ಪುತ್ತೂರಿನಲ್ಲಿ ಬೀಡು ಬಿಟ್ಟಿರುವ ಎನ್ಐಎ ತಂಡ. ನಾಪತ್ತೆಯಾಗಿರೊ ಆರೋಪಿಗಳಿಗೆ ಶೋಧ ಆರಂಭಿಸಿರುವ ಎನ್ಐಎ. ಬೆಳ್ಳಾರೆ ಪೊಲೀಸರಿಂದ ಕೇಸ್ ಫೈಲ್ ಪಡೆದು ತನಿಖೆ ಆರಂಭ. ಪೊಲೀಸ್ ತನಿಖೆಯ ಕೇಸ್ ಫೈಲ್ ಪರಿಶೀಲನೆ. ಕುಟುಂಬದವರ ಹೇಳಿಕೆ, ದೂರುದಾರನ ಹೇಳಿಕೆಗಳ ಪರಿಶೀಲನೆ. ಪೊಲೀಸರು ಸಂಗ್ರಹಿಸಿದ ಸಿಸಿಟಿವಿ ಫೂಟೇಜ್ ಪರಿಶೀಲಿಸಲಾಗುತತ್ಿದೆ. ಬಂಧಿತ ಆರೋಪಿಗಳನ್ನ ವಿಚಾರಣೆ ನಡೆಸಿರೋ ಎನ್ಐಎ ತಂಡ. ಅಲ್ಲದೇ ಈ ಮೊದಲೇ ಮಂಗಳೂರು, ಪುತ್ತೂರು, ಬೆಲ್ಲಾರೆಗೆ ತೆರಳಿತ್ತು ಎನ್ಐಎ. ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಕೂಲಂಕುಷವಾಗಿ ಮಾಹಿತಿ ಕಲೆ ಹಾಕಿದ್ದ ಎನ್ಐಎ. ಬಳಿಕ ಸರ್ಕಾರ ಅಧಿಕೃತವಾಗಿ ಕೇಸ್ ಎನ್ಐಎಗೆ ವರ್ಗಾವಣೆ. ಕೇಸ್ ಎನ್ಐಎಗೆ ಬಂದ ಬಳಿಕ ಅಧಿಕೃತ ತನಿಖೆ ಚುರುಕುಗೊಳಿಸಿದ ಎನ್ಐಎ.

10:09 AM IST

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊಸನೆಲದಲ್ಲಿ ಧರೆ ಕುಸಿತ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ. ಭಾರೀ ಮಳೆ , ಗಾಳಿಗೆ  ಮನೆ ಪಕ್ಕದ ಧರೆ ಕುಸಿತ. ಧರೆ ಕುಸಿತದಿಂದ ಮನೆಗೆ ಹಾನಿ. ಇನ್ನೂ ಮಳೆಯಾದ್ರೆ ಸಂಪೂರ್ಣ ಧರೆ ಕುಸಿದು ಮನೆಗೆ ಬಿಳೋ ಆತಂಕ. ಹೊರನಾಡು ಸಮೀಪದ ಹೊಸನೆಲದಲ್ಲಿ ಘಟನೆ. ಅದಿರಾಜಯ್ಯ ಕುಟುಂಬ ಆತಂಕದಲ್ಲಿ. ಕಳೆದ ತಿಂಗಳ ಮಳೆಯಲ್ಲಿಯೂ ಅದೇ ಜಾಗದಲ್ಲಿ ಕುಸಿದಿದ್ದ ಧರೆ. 

10:05 AM IST

ಹಿಂಡಲಗಾ ಗಣಪತಿ ದೇಗುಲ ಹಿಂಬದಿ ಬುಡಾ ಕಾಂಪ್ಲೆಕ್ಸ್‌ ಆವರಣಕ್ಕೆ ನುಗ್ಗಿದ ನೀರು

ಬೆಳಗಾವಿ: ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಧಾರಾಕಾರ ಮಳೆ. ಹಿಂಡಲಗಾ ಗಣಪತಿ ದೇಗುಲ ಹಿಂಬದಿ ಬುಡಾ ಕಾಂಪ್ಲೆಕ್ಸ್‌ ಆವರಣಕ್ಕೆ ನುಗ್ಗಿದ ನೀರು. ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣಕ್ಕೆ ವ್ಯಾಪಾರ-ವಹಿವಾಟದಲ್ಲಿ ಅಸ್ತವ್ಯಸ್ತ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರ ಆಕ್ರೋಶ. ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಕಿರಾಣಿ ಅಂಗಡಿ ಮಾಲೀಕ ಸಂತೋಷ ಕುರವಿನಕೊಪ್ಪ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರು, ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರ ಆಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಾಂಧಿಚೌಕ್, ಹನುಮಾನ ನಗರ, ಆರ್ಮಿ ರಿಸರ್ವ್ ಲ್ಯಾಂಡ್‌ನಿಂದ ಹರಿದು ಬರುತ್ತಿದೆ ನೀರು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದಕ್ಕೆ ತಗ್ಗು ಪ್ರದೇಶಕ್ಕೆ ನುಗ್ಗುತ್ತಿರುವ ನೀರು. ಮಳೆ ಹೆಚ್ಚಾದರೆ ಮಳಿಗೆ ಒಳಗೂ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ. ಕಿರಾಣಿ ಅಂಗಡಿ, ಹೋಟೆಲ್, ಚಿನ್ನದ ಮಳಿಗೆ, ಇಲೆಕ್ಟ್ರಾನಿಕ್ ಶಾಪ್, ಜನರಲ್ ಸ್ಟೋರ್ ಮಾಲೀಕರು ಆತಂಕದಲ್ಲಿದ್ದಾರೆ. ಈಗಲೇ ನೀರು ಹರಿದು ಹೋಗಲು ಸೂಕ್ತ ನಾಲಾ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ. ಶಾಸಕ ಅನಿಲ್ ಬೆನಕೆ,  ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯರ ಆಗ್ರಹಿಸುತ್ತಿದ್ದಾರೆ. 

10:00 AM IST

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರ

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರ. ಚಾಮರಾಜಪೇಟೆ ಮೈದಾನಕ್ಕೆ ಭಾರಿ ಪೊಲೀಸ್ ಭದ್ರತೆ. ಮೈದಾನವನ್ನು ಸರ್ಕಾರದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿರೋ ಬಿಬಿಎಂಪಿ. ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ಮೈದಾನದಲ್ಲಿ ಪೊಲೀಸ್ ಭದ್ರತೆ ಹಾಗೂ ಕೆಎಸ್ಆರ್‌ಪಿ ತುಕಡಿಗಳು ನಿಯೋಜನೆ. ಮೈದಾನದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಕೈಗೊಳ್ಳಲಾಗಿದೆ. 

9:48 AM IST

ಈ ಬಾರಿಯೂ ಗಣೇಶೋತ್ಸವಕ್ಕೆ ಎದುರಾಗುತ್ತಾ ವಿಘ್ನ?

ವಾರ್ಡಿಗೆ ಒಂದೇ ಗಣೇಶ ನಿಯಮ ಜಾರಿಗೆ ತರುತ್ತಾ ಬಿಬಿಎಂಪಿ? ಇನ್ನು ಗಣೇಶೋತ್ಸವಕ್ಕೆ 20ಕ್ಕೂ ಅಧಿಕ ದಿನಗಳು ಬಾಕಿ ಇರುವಾಗಲೇ ವಿವಾದಕ್ಕೆ ದಾರಿ ಮಾಡಿಕೊಡ್ತಿಯ್ಯಾ ಬಿಬಿಎಂಪಿ? ಸದ್ದಿಲ್ಲದೆ ಗಣೇಶೋತ್ಸವಕ್ಕೆ ಒಂದಿಷ್ಟು ನಿಯಮಗಳನ್ನು ಸಿದ್ದಮಾಡಿಕೊಳ್ಳುತ್ತಿದೆ ಬಿಬಿಎಂಪಿ. ಈ ಬಾರಿ ಎಲ್ಲಾ ಕಡೆಗಳಲ್ಲಿ ಗಣಪತಿ ಕೂರಿಸಿ ಮೆರವಣಿಗೆ ನಡೆಸಲು ಅವಕಾಶ ಕೊಡುವಂತೆ ಒತ್ತಡ. ಕಳೆದ ಬಾರಿ ಬಿಬಿಎಂಪಿ ತಂದ ಈ ನಿಯಮ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಹಿಂದೂ ಪರ ಸಂಘಟನೆಗಳು ಗಣೇಶನ ಮೂರ್ತಿಯನ್ನ ಬಿಬಿಎಂಪಿ ಕೇಂದ್ರ ಕಚೇರಿಗೆ ತಂದು ಬೃಹತ್ ಪ್ರತಿಭಟನೆಯನ್ನು ಮಾಡಿ ಆಕ್ರೋಶ ಹೊರ ಹಾಕಿದರು. ಇದೀಗ ಈ ಬಾರಿಯೂ ಅದೇ ನಿಯಮ ಜಾರಿ ಮಾಡಿದರೆ ಮತ್ತೊಂದು ಸುತ್ತಿನ ಕೋಲಾಹಲ ಸಾಧ್ಯತೆ. ಈ ಬಾರಿಯೂ ಅದ್ಧೂರಿ ವಿನಾಯಕನ ಉತ್ಸವಕ್ಕೆ ಸಿಗುತ್ತಾ ಅನುಮತಿ? ವಾರ್ಡ್​ಗೆ ಒಂದೇ ಗಣಪತಿ  ಮೂರ್ತಿ ಫಿಕ್ಸ್ ಮಾಡುತ್ತಾ ಪಾಲಿಕೆ? ಈ ಬಾರಿ ಬಹಿರಂಗ ಗಣೇಶೋತ್ಸವಕ್ಕೆ ಸಾರ್ವಜನಿಕ ರಿಂದ ಭಾರಿ ಬೇಡಿಕೆ. ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟ. 

9:46 AM IST

ಕೋವಿಡ್-19: 24 ಗಂಟೆಗಳಲ್ಲಿ ರಾಜ್ಯದಲ್ಲಿ 1,837 ಹೊಸ ಪ್ರಕರಣ ಪತ್ತೆ, 4 ಸಾವು

ದೇಶಾದ್ಯಂತ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಸೋಂಕಿನ ಹಾವಳಿ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1,837 ಹೊಸ ಪ್ರಕರಣ ಪತ್ತೆಯಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಇಲ್ಲಿ ಕ್ಲಿಕ್ಕಿಸಿ

9:40 AM IST

Raichuru: ಕೃಷ್ಣಾಮೃಗಗಳ ಕಾಟಕ್ಕೆ ಬೇಸತ್ತ ಅನ್ನದಾತರು

ರಾಯಚೂರು: ಬಿಸಿಲುನಾಡಿನಲ್ಲಿ ಈಗ ಕೃಷ್ಣಾಮೃಗಗಳ ಕಾಟ ಶುರು. ರಾಯಚೂರು ತಾಲೂಕಿನ ರೈತರಿಗೆ ಕೃಷ್ಣಮೃಗಗಳ ಕಾಟ. ಮೊಳೆಯೊಡೆದ ಬೆಳೆ ತಿನ್ನುತ್ತಿರುವ ಕೃಷ್ಣ ಮೃಗಗಳ ಗುಂಪು. ಕೃಷ್ಣಾಮೃಗಗಳ ಕಾಟಕ್ಕೆ ಬೇಸತ್ತ ಅನ್ನದಾತರು. ರೈತರು ಬಿತ್ತನೆ ಮಾಡಿದ ಹತ್ತಿ, ತೊಗರಿ ಬೆಳೆ ಉಳಿಸಿಕೊಳ್ಳಲು ಹರಸಾಹಸ. ರೈತರ ಜಮೀನಿಗೆ ಎಂಟ್ರಿ ‌ಕೊಟ್ಟು ಬೆಳೆ ತಿಂದು ಹೋಗುತ್ತಿರುವ ಕೃಷ್ಣಾಮೃಗಗಳು. ಜಮೀನಿನ ಬಳಿ ಕೃಷ್ಣಾಮೃಗಗಳನ್ನ ಕಾಯುವಂತೆ ಆಗಿದೆ ರೈತರ ಪಾಡು. ಕೃಷ್ಣಾಮೃಗಗಳನ್ನ ಹಿಡಿಯುವಂತೆ ರೈತರು ಅರಣ್ಯ ಇಲಾಖೆಗೆ ದೂರು. ರೈತರು ದೂರು ನೀಡಿದ್ರೂ ಕೃಷ್ಣಾಮೃಗಗಳ ಹಿಡಿಯಲು ಮುಂದಾದ್ದ ಅರಣ್ಯ ಇಲಾಖೆ.

9:38 AM IST

ಕಾವೇರಿ ಪ್ರವಾಹದಲ್ಲಿ ಸ್ಮಶಾನಕ್ಕೆ ಹೋಗಲು ಜನರ ಪರದಾಟ

ಮಂಡ್ಯ: ಪ್ರವಾಹದ ನಡುವೆಯೇ ಶವವೊತ್ತು ಸ್ಮಶಾನಕ್ಕೆ ತೆರಳಿದ ಜನರು. ಎದೆ ಮಟ್ಟದ ನೀರಿನಲ್ಲಿ ಶವ ಹೊತ್ತು ನಡೆದ ಜನ.ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಘಟನೆ. ಕಾವೇರಿ ಭೋರ್ಗರೆತಕ್ಕೆ ಜಲಾವೃತವಾಗಿರುವ ಸ್ಮಶಾನಕ್ಕೆ ತೆರಳುವ ರಸ್ತೆ. ನಿನ್ನೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದ ಸುಲೋಚನ (48) ಎಂಬ ಮಹಿಳೆ. ಮಹಿಳೆಯ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಜನರ ಪರದಾಟ. ಕೊನೆಗೆ ಪ್ರವಾಹದ ನೀರಲ್ಲೆ ಮಹಿಳೆಯ ಶವ ತೆಗೆದುಕೊಂಡು‌ ಹೋದ ಗ್ರಾಮಸ್ಥರು. ಪ್ರತಿ ಬಾರಿ ಕಾವೇರಿ ಪ್ರವಾಹ ಬಂದಾಗಲೆಲ್ಲಾ ಮುಳುಗಡೆ ಆಗುವ ರಸ್ತೆ.

9:37 AM IST

ಸಕಲೇಶಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವ್ಯಾಪಕ‌ ಮಳೆ ಹಿನ್ನೆಲೆಯಲ್ಲಿ ಇಂದು ಸಕಲೇಶಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ ಹಾಗೂ 10ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ. ಸಕಲೇಶಪುರ ತಹಸಿಲ್ದಾರ್ ಜೈಕುಮಾರ್‌ರಿಂದ ರಜೆ ಘೋಷಣೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಿಸಿದ ತಹಸಿಲ್ದಾರ್ ಜೈಕುಮಾರ್.

9:35 AM IST

ವರುಣ ಕ್ಷೇತ್ರದಲ್ಲಿಂದು ಸಿದ್ದರಾಮಯ್ಯ ಸಂಚಾರ

ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಪಾದಯಾತ್ರೆ.  ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಕಾರ್ಯಕ್ರಮ. ಕಾಂಗ್ರೆಸ್ ಗ್ರಾಮಾಂತರ ಸಮಿತಿಯಿಂದ ಆಯೋಜನೆ. ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾವ್ ಜನ್ಮ ಸ್ಥಳವಾದ ತಗಡೂರು. ವರುಣ ಕ್ಷೇತ್ರದ ದೊಡ್ಡ ಗ್ರಾಮಗಳಲ್ಲಿ ಒಂದು. ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಕ್ಷೇತ್ರ. 
ಮುಂದಿನ ಚುನಾವಣೆಗೆ ವರುಣದಿಂದ ಸ್ಪರ್ಧಿಸಲು ಒತ್ತಡ. ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದ ಸಿದ್ದರಾಮಯ್ಯ.

9:35 AM IST

ಕಬಿನಿ‌ ಜಲಾಶಯದಿಂದ ಮತ್ತೆ ಹೆಚ್ಚು ನೀರು ಹೊರಕ್ಕೆ

ಕಬಿನಿ ಜಲಾಶಯದ ಒಳ ಹರಿವು 24,932 ಕ್ಯೂಸೆಕ್. ಜಲಾಶಯದ ಹೊರಹರಿವು 26,000 ಕ್ಯೂಸೆಕ್. 2284 ಅಡಿ ಎತ್ತರದ ಕಬಿನಿ ಜಲಾಶಯ. ಜಲಾಶಯದ ಇಂದಿನ ನೀರಿನ ಮಟ್ಟ 2282.94 ಅಡಿ.
ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ. ಜಲಾಶಯದಲ್ಲಿ ಇಂದು 18.82 ಟಿಎಂಸಿ ನೀರು ಸಂಗ್ರಹ. ಮೈಸೂರು ಜಿಲ್ಲೆ ಎಚ್‌ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯ.

9:33 AM IST

ಎದೆ ಮಟ್ಟದ ನೀರಿನಲ್ಲಿ ಸಾಗಿ ಅಂತ್ಯಸಂಸ್ಕಾರ

ತೀರ್ಥಹಳ್ಳಿ: ಗೃಹಸಚಿವರ ಕ್ಷೇತ್ರದಲ್ಲಿ ಶವ ಸಂಸ್ಕಾರಕ್ಕೆ ಪರದಾಟ!  ಮಳೆಗಾಲ ಬಂತೆಂದರೆ ಸಾಕು ಜನರ ಪರದಾಟ ಆರಂಭ.  ಮಳೆಗಾಲದಲ್ಲಿ ಬದುಕಲೂ ಕಷ್ಟ.. ಸತ್ತರೂ ಕಷ್ಟ. ಇಲ್ಲಿ ಸತ್ತವರ ಅಂತಿಮ ಯಾತ್ರೆ ಮಾತ್ರ ನರಕಯಾತನೆ! ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತೀರ್ಥಹಳ್ಳಿ ಕ್ಷೇತ್ರದ ಗ್ರಾಮವೊಂದರ ಪರಿಸ್ಥಿತಿ. ತಾಲೂಕಿನ ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ನಡೆದ ಘಟನೆ.  ಮೃತ ದೇಹವನ್ನು ಗ್ರಾಮಸ್ಥರು ನೀರು ತುಂಬಿದ ರಸ್ತೆಯಲ್ಲಿ ಹೊತ್ತುಕೊಂಡು ಹೋಗ ಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕೋಡ್ಲು ಗ್ರಾಮದ ತಮ್ಮಯ್ಯ ಗೌಡ ವಯೋ ಸಹಜವಾಗಿ ಸಾವನ್ನಪ್ಪಿದ್ದರು.  ಇವರ ಅಂತ್ಯಕ್ರಿಯೆಯ ನಡೆಸಲು ಊರ ಗ್ರಾಮಸ್ಥರು ಶವ ಹೊತ್ತುಕೊಂಡು ಊರ ಸ್ಮಶಾನಕ್ಕೆ ತಂದಿದ್ದಾರೆ.  ಗ್ರಾಮದಿಂದ ಸ್ಮಶಾನಕ್ಕೆ ಬರಲು ಸರಿಯಾದ ರಸ್ತೆಯಿಲ್ಲ.

6:42 PM IST:

ಉಡುಪಿ: ನೀರಿನ ರಭಸಕ್ಕೆ  ಬಾಲಕಿ  ಕೊಚ್ಚಿ ಹೋಗಿದ್ದಾಳೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿಯಲ್ಲಿ ಘಟನೆ ನಡೆದಿದೆ. ಸನ್ನಿಧಿ (7 ) ನೀರುಪಾಲಾದ ಬಾಲಕಿ.  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯ ಕಲಿಯುತ್ತಿದ್ದ ಸನ್ನಿಧಿ ಶಾಲೆಯಿಂದ ಮನೆಗೆ ಬರುವಾಗ ಈ ಘಟನೆ ನಡೆದಿದೆ. ಕಾಲು ಸಂಕ ದಾಟುವಾಗ ಬಾಲಕಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ನೀರಿನಲ್ಲಿ ಕೊಚ್ಚಿ ಹೋದ ಬಾಲಕಿಗಾಗಿ ಗ್ರಾಮಸ್ಥರು  ಹುಡುಕಾಟ ಮುಂದುವರೆಸಿದ್ದಾರೆ. 

6:12 PM IST:

ವಿಜಯನಗರ: ಧ್ವಜಾರೋಹಣಕ್ಕೆ ಸರ್ಕಾರ.. ಮತ್ತೊಮ್ಮೆ ಉಸ್ತುವಾರಿಗಳು ಬದಲು‌ ಮಾಡಿದೆ.   ಆ.15 ರಂದು ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣಕ್ಕೆ ಸಚಿವರ ನೇಮಕ.  ವಿಜಯನಗರಕ್ಕೆ ಆನಂದ್ ಸಿಂಗ್, ಕೊಪ್ಪಳಕ್ಕೆ ಶಶಿಕಲಾ ಜೊಲ್ಲೆ, ಮಂಡ್ಯಕ್ಕೆ ಆರ್. ಅಶೋಕ್ ಧ್ವಜಾರೋಹಣ ಮಾಡಲಿದ್ದಾರೆ.  ಧ್ವಜಾರೋಹಣ ಉಸ್ತುವಾರಿಗಾಗಿ ಪಟ್ಟು ಹಿಡಿದಿದ್ದ ಸಚಿವ ಆನಂದ ಸಿಂಗ್. ವಿಜಯನಗರದಲ್ಲಿ 405 ಅಡಿ ಎತ್ತರದ ಧ್ವಜಸ್ತಂಬ ನಿರ್ಮಾಣ ಮಾಡಲಾಗುತ್ತಿದೆ.  ಆ.15 ರಂದು ಸಚಿವ ಆನಂದ್ ಸಿಂಗ್ 405 ಅಡಿ ಎತ್ತರದ ಧ್ವಜಾರೋಹಣ ಮಾಡಲಿದ್ದಾರೆ.  ಇದೇ ಧ್ವಜಸ್ಥಂಬದಲ್ಲಿ ಧ್ವಜಾರೋಹಣ ಮಾಡಬೇಕೆಂದು ಆನಂದ್ ಸಿಂಗ್ ‌ಹಠ ಮಾಡಿದ್ದರು. ಕೊನೆಗೂ ಆನಂದ ಸಿಂಗ್ ಹಠಕ್ಕೆ ಸರ್ಕಾರ ಮಣಿದಿದೆ. 

5:53 PM IST:

ಹಾಸನ: ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಶಾಸಕರು ಸ್ಥಳೀಯ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.  ಬಿಜೆಪಿ ಮುಖಂಡ ಎನ್‌.ಆರ್. ಸಂತೋಷ್ ನೇತೃತ್ವದಲ್ಲಿ ಅರಸೀಕೆರೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ. 

ಹಾಸನ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಪಿಪಿ ವೃತ್ತದವರೆಗೂ ಮೆರವಣಿಗೆ ಸಾಗಿದ್ದು, ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಮಳೆಯಲ್ಲಿಯೇ ಪ್ರತಿಭಟನೆ ಮಾಡಿದ್ದಾರೆ.  ಪ್ರತಿಭಟನೆಯಲ್ಲಿ ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ರವಿಕುಮಾರ್, ನಗರಸಭೆ ಅಧ್ಯಕ್ಷ ಗಿರೀಶ್ ಭಾಗಿಯಾಗಿದ್ದರು. 

5:25 PM IST:

ಕೊಡಗು: ಕೊಡಗಿನ ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಭೇಟಿ ನೀಡಿದರು. ಮಳೆಹಾನಿ‌ ವೀಕ್ಷಣೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಸ್ತುವಾರಿ ಸಚಿವರು "ಮನೆ ಹಾನಿಯಾದ ಸಂತ್ರಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ, ಕುಶಾಲನಗರದ ಕುವೆಂಪು ಸಾಯಿ ಬಡಾವಣೆಗೆ ನೀರು ನುಗ್ಗಿದ್ದು, ಅಲ್ಲಿಗೂ ಭೇಟಿ ನೀಡಲಾಗಿದೆ, ಆ ಬಡಾವಣೆಗಳಿಗೆ ತಡೆಗೋಡೆ ನಿರ್ಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ, ಅದಕ್ಕಾಗಿ ಈಗಾಗಲೇ ಐದು ಕೋಟೆ ಮೀಸಲು, ಮಳೆ ನಿಂತ ಬಳಿಕ ತಡೆಗೋಡೆ ಕಾಮಗಾರಿ" ಎಂದರು

"ಈ ವರ್ಷ ಕಾವೇರಿ ನದಿಯ ಪ್ರವಾಹದಿಂದ ಅಷ್ಟೊಂದು ಹಾನಿಯಾಗಿಲ್ಲ, ಕೊಡಗಿನಲ್ಲಿ ಜಲಸ್ಫೋಟ ಆಗುತ್ತಿದ್ದರೂ ಇದುವರೆಗೆ ತಜ್ಞರ ತಂಡ ಬಾರದ ವಿಚಾರ, ಭೂಕಂಪನ ಮತ್ತು ಭೂಕುಸಿತಕ್ಕೆ ಸಂಬಂಧವಿದೆಯಾ ಎಂದು ಪರಿಶೀಲನೆ ಮಾಡಬೇಕಾಗಿದೆ,  ಅದಕ್ಕೆ ಸಂಬಂಧಿಸಿದ ವಿಶ್ವವಿದ್ಯಾನಿಲಯ ಪ್ರೊಫೇಸರ್ ಗಳ ಜೊತೆಗೆ ಚರ್ಚಿಸಲಾಗಿದೆ, ಮಳೆ ಬರುತ್ತಿರುವುದರಿಂದ ಈಗ ಪರಿಶೀಲನೆ ಸಾಧ್ಯವಿಲ್ಲ, ಮಳೆ ಮುಗಿದ ತಜ್ಞರು ಬರುತ್ತಾರೆ, ಇದಕ್ಕೆ ಶಾಶ್ವತ ಪರಿಹಾರ ಸಿಗುತ್ತಾ ನೋಡಬೇಕಾಗಿದೆ" ಎಂದು ಪ್ರವಾಹ ಭೀತಿ ಎದುರಿಸುತ್ತಿರುವ ಸ್ಥಳಗಳ ಪರಿಶೀಲಿಸಿ ಸಚಿವ ಬಿ ಸಿ ನಾಗೇಶ್ ಹೇಳಿದರು

5:19 PM IST:

 ಹವಾಮಾನ ವೈಪರಿತ್ಯ ಉಂಟಾಗಿರುವುದು ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೀನು ಖರೀದಿ ಮಾಡುವ ಗ್ರಾಹಕರ ಮೇಲೂ ಪರಿಣಾಮ ಬೀರಿದ್ದು ಮೀನಿನ ದರ ಗಗನಕ್ಕೇರಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

5:08 PM IST:

ರಾಯಚೂರು: ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದ ಬಳಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರಿಬ್ಬರು ಕೊಪ್ಪಳ ಜಿಲ್ಲೆ 
ಗಂಗಾವತಿ ತಾಲೂಕಿನ ಮುಷ್ಟೂರು ಗ್ರಾಮದ ದುರಗಪ್ಪ ತಂ. ಬಸ್ಸಪ್ಪ (42), ಈರಣ್ಣ ತಂ. ಬಸ್ಸಪ್ಪ ಕಬ್ಬೇರ್ (38)  ಎಂದು ಗುರುತಿಸಲಾಗಿದೆ.

ಮೃತರು ಶ್ರಾವಣ ಮಾಸದ 2ನೇ ಸೋಮವಾರದ ಅಂಗವಾಗಿ ಸುಕ್ಷೇತ್ರ ಮಾಡಶಿರವಾರ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,ಗಂಗಾವತಿ ತಾಲೂಕಿನ ಮುಷ್ಟೂರು ಗ್ರಾಮಕ್ಕೆ  ತೆರಳುತ್ತಿರುವಾಗ ಬೈಕ್ ಗೆ ಬಸ್ ಡಿಕ್ಕಿ ಹೊಡೆದು ‌ಇಬ್ಬರು ರಸ್ತೆಯಲ್ಲಿಯೇ ಪ್ರಾಣಬಿಟ್ಟಿದ್ದಾರೆ.

4:47 PM IST:

ಬೆಂಗಳೂರು: ತಾಯಿ-ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು ಈ ಸಂಬಂಧ ಬನಶಂಕರಿ ಪೊಲೀಸರು ಸ್ಥಳಕ್ಕೆ‌ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ಯಾರು ಇಲ್ಲದಿರುವಾಗ ಎರಡು ದಿನಗಳ ಹಿಂದೆ ತಾಯಿ-ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  ದಂತ ವೈದ್ಯೆಯಾಗಿರುವ ಕೊಡಗಿನ ವಿರಾಜಪೇಟೆ ಮೂಲದ ಶೈಮಾ (39) ಮತ್ತು ಮಗಳು ಆರಾಧನ (10) ಮೃತ ದುರ್ದೈವಿಗಳು. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿನಗರದ ಮನೆಯೊಂದರಲ್ಲಿ‌ ತಾಯಿ-ಮಗಳು ವಾಸ ಮಾಡುತ್ತಿದ್ದರು. ಕೌಟುಂಬಿಕ ಕಲಹ ಶಂಕೆ ಹಿನ್ನೆಲೆ ಎರಡು ದಿನಗಳ ಹಿಂದೆ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ

4:25 PM IST:

ತುಮಕೂರು: ಮಹಿಳೆಯ ಸರ ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಗ್ರಾಮಸ್ಥರು ಹಿಡಿದಿದ್ದಾರೆ.  ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಹಾಲುಗೊಂಡನಹಳ್ಳಿಯಲ್ಲಿ ಘಟನೆ ನಡೆದಿದೆ. ದಂಡಿನಶಿವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ‌ ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದ ಖದೀಮರು. ಆದರೆ ದಾರಿ ತಪ್ಪಿ ಮತ್ತೆ ಗ್ರಾಮದೊಳಗೆ ಕಳ್ಳರ ಬಂದಿದ್ದಾರೆ. 

ಈ ವೇಳೆ ಕಳ್ಳರನ್ನು ಹಿಡಿದು ಗ್ರಾಮಸ್ಥರು ಕಟ್ಟಿ ಹಾಕಿದ್ದಾರೆ.  ಕಳ್ಳರಿಗೆ ಹಾಲಗೊಂಡನಹಳ್ಳಿ ಗ್ರಾಮಸ್ಥರು ಗೂಸಾ ನೀಡಿದ್ದಾರೆ. ಹಾಸನ ಜಿಲ್ಲೆ ಗಿಡಗ ಗ್ರಾಮ ಮೂಲದ ಖದೀಮರರನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. 
 
1:33 PM IST:

ಬೆಂಗಳೂರು:; ಬಿಬಿಎಂಪಿ ಮೇಲೆ ತೂಗುಗತ್ತಿಯಂತೆ ತೂಗುತ್ತಿದ್ದ ಈದ್ಗಾ ಮೈದಾನ ವಿವಾದ ಈಗ ಕಂದಾಯವಿಲಾಖೆ ಮುಂದಿದೆ. ಇದು ವಕ್ಫ್ ಬೋರ್ಡ್ ಹಾಗೂ ಬಿಬಿಎಂಪಿ ಆಸ್ತಿಯಲ್ಲ ಎಂದು ಬಿಬಿಎಂಪಿ ಟ್ವಿಸ್ಟ್ ನೀಡಿತ್ತು. ಆದ್ರೂಬಕೂಡ ಚಾ.ಆಟದ ಮೈದಾನ ವಿವಾದ ಯಾಕೋ ಬಗೆಹರಿಯೋಬಲಕ್ಷಣನೇ ಕಾಣ್ತಿಲ್ಲ. ಇಷ್ಟೆಲ್ಲ ಆದ್ಮೇಲೆ ಶಾಸಕ ಜಮೀರ್ ಎಂಟ್ರಿ ಕೊಟ್ಟು ಸ್ವಾತಂತ್ರೋತ್ಸವಕ್ಕೆ ಮಾತದರ ಅನುಮತಿ ಬಿಟ್ರೆ ಗಣೇಶೋತ್ಸವ ಸೇರಿದಂತೆ ಯಾವುದೇ ಧಾರ್ಮಿ ಆಚರಣೆಗೆ ಅನುಮತಿಯಿಲ್ಲ ಎಂಬ ಹೇಳಿಕೆಯ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. 

12:18 PM IST:

ಡಿಕೆಶಿವಕುಮಾರ್ ಹೇಳಿಕೆ, ಎಚ್ ಡಿ ಕುಮಾರಸ್ವಾಮಿ ಗೆ ಡಿಕೆಶಿ ತಿರುಗೇಟು. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿದ್ದೇ ಕುಮಾರಸ್ವಾಮಿ ಸಿಎಂ ಆಗಲಿ ಅಂತ. ನಾವು ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಸಿಎಂ ಆಗಿದ್ದು, ಯಡಿಯೂರಪ್ಪ ಸಿಎಂ ಆಗಿದ್ದು. ಇಲ್ಲದಿದ್ದರೆ ಇವರೆಲ್ಲ ಸಿಎಂ ಆಗೋಕೆ  ಪ್ರಜಾಪ್ರಭುತ್ವದಲ್ಲಿ ಸಾಧ್ಯ ಆಗ್ತಿತ್ತಾ? ಅವರು ಏನು ಬೇಕಾದರೂ ಹೇಳಲಿ ಈ ಧ್ವಜ ಎಲ್ಲರಿಗೂ ಅಧಿಕಾರ ಕೊಟ್ಟಿದೆ.

10:56 AM IST:

 ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಬಲಿಯಾದ ಘಟನೆಯನ್ನು ವಿರೋಧಿಸಿ, ವಿವಿಧ ಸಂಘಟನೆಗಳಿಂದ ಸಕಲೇಶಪುರ ತಾಲೂಕು ಬಂದ್‌ಗೆ ಕರೆ ನೀಡಿದೆ. ನಿರಂತರ ಕಾಡಾನೆ ಹಾವಳಿಯಾದರೂ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಜನರು. ಸ್ಥಳಕ್ಕೆ ಅರಣ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರು ಬರೋವರೆಗೆ ಮೃತದೇಹ ತೆಗೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇಂದು ಮುಂಜಾನೆ ಗದ್ದೆಗೆ ಹೋಗೋ ವೇಳೆ ಕಾಡಾನೆ ದಾಳಿಗೆ ಬಲಿಯಾಗಿರುವ ರೈತ ಮಂಜುನಾಥ್. ಕಳೆದ ಆರು ತಿಂಗಳಲ್ಲಿ ಐದು ಜನರು ಬಲಿಯಾದರೂ ಸರ್ಕಾರದಿಂದ ಸೂಕ್ತ ಕ್ರಮ ಆಗಿಲ್ಲ ಎಂದು ಆಕ್ರೋಶ. ಸಚಿವರುಗಳು ಬರೋ ವರೆಗೂ ಮೃತದೇಹ ತೆಗೆಯಲು ಬಿಡಲ್ಲ ಎಂದು ಸ್ಥಳೀಯರ ಎಚ್ಚರಿಕೆ.

10:41 AM IST:

ಬಿಜೆಪಿ ಮುಖಂಡ ಬೆಳ್ಳಾರೆ ಪ್ರವೀಣ್  ಕೊಲೆ ಪ್ರಕರಣದ ತನಿಖೆಯನ್ನು ಆರಂಭಿಸಿದ ಎನ್ಐಎ. ಪ್ರವೀಣ್ ನೆಟ್ಟಾರು ಕೊಲೆ ಸಂಬಂಧ ಎಫ್ಐಆರ್ ದಾಖಲು.ಎನ್ಐಎ ದೆಹಲಿ ಕಚೇರಿಯಲ್ಲಿ ಎಫ್ಐಆರ್ ದಾಖಲು. ಎಫ್ಐಆರ್ ದಾಖಲಿಸಿ ಅಧಿಕೃತವಾಗಿ ತನಿಖೆ ಆರಂಭಿಸಿದ ಎನ್ಐಎ. ಬಂಧಿತ ಆರೋಪಿಗಳು ಸೇರಿ ನಾಪತ್ತೆಯಾದವರ ಮೇಲೆ ಎಫ್ಐಆರ್. ಐಪಿಸಿ 302, 34 ಸೇರಿ ಹಲವು ಕಲಂಗಳ ಅಡಿಯಲ್ಲಿ ಎಫ್ಐಆರ್ ದಾಖಲು. ಈಗಾಗಲೇ ಸುಳ್ಯ, ಪುತ್ತೂರಿನಲ್ಲಿ ಬೀಡು ಬಿಟ್ಟಿರುವ ಎನ್ಐಎ ತಂಡ. ನಾಪತ್ತೆಯಾಗಿರೊ ಆರೋಪಿಗಳಿಗೆ ಶೋಧ ಆರಂಭಿಸಿರುವ ಎನ್ಐಎ. ಬೆಳ್ಳಾರೆ ಪೊಲೀಸರಿಂದ ಕೇಸ್ ಫೈಲ್ ಪಡೆದು ತನಿಖೆ ಆರಂಭ. ಪೊಲೀಸ್ ತನಿಖೆಯ ಕೇಸ್ ಫೈಲ್ ಪರಿಶೀಲನೆ. ಕುಟುಂಬದವರ ಹೇಳಿಕೆ, ದೂರುದಾರನ ಹೇಳಿಕೆಗಳ ಪರಿಶೀಲನೆ. ಪೊಲೀಸರು ಸಂಗ್ರಹಿಸಿದ ಸಿಸಿಟಿವಿ ಫೂಟೇಜ್ ಪರಿಶೀಲಿಸಲಾಗುತತ್ಿದೆ. ಬಂಧಿತ ಆರೋಪಿಗಳನ್ನ ವಿಚಾರಣೆ ನಡೆಸಿರೋ ಎನ್ಐಎ ತಂಡ. ಅಲ್ಲದೇ ಈ ಮೊದಲೇ ಮಂಗಳೂರು, ಪುತ್ತೂರು, ಬೆಲ್ಲಾರೆಗೆ ತೆರಳಿತ್ತು ಎನ್ಐಎ. ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಕೂಲಂಕುಷವಾಗಿ ಮಾಹಿತಿ ಕಲೆ ಹಾಕಿದ್ದ ಎನ್ಐಎ. ಬಳಿಕ ಸರ್ಕಾರ ಅಧಿಕೃತವಾಗಿ ಕೇಸ್ ಎನ್ಐಎಗೆ ವರ್ಗಾವಣೆ. ಕೇಸ್ ಎನ್ಐಎಗೆ ಬಂದ ಬಳಿಕ ಅಧಿಕೃತ ತನಿಖೆ ಚುರುಕುಗೊಳಿಸಿದ ಎನ್ಐಎ.

10:09 AM IST:

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ. ಭಾರೀ ಮಳೆ , ಗಾಳಿಗೆ  ಮನೆ ಪಕ್ಕದ ಧರೆ ಕುಸಿತ. ಧರೆ ಕುಸಿತದಿಂದ ಮನೆಗೆ ಹಾನಿ. ಇನ್ನೂ ಮಳೆಯಾದ್ರೆ ಸಂಪೂರ್ಣ ಧರೆ ಕುಸಿದು ಮನೆಗೆ ಬಿಳೋ ಆತಂಕ. ಹೊರನಾಡು ಸಮೀಪದ ಹೊಸನೆಲದಲ್ಲಿ ಘಟನೆ. ಅದಿರಾಜಯ್ಯ ಕುಟುಂಬ ಆತಂಕದಲ್ಲಿ. ಕಳೆದ ತಿಂಗಳ ಮಳೆಯಲ್ಲಿಯೂ ಅದೇ ಜಾಗದಲ್ಲಿ ಕುಸಿದಿದ್ದ ಧರೆ. 

10:05 AM IST:

ಬೆಳಗಾವಿ: ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಧಾರಾಕಾರ ಮಳೆ. ಹಿಂಡಲಗಾ ಗಣಪತಿ ದೇಗುಲ ಹಿಂಬದಿ ಬುಡಾ ಕಾಂಪ್ಲೆಕ್ಸ್‌ ಆವರಣಕ್ಕೆ ನುಗ್ಗಿದ ನೀರು. ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣಕ್ಕೆ ವ್ಯಾಪಾರ-ವಹಿವಾಟದಲ್ಲಿ ಅಸ್ತವ್ಯಸ್ತ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರ ಆಕ್ರೋಶ. ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಕಿರಾಣಿ ಅಂಗಡಿ ಮಾಲೀಕ ಸಂತೋಷ ಕುರವಿನಕೊಪ್ಪ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರು, ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರ ಆಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಾಂಧಿಚೌಕ್, ಹನುಮಾನ ನಗರ, ಆರ್ಮಿ ರಿಸರ್ವ್ ಲ್ಯಾಂಡ್‌ನಿಂದ ಹರಿದು ಬರುತ್ತಿದೆ ನೀರು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದಕ್ಕೆ ತಗ್ಗು ಪ್ರದೇಶಕ್ಕೆ ನುಗ್ಗುತ್ತಿರುವ ನೀರು. ಮಳೆ ಹೆಚ್ಚಾದರೆ ಮಳಿಗೆ ಒಳಗೂ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ. ಕಿರಾಣಿ ಅಂಗಡಿ, ಹೋಟೆಲ್, ಚಿನ್ನದ ಮಳಿಗೆ, ಇಲೆಕ್ಟ್ರಾನಿಕ್ ಶಾಪ್, ಜನರಲ್ ಸ್ಟೋರ್ ಮಾಲೀಕರು ಆತಂಕದಲ್ಲಿದ್ದಾರೆ. ಈಗಲೇ ನೀರು ಹರಿದು ಹೋಗಲು ಸೂಕ್ತ ನಾಲಾ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ. ಶಾಸಕ ಅನಿಲ್ ಬೆನಕೆ,  ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯರ ಆಗ್ರಹಿಸುತ್ತಿದ್ದಾರೆ. 

10:00 AM IST:

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರ. ಚಾಮರಾಜಪೇಟೆ ಮೈದಾನಕ್ಕೆ ಭಾರಿ ಪೊಲೀಸ್ ಭದ್ರತೆ. ಮೈದಾನವನ್ನು ಸರ್ಕಾರದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿರೋ ಬಿಬಿಎಂಪಿ. ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ಮೈದಾನದಲ್ಲಿ ಪೊಲೀಸ್ ಭದ್ರತೆ ಹಾಗೂ ಕೆಎಸ್ಆರ್‌ಪಿ ತುಕಡಿಗಳು ನಿಯೋಜನೆ. ಮೈದಾನದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಕೈಗೊಳ್ಳಲಾಗಿದೆ. 

9:48 AM IST:

ವಾರ್ಡಿಗೆ ಒಂದೇ ಗಣೇಶ ನಿಯಮ ಜಾರಿಗೆ ತರುತ್ತಾ ಬಿಬಿಎಂಪಿ? ಇನ್ನು ಗಣೇಶೋತ್ಸವಕ್ಕೆ 20ಕ್ಕೂ ಅಧಿಕ ದಿನಗಳು ಬಾಕಿ ಇರುವಾಗಲೇ ವಿವಾದಕ್ಕೆ ದಾರಿ ಮಾಡಿಕೊಡ್ತಿಯ್ಯಾ ಬಿಬಿಎಂಪಿ? ಸದ್ದಿಲ್ಲದೆ ಗಣೇಶೋತ್ಸವಕ್ಕೆ ಒಂದಿಷ್ಟು ನಿಯಮಗಳನ್ನು ಸಿದ್ದಮಾಡಿಕೊಳ್ಳುತ್ತಿದೆ ಬಿಬಿಎಂಪಿ. ಈ ಬಾರಿ ಎಲ್ಲಾ ಕಡೆಗಳಲ್ಲಿ ಗಣಪತಿ ಕೂರಿಸಿ ಮೆರವಣಿಗೆ ನಡೆಸಲು ಅವಕಾಶ ಕೊಡುವಂತೆ ಒತ್ತಡ. ಕಳೆದ ಬಾರಿ ಬಿಬಿಎಂಪಿ ತಂದ ಈ ನಿಯಮ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಹಿಂದೂ ಪರ ಸಂಘಟನೆಗಳು ಗಣೇಶನ ಮೂರ್ತಿಯನ್ನ ಬಿಬಿಎಂಪಿ ಕೇಂದ್ರ ಕಚೇರಿಗೆ ತಂದು ಬೃಹತ್ ಪ್ರತಿಭಟನೆಯನ್ನು ಮಾಡಿ ಆಕ್ರೋಶ ಹೊರ ಹಾಕಿದರು. ಇದೀಗ ಈ ಬಾರಿಯೂ ಅದೇ ನಿಯಮ ಜಾರಿ ಮಾಡಿದರೆ ಮತ್ತೊಂದು ಸುತ್ತಿನ ಕೋಲಾಹಲ ಸಾಧ್ಯತೆ. ಈ ಬಾರಿಯೂ ಅದ್ಧೂರಿ ವಿನಾಯಕನ ಉತ್ಸವಕ್ಕೆ ಸಿಗುತ್ತಾ ಅನುಮತಿ? ವಾರ್ಡ್​ಗೆ ಒಂದೇ ಗಣಪತಿ  ಮೂರ್ತಿ ಫಿಕ್ಸ್ ಮಾಡುತ್ತಾ ಪಾಲಿಕೆ? ಈ ಬಾರಿ ಬಹಿರಂಗ ಗಣೇಶೋತ್ಸವಕ್ಕೆ ಸಾರ್ವಜನಿಕ ರಿಂದ ಭಾರಿ ಬೇಡಿಕೆ. ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟ. 

9:46 AM IST:

ದೇಶಾದ್ಯಂತ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಸೋಂಕಿನ ಹಾವಳಿ ಹೆಚ್ಚಾಗಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1,837 ಹೊಸ ಪ್ರಕರಣ ಪತ್ತೆಯಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಇಲ್ಲಿ ಕ್ಲಿಕ್ಕಿಸಿ

9:40 AM IST:

ರಾಯಚೂರು: ಬಿಸಿಲುನಾಡಿನಲ್ಲಿ ಈಗ ಕೃಷ್ಣಾಮೃಗಗಳ ಕಾಟ ಶುರು. ರಾಯಚೂರು ತಾಲೂಕಿನ ರೈತರಿಗೆ ಕೃಷ್ಣಮೃಗಗಳ ಕಾಟ. ಮೊಳೆಯೊಡೆದ ಬೆಳೆ ತಿನ್ನುತ್ತಿರುವ ಕೃಷ್ಣ ಮೃಗಗಳ ಗುಂಪು. ಕೃಷ್ಣಾಮೃಗಗಳ ಕಾಟಕ್ಕೆ ಬೇಸತ್ತ ಅನ್ನದಾತರು. ರೈತರು ಬಿತ್ತನೆ ಮಾಡಿದ ಹತ್ತಿ, ತೊಗರಿ ಬೆಳೆ ಉಳಿಸಿಕೊಳ್ಳಲು ಹರಸಾಹಸ. ರೈತರ ಜಮೀನಿಗೆ ಎಂಟ್ರಿ ‌ಕೊಟ್ಟು ಬೆಳೆ ತಿಂದು ಹೋಗುತ್ತಿರುವ ಕೃಷ್ಣಾಮೃಗಗಳು. ಜಮೀನಿನ ಬಳಿ ಕೃಷ್ಣಾಮೃಗಗಳನ್ನ ಕಾಯುವಂತೆ ಆಗಿದೆ ರೈತರ ಪಾಡು. ಕೃಷ್ಣಾಮೃಗಗಳನ್ನ ಹಿಡಿಯುವಂತೆ ರೈತರು ಅರಣ್ಯ ಇಲಾಖೆಗೆ ದೂರು. ರೈತರು ದೂರು ನೀಡಿದ್ರೂ ಕೃಷ್ಣಾಮೃಗಗಳ ಹಿಡಿಯಲು ಮುಂದಾದ್ದ ಅರಣ್ಯ ಇಲಾಖೆ.

9:38 AM IST:

ಮಂಡ್ಯ: ಪ್ರವಾಹದ ನಡುವೆಯೇ ಶವವೊತ್ತು ಸ್ಮಶಾನಕ್ಕೆ ತೆರಳಿದ ಜನರು. ಎದೆ ಮಟ್ಟದ ನೀರಿನಲ್ಲಿ ಶವ ಹೊತ್ತು ನಡೆದ ಜನ.ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಘಟನೆ. ಕಾವೇರಿ ಭೋರ್ಗರೆತಕ್ಕೆ ಜಲಾವೃತವಾಗಿರುವ ಸ್ಮಶಾನಕ್ಕೆ ತೆರಳುವ ರಸ್ತೆ. ನಿನ್ನೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದ ಸುಲೋಚನ (48) ಎಂಬ ಮಹಿಳೆ. ಮಹಿಳೆಯ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಜನರ ಪರದಾಟ. ಕೊನೆಗೆ ಪ್ರವಾಹದ ನೀರಲ್ಲೆ ಮಹಿಳೆಯ ಶವ ತೆಗೆದುಕೊಂಡು‌ ಹೋದ ಗ್ರಾಮಸ್ಥರು. ಪ್ರತಿ ಬಾರಿ ಕಾವೇರಿ ಪ್ರವಾಹ ಬಂದಾಗಲೆಲ್ಲಾ ಮುಳುಗಡೆ ಆಗುವ ರಸ್ತೆ.

9:37 AM IST:

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವ್ಯಾಪಕ‌ ಮಳೆ ಹಿನ್ನೆಲೆಯಲ್ಲಿ ಇಂದು ಸಕಲೇಶಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ ಹಾಗೂ 10ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ. ಸಕಲೇಶಪುರ ತಹಸಿಲ್ದಾರ್ ಜೈಕುಮಾರ್‌ರಿಂದ ರಜೆ ಘೋಷಣೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಿಸಿದ ತಹಸಿಲ್ದಾರ್ ಜೈಕುಮಾರ್.

9:35 AM IST:

ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಪಾದಯಾತ್ರೆ.  ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಕಾರ್ಯಕ್ರಮ. ಕಾಂಗ್ರೆಸ್ ಗ್ರಾಮಾಂತರ ಸಮಿತಿಯಿಂದ ಆಯೋಜನೆ. ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮಚಂದ್ರರಾವ್ ಜನ್ಮ ಸ್ಥಳವಾದ ತಗಡೂರು. ವರುಣ ಕ್ಷೇತ್ರದ ದೊಡ್ಡ ಗ್ರಾಮಗಳಲ್ಲಿ ಒಂದು. ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಕ್ಷೇತ್ರ. 
ಮುಂದಿನ ಚುನಾವಣೆಗೆ ವರುಣದಿಂದ ಸ್ಪರ್ಧಿಸಲು ಒತ್ತಡ. ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದ ಸಿದ್ದರಾಮಯ್ಯ.

9:35 AM IST:

ಕಬಿನಿ ಜಲಾಶಯದ ಒಳ ಹರಿವು 24,932 ಕ್ಯೂಸೆಕ್. ಜಲಾಶಯದ ಹೊರಹರಿವು 26,000 ಕ್ಯೂಸೆಕ್. 2284 ಅಡಿ ಎತ್ತರದ ಕಬಿನಿ ಜಲಾಶಯ. ಜಲಾಶಯದ ಇಂದಿನ ನೀರಿನ ಮಟ್ಟ 2282.94 ಅಡಿ.
ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯ. ಜಲಾಶಯದಲ್ಲಿ ಇಂದು 18.82 ಟಿಎಂಸಿ ನೀರು ಸಂಗ್ರಹ. ಮೈಸೂರು ಜಿಲ್ಲೆ ಎಚ್‌ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯ.

9:33 AM IST: